ಸಂತಶ್ರೇಷ್ಠ ಕನಕದಾಸರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು

 ತುಮಕೂರು  :       ಸಂತ ಶ್ರೇಷ್ಠ ಕನಕದಾಸರ ಕೀರ್ತನೆಗಳಲ್ಲಿರುವ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಸಂಸದರಾದ ಎಸ್.ಪಿ. ಮುದ್ದಹನುಮೇಗೌಡ ಅವರು ಕರೆ ನೀಡಿದರು.       ತುಮಕೂರು ನಗರದ ಬಾಲಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಸಂತಶ್ರೇಷ್ಠ ಕನಕದಾಸರ 531ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.       ಕನಕದಾಸರು ಜೀವಿಸಿದ್ದ ಕಾಲದಲ್ಲಿ ಸಮಾಜದಲ್ಲಿದ್ದ ಜಾತಿ ಸಂಘರ್ಷವನ್ನು ತೊಡೆದು ಹಾಕಲು ತಮ್ಮ ಕೀರ್ತನೆಗಳ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದರು. ಇಂತಹ ಸಂತಶ್ರೇಷ್ಠ ಕನಕದಾಸರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.       ರಾಜ್ಯಸರ್ಕಾರವು ಬಾಡ ಗ್ರಾಮವನ್ನು ಅಭಿವೃದ್ಧಿಪಡಿಸಲು ಹಾಗೂ ಕನಕದಾಸರ ಕೀರ್ತನೆಗಳನ್ನು ದೇಶ-ವಿದೇಶಗಳಲ್ಲಿ ಪ್ರಚುರಪಡಿಸುವ ಉದ್ದೇಶದಿಂದ ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರವನ್ನು ರಚಿಸಿ, ಆ ಮೂಲಕ ಹಲವಾರು ಕ್ರಾಂತಿಕಾರಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ…

ಮುಂದೆ ಓದಿ...

NH-206ರಲ್ಲಿ ಚತುಷ್ಪಥ ರಸ್ತೆ ಕಾಮಗಾರಿಗೆ ನಾಳೆ ಚಾಲನೆ: ಮುದ್ದಹನುಮೇಗೌಡ

ತುಮಕೂರು:        ತುಮಕೂರು ಲೋಕಸಭಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಚತುಷ್ಪಥದ ರಸ್ತೆ ಅಭಿವೃದ್ಧಿಗೆ ಮಂಜೂರಾತಿ ದೊರೆತಿದ್ದು, ಡಿ.16ರಂದು ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಂಸದ ಮುದ್ದಹನುಮೇಗೌಡ ತಿಳಿಸಿದರು.      ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಮೇಲೆ ಸಾಕಷ್ಟು ಒತ್ತಡ ತಂದಿದ್ದರಿಂದ ನಾಲ್ಕು ನಾಲ್ಕು ಪಥದ ರಸ್ತೆ ಅಭಿವೃದ್ಧಿಗೆ ಮಂಜೂರಾತಿ ಆಗಿದ್ದು, 2032 ಕೋಟಿ ರು ಟೆಂಡರ್ ಆಗಿದೆ. ಮೊದಲ ಮತ್ತು ಎರಡನೇ ಹಂತದ ರಸ್ತೆ ಅಭಿವೃದ್ಧಿಗೆ ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.       ತುಮಕೂರು ಲೋಕಸಭೆ ವ್ಯಾಪ್ತಿಯಲ್ಲಿ ಎನ್‌ಎಚ್‌ಎಐ ಯೋಜನೆ ಕೈಗೆತ್ತಿಕೊಂಡಿದೆ. ಸುಮಾರು 96 ಕಿ.ಮೀ. ರಸ್ತೆ ಅಭಿವೃದ್ಧಿ ಆಗಲಿದೆ. ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಡಿ16ರಂದು ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್‌ನಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವರು ಎಂದರು.       ತುಮಕೂರು ಗ್ರಾಮಾಂತರ,…

ಮುಂದೆ ಓದಿ...

