ಕೇಂದ್ರ ನೆರವು ನೀಡದಿದ್ದರೂ ರೈತರ ಸಾಲಮನ್ನಾ ಖಚಿತ: ಸಿಎಂ ಕುಮಾರಸ್ವಾಮಿ

ಬೆಂಗಳೂರು:        ಡಿಸೆಂಬರ್ 5ರೊಳಗೆ ಎಲ್ಲಾ ರೈತರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದೀಗ ಕೇಂದ್ರ ಸರ್ಕಾರ ಹಣ ನೀಡದೆ ಹೋದರೂ ಕೂಡಾ ರಾಜ್ಯ ಸರ್ಕಾರ ರೈತರ ಸಾಲಮನ್ನಾಕ್ಕೆ ಬದ್ಧವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.        ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,  ರಾಷ್ಟ್ರೀಕೃತ ರಾಷ್ಟ್ರೀಯ ಬ್ಯಾಂಕುಗಳಲ್ಲಿ ಮೊದಲ ಹಂತವಾಗಿ 17 ಲಕ್ಷ ರೈತರ 50 ಸಾವಿರದವರೆಗಿನ ಸಾಲಮನ್ನಾಗೆ ಈಗಾಗಲೇ ಅಧಿಕಾರಿಗಳಿಗೂ ಆದೇಶಿಸಿದ್ದೇನೆ. ಮೊದಲ ಹಂತದಲ್ಲಿ ಜನವರಿಯಲ್ಲಿ 50 ಸಾವಿರ ಸಾಲಮನ್ನಾ ಆಗಲಿದೆ. ರಾಜ್ಯದಲ್ಲಿ ಒಟ್ಟು 2 ಲಕ್ಷದ 20ಸಾವಿರ NP ಖಾತೆಗಳಿದ್ದು, ಮರುಪಾವತಿಯಾಗದ ಖಾತೆಗಳೆಂದು ಗುರುತಿಸಲಾಗಿದೆ. ಬ್ಯಾಂಕ್‌ನವರು ಮುಂಚಿತವಾಗಿ ಅಸಲಿನಲ್ಲಿ ಶೇ. 50 ರಷ್ಟು ಬಿಡಲಾಗುತ್ತದೆ ಎಂದಿದ್ದ ಬ್ಯಾಂಕ್‌ ಈಗ ಹಿಂದೆ ಸರಿದಿವೆ. ನಾವು ಶೇ. 50ರಷ್ಟು ಹಣ ನೀಡಲು ಮುಂದಾಗಿದ್ದೇವೆ.  ಅಲ್ಲದೇ ಸದ್ಯ ಪ್ರಾಯೋಗಿಕವಾಗಿ ಎಲ್ಲಾ ತಾಲೂಕುಗಳಲ್ಲಿ ಸಾಲಮನ್ನಾ…

ಮುಂದೆ ಓದಿ...

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನೇ ಸೋಲಿಸಿದರು – ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ದಾವಣಗೆರೆ :       ‘ಕೆಲಸ ಮಾಡುವವರನ್ನು ಜನರು ಮರೆತಿದ್ದಾರೆ. ಜನರಿಗೆ ಸೇವೆ ಮಾಡಿದ ನನ್ನನ್ನು ಸಹ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದರು’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.        ಎಂ.ಪಿ. ರವೀಂದ್ರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರುm ಜನ ಯಾವುದಕ್ಕೆ ವೋಟ್ ಕೊಡ್ತಾರೆ ಎಂದು ನನಗೆ ಅರ್ಥವಾಗುತ್ತಿಲ್ಲ. ಜನ ನನ್ನನ್ನ ಚಾಮುಂಡಿ ಕ್ಷೇತ್ರದಲ್ಲಿ ಸೋಲಿಸಿದ್ರು. ನನ್ನ ಅದೃಷ್ಟ ಬದಾಮಿ ಕೈ ಹಿಡಿಯಿತು. ಚುಣಾವಣೆಯ ಮುಂಚೆ ಎಲ್ಲಾ ಚೆನ್ನಾಗಿತ್ತು. ಆದ್ರೆ ಚುನಾವಣೆ ಫಲಿತಾಂಶ ಬಂದಾಗ ದಿಗ್ಭ್ರಮೆ ಆಯಿತು ಅಂತಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡಿ ಕ್ಷೇತ್ರದಲ್ಲಿ ತಮಗಾದ ಸೋಲಿನ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.        ರವೀಂದ್ರ ಇನ್ನೂ ಇದ್ದಿದ್ರೆ ಅವರ ತಂದೆ ಎಂ.ಪಿ. ಪ್ರಕಾಶ್​ ಸರಿಸಮನಾಗಿ ಬೆಳೆಯುತ್ತಿದ್ರು. ಹರಪನಹಳ್ಳಿಯನ್ನು 371 J ಗೆ ಸೇರಿಸಲು ಒತ್ತಾಯಿಸಿದ್ರು. ದಾವಣಗೆರೆ…

ಮುಂದೆ ಓದಿ...

