ಕನ್ನಡಿಗರೆಲ್ಲರೂ ಒಟ್ಟಾದರೆ ಮಾತ್ರ ಇಡೀ ಕರ್ನಾಟಕ ಉಳಿಯುತ್ತದೆ

ಚಿಕ್ಕನಾಯಕನಹಳ್ಳಿ:       ಕರ್ನಾಟಕ ಒಂದು ಮಾಡಿದ ಭಾಗದಿಂದಲೇ ಇಂದು ವಿಭಜನೆ ಮಾತು ಕೇಳಿ ಬರುತ್ತಿದೆ. ಕನ್ನಡಿಗರೆಲ್ಲರೂ ಒಟ್ಟಾದರೆ ಮಾತ್ರ ಇಡೀ ಕರ್ನಾಟಕ ಉಳಿಯುತ್ತದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.       ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ 63ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಭಿವೃದ್ದಿ ಹಾಗೂ ತಾರತಮ್ಯ ಹೆಸರಿನಲ್ಲಿ ಕರ್ನಾಟಕ ಒಡೆಯುವ ಮಾತುಗಳು ಸರಿಯಲ್ಲ, ಇಡೀ ಕರ್ನಾಟಕ-ಕನ್ನಡಿಗರು ಒಂದಾಗಿದ್ದರೆ ಮಾತ್ರ ಬೆಳವಣಿಗೆ ಕಾಣುತ್ತದೆ, 1956ರ ನವಂಬರ್ 1ರಂದು ಅನೇಕ ಕವಿಗಳು, ಹೋರಾಟಗಾರರ ಫಲವಾಗಿ ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು ಒಗ್ಗೂಡಿಸಲಾಯಿತು, ಹೋರಾಟದ ಆಶಯದಂತೆ 1973ರ ನವಂಬರ್ 1ರಂದೇ ಕರ್ನಾಟಕ ರಾಜ್ಯ ಎಂದು ನಾಮಕರಣಗೊಂಡಿತು, ಇದರ ಸವಿ ನೆನಪಿಗಾಗಿಯೇ ಪ್ರತಿ ವರ್ಷ ನವಂಬರ್ ತಿಂಗಳು ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದರು.       ಪ್ರತಿಯೊಬ್ಬ ಕನ್ನಡಿಗನು ಈ ನೆಲ,…

ಮುಂದೆ ಓದಿ...

ಡೇಲಿಹಂಟ್ ಸಮೀಕ್ಷೆ : ನಿರ್ಣಾಯಕ ನಾಯಕರಾದ ಪ್ರಧಾನಿ ಮೋದಿ

ದೆಹಲಿ:       ಭಾರತದ ನಂ.1 ಸುದ್ದಿ ಮತ್ತು ಪ್ರಾದೇಶಿಕ ಭಾಷೆಯ ಕಂಟೆಂಟ್ ಅಪ್ಲಿಕೇಷನ್ ಆಗಿರುವ ಡೇಲಿಹಂಟ್, ನೀಲ್ಸನ್ ಇಂಡಿಯಾ ಜತೆಗೂಡಿ ನಡೆಸಿರುವ ಪ್ರತಿಷ್ಠೆಯ “ಟ್ರಸ್ಟ್ ಆಫ್ ದಿ ನೇಷನ್” ಜಂಟಿ ರಾಜಕೀಯ ಸಮೀಕ್ಷೆಯ ಫಲಿತಾಂಶವನ್ನು ಇಂದು ಪ್ರಕಟಿಸಿದೆ. More than 50% respondents believe that a second term for Narendra Modi will provide them a better future #DailyhuntTrustOfTheNation pic.twitter.com/ZFx8FYTSYl — Dailyhunt (@DailyhuntApp) November 1, 2018       ಸಮೀಕ್ಷೆಯಲ್ಲಿ ಮೋದಿಯವರ ಮೇಲೆ ಭಾರತದ ನಂಬಿಕೆ ಅವ್ಯಾಹತವಾಗಿದೆ. ಪ್ರಾಮಾಣಿಕ, ಬಲಿಷ್ಠ ಮತ್ತು ನಿರ್ಣಾಯಕ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿ ಹೊರಹೊಮ್ಮಿದ್ದಾರೆ. ಮೋದಿಯವರಿಗೆ ಎರಡನೇ ಅವಕಾಶ ನೀಡಬೇಕು, ಅವರು ಭವ್ಯ ಭವಿತವ್ಯ ನೀಡಲಿದ್ದಾರೆ ಎಂದು ಶೇ.50ಕ್ಕಿಂತ ಹೆಚ್ಚು ಮತದಾರರು ನಂಬಿಕೆ ವ್ಯಕ್ತವಾಗಿದೆ.       …

ಮುಂದೆ ಓದಿ...