ಈ ತಿಂಗಳ ಅಂತ್ಯಕ್ಕೆ ಸರ್ಕಾರಿ ಕಚೇರಿಗಳಲ್ಲಿ ಎಲ್‌ಇಡಿ ಬಲ್ಬ್‌ ಅಳವಡಿಕೆ

ನವದೆಹಲಿ:       ಈ ವರ್ಷಾಂತ್ಯದ ಒಳಗಾಗಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಈಗಿರುವ ಬಲ್ಬ್‌ಗಳ ಬದಲಾಗಿ ಎಲ್‌ಇಡಿಗೆ ಪರಿವರ್ತಿಸುವಂತೆ ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯೂಡಿ) ಎಲ್ಲ ಅಧಿಕಾರಿಗಳಿಗೂ ಸೂಚನೆ ನೀಡಿದೆ.       ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಕೇಂದ್ರ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಹಿಸುತ್ತದೆ. ಇದರ ವ್ಯಾಪ್ತಿಗೆ ಒಳಪಡುವ 1,241 ಕಟ್ಟಡಗಳಲ್ಲಿ ಆದಷ್ಟು ಬೇಗ ಈ ಕೆಲಸ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಈಗಾಗಲೇ 223 ಕಟ್ಟಡಗಳಲ್ಲಿ ಎಲ್‌ಇಡಿಗೆ ಪರಿವರ್ತಿಸುವ ಕೆಲಸ ಪೂರ್ಣಗೊಂಡಿದ್ದು, 230 ಕಟ್ಟಡಗಳಲ್ಲಿ ಕೆಲಸ ನಡೆಯುತ್ತಿದೆ.       ಕೇಂದ್ರ ಸರ್ಕಾರದ ಎಲ್ಲ ಕಟ್ಟಡಗಳ ನಿರ್ವಹಣೆ ಹಾಗೂ ಅಂತರರಾಷ್ಟ್ರೀಯ ಗಡಿಗಳಲ್ಲಿ ಬೇಲಿ ಹಾಕುವ ಕೆಲಸವನ್ನು ಸಿಪಿಡಬ್ಲ್ಯೂಡಿ ನಿರ್ವಹಿಸುತ್ತದೆ. ಇದಲ್ಲದೇ, ಸ್ನೇಹಹಸ್ತ ಕಾರ್ಯಕ್ರಮಗಳ ಅಡಿಯಲ್ಲಿ ವಿದೇಶಗಳಲ್ಲಿ ಕೂಡ ಭಾರತ ಸರ್ಕಾರದ ನೆರವಿನೊಂದಿಗೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತದೆ.

ಮುಂದೆ ಓದಿ...

