ಗೂಬೆ, 2 ತಲೆಯ ಹಾವು ಕೊಡುವುದಾಗಿ ಸುಲಿಗೆ ಮಾಡುತ್ತಿದ್ದ ಮೂವರ ಅಂದರ್

ತುಮಕೂರು:         ಐದು ಬೆರಳಿನ ಗೂಬೆ ಹಾಗೂ ಎರಡು ತಲೆಯ ಹಾವು ನೀಡುವುದಾಗಿ ಕರೆಸಿಕೊಂಡು ಮಾರಕಾಸ್ತ್ರಗಳಿಂದ ಬೆದರಿಸಿ ಜನರಿಂದ ಹಣ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ತುಮಕೂರು ಜಿಲ್ಲಾ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ.ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳಾದ ಆನಂದ(35), ದೀಪಾ(38), ಜಯಾ(45) ಬಂಧಿತ ಆರೋಪಿಗಳು.  ಕಾರ್ಯಾಚರಣೆ ವೇಳೆ ಅದೇ ಕಾಲೋನಿಯ ನಿವಾಸಿಗಳಾದ ಚಿನ್ನು(25), ವಿಜುಕುಮಾರ್(45) ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.       ಆರೋಪಿಗಳು ಪತ್ರಕರ್ತರೊಬ್ಬರನ್ನು ಸಂಪರ್ಕಿಸಿ ಐದು ಬೆರಳಿನ ಗೂಬೆ ಹಾಗೂ 2 ಕಾಲಿನ ಹಾವುಗಳನ್ನು ಮನೆಯಲ್ಲಿಟ್ಟುಕೊಂಡು ಸಾಕಿದರೆ ಬೇಗ ಶ್ರೀಮಂತರಾಗುತ್ತಾರೆ ಎಂದು ನಂಬಿಸಿದ್ದರು. ಇದನ್ನು ಪೊಲೀಸಗರ ಗಮನಕ್ಕೆ ತಂದಾಗ ಪೊಲೀಸರು ಆ ಪತ್ರಕರ್ತನ ಮೂಲಕ ಕಾರ್ಯತಂತ್ರ ರೂಪಿಸಿದ್ದಾರೆ.        ಅದರಂತೆ ಪತ್ರಕರ್ತ ತನ್ನ ಸ್ನೇಹಿತನೊಂದಿಗೆ ಅಕ್ಕಿಪಿಕ್ಕಿ ಕಾಲೋನಿಗೆ ಹೋದಾಗ…

ಮುಂದೆ ಓದಿ...

ಚಿರತೆ ದಾಳಿಗೆ ಮೇಕೆ ಬಲಿ

ಕೊರಟಗೆರೆ:         ಚಿರತೆಯೊಂದು ದಾಳಿ ಮಾಡಿ  ಹೊಲದಲ್ಲಿ  ಮೇಯುತ್ತಿದ್ದ ಮೇಕೆಯನ್ನು  ಕೊಂದು ಪರಾರಿಯಾಗಿರುವ ಘಟನೆ ಇಂದು ನಡೆದಿದೆ.         ತಾಲೂಕಿನ ಕೋಳಾಲ ಸಮೀಪದ ಗೋಪೇನಹಳ್ಳಿ ಗ್ರಾಮದ ಹೊರವಲಯದಲ್ಲಿ ಗುರುವಾರ ಮಧ್ಯಾಹ್ನ ರೈತ ವಸಂತಕುಮಾರ್ ಎಂಬುವರ ಜಮೀನಿನಲ್ಲಿ ಮೇಕೆ ಮೇವು ತಿನ್ನುವಾಗ ದಿಡೀರನೆ ದಾಳಿ ನಡೆಸಿದ ಚಿರತೆ ಮೇಕೆಯ ಕುತ್ತಿಗೆಗೆ ಬಾಯಿ ಹಾಕಿ ರಕ್ತ ಹೀರಿ ಸಾಯಿಸಿದೆ. ಇದನ್ನು ಕಂಡ ರೈತರು ಬಯದಿಂದಲೇ ಕೂಗಾಟ ನಡೆಸಿ ಚಿರತೆಯನ್ನು ಅಟ್ಟಿದ್ದಾರೆ.       ಇದರಿಂದ ಗಾಬರಿಗೊಂಡಿರುವ ರೈತರು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಚಿರತೆ ಹಾವಳಿಯನ್ನು ತಪ್ಪಿಸುವಂತೆ ಒತ್ತಾಯಿಸಿದ್ದು ರೈತನಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ.

ಮುಂದೆ ಓದಿ...

32 ಯುವತಿಯರ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಖದೀಮನ ಬಂಧನ!

ಬೆಂಗಳೂರು:      ವಿದೇಶದಲ್ಲಿ ವಿದ್ಯಾಭ್ಯಾಸ ಕಲ್ಪಿಸುವ ನೆಪ ಹೇಳಿ ಯುವತಿಯರನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಿಸುತಿದ್ದ ಖದೀಮನೊಬ್ಬನನ್ನು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.       ಟೊಮಿ ಟಾಮ್ (36) ಎಂಬ ಆರೋಪಿ ಪೋಲೀಸರ ಬಲೆಗೆ ಬಿದ್ದಿದ್ದು ಈ ವೇಳೆ ಅವನ ಸಂಪರ್ಕದಲ್ಲಿದ್ದ 32 ಯುವತಿಯರನ್ನು ರಕ್ಷಿಸಲಾಗಿದೆ. ಟೊಮಿ ತಾನು ಯುವತಿಯರಿಗೆ ವಿದೇಶದಲ್ಲಿ ವಿದ್ಯಾಭ್ಯಾಸ ಕಲ್ಪಿಸುವುದಾಗಿ ನಂಬಿಸಿದ್ದಾನೆ. 32 ಯುವತಿಯರೂ ಕೇರಳ ಮೂಲದವರಾಗಿದ್ದು ಇವರೆಲ್ಲಾ ಬೆಂಗಳೂರಿನಲ್ಲಿ ನರ್ಸಿಂಗ್ ವಿದ್ಯಾಭ್ಯಾಸ ಪಡೆದಿದ್ದರು ಎನ್ನಲಾಗಿದೆ. ಟೊಮಿ ಅವರಿಗೆ ಜರ್ಮನಿಯಲ್ಲಿ ಅಲ್ಪಾವಧಿ ಕೋರ್ಸ್ ಗೆ ಸೇರಿಸುವ ಆಮಿಷವೊಡ್ಡಿ ವಿದೇಶಕ್ಕೆ ಕರೆದೊಯ್ಯುತ್ತಿದ್ದ.       ಆದರೆ ವಿಮಾನ ಸಿಬ್ಬಂದಿಗೆ ಯುವತಿಯರನ್ನು ಕಂಡು ಸಂದೇಹ ಮೂಡಿದ್ದು ತಕ್ಷಣ ಇಮಿಗ್ರೇಷನ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆಗ ಸತ್ಯ ಬಯಲಾಗಿದೆ. ತಕ್ಷಣ ವಿಮಾನ ನಿಲ್ದಾಣದ ಅಧಿಕಾರಿಗಳು ಪೋಲೀಸರಿಗೆ ಮಾಹಿತಿ ನೀಡಿದ್ದು ಮಾನವ…

ಮುಂದೆ ಓದಿ...