ನಮ್ಮಿಬ್ಬರದು ಮದುವೆಯಾಗಿ, ಸಂಸಾರ ಚೆನ್ನಾಗಿ ನಡೆಯುತ್ತಿದೆ : ಎಚ್. ವಿಶ್ವನಾಥ್

ಮೈಸೂರು:       ಈಗಾಗಲೇ ನಮ್ಮಿಬ್ಬರದು ಮದುವೆಯಾಗಿದೆ. ಸಂಸಾರ ಚೆನ್ನಾಗಿ ನಡೆಯುತ್ತಿದೆ. ನಮ್ಮದೇನು ಬೇರೆ ಬೇರೆ ಕುಟುಂಬವಲ್ಲ. ಒಂದೇ ಕುಟುಂಬ ಆಗಿರುವುದರಿಂದ ಬಾಳ್ವೆ ಚೆನ್ನಾಗಿ ನಡೆಯುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ತಿಳಿಸಿದರು.       ಮೈತ್ರಿ ಸರ್ಕಾರ ಆರು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಮಾತನಾಡಿದ ಅವರು,“ಇಂದು ಸಮ್ಮಿಶ್ರ ಸರಕಾರ ಆರು ತಿಂಗಳನ್ನು ಪೂರೈಸಿದೆ. ಮೈತ್ರಿ ಸರಕಾರ ಚೆನ್ನಾಗಿ ಸಂಸಾರ ಮಾಡುತ್ತಿದೆ. ತೊಂದರೆ ಏನು ಇಲ್ಲ. ನಮ್ಮದೇನು ಬೇರೆ ಬೇರೆ ಕುಟುಂಬವಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ಕುಟುಂಬವಾಗಿದೆ” ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.       ಇಂದು ದೋಸ್ತಿ ಸರಕಾರಕ್ಕೆ ಅರ್ಧವಾರ್ಷಿಕ ಸಂಭ್ರಮ. ಮೈತ್ರಿ ಸರಕಾರ ರಚನೆಯಾಗಿ ಇಂದಿಗೆ ಆರು ತಿಂಗಳನ್ನು ಪೂರೈಸಿದೆ. 2018 ಮೇ 23 ರಂದು ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.  

ಮುಂದೆ ಓದಿ...

ರೈತರ ಆತ್ಮಹತ್ಯೆಗೆ ಮುಖ್ಯಮಂತ್ರಿಯೇ ಹೊಣೆ : ಯಡಿಯೂರಪ್ಪ

ಬೆಂಗಳೂರು :       ರಾಜ್ಯದ ರೈತರ ಆತ್ಮಹತ್ಯೆಗೆ ಮುಖ್ಯಮಂತ್ರಿಯೇ ಹೊಣೆ. ಈ ಸಾಂದರ್ಭಿಕ ಶಿಶುವಿಗೆ ಯಾವುದೇ ಗೊತ್ತು ಗುರಿ ಇಲ್ಲ. ಸರ್ಕಾರದ ಮೇಲೆ ಸಿಎಂಗೆ ಹಿಡಿತವೇ ಇಲ್ಲ ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.       ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ ಒಳ್ಳೆಯ ಕೆಲಸ ಮಾಡಿದ್ರೆ ಅವರೇ 5 ವರ್ಷ ಸಿಎಂ ಆಗಿರಲಿ. ಆದ್ರೆ, 6 ತಿಂಗಳು ಅಧಿಕಾರದಲ್ಲಿ ಇರೋದನ್ನೇ ಇವರು ಸಾಧನೆ ಅಂದುಕೊಂಡಿದ್ದಾರೆ. ರೈತರ ಸರಣಿ ಆತ್ಮಹತ್ಯೆ ನಡೆಯುತ್ತಿದ್ದು, ಕುಮಾರಸ್ವಾಮಿ ಸರಕಾರ ಏನಾದರೂ ಸಾಧನೆ ಮಾಡಿದ್ದರೆ ರೈತರು ಏಕೆ ಆತ್ಮಹತ್ಯೆಗೆ ಶರಣಾಗುತ್ತಿದ್ದರು ಎಂದು ಪ್ರಶ್ನಿಸಿರುವ ವಿಪಕ್ಷ ನಾಯಕ ಯಡಿಯೂರಪ್ಪ, ರೈತರೇ ಸಿಎಂ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇದಕ್ಕೆ ಅವರೇ ನೇರ ಹೊಣೆ ಎಂದು ದೂರಿದ್ದಾರೆ.       ಜನರ ಸಮಸ್ಯೆಗಳನ್ನು ಆಲಿಸುವ…

