ವರುಣನ ಸುಳಿವಿಲ್ಲದೆ ಬರದ ದವಡೆಗೆ ಸಿಲುಕಿರುವ ಮಧುಗಿರಿ ತಾಲೂಕು

ಮಧುಗಿರಿ:       ದೀಪಾವಳಿ ಹಬ್ಬದ ಹೊತ್ತಿಗೆ ಶೇಂಗಾ ಫಸಲು ಕೈಗೆ ಬರುವ ಜೊತೆಗೆ ದ್ವಿದಳ ದಾನ್ಯಗಳ ಬೆಳೆಗಳು ಕೈಗೆ ತಾಕಬೇಕಿತ್ತು. ಎಲ್ಲೆಲ್ಲೂ ಅಚ್ಚ ಹಸಿರು ಕಂಗೊಳಿಸಿಬೇಕಿದ್ದ ಮಧುಗಿರಿ ತಾಲೂಕು ವರುಣನ ಸುಳಿವಿಲ್ಲದೆ ಬರದ ದವಡೆಗೆ ಸಿಲುಕಿ ಬೇಸಿಗೆ ಬಿಸಿಲನ್ನು ಮೀರಿಸುವ ರಣ ಬಿಸಿಲು ತಾಲೂಕಿನಾದ್ಯಂತ ಕೇಕೆ ಹಾಕುತ್ತಿದ್ದು ಜನ ಜಾನುವಾರುಗಳು ಕುಡಿವ ನೀರು ಮತ್ತು ಮೇವಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.       ದೊಡ್ಡೇರಿ, ಮಧುಗಿರಿ ಕಸಬಾ ಹಾಗೂ ಮಿಡಿಗೇಶಿ ಹೋಬಳಿಗಳಲ್ಲಿ ಹಿಂದೆ ಭತ್ತ, ರಾಗಿ ,ಶೇಂಗಾ ಬೆಳೆದು ಸಮೃದ್ಧವಾದ ತೆಂಗು, ಅಡಿಕೆ ತೋಟಗಳು ಮತ್ತು ರೇಷ್ಮೆ ಬೆಳೆಗಳು ಹಾಸು ಹೊಕ್ಕಾಗಿದ್ದು ಸಂಪದ್ಬರಿತ ಪ್ರದೇಶವಾಗಿತ್ತು.ಆದರೆ ಕಳೆದ 10 -12 ವರ್ಷಗಳಿಂದ ಕಾಲ ಕಾಲಕ್ಕೆ ಮಳೆ ಬಾರದೇ ರೈತರು ಕಷ್ಟ ಪಟ್ಟು ಸಂಪಾದಿಸಿದ್ದ ತೋಟಗಾರಿಕೆ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. ದೊಡ್ಡೇರಿ ,ಬಡವನಹಳ್ಳಿ ಸುತ್ತಮುತ್ತ ಹಳ್ಳಿಗಳ…

ಮುಂದೆ ಓದಿ...

ಮನೆ ಬಾಡಿಗೆ ಕೇಳಿದ ಮಾಲೀಕನಿಗೆ ಅವಾಸ್‌‌ ಹಾಕಿದ ಸುನಾಮಿ ಕಿಟ್ಟಿ

ಬೆಂಗಳೂರು:        ಸುನಾಮಿ ಕಿಟ್ಟಿಯ ಕಿರಿಕ್‌ಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಕಿಡ್ನಾಪ್ ಆಯ್ತು, ಒರೆಯಾನ್ ಮಾಲ್ ಗಲಾಟೆಯಾಯ್ತು, ಇದೀಗ ಮನೆ ಬಾಡಿಗೆ ವಿಚಾರಕ್ಕೆ ಮನೆ ಮಾಲೀಕನಿಗೆ ಕಿಟ್ಟಿ ಆವಾಜ್ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.       4 ತಿಂಗಳ ಮನೆ ಬಾಡಿಗೆ ಕೇಳಿದಕ್ಕೆೆ, ಕಿಟ್ಟಿ ಮನೆ ಮಾಲೀಕನಿಗೆ ಆವಾಜ್ ಹಾಕಿದ್ದಾರೆ ಎನ್ನಲಾಗಿದ್ದು, ಮನೆ ಮಾಲೀಕ ಶಿವಣ್ಣ ಎಂಬುವವರು ಕಿಟ್ಟಿ ವಿರುದ್ಧ ಮಹಾಲಕ್ಷೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ₹88 ಸಾವಿರ ಬಾಡಿಗೆ ಕೊಡದೇ ಕಿಟ್ಟಿ ಸತಾಯಿಸುತ್ತಿದ್ದಾರೆ ಎಂದು ಮನೆ ಮಾಲೀಕ ಶಿವಣ್ಣ ಆರೋಪಿಸಿದ್ದಾರೆ.       ಶಂಕರಮಠದ ಮನೆಯೊಂದರಲ್ಲಿ ಬಾಡಿಗೆಗೆ ವಾಸವಿರೋ ಸುನಾಮಿ ಕಿಟ್ಟಿ, ತಿಂಗಳಿಗೆ ₹22 ಸಾವಿರ ಬಾಡಿಗೆ ನೀಡಬೇಕು. ಆದರೆ 4 ತಿಂಗಳಿಂದ ಮನೆ ಬಾಡಿಗೆ ಕಟ್ಟದೇ ಮಾಲೀಕ ಶಿವಣ್ಣನನ್ನ ಸತಾಯಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯ…

ಮುಂದೆ ಓದಿ...

