ತುಮಕೂರು


ಬಗರ್ ಹುಕುಂ ಸಾಗುವಳಿ ಸಕ್ರಮ ಕೊರಿ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇರುವಾಗ ಅರಣ್ಯ ಇಲಾಖೆ ಸೇರಿದಂತೆ ಯಾರು ಕೂಡ ರೈತರ ಸಾಗುವಳಿ ಸ್ವಾಧೀನಕ್ಕೆ ಅಡ್ಡಿ ಮಾಡದಂತೆ ರಕ್ಷಣೆ ನೀಡಲು ಒತ್ತಯಾಸಿ ಸೋಮವಾರ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.
ತುಮುಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಮಂಚಲದೊರೆ ಹಾಗೂ ಅಂಕಸಂದ್ರ ಗ್ರಾಮ ಪಂಚಾಯತಿ ಯ ಸುಮಾರು 35 ಗ್ರಾಮಗಳ ಸುಮಾರು ಎರಡು ಸಾವಿರಕ್ಕಿಂತಲೂ ಅಧಿಕ ಬಡ ಸಾಗುವಳಿದಾರರನ್ನು ಅವರು ಹಕ್ಕುಪತ್ರಕ್ಕಾಗಿ ಸಲ್ಲಿಸಲಾದ ಅರ್ಜಿಗಳನ್ನು ವಿಲೇವಾರಿ ಮಾಡದೇ ಅವರನ್ನು, ಪೆÇೀಲೀಸ್ ಹಾಗೂ ಅರಣ್ಯ ಇಲಾಖೆಯ ಮೂಲಕ ದೌರ್ಜನ್ಯ ನಡೆಸಿ, ಬೆದರಿಸಿ ಒಕ್ಕಲೆಬ್ಬಿಸಿ, ಬೀದಿಗೆ ತಳ್ಳುವ ಹೇಯ ಕುತಂತ್ರವನ್ನು, ನಿಲ್ಲಿಸಲುವಂತೆ ಕರ್ನಾಟಕ ಪ್ರಾಂತ ರೈತ ಸಂಘ ತುಮಕೂರು ಜಿಲ್ಲಾ ಸಮಿತಿ ಬಲವಾಗಿ ಖಂಡಿಸುತ್ತದೆ. ತಕ್ಷಣವೇ ರೈತರ ಮೇಲಿನ ದೌರ್ಜನ್ಯ ಮತ್ತು ಒಕ್ಕಲೆಬ್ಬಿಸುವ ಕುತಂತ್ರಗಳನ್ನು ನಿಲ್ಲಿಸುವಂತೆ ಜಿಲ್ಲಾಡಳಿತ ಕ್ರಮ ವಹಿಸಲು ಒತ್ತಾಯಿಸುತ್ತದೆ.
ಸರಕಾರಗಳು ಫಾರಂ,50,51,53,57 ಸಲ್ಲಿಸಲು ಅವಕಾಶ ನೀಡಿದ್ದವು . ಅದರಂತೆ ಚೇಳೂರು ಹೋಬಳಿಯ ಈ ಎಲ್ಲಾ ರೈತರು ಕಳೆದ ಹಲವಾರು ದಶಕಗಳಿಂದ ಸಾಗುವಳಿಯಲ್ಲಿ ತೊಡಗಿದವರು ಅರ್ಜಿಗಳನ್ನು ಸಲ್ಲಿಸಿದ್ದರು. ಈಗ ಈ ಎಲ್ಲಾ ಅರ್ಜಿಗಳು ಪೆಂಡಿಗ್ ಇರುವಾಗಲೇ ಅರಣ್ಯ ಇಲಾಖೆಯ ಮೂಲಕ ರೈತರ ಬಗರ್ ಹುಕುಂ ಸಾಗುವಳಿಯ ಜಮೀನುಗಳನ್ನು ಬಲವಂತವಾಗಿ ಕಿತ್ತುಕೊಳ್ಳಲಾಗುತ್ತಿದೆ. ಇದಕ್ಕಾಗಿ ಅರಣ್ಯ ಇಲಾಖೆಯನ್ನು ದುರ್ಬಳಕೆ ಮಾಡಲಾಗುತ್ತಿದೆ.
