ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದಿನಾಂಕ ನಿಗಧಿ

ಬೆಂಗಳೂರು:       ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಉಪ ಚುನಾವಣೆಯಿಂದಾಗಿ ಮುಂದೂಡಲ್ಪಟ್ಟಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನವೆಂಬರ್ 15 ರಂದು ಆಯೋಜಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.       ನವೆಂಬರ್ 1 ರಂದು ನಡೆಯಬೇಕಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಐದು ಕ್ಷೇತ್ರಗಳ ಉಪ ಚುನಾವಣಾ ನೀತಿ ಸಂಹಿತೆ ಬಿಸಿ ತಟ್ಟಿದ್ದರಿಂದ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದೂಡಲಾಗಿತ್ತು. ಇದೀಗ ನೀತಿ ಸಂಹಿತೆ ಅವಧಿ ಪೂರ್ಣಗೊಂಡಿದ್ದು ನವೆಂಬರ್ 15 ರಂದು ಸಮಾರಂಭ ನಡೆಸಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಲಾಗಿದೆ.       ಇದು 63 ನೇ ಕನ್ನಡ ರಾಜ್ಯೋತ್ಸವ ಆದ ಕಾರಣ ಕಲೆ, ಸಾಹಿತ್ಯ, ರಂಗಭೂಮಿ, ಸಮಾಜಸೇವೆ, ಕ್ರೀಡೆ, ಸಿನಿಮಾ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ‌ ಸೇವೆ ಸಲ್ಲಿಸಿರುವ 63 ಗಣ್ಯರಿಗೆ ಪ್ರಶಸ್ತಿ…

ಮುಂದೆ ಓದಿ...

ಹಾಸನಾಂಬೆ ದರ್ಶನಕ್ಕೆ ಬಿತ್ತು ಅಧಿಕೃತ ತೆರೆ

ಹಾಸನ:       ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಪ್ರಸಿದ್ಧ ಹಾಸನಾಂಬೆ ದರ್ಶನಕ್ಕೆ ಇಂದು ಅಧಿಕೃತ ತೆರೆ ಬಿದ್ದಿದ್ದು, 9 ದಿನದ ದರ್ಶನಕ್ಕೆ ಇಂದು ಸಂಪೂರ್ಣ ತೆರೆ ಬಿದ್ದಿದೆ.       ನವೆಂಬರ್ 1 ರಿಂದ ಪ್ರಾರಂಭವಾಗಿ ಒಂಬತ್ತು ದಿನಗಳ ಕಾಲ ಹಾಸನಾಂಬೆ ದೇಗುಲದ ಬಾಗಿಲು ತೆರೆದು ಭಕ್ತಾದಿಗಳಿಗೆ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ವ್ಯವಸ್ಥೆ ಉತ್ತಮವಾಗಿದೆ ಎಂದು ಹೇಳಲಾಯಿತಾದರೂ ಭಕ್ತಾದಿಗಳ ಆಗಮನ ಕಳೆದ ವರ್ಷಕ್ಕಿಂತಲೂ ಕಡಿಮೆಯೇ ಇತ್ತು.       ಒಂಬತ್ತು ದಿನಗಳ ವರೆಗೆ ನಡೆದ ಉತ್ಸವದಲ್ಲಿ ಒಟ್ಟು 12 ಲಕ್ಷಕ್ಕೂ ಮಿಕ್ಕಿ ಜನರು ಹಾಸನಾಂಬೆ ದರ್ಶನ ಮಾಡಿದ್ದಾರೆ ಎಂದು ಜಿಲ್ಲಾ ಆಡಳಿತ ಹೇಳಿದೆ. ಅಂತೆಯೇ ಕಾಣಿಕೆ ಸಂಗ್ರಹದಲ್ಲಿಯೂ ಈ ಬಾರಿ ಕಡಿಮೆ ಆಗಿದೆ ಎನ್ನಲಾಗಿದೆ. ಕಾಣಿಕೆ ಹಣ ಎಣಿಸುವ ಕಾರ್ಯ ಚಾಲ್ತಿಯಲ್ಲಿದೆ.       ಪ್ರತಿಬಾರಿಯಂತೆ ಈ ಬಾರಿಯೂ…

ಮುಂದೆ ಓದಿ...

