ಭೀಕರ ಅಪಘಾತ : ಇಬ್ಬರ ದುರ್ಮರಣ

ತುಮಕೂರು :       ಟಿಪ್ಪರ್ , ಟಾಟಾ ಏಸ್ ಹಾಗೂ ಕಾರು ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟು. ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ತುಮಕೂರು ಶಿವಮೊಗ್ಗ ಹೆದ್ದಾರಿಯ ಮಲ್ಲಸಂದ್ರ ಬಳಿ ನಡೆದಿದೆ.     ಬೋಲೆರೋನಲ್ಲಿದ್ದ ವ್ಯಕ್ತಿ ಹಾಗೂ ಎಕ್ಸ್‌ಯುವಿನಲ್ಲಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.      ಕಾರಿನಲ್ಲಿ ಆರು ಜನ ಗುಬ್ಬಿ ಕಡೆಗೆ ಮದುವೆಗೆ ತೆರಳುತ್ತಿದ್ದರು. ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು. ಅವರನ್ಗನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮುಂದೆ ಓದಿ...

ಮತ್ತೆ ‌ಜೈಲು ಸೇರಿದ ರೆಡ್ಡಿ

ಬೆಂಗಳೂರು:      ‘ಇ.ಡಿ ಡೀಲ್’ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಭಾನುವಾರ ಸಂಜೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ (ಯುಟಿಪಿ) 10,902 ನೀಡಲಾಗಿದೆ.      ರೆಡ್ಡಿ ಹಾಗೂ ಅವರ ಆಪ್ತಸಹಾಯಕ ಆಲಿಖಾನ್ ಹಿಂದೆ ಎಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು. ಆಗ ಅವರನ್ನು ‘ವಿಶೇಷ ಭದ್ರತೆ’ಯ ಕೊಠಡಿಯಲ್ಲಿ ಬಂಧಿಸಿಡಲಾಗಿತ್ತು. ರೆಡ್ಡಿ ಈಗ ಮತ್ತೆ ಅದೇ ಕೊಠಡಿ ಸೇರಿದ್ದಾರೆ.         ಸಿಸಿಬಿ ಪೊಲೀಸರು ನ್ಯಾಯಾಧೀಶರ ಮುಂದೆ ಬಲವಾದ ಸಾಕ್ಷ್ಯಗಳನ್ನು ಒಪ್ಪಿಸಿದ್ದಾರೆ. ಈ ಹಿನ್ನೆೆಲೆಯಲ್ಲಿ ನ್ಯಾಯಾಧೀಶರು, ರೆಡ್ಡಿ ಪರ ವಕೀಲ ಚಂದ್ರಶೇರ್ ಅವರ ವಾದವನ್ನು ತಿರಸ್ಕರಿಸಿ, ನ್ಯಾಯಾಂಗ ಬಂಧನಕ್ಕೆೆ ಆದೇಶಿಸಿದ್ದಾರೆ.

ಮುಂದೆ ಓದಿ...

