ಹೊಟ್ಟೆನೋವು ತಾಳಲಾರದೇ ಗೃಹಿಣಿ ಆತ್ಮಹತ್ಯೆಗೆ ಶರಣು!

 ಕೊರಟಗೆರೆ:

      ಗರ್ಭಕೋಶದ ಸಮಸ್ಯೆಯ ಹೊಟ್ಟೆ ನೋವಿನಿಂದ ಬಳಲುತ್ತೀದ್ದ ಮಹಿಳೆ ತನ್ನ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಮನೆಯ ತೀರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ

      ತಾಲೂಕಿನ ಚನ್ನರಾಯನದುರ್ಗ ಹೋಬಳಿ ತೋವಿನಕೆರೆ ಗ್ರಾಪಂ ವ್ಯಾಪ್ತಿಯ ಸೂರೇನಹಳ್ಳಿ ಗ್ರಾಮದ ವಾಸಿಯಾದ ಗೋವಿಂದರಾಜು ಎಂಬುವನ ಮಡದಿ ರಾಧಮ್ಮ(35) ತನ್ನ ತಂದೆಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಆಗಿದ್ದಾಳೆ.

      ಮೃತ ಮಹಿಳೆ ಮೂಲತಃ ತುಮಕೂರು ತಾಲೂಕಿನ ಸಿಬಿ ಗ್ರಾಮದವರಾಗಿದ್ದು ತನ್ನ ತಂದೆಯ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ. ಪಿಎಸೈ ಮಂಜುನಾಥ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Visited 12 times, 1 visits today)

Related posts

Leave a Comment