ಲಂಕಾ ಪ್ರಧಾನಿ ಹುದ್ದೆ ತ್ಯಜಿಸಿದ ರಾಜಪಕ್ಸೆ

ಕೊಲೊಂಬೋ:        ಸುಪ್ರೀಂಕೋರ್ಟ್ ಆದೇಶದಿಂದ ಕೊನೆಗೂ ಶ್ರೀಲಂಕಾದ ಪ್ರಧಾನಿ ಹುದ್ದೆಗೆ ಮಹೀಂದ್ರ ರಾಜಪಕ್ಸೆ ಶನಿವಾರ ರಾಜೀನಾಮೆ ನೀಡುವ ಮೂಲಕ ಲಂಕಾ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ವಿವಾದಿತ ನಿರ್ಧಾರದ ಜಟಾಪಟಿ ಅಂತ್ಯಗೊಂಡಂತಾಗಿದೆ.       ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಶನಿವಾರ ಬೆಳಗ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಷ್ಟಕ್ಕೂ, ರಾಜಪಕ್ಸೆ ಅವರು ಶನಿವಾರ ರಾಜೀನಾಮೆ ನೀಡುವ ಬಗ್ಗೆ ಶುಕ್ರವಾರ ಸಂಜೆಯೇ ಎಲ್ಲೆಡೆ ಸುದ್ದಿ ಹರಿದಾಡಿತ್ತು.        ಈ ಹಿನ್ನೆಲೆಯಲ್ಲಿ ರನಿಲ್ ವಿಕ್ರಮಸಿಂಘೆ ಅವರ ಹಾದಿ ಸುಗಮವಾದಂತಾಗಿದ್ದು, ಭಾನುವಾರ ಲಂಕಾದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.        ಶುಕ್ರವಾರ ಮತ್ತೆ ಸುಪ್ರೀಂಕೋರ್ಟ್ ರಾಜಪಕ್ಸೆ ಕುರಿತಂತೆ ನೀಡಿರುವ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತ್ತು. ಇದರಿಂದ ಕಾನೂನು ಸಮರದಲ್ಲಿ ಸೋಲು ಕಂಡ ರಾಜಪಕ್ಸೆ ಪ್ರಧಾನಿ ಹುದ್ದೆಗೆ ರಾಜೀನಾಮೆ…

ಮುಂದೆ ಓದಿ...

ಸೋನಿಯಾ ಕ್ಷೇತ್ರ ರಾಯ್‍ಬರೇಲಿಗೆ ನಾಳೆ ಮೋದಿ ಭೇಟಿ

ಲಖನೌ:        ಸೋನಿಯಾ ಗಾಂಧಿ ಪ್ರತಿನಿಧಿಸುವ ಉತ್ತರ ಪ್ರದೇಶದ ರಾಯ್ ಬರೇಲಿಗೆ ಪ್ರಧಾನಿ ನರೇಂದ್ರ ಮೋದಿ ನಾಳೆ ಭೇಟಿ ನೀಡಲಿದ್ದಾರೆ. ಇದು ರಾಯ್‌ಬರೇಲಿಗೆ ಅವರ ಮೊದಲ ಭೇಟಿ.       ಮುಂದಿನ ವರ್ಷ ಕುಂಭೇಮೇಳ ನಡೆಯಲಿರುವ ಅಲಹಾಬಾದ್‌ಗೂ ಅವರು ಭೇಟಿ ನೀಡಿ, ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ. ಹಮ್‌ಸಫರ್ ಪೆಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿರುವ ಪ್ರಧಾನಿ, ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಉತ್ತರ ಪ್ರದೇಶ ಬಿಜೆಪಿ ಮಾಧ್ಯಮ ಸಹಸಂಚಾಲಕ ನವೀನ್ ಶ್ರೀವಾಸ್ತವ ತಿಳಿಸಿದ್ದಾರೆ.        ಇದೇ ವೇಳೆ ₹1,100 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೂ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಚುನಾವಣಾ ರಣತಂತ್ರ?       2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಏಟು ನೀಡಲು ಸೋನಿಯಾಗಾಂಧಿ ಅವರ ತವರು ಕ್ಷೇತ್ರಕ್ಕೆ ಭೇಟಿ ನೀಡುವ ಮೂಲಕ ಪ್ರಧಾನಿ ರಣತಂತ್ರ ಹೆಣೆಯುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.  …

ಮುಂದೆ ಓದಿ...

ರೈಲು ಕಂಬಿ ಬೇಲಿ ದಾಟಲು ಹೋಗಿ ಗಂಡಾನೆ ದಾರುಣ ಸಾವು!