ಸಹಕಾರದ ಮೂಲತತ್ವವೇ ನಂಬಿಕೆ : ಈಶ್ವರಾನಂದಪುರಿಸ್ವಾಮೀಜಿ

  ಚಿಕ್ಕನಾಯಕನಹಳ್ಳಿ :       ಸಹಕಾರದ ಮೂಲತತ್ವವೇ ನಂಬಿಕೆ, ನಂಬಿಕೆಯಿಂದಲೇ ಎಲ್ಲಾ ಕೆಲಸಗಳು ಸುಗಮವಾಗಿ ನಡೆಯುವುದು ಎಂದು ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿಸ್ವಾಮೀಜಿ ಹೇಳಿದರು.       ಪಟ್ಟಣದ ಸರ್ಕಾರಿ ನೌಕರರ ಸಂಘದ ಮೊದಲನೇ ಮಹಡಿಯ ಕಛೇರಿಯಲ್ಲಿ ಪ್ರಾರಂಭಗೊಂಡ ಶ್ರೀ ಕನಕಲಕ್ಷ್ಮೀ ಪತ್ತಿನ ಸಹಕಾರ ಸಂಘದ ಕಾರ್ಯಕ್ರಮದಲ್ಲಿ ದಿವ್ಯಸಾನಿದ್ಯ ವಹಿಸಿ ಮಾತನಾಡಿದ ಅವರು, ಗ್ರಾಹಕರು ನಂಬಿಕೆ ಇಟ್ಟು ಸಹಕಾರ ಸಂಘಗಳಿಗೆ ಹಣವನ್ನು ಇಡುತ್ತಾರೆ, ಅವರು ನೀಡಿರುವ ಹಣವನ್ನು ಸುರಕ್ಷಿತವಾಗಿ ಕಾಪಾಡಬೇಕು, ಶ್ರೀ ಕನಕಲಕ್ಷ್ಮೀ ಪತ್ತಿನ ಸಹಕಾರ ಸಂಘದ ಎಲ್ಲಾ ನಿರ್ದೇಶಕರು ಅದರ ಜವಬ್ದಾರಿ ಹೊರಬೇಕು, ಸಂಘವನ್ನು ಉತ್ತಮವಾಗಿ ಬೆಳೆಸಿಕೊಂಡು ಹೋಗಬೇಕು ಎಂದರು.       ಸಂಘದ ಪ್ರವಕರ್ತಕರು ಇತರೆ ಅಭಿವೃದ್ದಿ ಹೊಂದಿರುವ ಬ್ಯಾಂಕ್‍ಗಳ ವಹಿವಾಟನ್ನು ಪರಿಗಣಿಸಿ, ಯಾವ ರೀತಿ ವರ್ಷಾನುಗಟ್ಟಲೆ ಬ್ಯಾಂಕ್ ನಡೆಸಿ, ವ್ಯವಹಾರ ಮಾಡಿ ಅಭಿವೃದ್ದಿಯಾಗಿದ್ದಾರೆ ಎಂಬುದನ್ನು ತಿಳಿಯಿರಿ…

ಮುಂದೆ ಓದಿ...

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ

ಕೊರಟಗೆರೆ:       ಗ್ರಾಮೀಣ ಪ್ರದೇಶದ ರೈತರ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಿಡ್ಲ್ಯೂಡಿ ಇಲಾಖೆಯ ಅನುಧಾನದಿಂದ 65ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ಮಾಡಲಾಗಿದೆ ಎಂದು ತುಮಕೂರು ಸಂಸದ ಎಪ್.ಪಿ.ಮುದ್ದಹನುಮೇಗೌಡ ತಿಳಿಸಿದರು.       ತಾಲೂಕಿನ ಕೋಳಾಲ ಹೋಬಳಿ ಪಾತಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಕೋಳಾಲ ಮುಖ್ಯರಸ್ತೆಯಿಂದ ಬೈರವೇಶ್ವರ ದೇವಾಲಯದ ವರೆಗಿನ ರಸ್ತೆಗೆ ಬುಧವಾರ ಗುದ್ದಲಿಪೂಜೆ ನೇರವೇರಿಸಿದ ನಂತರ ಮಾತನಾಡಿದರು.       ಕೋಳಾಲ ಮಾರ್ಗದ ರಸ್ತೆಯಿಂದ ಬೈರಬೇಶ್ವರ ದೇವಾಲಯದ ತಿಮ್ಮನಾಯಕನಹಳ್ಳಿ ಮಾರ್ಗದ 2ಕೀಮೀ ರಸ್ತೆಗೆ 65ಲಕ್ಷ ವೆಚ್ಚದ ಡಾಂಬರೀಕರಣ ಮಾಡಿಸಲು ಯೋಜನೆ ರೂಪಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಬೈರಬೇಶ್ವರ ಜಾತ್ರೆ ಇರುವ ಹಿನ್ನಲೆಯಲ್ಲಿ ಅಷ್ಟರಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ಗುತ್ತಿಗೆದಾರರು ತ್ವರಿತವಾಗಿ ಕಾಮಗಾರಿ ಪೂರ್ಣ ಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಸೂಚನೆ ನೀಡಿದರು.       ಕಾರ್ಯಕ್ರಮದಲ್ಲಿ ಪಟ್ಟಾನಾಯಕನಹಳ್ಳಿ…

ಮುಂದೆ ಓದಿ...

