ಎಸಿಬಿ ಬಲೆಗೆ ಭ್ರಷ್ಟ AEE ಮರಿಯಪ್ಪ : ಡಿ. 3 ರ ವರೆಗೆ ನ್ಯಾಯಾಂಗ ಬಂಧನ

 ತುಮಕೂರು:       ಗುತ್ತಿಗೆದಾರರಿಂದ ಲಂಚ ಪಡೆಯುವ ಸಂದರ್ಭದಲ್ಲಿ ತುಮಕೂರು ನಗರದ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮರಿಯಪ್ಪ(54) ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.       ಇಂದು  ಮಧ್ಯಾಹ್ನ 1.10 ಗಂಟೆ ಸಮಯದಲ್ಲಿ ಕಛೇರಿಯಲ್ಲಿ ವಸಂತನರಸಾಪುರದ ಗುತ್ತಿಗೆದಾರ ಜಗದೀಶಯ್ಯ ರವರಿಂದ 10 ಸಾವಿರ ಲಂಚದ ಹಣ ಪಡೆಯುತ್ತಿದ್ದಾಗ ಎಸಿಬಿ ಪಿ ಐ ಹಾಲಪ್ಪರವರು ದಾಳಿ ನಡೆಸಿ ಹಣ ಮತ್ತು ಆರೋಪಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ.       ಬಲೆಗೆ ಬಿದ್ದಿರುವ ಮರಿಯಪ್ಪ ಅವರ ಮೇಲೆ ಮಹಾನಗರ ಪಾಲಿಕೆಯ ತಾಂತ್ರಿಕ ಶಾಖೆಯಲ್ಲಿ‌ ಸಾರ್ವಜನಿಕರಿಗೆ ಸರ್ಕಾರಿ ಕೆಲಸಕ್ಕೆ ವಿಳಂಬಮಾಡುತ್ತಿದ್ದು ಹಣ ನೀಡದೇ ಕೆಲಸ ಮಾಡಿಕೊಡುವುದಿಲ್ಲ ಎಂಬ ಆಪಾದನೆಯಿತ್ತು. ಗುತ್ತಿಗೆದಾರರು ಹೆದರಿ ಯಾವುದೇ ರೀತಿಯ ಲಿಖಿತ ರೂಪದಲ್ಲಿ ದೂರು ನೀಡಿರಲಿಲ್ಲ. ಆದರೆ ಜಗಧೀಶ್ ನೀಡಿರುವ ದೂರನ್ನಾದರಿಸಿ ಹಣ ಪಡೆಯುವಾಗ ನೇರವಾಗಿ ಧಾಳಿ…

ಮುಂದೆ ಓದಿ...

ಕೇಜ್ರಿವಾಲ್ ಮುಖಕ್ಕೆ  ಖಾರದ ಪುಡಿ!!!

ದೆಹಲಿ:        ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮುಖಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಖಾರದ ಪುಡಿ ಎರಚಿದ ಘಟನೆ ನಡೆದಿದೆ.       ದೆಹಲಿ ಸಚಿವಾಲಯದ ಬಳಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮಧ್ಯಾಹ್ನದ ಭೋಜನಕ್ಕೆಂದು ತಮ್ಮ ಕಚೇರಿಯಿಂದ ನಿರ್ಗಮಿಸಿದ ಕೇಜ್ರಿವಾಲ್​ ಮೇಲೆ ದೆಹಲಿಯ ನಾರಾಯಣ ಎಂಬಲ್ಲಿನ ಸರಿಸುಮಾರು 40 ವರ್ಷ ವಯಸ್ಸಿನ ಅನಿಲ್​ ಕುಮಾರ್​ ಶರ್ಮಾ ಎಂಬಾತ ದಾಳಿ ನಡೆಸಿದ್ದಾನೆ. ಆತನನ್ನು ಐಪಿ ಎಸ್ಟೇಟ್​ ಪೊಲೀಸರು ಬಂಧಿಸಿದ್ದಾರೆ.        ಅನಿಲ್ ಕುಮಾರ್​​ ಶರ್ಮಾ ಸಿಗರೇಟ್​ ಪ್ಯಾಕೆಟ್​ನಲ್ಲಿ ಖಾರದ ಪುಡಿಯನ್ನು ತುಂಬಿಕೊಂಡು ತಂದಿದ್ದ. ಪತ್ರವೊಂದನ್ನು ನೀಡಲು ಕಾದು ಕುಳಿತಿದ್ದ. ಕೇಜ್ರಿವಾಲ್​ ಅವರು ಕಚೇರಿಯಿಂದ ಬರುತ್ತಲೇ ಅವರ ಕಾಲಿಗೆರಗಿದ ಅನಿಲ್​ನನ್ನು ಕೇಜ್ರಿವಾಲ್​ ಬಗ್ಗಿ ಮೇಲೆತ್ತಲು ಪ್ರಯತ್ನಿಸಿದರು. ಆಗ ಅನಿಲ್​ ಕೇಜ್ರಿವಾಲ್​ ಮೇಲೆ ಖಾರದ ಪುಡಿ ಎರಚಿದ್ದಾನೆ. ಆದರೆ, ಕೇಜ್ರಿವಾಲ್​ ಕಣ್ಣಿಗೆ ಖಾರದ…

