ಹುಳಿಯಾರು: ಮನೆಯಲ್ಲಿ ಕಳ್ಳತನ

ಹುಳಿಯಾರು:

      ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಹೆಂಚು ತೆಗೆದು ಒಳ ನುಗ್ಗಿ ಹಣ ಮತ್ತು ಒಡವೆ ಕಳ್ಳತನ ಮಾಡಿರುವ ಘಟನೆ ಹುಳಿಯಾರು ಹೋಬಳಿಯ ಹೊಸಹಳ್ಳಿಯಲ್ಲಿ ನಡೆದಿದೆ.

     ಹೊಸಹಳ್ಳಿಯ ಸಾಕಜ್ಜಿ ಮನೆಯಲ್ಲಿ ಕಳ್ಳತನ ನಡೆದಿದ್ದು ಅಜ್ಜಿ ಶಿರಾಕ್ಕೆ ಹೋಗಿದ್ದು ಮಗ ಹನುಮಂತರಾವ್ ಕುರಿ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಈ ಕಳ್ಳತನ ನಡೆದಿದೆ.

      ಕಳ್ಳರು ಹೆಂಚು ತೆಗೆದು ಒಳ ನುಗ್ಗಿ ಮನೆಯ ಬೀರು ಹೊಡೆದು 20 ಸಾವಿರ ರೂ. ನಗದು ಹಾಗೂ ಒಂದು ಜೊತೆ ಓಲೆಯನ್ನು ಕದ್ದೊಯ್ದಿದ್ದಾರೆ.
ಕುರಿಮೇಯಿಸಿಕೊಂಡು ಮನೆಗೆ ಮಗ ಹಿಂದಿರುಗಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Visited 2 times, 1 visits today)

Related posts

Leave a Comment