ತುಮಕೂರು ನಗರದವರೆಗೆ ಮೆಟ್ರೋ ರೈಲು ಚಿಂತನೆ: ಡಿಸಿಎಂ

 ತುಮಕೂರು :       ತುಮಕೂರು ನಗರದವರೆಗೂ ಮೆಟ್ರೋ ರೈಲು ಸಾರಿಗೆಯನ್ನು ವಿಸ್ತರಿಸಲು ಚಿಂತನೆ ನಡೆಸಿದ್ದು, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅನಗತ್ಯ ಕಾಮಗಾರಿಗಳನ್ನು ತೆಗೆದುಕೊಳ್ಳದೆ ರಸ್ತೆ, ಚರಂಡಿ ಸೇರಿದಂತೆ ಅತ್ಯಗತ್ಯವಾಗಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಎಂದು ಉಪ ಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ ಅವರು ಇಂದಿಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.       ತುಮಕೂರು ನಗರದಲ್ಲಿಂದು ವರ್ತುಲ ರಸ್ತೆಯ ಜೀರ್ಣೋದ್ದಾರ, ಸ್ಮಾರ್ಟ್ ರಸ್ತೆ ನಿರ್ಮಾಣಗಳಿಗೆ ಶಂಕುಸ್ಥಾಪನೆ, ಸ್ಮಾರ್ಟ್ ಲಾಂಜ್ ಸೇರಿದಂತೆ ಸ್ಮಾರ್ಟ್ ಸಿಟಿ ಯೋಜನೆಯ ಮೊದಲ ಹಂತದ 195 ಕೋಟಿ ರೂ. ವೆಚ್ಚ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿದ ಬಳಿಕ ಅವರು ಮಾತನಾಡಿದರು.       ಮೆಟ್ರೊ ರೈಲನ್ನು ತುಮಕೂರು ನಗರದವರೆಗೂ ವಿಸ್ತರಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ತುಮಕೂರು ನಗರದಲ್ಲಿ ಪ್ರತಿದಿನ 50 ಸಾವಿರ ಜನ ಓಡಾಡುತ್ತಾರೆ ಮೆಟ್ರೊ ವಿಸ್ತರಣೆ…

ಮುಂದೆ ಓದಿ...