ರಾಜ್ಯದಲ್ಲಿರುವ ದೊಡ್ಡ ಪ್ರಮಾಣದ ಕಾಯ್ದಿಟ್ಟ ಅರಣ್ಯವಿಲ್ಲದ ಪ್ರದೇಶಗಳನ್ನು ಅಭಿವೃದ್ಧಿ ಮಾಡದೇ ಗಣಿ ಗಳ್ಳರ ಲೂಟಿಗೆ ಬಿಟ್ಟಿರುವ ಅರಣ್ಯ ಇಲಾಖೆ ಕಂದಾಯ ಇಲಾಖೆಯಿಂದ ಪಡೆದ ಜಮೀನಿನಲ್ಲಿ ಪೆÇೀಲೀಸ್ ಬಲವನ್ನಿಟ್ಟುಕೊಂಡು ದೌರ್ಜನ್ಯಕ್ಕೆ ಮುಂದಾಗಿದೆ. ಸದರಿ ಅರಣ್ಯ ಇಲಾಖೆಗೆ ವರ್ಗಾಹಿಸಿರುವ ಜಮೀನುಗಳ ಸಾಗುವಳಿ ಹಕ್ಕಿಗಾಗಿ ಹಾಗೂ ಇನ್ನೊಂದೆಡೆ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆ – 2006 ರಂತೆ ಅರ್ಜಿ ಸಲ್ಲಿಸಿದ್ದರೂ ಈ ದೌರ್ಜನ್ಯವು ಮುಂದುವರಿದಿದೆ.
ತಾಳೆಕೊಪ್ಪ ಗ್ರಾಮದ 196 ದಾಸಪ್ಪನಳ್ಳಿ ಗ್ರಾಮದ 30,31 32,33, 34, 35,36;43, ಮತ್ತಿತರೆ ಗ್ರಾಮಗಳ ಸುಮಾರು 1,914 ಎಕರೆ ಭೂಮಿಯನ್ನು ಕಂದಾಯ ಇಲಾಖೆಯು 1992-93 ರಲ್ಲಿ ಅರಣ್ಯ ಇಲಾಖೆಗೆ ವರ್ಗಾಹಿಸಿದೆ. ಅದು 1999 ರ ಅರಣ್ಯ ಇಲಾಖೆಯ ಹೆಸರು ಪಹಣಿ ಪತ್ರಿಕೆಯಲ್ಲಿ ಸೇರಿಸಲಾಗಿದೆ. ಈ ಜಮೀನುಗಳಲ್ಲಿ ಐದು ಕಂದಾಯ ಗ್ರಾಮಗಳಾದ ಕುರುಬರಹಳ್ಳಿ, ಪೇಟೆ ಕುರುಬರಹಳ್ಳಿ, ಹೊನ್ನೇನಹಳ್ಳಿ ಶಿಲವಾರಹಳ್ಳಿ, ನಾಯಕನಕೆರೆ ಅಲ್ಲದೇ ಗಂಗಯ್ಯನ ಪಾಳ್ಯಗಳ ಜನ ವಸತಿ ಪ್ರದೇಶಗಳನ್ನು ಹಾಗೂ ಸಾಗುವಳಿ ನಿರತ ಪ್ರದೇಶವನ್ನು ಅಲ್ಲಿಯ ಜನರ ಜೊತೆ ಚರ್ಚಸಿದೆ ಕಂದಾಯ ಇಲಾಖೆಯು ಅರಣ್ಯ ಇಲಾಖೆಗೆ ಏಕಾಏಕಿ ವರ್ಗಹಿಸಿದೆ. ಜನರಿಗೆ ಪರ್ಯಾಯ ವ್ಯವಸ್ಥೆಯನ್ನು ಮತ್ತು ಪರಿಹಾರವನ್ನು ಒದಗಿಸದೇ ಹಲವರನ್ನು ಒಕ್ಕಲೆಬ್ಬಿಸಲಾಗಿದೆ.
