ಅನಂತಕುಮಾರ್ ಅಂತಿಮ ದರ್ಶನಕ್ಕೆ ಬೆಂಗಳೂರಿನತ್ತ ಪ್ರಧಾನಿ ಮೋದಿ

ಬೆಂಗಳೂರು:       ಬಹು ಅಂಗಾಂಗ ವೈಫಲ್ಯದಿಂದಾಗಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರು ವಿಧಿವಶರಾಗಿದ್ದು, ಈ ಹಿನ್ನಲೆಯಲ್ಲಿ ಶರೀರದ ಅಂತಿಮ ದರ್ಶನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರಾತ್ರಿ 8.30ರ ನಂತರ  ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸಲಿದ್ದಾರೆ.        ಅನಂತ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಇಂದು ಬೆಳಿಗ್ಗೆ 8 ರಿಂದಲೇ ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಿದ್ದು, ಇದಕ್ಕಾಗಿ ಸಕಲ ಭದ್ರತಾ ಕ್ರಮಗಳನ್ನು ಕಾೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.        ನಾಳೆ ಮಧ್ಯಾಹ್ನ 1 ಗಂಟೆಗೆ ಚಾಮರಾಜಪೇಟೆಯ ಟಿ.ಆರ್‌. ಮಿಲ್‌ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.     

ಮುಂದೆ ಓದಿ...

ಬೈಕ್‍ಗಳ ಮುಖಾಮುಖಿ : ಸವಾರರ ದುರ್ಮರಣ

  ಹುಳಿಯಾರು:       ಪಟ್ಟಣದ ಹೊರವಲಯದ ಕೆಂಚಮ್ಮ ತೋಪಿನ ಬಳಿ ಎರಡು  ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿ ಮತ್ತಿಬ್ಬರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ.       ತಿಪಟೂರು ಪಟ್ಟಣದ ಮಾವಿನತೋಪಿನ ಮಧು (22) ಹಾಗೂ ಆನಂದ್ (45) ಮೃತರು. ಗಾಯಗೊಂಡವರು ಬರಕನಹಾಳ್ ಬಳಿಯ ರಾಮಪ್ಪನಹಟ್ಟಿಯ ಮಧು ಹಾಗೂ ಆನಂದ್. ಇವರು ಬೈಕ್‍ನಲ್ಲಿ ಕೆಂಕೆರೆ ಬಳಿಯ ಪುರದಮಠದ ದೇಗುಲದಲ್ಲಿ ನಡೆಯಲಿದ್ದ ಮದುವೆಯಲ್ಲಿ ಭಾಗವಹಿಸಲು ತೆರಳುತ್ತಿದ್ದರು ಎನ್ನಲಾಗಿದೆ.        ಈ ಸಂದರ್ಭದಲ್ಲಿ ಎರಡು ಬೈಕ್‍ಗಳು ಬಲವಾಗಿ ಡಿಕ್ಕಿಯಾಗಿ ಮೃತರ ಪೈಕಿ ಒಬ್ಬರು ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರೆ, ಮತ್ತೊಬ್ಬರು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.  ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದೆ ಓದಿ...