ಮೈಸೂರು:        ಕಂಬಿ ಬೇಲಿ ದಾಟಲು ಯತ್ನಿಸಿ ಒಂಟಿ ಸಲಗವೊಂದು ಜೀವನ್ಮರಣ ಹೋರಾಟ ನಡೆಸಿ ಮೃತಪಟ್ಟಿದೆ. ನಾಗರಹೊಳೆ ವ್ಯಾಪ್ತಿಯ ವೀರನಹೊಸಳ್ಳಿ ಬಳಿ ದಾರುಣ ಘಟನೆ ನಡೆದಿದೆ.        ಮೂರು ಕಾಡಾನೆಗಳು ಗ್ರಾಮಕ್ಕೆ ಬಂದಿದ್ದು ಅರಣ್ಯ ಇಲಾಖೆ ಸಿಬಂದಿ ಮತ್ತು ಗ್ರಾಮಸ್ಥರು ಕಾಡಿಗೆ ಓಡಿಸಿದ್ದರು. ಆದರೆ 42 ವರ್ಷ ಪ್ರಾಯದ ಗಂಡಾನೆ ರೈಲು ಕಂಬಿ ತಡೆಗೊಡೆಗೆ ಹಾರಲು ಯತ್ನಿಸಿ ಸಿಲುಕಿ ದಾರುಣವಾಗಿ ಸಾವನ್ನಪ್ಪಿದೆ.       ಆನೆಗಳ‌ ಹಾವಳಿ ನಿಯಂತ್ರಿಸಲು ರೈಲು ಕಂಬಿಗಳಿಗೆ ತಡೆಗೋಡೆ ನಿರ್ಮಿಸಲಾಗಿತ್ತು. ಕಂಬಿ ಬೇಲಿಯನ್ನ ಜಿಗಿದು ಇನ್ನೊಂದು ಕಡೆ ಹೋಗಲು ಯತ್ನಿಸಿದೆ. ಎರಡು ಕಾಲುಗಳನ್ನ ಮುಂದೆ ಚಾಚಿ ಹಾರಿದಾಗ ಅದರ ಹೊಟ್ಟೆ ಬೇಲಿ ಮೇಲೆ ಸಿಕ್ಕಾಕಿಕೊಂಡಿದೆ. ಪರಿಣಾಮ ಆನೆ ಬೇಲಿ ಮೇಲೆ ನೇತಾಡಿದೆ.  ಅನೆಯ ಹೃದಯ ಭಾಗ ಕಂಬಿಗೆ ಸಿಲುಕಿ ಭಾರ ತಾಳಲಾರದೆ ಶ್ವಾಸಕೋಶದ ಮೇಲೆ ಒತ್ತಡ ಬಿದ್ದು…

ಮುಂದೆ ಓದಿ...