ಮುಂದೆ ಓದಿ...

ಮುಖ್ಯಮಂತ್ರಿಗೆ ಡೆತ್‌ನೋಟ್ ನಲ್ಲಿ ರೈತನ ಭಾವುಕ ಮಾತುಗಳು

ಮಂಡ್ಯ:        ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಂಡ್ಯ ಭೇಟಿ ದಿನವೇ ರೈತರೊಬ್ಬರು ಸಾಲಬಾಧೆ ಮತ್ತು ಅನಾರೋಗ್ಯ ಸಮಸ್ಯೆ ತಾಳಲಾರದೆ ಡೆತ್‌ನೋಟ್ ಬರೆದಿಟ್ಟು, ಆತ್ಮಹತ್ಯೆೆ ಮಾಡಿಕೊಂಡ ಘಟನೆ ತಾಲೂಕಿನ ಕನ್ನಹಟ್ಟಿ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ.      ಜೈಕುಮಾರ(43) ಮೃತ ರೈತ. ತನ್ನ ಸಾಲ ಮತ್ತು ಅನಾರೋಗ್ಯದ ಸಮಸ್ಯೆೆ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಳಾಸಕ್ಕೆೆ ಡೆತ್‌ನೋಟ್ ಬರೆದಿಟ್ಟು, ಆತ ತನ್ನ ಜಮೀನಿನ ಬಳಿ ವಿಷ ಸೇವಿಸಿ, ಆತ್ಮಹತ್ಯೆೆ ಮೊರೆ ಹೋಗಿದ್ದಾನೆ. 35 ಗುಂಟೆ ಜಮೀನು ಹೊಂದಿದ್ದ ರೈತ ಜೈಕುಮಾರ ಕಬ್ಬು ಮತ್ತು ತರಕಾರಿ ಬೇಸಾಯ ಮಾಡುತ್ತಿದ್ದರು. 2.80 ಲಕ್ಷ ರು. ಸಾಲ ಮಾಡಿಕೊಂಡಿದ್ದರು. ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರ ಚಿಕಿತ್ಸೆೆಗೆ 3 ಲಕ್ಷ ರು. ಅಗತ್ಯವೆಂದು ವೈದ್ಯರು ತಿಳಿಸಿದ್ದರು.       ಒಂದೆಡೆ ಸಾಲ, ಮತ್ತೊಂದೆಡೆ ಮಾರಕ ಕ್ಯಾನ್ಸರ್. ಎರಡರಿಂದ ಬೇಸತ್ತ ಜೈಕುಮಾರ ಆತ್ಮಹತ್ಯೆೆ…

ಮುಂದೆ ಓದಿ...

