ಕಾರು ಪಲ್ಟಿ : ಇಬ್ಬರು ಯುವಕರ ದುರ್ಮರಣ

ಹಾವೇರಿ:       ಗೋವಾ ಪ್ರವಾಸ ಮುಗಿಸಿ  ಹಿಂದಿರುಗುತ್ತಿದ್ದ ವೇಳೆ   ಕಾರು ಪಲ್ಟಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟು, ಐವರು ಗಾಯಗೊಂಡ ಘಟನೆ ಹೊರವಲಯದ ಆರ್​ಟಿಒ ಕಚೇರಿ ಹಿಂಭಾಗದ ಬೈಪಾಸ್​ನಲ್ಲಿ ನಡೆದಿದೆ.       ಮೃತರನ್ನು ನಿತಿನ್​ (22), ಅರ್ಜುನ್​ (22) ಎಂದು ಗುರುತಿಸಲಾಗಿದೆ. ನಿತಿನ್​ ಹರಿಹರ ಮೂಲದವರು ಹಾಗೂ ಅರ್ಜುನ್​ ಬೆಂಗಳೂರಿನವರು. ಇವರಿಬ್ಬರು ಸೇರಿ ಒಟ್ಟು 7 ಇಂಜಿನಿಯರ್​ ವಿದ್ಯಾರ್ಥಿಗಳು ಮಹೀಂದ್ರಾ ಕ್ವಾಂಟೋ ಕಾರಿನಲ್ಲಿ ಗೋವಾ ಪ್ರವಾಸಕ್ಕೆ ಹೋಗಿ ಬೆಂಗಳೂರಿಗೆ ವಾಪಸ್​ ಆಗುತ್ತಿದ್ದರು. ಹಾವೇರಿ ಬಳಿ ಬರುತ್ತಿದ್ದಂತೆ ಕಾರು ಸಿನಿಮೀಯ ರೀತಿಯಲ್ಲಿ ಪಲ್ಟಿಯಾಗಿ 50 ಮೀಟರ್​ಗಳಷ್ಟು ದೂರ ಹೋಗಿ ಬಿದ್ದಿದೆ. ಗಾಯಗೊಂಡ ಐವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮುಂದೆ ಓದಿ...