ಮುಂದೆ ಓದಿ...

ತುಮಕೂರು ಜಿಲ್ಲಾಧಿಕಾರಿಗೆ ಬಿಸ್ಕೆಟ್​​​​​​ನಲ್ಲಿ ಸಿಕ್ತು ಮೊಳೆ… ಸೀಜ್ ಆಯ್ತು ಬೇಕರಿ!!

ತುಮಕೂರು:     ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ರವರು ಸಭೆಯೊಂದರಲ್ಲಿ ನೀಡಿದ್ದ, ಬಿಸ್ಕೆಟ್ ತಿನ್ನುವ ವೇಳೆ ಕಬ್ಬಿಣದ ಮೊಳೆಯೊಂದು ಸಿಕ್ಕ ಹಿನ್ನೆಲೆಯಲ್ಲಿ, ಬಿಸ್ಕೆಟ್ ತಯಾರಿಸಿದ ಬೇಕರಿಯನ್ನೇ ಸೀಜ್ ಮಾಡುವಂತೆ ಆದೇಶ ಹೊರಡಿಸಿರುವ ಘಟನೆ ಇಂದು ನಗರದಲ್ಲಿ ನಡೆದಿದೆ.         ನ. 30ರಿಂದ ಮೂರು ದಿನಗಳ ಕಾಲ ತುಮಕೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಯುವಜನೋತ್ಸವದ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯುತ್ತಿತ್ತು. ಈ ಮಧ್ಯೆ ಸಭೆಯಲ್ಲಿ ಭಾಗವಹಿಸಿದವರಿಗೆ ಬಿಸ್ಕೆಟ್​​​, ಕೇಕ್, ಚಿಪ್ಸ್ ಕೊಡಲಾಗಿತ್ತು.       ಸಭೆಯಲ್ಲಿ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಬಿಸ್ಕೆಟ್​​​ ತಿನ್ನಲು ಮುಂದಾದಾಗ ಅದರಲ್ಲಿ ಮೊಳೆ ಕಂಡುಬಂದಿದೆ. ಸ್ಕ್ರೂ ಆಕಾರದ ಕಬ್ಬಿಣದ ತುಂಡು ಕಂಡ ಜಿಲ್ಲಾಧಿಕಾರಿ ಗಾಬರಿಯಾದರು. ಅಲ್ಲದೆ ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ, ಯಾವ ಬೇಕರಿಯಿಂದ ಬಿಸ್ಕೆಟ್ ಮತ್ತು ಕೇಕ್ ತಂದದ್ದು ಎಂದು ವಿಚಾರಿಸಿದರು. ಮಹಾತ್ಮ ಗಾಂಧಿ ಕ್ರೀಡಾಂಗಣ…

ಮುಂದೆ ಓದಿ...