ಸಚಿವ ರೇವಣ್ಣನಲ್ಲ, ರಾವಣ: ಬಿ.ಸುರೇಶ್​ ಗೌಡ

ತುಮಕೂರು:        ಸಚಿವ ರೇವಣ್ಣ, ರಾವಣ ಇದ್ದ ಹಾಗೆ ಎಂದು ಮಾಜಿ ಶಾಸಕ ಬಿ.ಸುರೇಶ್‌ಗೌಡ ಹರಿಹಾಯ್ದರು.       ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ರೇವಣ್ಣ ಜಿಲ್ಲೆಗೆ ಹರಿಯುತ್ತಿದ್ದ ಹೇಮಾವತಿ ನೀರನ್ನು ಏಕಾಏಕಿ ನಿಲ್ಲಿಸಿದ್ದಾರೆ. ಜಿಲ್ಲೆಯ ಪಾಲಿಗೆ ರೇವಣ್ಣ, ರಾವಣರಾಗಿದ್ದಾರೆ ಎಂದರು. ಹೇಮಾವತಿ ಡ್ಯಾಮ್ ಪೂರ್ಣ ತುಂಬಿದ್ದರೂ ಜಿಲ್ಲೆಗೆ ನೀರು ಬಿಡುತ್ತಿಲ್ಲ. ಜಿಲ್ಲೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸೇರಿ ಮೂವರು ಸಚಿವರಿದ್ದಾರೆ. ಆದರೆ ನೀರು ತರುವಲ್ಲಿ ಮೂವರೂ ವಿಫಲರಾಗಿದ್ದಾರೆ. ಮೈತ್ರಿ ಸರಕಾರ ಬೀಳುವ ಭಯದಲ್ಲಿ ರೇವಣ್ಣರನ್ನು ಜಿಲ್ಲೆಯ ಸಚಿವರು ಏನು ಕೇಳುತ್ತಿಲ್ಲ ಎಂದು ಆರೋಪಿಸಿದರು. ಕೇಂದ್ರ ಸರಕಾರ ವಿಫಲ:         ಕೇಂದ್ರ ಸಚಿವ ರಮೇಶ್ ಜಿಗಜಿಗಣಿ ಮಾಧ್ಯಮದವರೊಂದಿಗೆ ಮಾತನಾಡುವಾಗ, ಸರಿಯಾಗಿ ಯೋಜನೆಗಳನ್ನು ತಲುಪಿಸುವಲ್ಲಿ ನಮ್ಮ ಸರಕಾರ ವಿಫಲವಾಗಿದೆ ಎಂದು ಬಾಯಿತಪ್ಪಿ ನುಡಿದರು. ಇದರಿಂದ ಗಲಿಬಿಲಿಗೊಂಡ ಪಕ್ಕದ್ದಲೇ ಇದ್ದ ಚಿತ್ರದುರ್ಗ ಶಾಸಕ…

ಮುಂದೆ ಓದಿ...