ಸಮಾಜದಿಂದ ಪಡೆದದ್ದನ್ನು ವಾಪಸ್ ಕೊಡುವ ಬಾಧ್ಯತೆ ಮನುಷ್ಯನ ಮೇಲಿರುತ್ತದೆ

ತುರುವೇಕೆರೆ:       ಪ್ರತಿಯೊಬ್ಬ ಮನುಷ್ಯನೂ ಈ ಸಮಾಜದ ಪ್ರತ್ಯಕ್ಷ ಅಥವಾ ಪರೋಕ್ಷ ಕೊಡುಗೆಗಳಿಂದಲೇ ಅಭಿವೃದ್ಧಿ ಹೊಂದಿರುತ್ತಾನೆ. ಸಮಾಜದಿಂದ ಪಡೆದದ್ದನ್ನು ವಾಪಸ್ ಸಮಾಜಕ್ಕೆ ಕೊಡುವ ಬಾಧ್ಯತೆ ಅವನ ಮೇಲಿರುತ್ತದೆ. ಇಂತದೊಂದು ಋಣ ಸಂದಾಯದಿಂದ ಮಾತ್ರವೇ ಸಮುದಾಯವೊಂದು ಗುಣಾತ್ಮಕವಾಗಿ ಬೆಳೆಯಲು ಸಾಧ್ಯ ಎಂದು ಬರಹಗಾರ ತುರುವೇಕೆರೆ ಪ್ರಸಾದ್ ಅಭಿಪ್ರಾಯಪಟ್ಟರು.       ತಾಲ್ಲೂಕಿನ ಬೋಚಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪಾಠೋಪಕರಣಗಳು ಮತ್ತು ಪೀಠೋಪಕರಣಗಳನ್ನು ಕೊಡುಗೆ ನೀಡಿದ ಕಲ್ಕೆರೆ ರಘು ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.       ಮಕ್ಕಳು ಆಧುನಿಕತೆ ಮತ್ತು ಪಾಶ್ಚಿಮಾತ್ಯ ನಾಗರಿಕತೆಯ ಪ್ರಭಾವಕ್ಕೊಳಗಾಗಿ ನಮ್ಮ ಸಂಸ್ಕøತಿ ಪರಂಪರೆಯ ಸೊಗಡನ್ನೇ ಮರೆಯುತ್ತಿದ್ದಾರೆ. ನಮ್ಮ ಸಂಸ್ಕøತಿಯ ಉದಾತ್ತ ಮೌಲ್ಯಗಳು ಇಂದು ಮೂಲೆಗುಂಪಾಗುತ್ತಿವೆ. ಹೀಗಾಗಿ ಸೇವೆ, ನಿಸ್ವಾರ್ಥತೆ ಮತ್ತು ಋಣಸಂದಾಯದ ಮನೋಭಾವದ ಬದಲು ಸ್ವಾರ್ಥ,ಐಶರಾಮಿ ಬದುಕಿನ ವೈಭೋಗವೇ ತುಂಬಿ ತುಳುಕುತ್ತಿವೆ. ಯುವಪೀಳಿಗೆಯನ್ನು…

ಮುಂದೆ ಓದಿ...

ಗೂಳೂರು ಗ್ರಾಮಕ್ಕೆ ಶಾಸಕರ ಅನುದಾನದಡಿ 2 ಬೋರ್ ವೆಲ್

ತುಮಕೂರು:       ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಗೂಳೂರಿನಲ್ಲಿ ತಲೆದೋರಿದ್ದ ನೀರಿನ ಸಮಸ್ಯೆ ಬಗ್ಗೆ ಗೂಳೂರಿನ ಗ್ರಾಮಸ್ತರು ಹಾಗು ಗಣಪತಿ ದೇವಾಲಯಕ್ಕೆ ಭೇಟಿ ನೀಡುತ್ತಿದ್ದ ಭಕ್ತಾಧಿಗಳು ಶಾಸಕ ಡಿ ಸಿ ಗೌರೀಶಂಕರ್ ಅವರ ಗಮನಕ್ಕೆ ತಂದ ತಕ್ಷಣ ಶಾಸಕರ ಅನುದಾನದಡಿ ಎರಡು ಬೋರ್ ವೆಲ್ ಗಳನ್ನು ಕೊರೆಸಿ ನೀರಿನ ಭವಣೆ ನೀಗಿಸಿದ್ದಾರೆ.       ಐತಿಹಾಸಿಕ ಪ್ರಸಿದ್ದ ಗೂಳೂರು ಗಣಪತಿ ವಿಸರ್ಜನೆಗೆ ಲಕ್ಷಾಂತರ ಜನ ಭಕ್ತಾಧಿಗಳು ಭಾಗವಹಿಸಲಿದ್ದು ಈ ಮಧ್ಯೆ ಗೂಳೂರು ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಿತ್ತು ಗೂಳೂರಿನ ಗ್ರಾಮಸ್ತರು ಹಾಗು ಭಕ್ತಾಧಿಗಳು ಮತ್ತು ಸ್ತಳೀಯ ಜೆಡಿಎಸ್ ಮುಖಂಡರು ಶಾಸಕ ಡಿ ಸಿ ಗೌರೀಶಂಕರ್ ಅವರಿಗೆ ಸಮಸ್ಯೆ ಬಗ್ಗೆ ವಿವರಿಸಿ ಬೋರ್ ವೆಲ್ ಕೊರೆಸುವಂತೆ ಮನವಿ ಮಾಡಿದ್ದರು,ಶಾಸಕರು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿದ್ದರೂ ಸಹ ತಕ್ಷಣ ದೂರವಾಣಿ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿ ತುರ್ತಾಗಿ ಎರಡು ಬೋರ್…

ಮುಂದೆ ಓದಿ...