ಆ ರೀತಿಯಲ್ಲಿ,ದೌರ್ಜನ್ಯಕ್ಕೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಢ ಪಂಗಡಕ್ಕೆ ಸೇರಿದ ಮಹಿಳೆಯರಾದ ಸೋಮಲಾಪುರದ ರೇಣುಕಮ್ಮ ಮತ್ತು ಇರಕ ಸಂದ್ರ ಗ್ರಾಮದ ಪವಿತ್ರ ಹಾಗೂ ಗಂಗಯ್ಯನ ಪಾಳ್ಯದ ಪಾರ್ವತಮ್ಮ ಸೇರಿದಂತೆ ನೂರಾರು ಬಡ ರೈತರನ್ನು, ಹಕ್ಕುಪತ್ರಕ್ಕಾಗಿ ಹಾಕಲಾದ ಇವರ ಅರ್ಜಿಗಳು ಪೆಂಡಿಂಗ್ ಇರುವಾಗಲೆ ಇವರನ್ನು ಅರಣ್ಯ ಇಲಾಖೆ ಹಿಂಸಿಸಿದೆ. ಪೆÇೀಲೀಸ್ ಕೇಸ್ ಗಳನ್ನು ದಾಖಲಿಸಿ ಕಿರುಕುಳ ನೀಡಲಾಗಿದೆ.ಇದು ಬಹಳ ಸ್ಪಷ್ಢವಾಗಿ ರಾಜಕೀಯ ಪ್ರೇರಿತ ಮತ್ತು ಅಧಿಕಾರ ದುರುಪಯೋಗ ಕ್ರಮವಾಗಿದೆ. ಬಗರ್ ಸಾಗುವಳಿದಾರ ಬಡ ದಲಿತ ಮಹಿಳೆಯರ ಮೇಲೆ ಅರಣ್ಯ ಇಲಾಖೆಯ ದೌರ್ಜನ್ಯವನ್ನು ಎತ್ತಿ ತೋರಿಸುತ್ತದೆ.
ಈಗಲೂ ಪಹಣಿ ಪತ್ರಿಕೆಗಳ ಪಟ್ಟಾ ಕಾಲಂಗಳಲ್ಲಿ ಸರ್ಕಾರಿ ªಂದಿದ್ದರೂ ಕಂದಾಯ ಅಧಿಕಾರಿಗಳು ಅದನ್ನು ಪರಿಗಣಿಸದೇ ಅರಣ್ಯ ಇಲಾಖೆ ದೌರ್ಜನ್ಯ ನಡೆಸಲು ಮುಂದಾಗಿರುವುದು ಕೂಡಾ ರಾಜಕೀಯ ಪ್ರೇರಿತ ಅಧಿಕಾರ ದುರುಪಯೋಗ ವಾಗಿದೆ.
ಈ ಕೂಡಲೇ ಅಧಿಕಾರ ದುರುಪಯೋಗ ಮಾಡಿಕೊಂಡ ಈ ಎಲ್ಲಾ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡುವಂತೆ ಮತ್ತು ಸರಕಾರದ ದೌರ್ಜನ್ಯ ಖಂಡಿಸಿ ಮತ್ತು ಚೇಳೂರು ಹೋಬಳಿ ಬಡ ಸಾಗುವಳಿದಾರರನ್ನು ರಕ್ಷಿಸುವಂತೆ ಒತ್ತಾಯಿಸಿ ರಾಜ್ಯದಾದ್ಯಂತ ನಡೆದ ಪ್ರತಿಭಟನೆಯ ಭಾಗವಾಗಿ ದಿನಾಂಕ 27.03.2023 ರಂದು ಜಿಲ್ಲಾಧಿಕಾರಿಗಳ ಕಛೇರಿ ಎದರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

(Visited 3 times, 1 visits today)