ಬಿಎಸ್​ವೈಗೆ ಬಿಗ್​ ರಿಲೀಫ್​: 5 ಡಿನೊಟಿಫಿಕೇಷನ್ ಕೇಸು ವಜಾ

ಬೆಂಗಳೂರು:       ವಕೀಲ ಸಿರಾಜಿನ್ ಪಾಷ ಮತ್ತು ಬಿ.ಎಸ್.ಯಡಿಯೂರಪ್ಪ ನಡುವಿನ ಕಾನೂನು ಹೋರಾಟಕ್ಕೆ ತೆರೆ ಬಿದ್ದಿದೆ. ಯಡಿಯೂರಪ್ಪ ವಿರುದ್ಧದ 5 ಕೇಸುಗಳನ್ನು ವಜಾಗೊಳಿಸಿ ಸುಪ್ರೀಂಕೋರ್ಟ್ ಆದೇಶ ನೀಡಿದೆ.       ಮಂಗಳವಾರ ಸುಪ್ರೀಂಕೋರ್ಟ್ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ 5 ಪ್ರಕರಣಗಳನ್ನು ವಜಾಗೊಳಿಸಿದೆ. ಇದರಿಂದಾಗಿ ಯಡಿಯೂರಪ್ಪ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.       ಯಡಿಯೂರಪ್ಪ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಶಿವಮೊಗ್ಗ ಮೂಲದ ವಕೀಲ ಸಿರಾಜಿನ್ ಪಾಷಾ 5 ಕೇಸುಗಳನ್ನು ದಾಖಲಿಸಿದ್ದರು. ಈ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಯಡಿಯೂರಪ್ಪ ಕಾನೂನು ಹೋರಾಟ ನಡೆಸುತ್ತಿದ್ದರು.       ಯಡಿಯೂರಪ್ಪ ಹಾಗೂ ಕುಟುಂಬ ಸದಸ್ಯರ ವಿರುದ್ಧ ಡಿನೋಟಿಫಿಕೇಷನ್ ಸೇರಿದಂತೆ ವಿವಿಧ ಪ್ರಕರಣಗಳು ಬಾಕಿ ಇದ್ದವು. ಹಲವಾರು ವರ್ಷಗಳಿಂದ ಈ ಪ್ರಕರಣಗಳ ವಿಚಾರಣೆ ನಡೆಯುತ್ತಿತ್ತು. ಇಂದು ಪ್ರಕರಣಗಳನ್ನು ವಜಾಗೊಳಿಸಿ ಕೋರ್ಟ್…

ಮುಂದೆ ಓದಿ...

 ಸೀರತ್ ಆಭಿಯಾನಕ್ಕೆ ಹಿರೇಮಠ ಶ್ರೀಗಳಿಂದ ಚಾಲನೆ

 ತುಮಕೂರು:       ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ಪ್ರವಾದಿ ಮಹಮದ್(ಸ) ಅವರ ಜೀವನ ಮತ್ತು ಸಂದೇಶಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಜಮಾಆತೆ-ಇಸ್ಲಾಮಿ ಹಿಂದ್ ರಾಜ್ಯದಾದ್ಯಂತ ನವೆಂಬರ್ 16ರಿಂದ 30ರ ತನಕ ಹಮ್ಮಿಕೊಂಡಿದ್ದ ಸೀರತ್ ಅಭಿಯಾನಕ್ಕೆ ಇತ್ತೀಚಗೆ ಹಿರೇಮಠದ ಡಾ.ಶ್ರೀ ಶಿವಾನಂದಶಿವಾಚಾರ್ಯ ಮಹಾಸ್ವಾಮೀಜಿ ಚಾಲನೆ ನೀಡಿದರು.       ಪ್ರವಾದಿ ಮಹಮ್ಮದರ ಜೀವನ ಮತ್ತು ಸಂದೇಶಗಳಿರುವ ಪುಸ್ತಕಗಳನ್ನು ಸ್ವೀಕರಿಸುವ ಮೂಲಕ ಸೀರತ್ ಅಭಿಯಾನಕ್ಕೆ ಚಾಲನೆ ನೀಡಿದ ಹಿರೇಮಠ ಶ್ರೀಗಳು ಮಾತನಾಡಿ,ಇದೊಂದು ಉತ್ತಮ ಬೆಳವಣಿಗೆ, ಇದು ಧರ್ಮ, ಧರ್ಮಗಳ ನಡುವೆ ಇರುವ ಕಂದಕಗಳನ್ನು ತೊಡೆದು ಹಾಕಿ,ಎಲ್ಲರೂ ಸಹೋದರತೆಯಿಂದ ಬಾಳಲು ಸಹಕಾರಿಯಾಗಲಿದೆ.ಎಲ್ಲ ಧರ್ಮಗಳ ಲ್ಲಿಯೂ ಮೂಲಭೂತವಾದಿಗಳಿದ್ದಾರೆ.ದಾರ್ಶಾನಿಕರ ಸಂದೇಶಗಳನ್ನು ತಮ್ಮ ಸ್ವಾರ್ಥಕ್ಕೆ ತಕ್ಕಂತೆ ಅರ್ಥೈಸಿಕೊಂಡು ಮನುಷ್ಯ, ಮನುಷ್ಯರ ನಡುವೆ ಕಂದಕ ಸೃಷ್ಟಿ ಮಾಡುವ ಜನರಿದ್ದಾರೆ.ಇದರ ಬಗ್ಗೆ ಎಲ್ಲ ಧರ್ಮಗಳ ಪ್ರಜ್ಞಾವಂತ ಜನತೆ ಎಚ್ಚೆತ್ತು ಕೊಳ್ಳಬೇಕಿದೆ. ಧರ್ಮ ಗ್ರಂಥಗಳ ಅಪವ್ಯಾಖ್ಯಾನಕ್ಕೆ…

ಮುಂದೆ ಓದಿ...