ಸಮ್ಮಿಶ್ರ ಸರ್ಕಾರ ಸತ್ತು ಹೋಗಿದೆ : ಜಗದೀಶ್‌ ಶೆಟ್ಟರ್‌

ಬೆಂಗಳೂರು:       ಸಮ್ಮಿಶ್ರ ಸರ್ಕಾರದ ಸಿಎಂ ಹೇಳುವುದೊಂದು, ಮಾಡುವುದೊಂದು. ಸರ್ಕಾರ ದಿವಾಳಿಯಾಗಿದೆ. ಸರ್ಕಾರ ಸತ್ತು ಹೋಗಿದೆ. ರಾಜ್ಯದಲ್ಲಿ ಸರ್ಕಾರ ಎಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಕಿಡಿಕಾರಿದ್ದಾರೆ.       ಶುಕ್ರವಾರ ವಿಧಾನಸೌಧದಲ್ಲಿನ ವಿಪಕ್ಷ ನಾಯಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಮೈತ್ರಿ ಸರಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ ಈ ಸರಕಾರ ಅಸ್ತಿತ್ವದಲ್ಲೆ ಇಲ್ಲ, ಸತ್ತು ಹೋಗಿದೆ’ ಎಂದು  ಟೀಕಿಸಿದ್ದಾರೆ.        ಐದಾರು ತಿಂಗಳಿಂದ ಪಿಂಚಣಿ ನೀಡಲು ಈ ಸರಕಾರದ ಬಳಿ ಹಣವಿಲ್ಲ. ವಿವಿಧ ಕಾಮಗಾರಿಗಳ 6 ಸಾವಿರ ಕೋಟಿ ರೂ.ಬಿಲ್ ಬಾಕಿ ಇದೆ. ಇನ್ನೂ 46 ಸಾವಿರ ಕೋಟಿ ರೂ.ರೈತರ ಸಾಲಮನ್ನಾವೂ ಆಗಿಲ್ಲ. ಸರಕಾರದ ಖಜಾನೆ ಖಾಲಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.    …

ಮುಂದೆ ಓದಿ...

ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲಾ ಎಂಬುದಕ್ಕೆ ಈಕೆಯೇ ಸಾಕ್ಷಿ

ಮಧುಗಿರಿ :       ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲಾ ಮಗು ಎಂದು ಹಸುಳೆ ದ್ರುವನಿಗೆ ನಾರದ ಮಹರ್ಷಿ ಹೇಳಿದಂತೆ ಮಹಿಳೆಯೊಬ್ಬರು ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ರಾಜ್ಯ ಸರಕಾರದ ಒಂದು ನೌಕರಿ ಮತ್ತು ನಾಲ್ಕು ಅಧಿಕಾರಿ ಸ್ಥಾನವನ್ನು ಗಿಟ್ಟಿಸಿರುವ ಗ್ರಾಮೀಣ ಬಹುಮುಖ ಪತ್ರಿಭೆ ಮಧುಗಿರಿ ತಾಲೂಕಿನ ತವಕದಹಳ್ಳಿ ಗ್ರಾಮದವರಾಗಿದ್ದಾರೆ.       ತವಕದಹಳ್ಳಿ ಗ್ರಾಮದ ಟಿ.ರಮ್ಯ ಈ ಸಾಧನೆ ಮಾಡಿರುವ ಸಾಧಕಿಯಾಗಿದ್ದು ಈಕೆ ಪ್ರಾಥಮಿಕ ಶಿಕ್ಷಣವನ್ನು ತವಕದಹಳ್ಳಿ ಗ್ರಾಮದಲ್ಲಿ, ಬಿಜವರ ಗ್ರಾಮದಲ್ಲಿ ಪ್ರೌಢಶಿಕ್ಷಣವನ್ನು ತುಮಕೂರಿನಲ್ಲಿ ಪಿಯುಸಿ ಮತ್ತು ಡಿಇಡಿ ವಿದ್ಯಾಭ್ಯಾಸವನ್ನು ಮುಂದುವರೆಸಿದ್ದರು. ಡಿಇಡಿ ಅಂತಿಮ ಹಂತದಲ್ಲಿದ್ದಾಗ 2006 ರಲ್ಲಿ ಪೊಲೀಸ್ ಕಾನ್ಸ್‍ಸ್ಟೇಬಲ್ ಹುದ್ದೆಗೆ ಅರ್ಜಿಸಲ್ಲಿಸಿ, 2007 ರಲ್ಲಿ ಪೊಲೀಸ್ ಇಲಾಖೆಗೆ ನೇಮಕವಾದ ನಂತರ ಡಿಇಡಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದರು. ಆಗ ಅವರು 19 ವರ್ಷ ಪೂರೈಸಿದ್ದರು. ಧಾರವಾಡದಲ್ಲಿ ತರಬೇತಿಯಲ್ಲಿದ್ದಾಗಲೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ…

ಮುಂದೆ ಓದಿ...