ಅಯ್ಯಪ್ಪ ಮಾಲಾಧಾರಿ ಭಕ್ತರ ಮೇಲೆ ಪೊಲೀಸರ ದರ್ಪ ಸರಿಯಲ್ಲ : ಟಿ.ಬಿ.ಶೇಖರ್

 ತುಮಕೂರು:       ಕೇರಳ ರಾಜ್ಯದ ಶಬರಿಮಲೈ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಅಯ್ಯಪ್ಪ ಮಾಲಾದಾರಿ ಭಕ್ತರ ಮೇಲೆ ಪೊಲೀಸರು ದರ್ಪ ತೋರಿಸುತ್ತಿರುವುದು ಸರಿಯಲ್ಲ ಎಂದು ಶಬರಿಮಲ ಅಯ್ಯಪ್ಪಸೇವಾ ಸಮಾಜಂ (ಎಸ್‍ಎಎಸ್‍ಎಸ್) ಕೇಂದ್ರ ಸಮಿತಿ ಅಧ್ಯಕ್ಷರಾದ ಟಿ.ಬಿ.ಶೇಖರ್ ತಿಳಿಸಿದರು.       ನಗರದ ಗಾರ್ಡನ್‍ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಈ ಗೊಂದಲ ಏರ್ಪಟ್ಟಿದ್ದು ಬೂಟುದಾರಿ ಪೊಲೀಸರು ಭಕ್ತರನ್ನು ತುಳಿಯುವ ದೃಶ್ಯ ಖಂಡನೀಯ ಎಂದರು.       ಈ ಹಿಂದೆ 100-200 ಜನ ಪೊಲೀಸರು ಖಾಕಿ ಸಮವಸ್ತ್ರದಲ್ಲಿ ಹೆಗಲಮೇಲೆ ಕಪ್ಪು ಟವಲ್ ಹಾಕಿಕೊಂಡು ಬೂಟ್ಸ್‍ಗಳನ್ನು ಧರಿಸದೆ ಭಕ್ತರಿಗೆ ಸಹಕಾರ ನೀಡುತ್ತಿದ್ದರು ಈಗ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿ ಇದೆ ಎಂಬ ನೆಪವೊಡ್ಡಿ ಅಲ್ಲಿಗೆ ತೆರಳುತ್ತಿರುವ ಭಕ್ತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.…

ಮುಂದೆ ಓದಿ...

ವಿದ್ಯುತ್ ಕಳವು: ಇಬ್ಬರು ಆರೋಪಿಗಳ ಬಂಧನ

 ತುಮಕೂರು:       ಬೆಸ್ಕಾಂ ಜಾಗೃತದಳ ಪೊಲೀಸ್ ಠಾಣೆಯಲ್ಲಿ 2017-18ನೇ ಸಾಲಿನ ವಿದ್ಯುತ್ ಕಳವು ಪ್ರಕರಣದಲ್ಲಿ ದಾಖಲಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇನ್ಸ್‍ಪೆಕ್ಟರ್ ಎಂ.ವಿ.ಶೇಷಾದ್ರಿ ತಿಳಿಸಿದ್ದಾರೆ.       ಮಧುಗಿರಿ ತಾಲ್ಲೂಕು ಚೀಲನಹಳ್ಳಿ ಗ್ರಾಮದ ನಿವಾಸಿ 42ವರ್ಷದ ಮಲ್ಲೇಶಪ್ಪ ಬಿನ್ ಲೇ.ಮಲ್ಲೇಲಿಂಗಪ್ಪ ಹಾಗೂ ತುರುವೇಕೆರೆ ತಾಲ್ಲೂಕು ತಾಳೇಕೆರೆ ಗ್ರಾಮದ ನಿವಾಸಿ 63 ವರ್ಷದ ತಿಮ್ಮೇಗೌಡ ಬಿನ್ ಪಟೇಲ್ ಶಿವಣ್ಣ ಅವರೇ ಬಂಧಿತ ಆರೋಪಿಗಳು. ಆರೋಪಿಗಳು ವಿದ್ಯುತ್ ಕಳವು ಮಾಡಿದ್ದರಿಂದ 16,326(ಮಲ್ಲೇಶಪ್ಪ)ರೂ. ಹಾಗೂ 47,154 (ತಿಮ್ಮೇಗೌಡ)ರೂ. ಸೇರಿ ಇಲಾಖೆಗೆ ಒಟ್ಟು 63,480 ರೂ.ಗಳಷ್ಟು ನಷ್ಟವಾಗಿದೆ.       ಅಕ್ರಮವಾಗಿ ವಿದ್ಯುತ್ ಬಳಸಿದ ಹಣವನ್ನು ಪಾವತಿಸದೆ, ನ್ಯಾಯಾಲಯಕ್ಕೂ ಹಾಜರಾಗದೆ ತಲೆ ಮರೆಸಿಕೊಂಡಿದ್ದರು. ಬೆಸ್ಕಾಂ ಜಾಗೃತಿದಳ ಪೊಲೀಸ್ ಅಧೀಕ್ಷಕ ಎಂ.ನಾರಾಯಣ ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್ ಅವರ ಮಾರ್ಗದರ್ಶನದಲ್ಲಿ ನವೆಂಬರ್ 19ರಂದು ತಲೆ ಮರೆಸಿಕೊಂಡಿದ್ದ…

ಮುಂದೆ ಓದಿ...

