10 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಮಂದಗತಿಯಲ್ಲಿ!!

ತುಮಕೂರು :

      ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ನಾಡಿನ ಸುಪ್ರಸಿದ್ದ ದೇವರಾಯನ ದುರ್ಗದಲ್ಲಿ 10 ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳ ಪ್ರಗತಿ ಭರದಿಂದ ಸಾಗಿದೆ.

      ನಾಡಿನ ಮೂಲೆಮೂಲೆಯಲ್ಲಿ ಭಕ್ತಾಧಿಗಳನ್ನು ಹೊಂದಿರುವ ದೇವರಾಯನದುರ್ಗದ ಯೋಗ ನರಸಿಂಹಸ್ವಾಮಿ ಕ್ಷೇತ್ರ ಹಲವು ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿತ್ತು, ದೇವರಾಯನ ದುರ್ಗಕ್ಕೆ ಬರುವ ಭಕ್ತಾಧಿಗಳು ಅನುಭವಿಸುತ್ತಿದ್ದ ಸಮಸ್ಯೆಯನ್ನು ಸ್ತಳೀಯರು ಚುನಾವಣಾ ಪ್ರಚಾರಕ್ಕೆ ತೆರಳಿದ್ದಾದ ಡಿ ಸಿ ಗೌರೀಶಂಕರ್ ಅವರ ಗಮನಕ್ಕೆ ತಂದಿದ್ದರು, ಸ್ತಳೀಯರ ಸಮಸ್ಯೆ ಆಲಿಸಿದ್ದ ಡಿ ಸಿ ಗೌರೀಶಂಕರ್ ಅವರು ಶಾಸಕರಾಗಿ ಆಯ್ಕೆಯಾದ ಮೇಲೆ ಆದ್ಯತೆ ಮೇಲೆ ದೇವರಾಯನದುರ್ಗದಲ್ಲಿ ಮೂಲಬೂತ ಸೌಕರ್ಯ ಕಲ್ಪಿಸಲು ಸಂಕಲ್ಪ ತೊಟ್ಟು ಸಾಕಾರಗೊಳಿಸಿದ್ದಾರೆ.

      ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಗ್ರಾಮಾಂತರ ಶಾಸಕ ಡಿ ಸಿ ಗೌರೀಶಂಕರ್ ಮುಖ್ಯಂಮಂತ್ರಿಗಳಿಗೆ ಒತ್ತಡ ತಂದು ದೇವರಾಯನ ದುರ್ಗದ ಸಮಗ್ರ ಅಭಿವೃದ್ದಿಗೆ 10 ಕೋಟಿ
ಅನುಧಾನ ಮಂಜೂರು ಮಾಡಿಸುವಲ್ಲಿ ಸಫಲರಾಗಿದ್ದು, ಶಾಸಕರ ಶ್ರಮದ ಫಲವಾಗಿ ದೇವರಾಯನ ದುರ್ಗದಲ್ಲಿ ಅಭಿವೃದ್ದಿ ಕಾಮಗಾರಿಗಳು ಚಾಲ್ತಿಯಲ್ಲಿವೆ.

      ಚುನಾವಣಾ ಪೂರ್ವದಲ್ಲಿ ಶಾಸಕರು ನೀಡಿದ್ದ ಆಶ್ವಾಸನೆಯಂತೆ ಶ್ರೀ ಕ್ಷೇತ್ರದ ಸಮಗ್ರ ಅಬಿವೃದ್ದಿಯನ್ನು ಕೈಗೆತ್ತಿಕೊಂಡಿದ್ದು ಸಾರ್ವಜನಿಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ, ಶಾಸಕ ಡಿ ಸಿ ಗೌರೀಶಂಕರ್ ವಾರಕ್ಕೊಮ್ಮೆ ದೇವರಾಯನದುರ್ಗಕ್ಕೆ ಭೇಟಿ ನೀಡಿ ಗುತ್ತಿಗೆದಾರರು ಹಾಗು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಗುಣಮಟ್ಟದ ಕಾಮಗಾರಿ ಮಾಡಿ ಶೀಘ್ರವಾಗಿ ಪೂರ್ಣಗೊಳಿಸುವಂತೆ ತಾಕೀತು ಮಾಡುತ್ತಿರುವ ಪರಿಣಾಮ ಕಾಮಗಾರಿಗಳ ಪ್ರಗತಿ ವೇಗ ಪಡೆದಿದೆ,