ಎಚ್‌1ಎನ್‌1 : 12 ಮಂದಿ ಬಲಿ !!

ಬೆಂಗಳೂರು:       ಎಚ್‌1ಎನ್‌1 ಮಹಾಮಾರಿಗೆ ಶನಿವಾರ ಒಂದೇ ದಿನ ರಾಜ್ಯದಲ್ಲಿ ಬರೋಬ್ಬರಿ 12 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಮಾರಣಾಂತಿಕ ಕಾಯಿಲೆಯಿಂದ ಜೀವ ಕಳೆದುಕೊಂಡವರ ಸಂಖ್ಯೆ ರಾಜ್ಯದಲ್ಲಿ 31ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆತಂಕ ಮತ್ತಷ್ಟು ತೀವ್ರಗೊಂಡಿದೆ.       ಪ್ರಸಕ್ತ ಸಾಲಿನಲ್ಲಿ ಒಂದೇ ದಿನ ಅತಿ ಹೆಚ್ಚು ಎಚ್‌1ಎನ್‌1 ಸಾವು ವರದಿಯಾಗಿರುವುದು ಇದೇ ಮೊದಲು. ಅ.12ರಂದು ಒಂದೇ ದಿನ ಐದು ಮಂದಿ ಬಲಿಯಾಗಿದ್ದರು. ಈ ಮೂಲಕ ಮೃತರ ಸಂಖ್ಯೆ 13ಕ್ಕೆ ಹೆಚ್ಚಳವಾಗಿತ್ತು. ಬಳಿಕ ನವೆಂಬರ್‌ 16ರ ವೇಳೆಗೆ 19ಕ್ಕೆ ಏರಿಕೆಯಾಗಿದ್ದ ಮೃತರ ಸಂಖ್ಯೆ ನ.17ರಂದು ಒಂದೇ ದಿನ 31ಕ್ಕೆ ತಲುಪಿದೆ. ಈ ಮೂಲಕ ಅ.17ರಂದು ಒಂದೇ ದಿನ 12 ಮಂದಿ ಮೃತಪಟ್ಟಂತಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.       ಎಚ್‌1ಎನ್‌1 ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಶನಿವಾರ ಮುಖ್ಯ…

ಮುಂದೆ ಓದಿ...

ಕಲಬುರಗಿ : ರೌಡಿಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್

ಕಲಬರುಗಿ :         ನಗರದ ಕುಖ್ಯಾತ ರೌಡಿಶೀಟರ್ 7 ಸ್ಟಾರ್ ಪ್ರದೀಪ್ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ನಗರದಲ್ಲಿ ನಡೆದಿದೆ.       ಪ್ರಕರಣವೊಂದರ ಸ್ಥಳ ಪರಿಶೀಲನೆಗೆ ಪೊಲೀಸರು ಕರೆದುಕೊಂಡು ಹೋದಾಗ ಆತ ಪೊಲೀಸರ ಮೇಲೆಯೇ ದಾಳಿ ಮಾಡಲು ಯತ್ನಿಸಿದ್ದಾನೆ. ಆಗ ಆತ್ಮ ರಕ್ಷಣೆಗಾಗಿ ಪೊಲೀಸ್ ಇನ್ಸ್ ಪೆಕ್ಟರ್ ರಮೇಶ್ ಫೈರಿಂಗ್ ನಡೆಸಿದ್ದಾಗಿ ಎಸ್.ಪಿ ಶಶಿಕುಮಾರ್​ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಅಶೋಕ ನಗರದ ಸಿಪಿಐ ಪ್ರದೀಪ್ ಕಾಲಿಗೆ ಗುಂಡಿಟ್ಟಿದ್ದಾರೆ.       ಪ್ರದೀಪ್ 19 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಿದ್ದ, ಈತನ ಮೇಲೆ ಅಪಹರಣ, ಕೊಲೆ ಯತ್ನ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಇತ್ಯಾದಿ ಪ್ರಕರಣಗಳು ದಾಖಲಾಗಿದ್ದವು. ಗಾಯಾಳು ರೌಡಿಶೀಟರ್​ನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳು ಪೊಲೀಸ್ ಸಿಬ್ಬಂದಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.      ಕಲಬುರಗಿ ಹೊರವಲಯದ ಗ್ರೀನ್…

ಮುಂದೆ ಓದಿ...