ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಬೆಂಗಳೂರು:       ಕರ್ನಾಟಕ ಪದವಿಪೂರ್ವ ಪರೀಕ್ಷೆಗಳ ಅಂತಿಮ ವೇಳಾ ಪಟ್ಟಿ ಪ್ರಕಟವಾಗಿದೆ. ಮಾರ್ಚ್ 1ರಿಂದ 18ವರೆಗೆ ಪರೀಕ್ಷೆ ನಡೆಯಲಿವೆ ಎಂದು ಪಿಯು ಮಂಡಳಿ ತಿಳಿಸಿದೆ. ಭೌತಶಾಸ್ತರ ಮತ್ತು ಅರ್ಥಶಾಸ್ತ್ರದಿಂದ ಪ್ರಾರಂಭವಾಗುವ ಪರೀಕ್ಷೆಗಳು ಮಾರ್ಚ್ 18ರಂದು ಇಂಗ್ಲೀಷ್ ಪರೀಕ್ಷೆ ಮೂಲಕ ಮುಕ್ತಾಯವಾಗಲಿವೆ. ಪಿಯುಸಿ ಪರೀಕ್ಷೆ ವೇಳಾಪಟ್ಟಿ ಮಾರ್ಚ್ 1: ಭೌತಶಾಸ್ತ್ರ ಮತ್ತು ಅರ್ಥಶಾಸ್ತ್ರ ಮಾರ್ಚ್ 5: ಪ್ರಥಮ ಭಾಷೆ ಮಾರ್ಚ್ 7: ಐಚ್ಛಿಕ ಕನ್ನಡ, ಗಣಿತ ಮತ್ತು ಅಕೌಂಟೆನ್ಸಿ ಮಾರ್ಚ್ 9: ರಾಜ್ಯಶಾಸ್ತ್ರ ಮತ್ತು ಸ್ಟಾಟಿಸ್ಟಿಕ್ಸ್ (ಅಂಕಿಶಾಸ್ತ್ರ) ಮಾರ್ಚ್ 11: ಸಮಾಜಶಾಸ್ತ್ರ, ರಾಸಾಯನಿಕ ಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್ ಮಾರ್ಚ್ 13: ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಮಾರ್ಚ್ 14: ಇತಿಹಾಸ, ಜೀವಶಾಸ್ತ್ರ, ಬೇಸಿಕ್ ಮ್ಯಾಥ್ಸ್ ಮಾರ್ಚ್ 16: ಕನ್ನಡ ಮಾರ್ಚ್ 18: ಇಂಗ್ಲೀಷ್

ಮುಂದೆ ಓದಿ...

ವಿದ್ಯಾರ್ಥಿನಿಯನ್ನು ಬಲಿ ಪಡೆದ ಶಾಲಾ ಶೌಚಾಲಯದ ಕಟ್ಟಡ

ಕೋಲಾರ:       ಶಾಲಾ ಶೌಚಾಲಯದ ಕಟ್ಟಡ ಕುಸಿದು ವಿದ್ಯಾರ್ಥಿನಿ ಮೃತಪಟ್ಟ ಘಟನೆ ಮುಳಬಾಗಿಲು ಪಟ್ಟಣದ‌ ಗುಣಿಗುಂಟೆ ಪಾಳ್ಯದಲ್ಲಿ ನಡೆದಿದೆ.       ಮೊರಾರ್ಜಿ ದೇಸಾಯಿ ಶಾಲೆಯ ಶೌಚಾಲಯದ ಕಟ್ಟಡ‌ ಕುಸಿದು ದುರ್ಘಟನೆ ಸಂಭವಿಸಿದ್ದು, ಪರಿಣಾಮ 6ನೇ ತರಗತಿ ವಿದ್ಯಾರ್ಥಿನಿ ಜೋಸ್ನಾ ಮೃತಪಟ್ಟಿದ್ದಾಳೆ.       ದೇವರಾಯ ಸಮುದ್ರದ ಕೀಳುಹೊಳಲಿಯ 12 ಎಕರೆ ಜಮೀನಿನಲ್ಲಿ 21 ಕೋಟಿ ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಆದರಿಂದ ವಸತಿ ಶಾಲೆಯನ್ನು ಇರ್ಷಾದ್ ಎಂಬುವವರಿಗೆ ಸೇರಿದ ಖಾಸಗಿ ಕಟ್ಟಡದಲ್ಲಿ ನಡೆಸಲಾಗುತ್ತಿತ್ತು. ವಿದ್ಯಾರ್ಥಿನಿ ಶೌಚಾಲಯಕ್ಕೆ ಹೋದ ವೇಳೆ ಏಕಾಏಕಿ ಕಟ್ಟಡ ಕುಸಿದ ಪರಿಣಾಮ ಆಕೆ ಅವಶೇಷಗಳ ಅಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.        ಖಾಸಗಿ‌ ಕಟ್ಟಡದಲ್ಲಿದ್ದ ಈ ಶಾಲೆಯು ರಾಜಕಾಲುವೆ ಪಕ್ಕದಲ್ಲಿ ಇದ್ದುದರಿಂದ ತೇವಾಂಶ ಹೆಚ್ಚಾಗಿ ಕುಸಿದಿರುವ ಶಂಕೆ ವ್ಯಕ್ತವಾಗಿದೆ. …