ಆಸ್ತಿ ವಿಚಾರ : ಇಬ್ಬರು ಹೆಂಡತಿಯರ ಗಂಡನ ಸಾವು

ಚಿಕ್ಕನಾಯಕನಹಳ್ಳಿ:       ತಾಲ್ಲೂಕಿನ ಸೋಮನಹಳ್ಳಿ ಕಟಕಳೆವು ಗಡಿಹಳ್ಳದಲ್ಲಿ ಆಸ್ತಿವಿಚಾರವಾಗಿ ವ್ಯಕ್ತಿಯೋರ್ವನನ್ನು ಕೊಲೈಗೈದು ಹಳ್ಳದಲ್ಲಿ ಬಿಸಾಡಿ ಹೋಗಿರುವ ಘಟನೆ ನಡೆದಿದೆ.       ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಗೋಡಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮನಹಳ್ಳಿ ನಿವಾಸಿ ಗಂಗಾಧರಯ್ಯ ಕೊಲೆಯಾಗಿರುವ ದುರ್ದೈವಿ.       ಮೃತ ವ್ಯಕ್ತಿಗೆ ಇಬ್ಬರು ಹೆಂಡತಿಯರ ವೈಯಕ್ತಿಕ ದ್ವೇಷದಿಂದಾಗಿ ತನ್ನ ಗಂಡನನ್ನೇ ಕೊಲೆ ಮಾಡಿರುವ ಶಂಕೆ ಪೋಲಿಸರಿಂದ ವ್ಯಕ್ತವಾದ ಹಿನ್ನಲೆಯಲ್ಲಿ ಮೊದಲ ಹೆಂಡತಿ ಶಾಂತಮ್ಮನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.       ಮೃತನ ತಂದೆ ತಿಮ್ಮಯ್ಯನಿಗೆ ಗಂಗಾಧರಯ್ಯ ಒಬ್ಬನೇ ಮಗನಾಗಿದ್ದು ಈತ ಶಾಂತಮ್ಮನನ್ನು ಮೊದಲನೆ ವಿವಾಹವಾಗಿದ್ದ. ಜಯಮ್ಮ ಎಂಬುವವರನ್ನು ಎರಡನೇ ಮದುವೆಯಾಗಿ ಸಂಸಾರ ನಡೆಸುತ್ತಿದ್ದ. ಶಾಂತಮ್ಮನಿಗೆ ಮಗಳು, ಜಯಮ್ಮನಿಗೆ ಒಬ್ಬ ಮಗನಿದ್ದರು, ಇವರು ಕುಟುಂಬದಲ್ಲಿ ಆಸ್ತಿವಂತರಾಗಿದ್ದ ಪರಿಣಾಮ ಎರಡೂ ಸಂಸಾರವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದ ಎಂದು ಪೋಲಿಸರಿಂದ ತಿಳಿದು ಬಂದಿದೆ. …

ಮುಂದೆ ಓದಿ...

ಕೇಂದ್ರ ಸಚಿವ ಅನಂತ್‍ಕುಮಾರ್ ನಿಧನ : ಬಿಜೆಪಿ ಘಟಕದಿಂದ ಶ್ರದ್ದಾಂಜಲಿ

ತುರುವೇಕೆರೆ:       ಕೇಂದ್ರ ಸಚಿವ ಅನಂತ್‍ಕುಮಾರ್ ಅವರ ನಿಧನದ ಹಿನ್ನಲೆ ತಾಲ್ಲೂಕು ಬಿಜೆಪಿ ಘಟಕದವತಿಯಿಂದ ಪಟ್ಟಣದ ತಾಲೂಕು ಕಛೇರಿ ಮುಂಭಾಗ ಶ್ರದ್ದಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.       ಬಿಜೆಪಿ ಶಾಸಕ ಮಸಾಲ ಜಯರಾಮ್ ದಿ|| ಅನಂತ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ರಾಜಕೀಯ ಚತುರರಾಗಿ ಸ್ನೇಹಮಯವಾದ ವ್ಯಕ್ತಿತ್ವ ಹೊಂದಿದ್ದರು. ಬಿಜೆಪಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ, ಸಂಸದರಾಗಿ ಎನ್‍ಡಿಎ ಸರ್ಕಾರದಲ್ಲಿ ಪ್ರವಾಸೋದ್ಯಮ, ಕ್ರೀಡೆ ಯವಜನ ಪ್ರಸ್ತುತ ರಸಗೊಬ್ಬರ ಸಚಿವರಾಗಿ ರೈತ ಪರವಾದ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದರು ಎಂದು ತಿಳಿಸಿದರು.       ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ದುಂಡರೇಣಕಪ್ಪ, ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ, ಮುಖಂಡರಾದ ಅರಳಿಕೆರೆಶಿವಯ್ಯ, ಡಿ.ಆರ್.ಬಸವರಾಜು, ಡಾ.ಚೌದ್ರಿನಾಗೇಶ್, ಕೊಂಡಜ್ಜಿವಿಶ್ವನಾಥ್, ವೆಂಕಟರಾಮಯ್ಯ, ರಾಮೇಗೌಡ, ಕೆಂಪೇಗೌಡ, ಹೇಮಚಂದ್ರು,…

ಮುಂದೆ ಓದಿ...