ಇಂದಿನಿಂದ 9 ದಿನ ಭಕ್ತಾದಿಗಳಿಗಾಗಿ ತೆರೆದಿರುವ ಹಾಸನಾಂಬ ದೇವಾಲಯ

ಹಾಸನ:       ಹಾಸನದ ಐತಿಹಾಸಿಕ ಹಾಸನಾಂಬ ದೇವಾಲಯದ ಬಾಗಿಲನ್ನು ಇಂದು ಜಿಲ್ಲಾಡಳಿತ ತೆರೆದಿದೆ. ಇಂದಿನಿಂದ ಒಂಬತ್ತು ದಿನಗಳ (ನವೆಂಬರ್‌ 1 ರಿಂದ 9) ಕಾಲ ದೇವರ ದರ್ಶನ ದೊರಕಲಿದೆ.       ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿರುವ  ಹಾಸನಾಂಬ ದೇಗುಲದ ಬಾಗಿಲು ಇಂದು ಮಧ್ಯಾಹ್ನ ತೆರೆಯಲಾಗಿದ್ದು.ಒಂದು ವರ್ಷದ ಭಕ್ತರ ನಿರೀಕ್ಷೆ ಫಲಿಸಿದೆ. ಇಂದೂ ಕೂಡ ಬಾಗಿಲು ತೆರೆದಾಗ ಇಟ್ಟಿದ್ದ ನೈವೇದ್ಯ ಹಾಗೆ ಇತ್ತು ಜೊತೆಗೆ ದೀಪವು ಉರಿಯಯುತ್ತಲೇ ಇತ್ತು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.        ಮೊದಲ ದಿನವೇ ಹಾಸನಾಂಬೆ ದರ್ಶನ ಮಾಡಲು ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ದೇವಾಲಯದ ಬಳಿ ನೆರೆದಿದ್ದರು. ಪೊಲೀಸರ ಬಿಗಿ ಪಹರೆಯಲ್ಲಿ ಭಕ್ತಾದಿಗಳು ಹಾಸನಾಂಬೆ ದರ್ಶನ ಮಾಡಿದರು.  

ಮುಂದೆ ಓದಿ...

ಚುನಾವಣೆಗೆ ಎರಡೇ ದಿನ ಇರುವಾಗ ಕಾಂಗ್ರೆಸ್ ಸೇರ್ಪಡೆಗೊಂಡ ಬಿಜೆಪಿ ಅಭ್ಯರ್ಥಿ..?

ರಾಮನಗರ:        ಚುನಾವಣೆಯ ಹೊಸ್ತಿಲಿನಲ್ಲಿಯೇ ರಾಮನಗರ ಕ್ಷೇತ್ರದಲ್ಲಿ ಬಿಜೆಪಿ ಭಾರಿ ಆಘಾತ ಎದುರಾಗಿದೆ.       ಚುನಾವಣೆಗೆ ಕೇವಲ ಎರಡೇ ದಿನ ಬಾಕಿ ಇರುವಾಗಲೇ ರಾಮನಗರ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಮರಳಿ ಸೇರ್ಪಡೆಗೊಂಡು ಬಿಜೆಪಿ ಭಾರಿ ಮುಖಭಂಗ ಉಂಟುಮಾಡಿದ್ದಾರೆ. ಈ ಮೂಲಕ ಉಪ ಚುನಾವಣೆಗೆ ಭಾರಿ ಟ್ವಿಸ್ಟ್ ಸಿಕ್ಕಿದೆ.        ಬೆಂಗಳೂರಿನ ಸದಾಶಿವನಗರದಲ್ಲಿ ಸಂಸದ ಡಿ.ಕೆ.ಸುರೇಶ್​ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್  ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವುದಾಗಿ ಘೋಷಿಸಿದ್ದಾರೆ.        ಕಾಂಗ್ರೆಸ್‌ನ ಪ್ರಮುಖ ಮುಖಂಡನನ್ನೇ ಪಕ್ಷಕ್ಕೆ ಸೆಳೆದುಕೊಂಡು ಸಮ್ಮಿಶ್ರ ಸರ್ಕಾರದ ವಿರುದ್ಧದ ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ಕಾಂಗ್ರೆಸ್‌ಗೆ ಮುಜುಗರ ಉಂಟು ಮಾಡಲು ಬಿಜೆಪಿ ಪ್ರಯತ್ನಿಸಿತ್ತು. ಆದರೆ, ಈಗ ಅದರ ಬಾಣವೇ ಹಿಂದಿರುಗಿ ಬಂದು ಬಿಜೆಪಿಗೆ ತಗುಲಿದೆ.  

ಮುಂದೆ ಓದಿ...