ಮುಂದೆ ಓದಿ...

ಉಪ ಸಭಾಪತಿಯಾಗಿ ಜೆಡಿಎಸ್‍ನ ಎಸ್.ಎಲ್.ಧರ್ಮೇಗೌಡ ಆಯ್ಕೆ

ಬೆಳಗಾವಿ :       ವಿಧಾನ ಪರಿಷತ್‍ನ ನೂತನ ಉಪ ಸಭಾಪತಿಯಾಗಿ ಜೆಡಿಎಸ್‍ನ ಹಿರಿಯ ಮುಖಂಡ ಎಸ್.ಎಲ್.ಧರ್ಮೇಗೌಡ ಅವರು ಅವಿರೋಧವಾಗಿ ಆಯ್ಕೆಯಾದರು.      ಇಂದು ಬೆಳಗ್ಗೆ ಪರಿಷತ್‍ನ ಕಲಾಪ ಆರಂಭವಾಗುತ್ತಿ ದ್ದಂತೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಎಸ್.ಎಲ್.ಧರ್ಮೇಗೌಡ ಅವರು ಪರಿಷತ್‍ನ ಉಪಸಭಾಪತಿಯಾಗಿ ಅವಿರೋಧ ಆಯ್ಕೆಯಾಗಿರುವುದನ್ನು ಅಧಿಕೃತವಾಗಿ ಪ್ರಕಟಿಸಿದರು.

ಮುಂದೆ ಓದಿ...

ರಫೇಲ್ ಖರೀದಿಯ ವಿರುದ್ಧ ಕಾಂಗ್ರೆಸ್ ಅಪಪ್ರಚಾರ : ಬಿಜೆಪಿಯಿಂದ ನಗರದಲ್ಲಿ ಪ್ರತಿಭಟನೆ

ತುಮಕೂರು:       ರಫೇಲ್ ಯುದ್ಧ ವಿಮಾನ ಖರೀದಿಯ ಒಪ್ಪಂದದ ಬಗ್ಗೆ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.       ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಮಾಯಿಸಿದ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗಿದರು.        ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಂಸದ ಜಿ.ಎಸ್. ಬಸವರಾಜು, ಬಹುಕೋಟಿ ರಫೇಲ್ ಯುದ್ಧ ವಿಮಾನ ಖರೀದಿಯ ಒಪ್ಪಂದದಲ್ಲಿ ಅವ್ಯವಹಾರಗಳು ನಡೆದಿದೆ ಎಂದು ಕಾಂಗ್ರೆಸ್ ಪಕ್ಷವು ದೇಶದಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಯಾವುದೇ ರೀತಿಯ ಅವ್ಯವಹಾರಗಳು ನಡೆದಿಲ್ಲ ಎಂದರು.       ರಫೇಲ್ ಯುದ್ಧ ವಿಮಾನವು ಗುಣಮಟ್ಟದಲ್ಲಿ ಉನ್ನತಿ ಹೊಂದಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ.…

ಮುಂದೆ ಓದಿ...

