ತುಮಕೂರು


ಕಾನೂನಿನ ಅರಿವಿನಿಂದ ಸಮಾಜದ ಏಳಿಗೆ ಸಾಧ್ಯ. ಭಾರತದ ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳನ್ನು ಅರ್ಥ ಮಾಡಿಕೊಳ್ಳುವುದರ ಮೂಲಕ ನಮ್ಮ ಮೇಲಿರುವ ಜವಾಬ್ದಾರಿಗಳನ್ನು ಅರಿತು ನಡೆಯಬೇಕು ಎಂದು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಡಾ. ನಾಗರತ್ನ ಎ. ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಆಂಗ್ಲ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ಶುಕ್ರವಾರ ಆಯೋಜಿಸಿದ್ದ ‘ಸಾಂವಿಧಾನಿಕ ಅರಿವು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದ ಪ್ರಜೆಗಳಾದ ನಮ್ಮೆಲ್ಲರ ಮೇಲೆ ಭಾರತೀಯ ಸಂವಿಧಾನ, ಮೂಲಭೂತ ಹಕ್ಕುಗಳು ಹಾಗೂ ಮೂಲಭೂತ ಜವಾಬ್ದಾರಿಗಳನ್ನು ಅರಿತು ನಡೆಯುವ ಮಹತ್ವದ ಹೊಣೆಯಿದೆ. ಕೇವಲ ಹಕ್ಕುಗಳ ಅರಿವು ಇದ್ದರೆ ಸಾಲುವುದಿಲ್ಲ, ನಮ್ಮ ಜವಾಬ್ದಾರಿಗಳನ್ನು ಕೂಡ ಅರಿತು ಪಾಲಿಸಬೇಕು ಎಂದರು.
ಮೂಲಭೂತ ಹಕ್ಕುಗಳಾದ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಮತ್ತು ಸಾಂಸ್ಕøತಿಕ ಸ್ವಾತಂತ್ರ್ಯಗಳ್ಳನ್ನು ಒಳಗೊಂಡು ಮಹಿಳಾ ಹಕ್ಕುಗಳ ಕುರಿತು ಅನೇಕ ನೈಜ ಉದಾಹರಣೆಗಳ ಮೂಲಕ ಜಾಗೃತಿ ಮೂಡಿಸಿದರು.
ಸಮಾನತೆಯ ಹಕ್ಕು ಎಲ್ಲಾ ನಾಗರಿಕರ ಸಮಾನ ಕಾನೂನು ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಸುತ್ತದೆ. ಸಮಾನತೆಯ ಹಕ್ಕು ಜಾತಿ, ಮತ, ಧರ್ಮ, ಹುಟ್ಟಿದ ಸ್ಥಳ, ಜನಾಂಗ ಅಥವಾ ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ತಾರತಮ್ಯವನ್ನು ಸಂಪೂರ್ಣವಾಗಿ ನಿμÉೀಧಿಸುತ್ತದೆ ಎಂದು ಹೇಳಿದರು.
ಭಾರತೀಯ ಸಮಾಜದ ಐತಿಹಾಸಿಕ ಶ್ರೇಣಿಕೃತ ರಚನೆಯಿಂದಾಗಿ, ವಿವಿಧ ರೀತಿಯ ಶೋಷಣೆಗಳು ಸಂಭವಿಸಿವೆ. ಯಾವುದೇ ನಾಗರಿಕರು ಯಾವುದೇ ರೀತಿಯ ಬಲವಂತದ ದುಡಿಮೆ ಮಾಡುವುದನ್ನು ತಡೆಯಲು ಈ ಮೂಲಭೂತ ಹಕ್ಕು ಅಗತ್ಯ. ಹಣ ನೀಡಿದರೂ ಯಾರೊಬ್ಬರೂ ಅವರ ಇಚ್ಛೆಗೆ ವಿರುದ್ಧವಾಗಿ ಕೆಲಸ ಮಾಡಬಾರದು ಎಂದು ಶೋಷಣೆಯ ವಿರುದ್ಧ ಹಕ್ಕಿನ ಕುರಿತು ಮಾತನಾಡಿ ವಿದ್ಯಾರ್ಥಿಗಳಿಗೆ ಸಮಾನತೆಯನ್ನು ಬೆಳೆಸಿಕೊಳ್ಳಿ ಎಂದರು.
ವಿದ್ಯಾರ್ಥಿಗಳು ಕಲಿಕಾ ಹಂತದಲ್ಲಿರಬೇಕಾದರೆ ನಮ್ಮ ದೇಶದ ಕಾನೂನಿನ ಕುರಿತು ಅಧ್ಯಯನ ನಡೆಸಬೇಕು ಹಾಗೂ ಹಕ್ಕುಗಳ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಇಂದಿನ ಸಾಮಾಜಿಕ ಜಾಲತಾಣಗಳಿಂದ ಉಂಟಾಗುತ್ತಿರುವ ಸೈಬರ್ ಪ್ರಕರಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ವ್ಯಕ್ತಿತ್ವ ಹೇಗಿರಬೇಕೆಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಆಂಗ್ಲ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

(Visited 1 times, 1 visits today)