ಮಧುಮೇಹದ ಬಗ್ಗೆ ಅರಿವು ಮೂಡಿಸಲು ಅರಿವು ಕಾರ್ಯಕ್ರಮ

ಪಾವಗಡ :       ಮಧುಮೇಹದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ತಾಲ್ಲೂಕಿನ ವಳ್ಳೂರು ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ತಿರುಮಣೆ ವತಿಯಿಂದ ಅರಿವು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಳ್ಳೂರು ಗ್ರಾಮ ಪಂಚಾಯ್ತಿಯ ವಳ್ಳೂರು ಗ್ರಾಮದಲ್ಲಿ ತಿರುಮಣೆ ಸಮುದಾಯ ಆರೋಗ್ಯ ಕೇಂದ್ರದಿಂದ ಮಧುಮೇಹದ ಜಾಗೃತಿ ಕಾರ್ಯಕ್ರಮದಲ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನೂರು ಜನ ವಿದ್ಯಾರ್ಥಿಗಳು ಜಾತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಬಿತ್ತಿ ಪತ್ರಗಳನ್ನು ಗ್ರಾಮಸ್ಥರಿಗೆ ಹಂಚಲಾಯಿತು.       ಇದೇ ವೇಳೆ ಗ್ರಾಮ ಪಂಚಾಯ್ತಿ ಕಾರ್ಯಲಯದಲ್ಲಿ ಮಧುಮೇಹ, ರಕ್ತದೂತ್ತಡ ಶಿಬಿರವನ್ನು ಆಯೋಜಿಸಿ ಜನತೆಗೆ ತಪಾಸಣೆ ನಡೆಸಲಾಯಿತು.       ಆಪ್ತ ಸಮಾಲೋಚರಾದ ಆರ್.ಕೋಮಲೇಶ್ ಮಾತನಾಡಿ ಸಾಂಕ್ರಮಿಕ ರೋಗಗಳು ಹೆಚ್ಚಾಗಿ ಕಂಡು ಬರುತ್ತಿದ್ದು , ಪ್ರಸ್ತುತ ದೇಶದಲ್ಲಿ 59 % ಜನ ಈ ರೋಗಗಳಿಂದ ಬಳುತ್ತಿದ್ದಾರೆ. ಧೂಮಪಾನ, ಮದ್ಯಪಾನ, ತಂಬಾಕು…

ಮುಂದೆ ಓದಿ...

ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕೊಲೆ : ಆರೋಪಿಗಳ ಮೇಲೆ ಫೈರಿಂಗ್

ರಾಮನಗರ :       ಜೆಡಿಎಸ್ ನ ರಾಜ್ಯ ಎಸ್ಸಿ, ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ರಾಜಗೋಪಾಲ್ ಕೊಲೆ ಪ್ರಕರಣದ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಕನಕಪುರ ತಾಲೂಕಿನ ಸಾತನೂರು ಬಳಿ ನಡೆದಿದೆ.  ಈ ವೇಳೆ ಇಬ್ಬರು ಆರೋಪಿಗಳಿಗೆ ಗಾಯಾಗಳಾಗಿದ್ದು, ಓರ್ವ ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ.        ಕೊಲೆ ಆರೋಪಿಗಳಾದ ರಾಮ (21) ಮತ್ತು ದೀಪು (27) ಎಂಬುವರ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದು, ಇಬ್ಬರು ಆರೋಪಿಗಳ ಕಾಲಿನ ಭಾಗಕ್ಕೆ ಪೊಲೀಸರು ಗುಂಡು ಹಾರಿಸಿದ್ದಾರೆ.       ಪೊಲೀಸರ ನಿದ್ದೆಗೆಡಿಸಿದ್ದ ಆರೋಪಿಗಳ ಸುಳಿವಿನ ಮಾಹಿತಿ ಮೇರೆಗೆ ತಡರಾತ್ರಿ ಪೊಲೀಸರು ತೋಟಹಳ್ಳಿ ಬಳಿಯ ಪೈಪ್​ಲೈನ್​ನಲ್ಲಿ ಕಾರ್ಯಾಚರಣೆ ಮಾಡಿದ್ದಾರೆ. ಈ ವೇಳೆ ಸಿಕ್ಕಿಬಿದ್ದ ಆರೋಪಿಗಳು ಮತ್ತೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ವಿಧಿಯಿಲ್ಲದೇ ಪೊಲೀಸರು ಫೈರ್​ ಮಾಡಿದ್ದಾರೆ.       ನವೆಂಬರ್ 11 ರಂದು ಕನಕಪುರದ…

ಮುಂದೆ ಓದಿ...