ಮೋದಿಯನ್ನು ಜೀವಂತವಾಗಿ ಸುಡಲು ಇದು ಸಕಾಲ : ಟಿ.ಬಿ.ಜಯಚಂದ್ರ 

ತುಮಕೂರು:            ಪ್ರಧಾನಿ ನರೇಂದ್ರ ಮೋದಿಯನ್ನ ಜೀವಂತವಾಗಿ ಸುಡಲು ಇದು ಸಕಾಲ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ವಿವಾದ್ಮತಕ ಹೇಳಿಕೆಯೊಂದನ್ನು ನೀಡಿದ್ದಾರೆ.          ನೋಟು ಅಮಾನೀಕರಣ ಜಾರಿಗೊಂಡು 2 ವರ್ಷ ಕಳೆದ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಗರದ ಟೌನ್‍ಹಾಲ್ ವೃತ್ತದಲ್ಲಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕರಾಳ ದಿನ ಆಚರಿಸುವ ಮೂಲಕ ಪ್ರತಿಭಟನೆ ನಡೆಸಿದರು. ಪ್ರತಿಭಟನಾನಿರತರನ್ನುದ್ದೇಶಿ ಮಾತನಾಡಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಯಾವುದೇ ಆಡಳಿತಾತ್ಮಕ ಅನುಭವವಿಲ್ಲದೆ ನರೇಂದ್ರ ಮೋದಿ ಅವರು 2016ರ ನವೆಂಬರ್ 8ರ ಮಧ್ಯರಾತ್ರಿ ಚಲಾವಣೆಯಲ್ಲಿದ್ದ 500, 1000 ರೂ ನೋಟು ಅಮಾನೀಕರಣದಿಂದ ಭಾರತದ ಆರ್ಥಿಕ ವ್ಯವಸ್ಥೆ 2 ವರ್ಷ ಕಳೆದರೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ, ನನಗೆ 50 ದಿನ ಕೊಡಿ, ದೇಶ ಸರಿಹೋಗದಿದ್ದರೆ, ಜೀವಂತವಾಗಿ ಸುಟ್ಟುಬಿಡಿ ಎಂದು ಹೇಳಿದ್ದ ನರೇಂದ್ರ ಮೋದಿ 2 ವರ್ಷ ಕಳೆದರೂ…

ಮುಂದೆ ಓದಿ...

ಟಿಪ್ಪು ಜಯಂತಿ ವಿರೋಧಿಸಿ ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

ಬೆಂಗಳೂರು :       ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ರಾಜ್ಯಾದ್ಯಂತ ಇಂದು ಬಿಜೆಪಿ ಪ್ರತಿಭಟನೆ ನಡೆಸಲಿದೆ.       ಬೆಂಗಳೂರು ಸೇರಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಪಕ್ಷದ ವತಿಯಿಂದ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ತಿಳಿಸಿದ್ದಾರೆ. ಮುಖ್ಯ ಪ್ರತಿಭಟನೆ ಬೆಂಗಳೂರಿನಲ್ಲಿ ಬೆಳಗ್ಗೆ 11 ಗಂಟೆಗೆ ಕೆಂಪೇಗೌಡ ರಸ್ತೆಯ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪಕ್ಷದ ಮುಖಂಡ ಆರ್. ಅಶೊಕ್, ಸಂಸದ ಪಿ.ಸಿ. ಮೋಹನ್ ಮತ್ತಿತರ ನೇತೃತ್ವದಲ್ಲಿ ನಡೆಯಲಿದೆ.       ರಾಜ್ಯ ಸರ್ಕಾರ ನವೆಂಬರ್ 10 ರಂದು ಆಚರಿಸಲು ಉದ್ದೇಶಿಸಿರುವ ಟಿಪ್ಪು ಜಯಂತಿಗೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಹಿಂದೆ ದುರ್ಘಟನೆಗಳಿಗೆ ಸಾಕ್ಷಿಯಾಗಿದ್ದ ಕೊಡಗು, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆ. ಹುಬ್ಬಳ್ಳಿ – ಧಾರವಾಡ…

ಮುಂದೆ ಓದಿ...