ಟಿಪ್ಪು ಜಯಂತಿ ಬಳಸಿಕೊಂಡು ರಾಜಕಾರಣಿಗಳು ರಾಜಕೀಯ ಮಾಡುವುದು ಸೂಕ್ತವಲ್ಲ

ಕೊರಟಗೆರೆ:       ಈ ನಾಡಿನಲ್ಲಿ ಹಜರತ್ ಟಿಪ್ಪು ಸುಲ್ತಾನ್ ಎಂಬ ದೇಶಪ್ರೇಮಿಯ ಜಯಂತಿ ವಿರೋಧ ಮಾಡುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ರಾಜ್ಯ ಮತ್ತು ರಾಷ್ಟ್ರಕ್ಕೆ ತಾನು ನೀಡಿರುವ ಕೊಡುಗೆ ಏನು ಎಂಬುದನ್ನು ಮೊದಲು ಯೋಚನೆ ಮಾಡಬೇಕು ಎಂದು ಸಾಹಿತಿ ಹೊಸಕೆರೆ ರೀಜ್ವಾನ್ ಪಾಷ ತಿಳಿಸಿದರು.       ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.       ಜಯಂತಿಯ ಹೆಸರು ಬಳಸಿಕೊಂಡು ರಾಜಕಾರಣಿಗಳು ರಾಜಕೀಯ ಮಾಡುವುದು ಸೂಕ್ತವಲ್ಲ. ಸರಕಾರ ಸಮುದಾಯಗಳ ಜಯಂತಿಗೆ ಖರ್ಚು ಮಾಡುವ ಹಣವನ್ನು ರೈತರ ಕಲ್ಯಾಣಕ್ಕಾಗಿ ಬಳಸಬೇಕು. ರಾಜ್ಯದ ಪ್ರತಿಯೊಂದು ಕ್ಷೇತ್ರದ ಕೆರೆ ಮತ್ತು ಕಟ್ಟೆಯನ್ನು ಅಭಿವೃದ್ದಿ ಪಡಿಸಿ ಅಂತರ್ಜಲ ಮಟ್ಟವನ್ನು ವೃದ್ದಿಸುವ ಕೆಲಸ ಮಾಡಿ ರೈತರ ಆರ್ಥಿಕ ಅಭಿವೃದ್ದಿ ಸಹಕಾರ ನೀಡಿದಾಗ ಮಾತ್ರ ರಾಜ್ಯ…

ಮುಂದೆ ಓದಿ...

ಟಿ.ಬಿ. ಜಯಚಂದ್ರರನ್ನು ಗಲ್ಲಿಗೆ ಏರಿಸಿ : ಸೊಗಡು ಶಿವಣ್ಣ

ತುಮಕೂರು :       ನೋಟು ಅಮಾನ್ಯಿಕರಣದ ಹಿನ್ನೆಲೆ ಪ್ರಧಾನಿ ಮೋದಿಯನ್ನು ಸುಟ್ಟು ಹಾಕುವ ಕಾಲ ಬಂದಿದೆ ಎಂದು ಹೇಳಿಕೆ ನೀಡಿರುವ ಟಿ.ಬಿ. ಜಯಚಂದ್ರರ ಹೇಳಿಕೆಯನ್ನು ದೇಶದ್ರೋಹವೆಂದು ಪರಿಗಣಿಸಿ ಅವರನ್ನು ಗಲ್ಲಿಗೆ ಏರಿಸಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.       ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೋದಿ ವಿರುದ್ಧ ಕೀಳುಮಟ್ಟದಲ್ಲಿ ಜಯಚಂದ್ರ ಮಾತನಾಡಿದ್ದಾರೆ. ಈ ವರ್ತನೆ   ಜಯಚಂದ್ರರ ಹುಟ್ಟಿನ ಗುಣವನ್ನು ತೋರಿಸುತ್ತದೆ. ಅವರು ನರಿಯೂ ಅಲ್ಲ, ಗುಳ್ಳೆನರಿಯೂ ಅಲ್ಲ, ಬದಲಾಗಿ ಕೆಟ್ಟ ಸೊಳ್ಳೆ. ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಅವರನ್ನು ಬಂಧಿಸಬೇಕು. ಪ್ರಧಾನಿ ಬಗ್ಗೆ ಈ ರೀತಿ ಹೇಳಿಕೆ ನೀಡುತ್ತಾರೆ ಎಂದ್ರೆ ನಾವೆಲ್ಲ ಏನು ಬಳೆ ತೊಟ್ಟು ಕೂತಿದ್ದೇವೆಯೇ ಎಂದು ಪ್ರಶ್ನಿಸಿದರು.       ನಮ್ಮದು ಫೆಡರಲ್ ಸಿಸ್ಟಂ ಹೀಗಾಗಿ ಕ್ರಿಮಿನಲ್​ಗಳನ್ನು ಎಲ್ಲಿ ಬೇಕಾದ್ರು ಬಂಧಿಸಬಹುದು. ಟಿ.ಬಿ…

ಮುಂದೆ ಓದಿ...