      ಶಾಸಕ ಡಿ ಸಿ ಗೌರೀಶಂಕರ್ ಅವರ ಖಡಕ್ ಸೂಚನೆ ಪರಿಣಾಮ ದೇವಸ್ತಾನದ ರಥ ಬೀದಿಯ ಸಿಸಿ ರಸ್ತೆ ಕಾಮಗಾರಿ ಪ್ರಕ್ರಿಯೆ ಚುರುಕಿನಿಂದ ಸಾಗಿದೆ,ದೇವಸ್ತಾನದ ವಿಮಾನ ಗೋಪುರ ಸ್ತಳದಿಂದ ರಥಗೋಪುರ ಸ್ತಳದವರೆಗೆ ಅರ್ಧ ಕಿ ಮೀ ರಸ್ತೆ ಡಾಂಬರು ಕಿತ್ತು ಹೋಗಿದ್ದು ಅದರ ದುರಸ್ತಿ ಕಾರ್ಯ ಚಾಲ್ತಿಯಲ್ಲಿದೆ, ಒಳ ಚರಂಡಿ ಕಾಮಗಾರಿಗಳೂ ಸಹ ಪ್ರಗತಿಯಲ್ಲಿದ್ದು ಕಾಮಗಾರಿಗೆ ಬೇಕಾದ ಕಲ್ಲು,ಜೆಲ್ಲಿ,ಮರಳು,ಪೈಪು, ಕಬ್ಬಿಣ ಇನ್ನಿತರೆ ಸಾಮಾನುಗಳನ್ನು ದಾಸ್ತಾನು ಮಾಡಲಾಗಿದೆ,ಬೋಜನಾಲಯದ ಕಟ್ಟಡ ನಿರ್ಮಾಣ ಕಾಮಗಾರಿ ವೇಗದಿಂದ ನಡೆಯುತ್ತಿದ್ದು ಕೆಲವೇ ದಿನಗಳಲ್ಲಿ ಕಾವiಗಾರಿ ಪೂರ್ಣಗೊಳ್ಳಲಿದೆ,ನಾಮದ ಚಿಲುಮೆ ಆರತಿ ಬಂಡೆ ತಿರುವು ರಸ್ತೆಯ ಇಕ್ಕೆಲಗಳಲ್ಲಿ ರಸ್ತೆ ಮಧ್ಯೆ ಬಿದ್ದಿದ್ದ ಗುಂಡಿಗಳನ್ನು ಲೋಕೋಪಯೋಗಿ ಇಲಾಖೆ ಡಾಂಬರು ಹಾಕಿ ಮುಚ್ಚಿದ್ದು ಸುಗಮ ಸಂಚಾರಕ್ಕೆ ಅನವು ಮಾಡಿಕೊಡಲಾಗಿದೆ, ಒಟ್ಟಾರೆ ದೇವರಾಯನ ದುರ್ಗದಲ್ಲಿ ಹಿಂದೆಂದೂ ಕಾಣದಂತ ಅಭಿವೃದಿ ಕಾಮಗಾರಿಗಳು ಡಿ ಸಿ ಗೌರೀಶಂಕರ್ ಶಾಸಕರಾದ ಅವಧಿಯಲ್ಲಿ ನಡೆಯುತ್ತಿದ್ದು ಈ ಭಾಗದ ಸ್ತಳೀಯರು ಹಾಗು ಭಕ್ತಾಧಿಗಳು ಶಾಸಕರ ಸಾಧನೆಯನ್ನು ಮುಕ್ತಕಂಟದಿಂದ ಪ್ರಶಂಸಿಸಿದ್ದಾರೆ.

      ದೇವರಾಯನದುರ್ಗ ಅತೀ ಪುಣ್ಯ ಕ್ಷೇತ್ರ ನಾಡಿನ ಮೂಲೆ ಮೂಲೆಗಳಲ್ಲಿ ಈ ಸನ್ನಿಧಿಯ ಭಕ್ತರಿದ್ದಾರೆ , ಆದರೆ ಈ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದಿ ಕಾಣುತ್ತಿತ್ತು, ಇಲ್ಲಿ ಮೂಲಬೂತ ಸೌಕರ್ಯ ಕಲ್ಪಿಸುವಂತೆ ಇಲ್ಲಿನ ಸ್ತಳೀಯರು ಹಾಗು ಭಕ್ತರು ಒತ್ತಾಯಿಸುತ್ತಿದ್ದರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಶ್ರೀ ಕ್ಷೇತ್ರದ ಬಗ್ಗೆ ಅವರ ಗಮನ ಸೆಳೆದು 10 ಕೋಟಿ ಅನುದಾನ ಮಂಜೂರು ಮಾಡಿಸಿದೆ, ಇಂದು ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿವೆ, ಭಕ್ತರ ಮುಖದಲ್ಲಿ ನೆಮ್ಮದಿ ಮೂಡಿದೆ ಈ ಕೆಲಸದಿಂದ ನನಗೆ ದೇವರ ಸೇವೆ ಮಾಡಿದ ತೃಪ್ತಿ ಸಿಕ್ಕಿದೆ ಎಂದು ಶಾಸಕ ಡಿ ಸಿ ಗೌರೀಶಂಕರ್ ತಮ್ಮ ಮನದಾಳದ ಇಂಗಿತ ವ್ಯಕ್ತಪಡಿಸಿದ್ದಾರೆ,

(Visited 9 times, 1 visits today)

Related posts

Leave a Comment