ಹೆತ್ತ ತಾಯಿಯ ಕತ್ತು ಕುಯ್ದು ಕೊಂದ ಕ್ರೂರಿ ಮಗ

ರಾಮನಗರ:

   ಹೆತ್ತ ಮಗನೇ ತನ್ನ ತಾಯಿಯನ್ನು ಕತ್ತು ಕುಯ್ದು ರುಂಡ ಮುಂಡಗಳನ್ನು ಬೇರ್ಪಡಿಸಿರುವಂತಹ ಘಟನೆ ರಾಮನಗರದಲ್ಲಿ ನಡೆದಿದೆ.

      ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕೋಡಂಬಳ್ಳಿ ಹೋಬಳಿ ಕರ್ಲಹಳ್ಳಿಯ ವಾಸಿ ಪಾರ್ವತಮ್ಮನನ್ನು ಆಕೆಯ ಮಗ ಕುಮಾರ ಎಂಬಾತ ತಮ್ಮ ಸ್ವಗ್ರಾಮದಲ್ಲಿಯೇ ಹೆತ್ತತಾಯಿ ಎಂಬುದನ್ನೂ ಮರೆತು ತನ್ನ ತಾಯಿಯ ಕತ್ತು ಕುಯ್ದು ರುಂಡ-ಮುಂಡಗಳನ್ನು ಬೇರ್ಪಡಿಸಿದಂತಹ ಧಾರುಣ ಘಟನೆ ನಡೆದಿದೆ. ಕೊಲೆಗೈದ ಕುಮಾರ ಕೇವಲ 25 ವರ್ಷನವನಾಗಿದ್ದು, 56 ವರ್ಷ ವಯಸ್ಸಿನ ತನ್ನ ತಾಯಿ ಪಾರ್ವತಮ್ಮಳನ್ನು ಇಳಿವಯಸ್ಸಿನಲ್ಲಿ ನೋಡಬೇಕಿದ್ದ ಮಗ ಹೆತ್ತಮ್ಮನನ್ನೇ ಹತ್ಯೆ ಮಾಡಿದ್ದಾನೆ.

      ಘಟನೆ ಜರುಗಿ ಒಂದು ತಾಸು ಕಳೆದರೂ ಸ್ಥಳಕ್ಕೆ ಬಾರದ ಅಕ್ಕೂರು ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶಗೊಂಡಿದ್ದರು.

(Visited 10 times, 1 visits today)

Related posts

Leave a Comment