ಮಕ್ಕಳಲ್ಲಿ ಸ್ವಾವಲಂಭನೆ ಬದುಕು ರೂಪಿಸಲು ಮಕ್ಕಳ ಸಂತೆ ಸಹಕಾರಿ

ತುರುವೇಕೆರೆ:       ಮಕ್ಕಳಲ್ಲಿ ಲೆಕ್ಕಾಚಾರ, ವ್ಯಾಪಾರ ವಹಿವಾಟು, ಸ್ವಾವಲಂಭನೆ ಬದುಕು ರೂಪಿಸುವ ಸಲುವಾಗಿ ಇಂತಹ ವಿನೂತನ ಮಕ್ಕಳ ಸಂತೆಯನ್ನು ಪ್ರೋತ್ಸಾಹಿಸಲಾಗಿದೆ ಎಂದು ವಿಶ್ವವಿಜಯ ವಿಧ್ಯಾಶಾಲೆಯ ವ್ಯವಸ್ಥಾಪಕ ಮುಖ್ಯೋಪಾಧ್ಯಾಯಿಣಿ ಶ್ರೀಮತಿ ವಿಜಯಲಕ್ಷ್ಮಿಎಂ.ವಿಶ್ವೇಶ್ವರಯ್ಯ ತಿಳಿಸಿದರು.       ಪಟ್ಟಣದ ವಿಶ್ವವಿಜಯ ವಿಧ್ಯಾಶಾಲಾ ಆವರಣದಲ್ಲಿ ಮಕ್ಕಳಿಂದ ಮಕ್ಕಳ ಸಂತೆ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು ಶಾಲೆಗಳಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಮಕ್ಕಳಿಗೆ ಪಾಠದ ಜೊತೆಗೆ ಒಂದು ಮನರಂಜನೆ ಸಿಗಲಿದ್ದು ವ್ಯವಹಾರಿಕ ಜ್ಞಾನ ವೃದ್ದಿಯಾಗಲಿದೆ. ಗಣಿತದಲ್ಲಿ ಹೆಚ್ಚು ಜ್ಞಾನ ಹೊಂದುವ ಜೊತೆಗೆ ತಮ್ಮ ವಸ್ತುಗಳನ್ನು ಮಾರಾಟ ಮಾಡುವಾಗ ಗ್ರಾಹಕರೊಂದಿಗೆ ಮಾತನಾಡುವ ನೈಪುಣ್ಯತೆ ಗಳಿಸಲಿದ್ದಾರೆ ಎಂದರು.       ಶಿಕ್ಷಕರ ಮಾರ್ಗದರ್ಶಕರಂತೆ ಪ್ರತ್ಯೇಕ ಸಾಲುಗಳಲ್ಲಿ ಹಣ್ಣು, ತೆಂಗಿನಕಾಯಿ,ಕುಂಬಳಕಾಯಿ, ಪೆಪ್ಸಿ-ಕೋಲಾ ಸೇರಿದಂತೆ ವಿವಿದ ವಸ್ತುಗಳನ್ನು ಒಪ್ಪವಾಗಿ ಜೋಡಿಸಲಾಗಿತ್ತು. ಮತ್ತೊಂದೆಡೆ ತಿನಿಸು ಪದಾರ್ಥಗಳಾದ ಪಾನಿಪೂರಿ, ಚಿರುಮುರಿ, ಗೋಬಿಮಂಜೂರಿ ಇತ್ಯಾದಿಗಳನ್ನು ತಮ್ಮ…

ಮುಂದೆ ಓದಿ...