ಲಂಚ ಸ್ವೀಕರಿಸುತ್ತಿದ್ದ ಸಬ್ ರಿಜಿಸ್ಟ್ರರ್ ಎಸಿಬಿ ಬಲೆಗೆ

ಮಧುಗಿರಿ :       ಗಂಡನಿಂದ ಹೆಂಡತಿಗೆ ದಾನಪತ್ರ ನೊಂದಣಿ ಮಾಡಿಸುವ ಸಲುವಾಗಿ 5 ಸಾವಿರ ರೂಗಳ ಲಂಚ ಸ್ವೀಕರಿಸುತ್ತಿದ್ದ ಸಬ್ ರಿಜಿಸ್ಟ್ರರ್ ವೈ.ಎನ್. ರಾಮಚಂದ್ರಯ್ಯ ಎಸಿಬಿ ಬಲೆಗೆ ಶುಕ್ರವಾರ ಸಿಕ್ಕಿ ಬಿದ್ದಿದ್ದಾರೆ.       ಮಧುಗಿರಿ ತಾಲೂಕಿನ ಪುರವರ ಹೋಬಳಿ ಚಿಕ್ಕಹೊಸಹಳ್ಳಿ ಗ್ರಾಮದ ಸರ್ವೆ ನಂಬರ್ 21/10 ರ 2 ಎಕರೆ 14 ಗುಂಟೆ ಜಮೀನಿನ್ನು ತನ್ನ ಪತ್ನಿಯ ಹೆಸರಿಗೆ ದಾನಪತ್ರವನ್ನು ಮಾಡಿಸಲು ಮುದ್ದಯ್ಯನಪಾಳ್ಯದ ದೇವರಾಜು ಎಂಬುವವರು ನ. 20 ರಂದು ಸಬ್ ರಿಜಿಸ್ಟ್ರರ್ ರಿಂದ ಮಾಹಿತಿ ಪಡೆದಿದ್ದರು ಈ ವೇಳೆ ನಡೆದಿದ್ದ ಒಂದು ಎಕರೆಗೆ 5 ಸಾವಿರದಂತೆ ನಡೆದ ಲಂಚದ ಮಾತುಕತೆಯನ್ನು ವೀಡಿಯೋ ಚಿತ್ರಿಕರಣ ಮಾಡಿಕೊಂಡು ಎಸಿಬಿಗೆ ನೀಡಿದ್ದರು. ಅದರ ಆಧಾರದಂತೆ ನ.23 ರಂದು ಚಿಕ್ಕಹೊಸಹಳ್ಳಿ ಗ್ರಾಮದ ಸುರೇಂದ್ರರೆಡ್ಡಿ ಹಾಗೂ ಮುದ್ದಯ್ಯನಪಾಳ್ಯದ ನಾಗರಾಜು ರವರ ಸಹಕಾರದೊಂದಿಗೆ ದೇವರಾಜು ಎಸಿಬಿಯವರು ನೀಡಿದ್ದ 5…

ಮುಂದೆ ಓದಿ...

“ಶಿಕ್ಷಣ ಸಂಸ್ಕಾರಗಳಿಗೆ ಆಶ್ರಮಶಾಲೆಗಳು ಅತ್ಯಗತ್ಯ”

