ತುಮಕೂರು:

      ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಅಮಾನಿಕೆರೆ ಮುಂಜಾನೆ ಗೆಳೆಯರ ಬಳಗ(ರಿ) ಇವರ ಸಹಯೋಗದಲ್ಲಿ ನಗರದ ಅಮಾನಿಕೆರೆ ದ್ವಾರದ ಬಳಿ ಡಿಸೆಂಬರ್ 16ರಂದು ಭಾನುವಾರ ಬೆಳಿಗ್ಗೆ 8 ಗಂಟೆಗೆ “ವೈಭವದ ಕನ್ನಡ ರಾಜ್ಯೋತ್ಸವ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

      ಮಹಾ ನಗರಪಾಲಿಕೆ ಮಾಜಿ ಸದಸ್ಯ ಹಾಗೂ ಅಮಾನಿಕೆರೆ ಮುಂಜಾನೆ ಗೆಳೆಯರ ಬಳಗದ ಅಧ್ಯಕ್ಷರಾದ ಟಿ.ಹೆಚ್.ವಾಸುದೇವ್ ಅವರು ಅಂದು ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ನೆರವೇರಿಸುವರು. ರಾಜ್ಯೋತ್ಸವದ ಅಂಗವಾಗಿ ಸಂಜೆ 6 ಗಂಟೆಗೆ ವೇದಿಕೆ ಕಾರ್ಯಕ್ರಮ ಹಾಗೂ ಸಂಗೀತ ರಸ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ವೇದಿಕೆ ಕಾರ್ಯಕ್ರಮವನ್ನು ಹಿರೇಮಠದ ಡಾ: ಶ್ರೀ ಶ್ರೀ ಶಿವಾನಂದ ಶಿವಾಚಾರ್ಯಸ್ವಾಮಿಗಳವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಹಾಗೂ ಸನ್ಮಾನಿತರಾಗಿ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ರಾಷ್ಟ್ರ ಪ್ರಶಸ್ತಿ ಪುರಸ್ಕøತ ಡಿವೈಎಸ್‍ಪಿ ನಾಗರಾಜು, ಹೋಮ್ ಆಫ್ ಹೋಮ್ ಸಂಸ್ಥಾಪಕ ಹಾಗೂ ಸಮಾಜ ಸೇವಕ ಟಿ. ರಾಜ (ಆಟೋ ರಾಜ) ಅವರು ಪಾಲ್ಗೊಳ್ಳುವರು.

      ಕಾರ್ಯಕ್ರಮದಲ್ಲಿ ಮಹಾ ನಗರಪಾಲಿಕೆ ಮಾಜಿ ಸದಸ್ಯ ಹಾಗೂ ಅಮಾನಿಕೆರೆ ಮುಂಜಾನೆ ಗೆಳೆಯರ ಬಳಗದ ಅಧ್ಯಕ್ಷರಾದ ಟಿ.ಹೆಚ್.ವಾಸುದೇವ್, ಸ್ಮಾರ್ಟ್ ಸಿಟಿ ಆಯುಕ್ತ ರಂಗಸ್ವಾಮಿ, ಡಿಹೆಚ್‍ಓ ಡಾ: ಚಂದ್ರಿಕಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜು ಆಪಿನಕಟ್ಟೆ, ಪಾಲಿಕೆ ಆಯುಕ್ತ ಮಂಜುನಾಥಸ್ವಾಮಿ, ಪಾಲಿಕೆ ಸದಸ್ಯೆ ರೂಪ ಶೆಟ್ಟಳ್ಳಯ್ಯ, ಕ್ಷಯರೋಗ ಮತ್ತು ಹೃದ್ರೋಗ ತಜ್ಞ ಡಾ: ಟಿ.ಎಲ್.ಯಶವಂತ್, ಗಜಾನನ ಸ್ಪೆಷಾಲಿಟಿ ಸೆಂಟರ್‍ನ ಕೀಲು ಮತ್ತು ಮೂಳೆ ತಜ್ಞ ಡಾ: ಉಮಾಶಂಕರ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಆರ್.ಎಸ್. ಅಯ್ಯರ್, ರೇಣುಕಾಪ್ರಸಾದ್, ಸೆಂಟ್ರಲ್ ರೋಟರಿಯ ಮಾಜಿ ಅಧ್ಯಕ್ಷೆ ಜ್ಯೋತಿ ಭಾಗವಹಿಸುವರು.

      ಅಂತರ್ ಜಿಲ್ಲಾ ಮಟ್ಟದ ವೇಗದ ನಡಿಗೆ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತ ಶ್ರೀರಾಮನಗರದ ಟಿ.ಎ.ನರೇಶ್‍ಬಾಬು ಹಾಗೂ ಅಸಮಾನ್ಯ ಕನ್ನಡಿಗ(ಸುವರ್ಣ ನ್ಯೂಸ್), ಪಬ್ಲಿಕ್ ಹೀರೊ (ಪಬ್ಲಿಕ್ ಟಿವಿ) ಪ್ರಶಸ್ತಿ ವಿಜೇತೆ ಯಶೋದಮ್ಮ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.

       ರಾಜ್ಯ ಪ್ರಶಸ್ತಿ ಪುರಸ್ಕøತ ಹಾಗೂ ಡಾ: ರಾಜ್‍ಕುಮಾರ್‍ರವರ ಕಂಠಸಿರಿ ಖ್ಯಾತಿಯ ಮಂಜು ಅರ್ಪಿಸುವ ದಿಬ್ಬೂರು ಮಂಜು ಮತ್ತು ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.

      ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಅಮಾನಿಕೆರೆ ಮುಂಜಾನೆ ಗೆಳೆಯರ ಬಳಗದ ಗೌರವಾಧ್ಯಕ್ಷ ಕರಾಟೆ ಕೃಷ್ಣಮೂರ್ತಿ, ಉಪಾಧ್ಯಕ್ಷ ಕೆ.ವಿ.ಗೌರಿಶಂಕರ್ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಎಸ್.ನಟರಾಜು ಮತ್ತಿತರರು ಮನವಿ ಮಾಡಿದ್ದಾರೆ.

(Visited 26 times, 1 visits today)