10 ಲಕ್ಷ ಹಣ ಪಡೆದು ವಂಚನೆ : ಡಿವೈಎಸ್ಪಿ ಸೇರಿ ನಾಲ್ವರ ಬಂಧನ

ಬೆಂಗಳೂರು:       ಹಣ ದ್ವಿಗುಣಗೊಳಿಸುವುದಾಗಿ ಹೇಳಿ 10 ಲಕ್ಷ ಪಡೆದುಕೊಂಡು ವಂಚಿಸಿದ ಆರೋಪದಡಿ ಡಿವೈಎಸ್ಪಿ ಸೇರಿದಂತೆ ನಾಲ್ವರನ್ನು ಗಂಗಮ್ಮನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.       ಚಿಕ್ಕಬಳ್ಳಾಪುರ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ನಾಗೇಂದ್ರ ಕುಮಾರ್, ಹೆಡ್‌ ಕಾನ್‌ಸ್ಟೆಬಲ್ ವೆಂಕಟರಮಣ, ಕಾನ್‌ಸ್ಟೆಬಲ್ ಸಂತೋಷ್ ಹಾಗೂ ಖಾಸಗಿ ಕಾರು ಚಾಲಕ ಶಮಸೂದ್ದಿನ್ ಬಂಧಿತರು.       ‘ಖಾಸಗಿ ಕಂಪನಿ ಉದ್ಯೋಗಿ ಶಿವಕುಮಾರ್‌ ಎಂಬುವರನ್ನು ಸಂಪರ್ಕಿಸಿದ್ದ ಆರೋಪಿ ಶಮಸೂದ್ದಿನ್, ‘₹2,000 ಮುಖಬೆಲೆಯ ನೋಟುಗಳ ಸಮೇತ ₹10 ಲಕ್ಷ ಕೊಟ್ಟರೆ, ಅದಕ್ಕೆ ಪ್ರತಿಯಾಗಿ ₹500 ಮುಖಬೆಲೆಯ ನೋಟುಗಳ ಸಮೇತ ₹20 ಲಕ್ಷ ವಾಪಸ್‌ ಕೊಡುತ್ತೇನೆ’ ಎಂದು ಹೇಳಿದ್ದ. ಅದನ್ನು ನಂಬಿದ್ದ ಶಿವಕುಮಾರ್, ಹಣ ಕೊಡಲು ಒಪ್ಪಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.       ‘ಶಿವಕುಮಾರ್ ಅವರನ್ನು ₹10 ಲಕ್ಷ ಸಮೇತ ನ. 8ರಂದು ಗಂಗಮ್ಮನಗುಡಿ…

ಮುಂದೆ ಓದಿ...

ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ

ಬೆಂಗಳೂರು:        ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಅನಂತ್​ ಕುಮಾರ್(59)​ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ವಿಧಿವಶರಾಗಿದ್ದಾರೆ.       ತೀವ್ರ ಅನಾರೋಗ್ಯ ಕಾರಣದಿಂದಾಗಿ ಕಳೆದ 20 ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ ಆಸ್ಪತ್ರೆಯಲ್ಲೆ ಕೊನೆಯುಸಿರೆಳೆದಿದ್ದಾರೆ. ಅನಂತ್​ ಕುಮಾರ್​ ಅವರು ಪತ್ನಿ ತೇಜಸ್ವಿನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.       ಖಾಸಗಿ ಆಸ್ಪತ್ರೆಯಿಂದ ಲಾಲ್ ಬಾಗ್ ರಸ್ತೆಯಲ್ಲಿರುವ ಸುಮೇರ ನಿವಾಸಕ್ಕೆ ಅನಂತ್​ ಕುಮಾರ್​ ಅವರ ಪಾರ್ಥಿವ ಶರೀರ ರವಾನೆಯಾಗಿದೆ. ಸದ್ಯ ಕುಟುಂಬದವರಿಗೆ ಮಾತ್ರ ಮನೆಯಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಬೆಳಗ್ಗೆ 9 ಗಂಟೆ ಸಮಯದ ನಂತರ ಪಾರ್ಥೀವ ಶರೀರದ ದರ್ಶನಕ್ಕೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವ್ಯವಸ್ಥೆ…

ಮುಂದೆ ಓದಿ...