 ತುಮಕೂರು:       ಭಾರತೀಯ ಪರಂಪರೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ರೂಢಿಯಲ್ಲಿದ್ದ ಗುರುಕುಲಗಳ ಮಾದರಿಯಲ್ಲಿಯೇ ಇಂದೂಸಹ ಸಮಾಜದ ನಿರ್ಗತಿಕ ಮಕ್ಕಳಿಗೆ ಶಿಕ್ಷಣ-ಸಂಸ್ಕಾರಗಳನ್ನು ನೀಡಲು ಆಶ್ರಮ ಶಾಲೆಯನ್ನು ತೆರೆದು ಮುನ್ನೆಡೆಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದುಜಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಭರತ್ ಕುಮಾರ್ ಕೆ.ಎಸ್. ತಿಳಿಸಿದರು.       ಅವರು ಮೈದಾಳದ ಶ್ರೀ ಶಿವ ಶೈಕ್ಷಣಿಕ ಸೇವಾ ಆಶ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಆಶ್ರಯದಲ್ಲಿ ಆಯೋಜಿಸಿದ್ದ ಮಕ್ಕಳ ಪಾಲನಾ ಸಂಸ್ಥೆಯಲ್ಲಿನ ಮಕ್ಕಳಿಗೆ ‘ಮಕ್ಕಳ ಹಕ್ಕುಗಳು’ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಸಂಸ್ಕಾರಗಳಿಗೆ ಗುರುಕುಲ ಮಾದರಿಯ ಇಂತಹ ಆಶ್ರಮ ಶಾಲೆಗಳು ಅತ್ಯಗತ್ಯ ನಾನೂ ಕೂಡ ಶ್ರೀ ಸಾಯಿನಾಥ ಆಶ್ರಮದ ಶಾಲೆಯಲ್ಲಿ ಓದಿದವನು.ಹಾಗಾಗಿ ಆಶ್ರಮಶಾಲೆಗಳಲ್ಲಿ ಓದಿದವರು ಉತ್ತಮ ಶಿಕ್ಷಣ,ಸಂಸ್ಕಾರಗಳಿಂದ ಒಳ್ಳೆಯ ವಿದ್ಯಾರ್ಥಿಗಳಾಗಿ ರೂಪುಗೊಂಡು ತಮ್ಮ ಜೀವನದಲ್ಲಿ ಗುರಿ ಮುಟ್ಟಿ…

ಮುಂದೆ ಓದಿ...

ರಾಜ್ಯ ಸರ್ಕಾರದಿಂದ ಪಿಯು ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್!

ಬೆಂಗಳೂರು :       ದೋಸ್ತಿ ಸರ್ಕಾರವು ಪಿಯುಸಿ ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದ್ದು, ಇನ್ಮುಂದೆ ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್ ಮಾಡಲು ಮುಂದಾಗಿದೆ.       ಈ ಕುರಿತು ರಾಜ್ಯದ ಎಲ್ಲ ಕಾಲೇಜುಗಳಿಗೆ ಸೂಚನೆ ನೀಡಲಾಗಿದ್ದು, ಸುತ್ತೋಲೆ ಹೊರಡಿಸಲಾಗಿದೆ. ಪಿಯು ವಿದ್ಯಾರ್ಥಿಗಳು ಕಾಲೇಜಿಗೆ ಲ್ಯಾಪ್ ಟಾಪ್ ಕೂಡಾ ಕೊಂಡೊಯ್ಯುವಂತಿಲ್ಲವೆಂದು ತಿಳಿಸಲಾಗಿದೆ.       ಕಾಲೇಜು ಅವಧಿಯಲ್ಲಿ ಇನ್ಮುಂದೆ ಮೊಬೈಲ್ ಫೋನ್ ಮತ್ತು ಲ್ಯಾಪ್ ಟಾಪ್ ಬಳಸುವ ಹಾಗಿಲ್ಲ ಎಂದು ಪಿಯುಸಿ ಬೋರ್ಡ್ ಮಹತ್ವದ ಆದೇಶವನ್ನು ಹೊರಡಿಸಿದೆ. ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳಲ್ಲಿ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಬ್ಯಾನ್ ಮಾಡಲಾಗಿದೆ.       ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಪಿಯುಸಿ ಬೋರ್ಡ್ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಬ್ಬರಿಗೂ ಮೊಬೈಲ್ ಹಾಗೂ ಲ್ಯಾಪ್ ಟ್ಯಾಪ್ ಬ್ಯಾನ್…

ಮುಂದೆ ಓದಿ...