ಮಠಕ್ಕೆ ಮರಳಿದ ಸಿದ್ಧಗಂಗಾ ಶ್ರೀಗಳು

ತುಮಕೂರು:       ಸಿದ್ಧಗಂಗೆಯ ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿಗಳು ಇಂದು ಚೆನ್ನೈನ ರೇಲಾ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ವಿಶೇಷ ಆಂಬುಲೆನ್ಸ್​ನಲ್ಲಿ ಇಂದು ಮಠಕ್ಕೆ ಮರಳಿದ್ದಾರೆ.       ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಠಕ್ಕೆ ಆಗಮಿಸಿದ ಶ್ರೀಗಳು ನೇರವಾಗಿ ಹಳೇ ಮಠದ‌ ಕೊಠಡಿಗೆ ತೆರಳಿದರು. ಶ್ರೀಗಳನ್ನು ನೋಡುವುದಕ್ಕೆ ಮಠದ ವಿದ್ಯಾರ್ಥಿಗಳು, ಲಕ್ಷಾಂತರ ಭಕ್ತಾದಿಗಳು ಉರಿಬಿಸಿಲನ್ನು ಲೆಕ್ಕಿಸದೇ ಶ್ರೀ ಮಠದ ಆವರಣದಲ್ಲಿ ಶ್ರೀಗಳ ಬರುವಿಕೆಗಾಗಿ ಕಾಯ್ದು ಶ್ರೀಗಳನ್ನು ನೋಡಿ ಸಂತೋಷಪಟ್ಟರು.       ಇನ್ನು ಮುಂದಿನ 15 ದಿನ ಸ್ವಾಮೀಜಿ ದರ್ಶನಕ್ಕೆ ಮಠದಲ್ಲಿ ಅವಕಾಶವಿಲ್ಲ ಎನ್ನಲಾಗಿದ್ದು, ಸ್ವಾಮೀಜಿ ಆರೋಗ್ಯವಾಗಿದ್ದು ಇಷ್ಟಲಿಂಗ ಪೂಜೆ ನೆರವೇರಿಸಿ, ಪ್ರಸಾದ ಸ್ವೀಕರಿಸುತ್ತಾರೆ, ಮುಂದಿನ 15 ದಿನ ಸ್ವಾಮೀಜಿ ದರ್ಶನಕ್ಕೆ ಮಠದಲ್ಲಿ ಅವಕಾಶವಿಲ್ಲ, ಸ್ವಾಮೀಜಿ ಆರೋಗ್ಯವಾಗಿದ್ದು ಇಷ್ಟಲಿಂಗ ಪೂಜೆ ನೆರವೇರಿಸಿ, ಪ್ರಸಾದ ಸ್ವೀಕರಿಸುತ್ತಾರೆ. ಗಣ್ಯರು, ಭಕ್ತರು ದರ್ಶನಕ್ಕೆ ಕೆಲವು ದಿನ ಬರಬಾರದು…

ಮುಂದೆ ಓದಿ...

 ಓದಿನಷ್ಟೇ ಕ್ರೀಡೆಯೂ ಮಕ್ಕಳಿಗೆ ಅತಿಮುಖ್ಯ

ತುರುವೇಕೆರೆ:        ಓದಿನಷ್ಟೇ ಕ್ರೀಡೆಯೂ ಮಕ್ಕಳಿಗೆ ಅತಿಮುಖ್ಯವಾಗಿದ್ದು ಶಿಕ್ಷಕರು ಹಾಗು ಪೋಷಕರು ಮಕ್ಕಳಲ್ಲಿ ಕ್ರೀಢೆ ಬಗ್ಗೆ ವಿಶೇಷ ಆಶಕ್ತಿ ಮೂಡುವಂತೆ ಮಾಡಬೇಕಾಗಿದೆ ಎಂದು ಧೈಹಿಕ ಶಿಕ್ಷಣಧಿಕಾರಿ ಚಿದಾನಂದ್ ತಿಳಿಸಿದ್ದಾರೆ.       ಪಟ್ಟಣದ ವಿಶ್ವವಿಜಯ ವಿಧ್ಯಾಶಾಲೆ ಹಾಗು ರಿಯಾ ಪ್ಲೇಹೋಂ ವತಿಯಿಂದ ಶಾಲಾ ವಾರ್ಷಿಕ ಕ್ರೀಡಾಕೂಟ ಉಧ್ಘಾಟನೆಯನ್ನು ನೆರವೇರಿಸಿ  ಮಾತನಾಡಿದ ಅವರು, ಇತ್ತೀಚೆಗೆ ಮೊಬೈಲ್ ಹಾಗು ಟಿ.ವಿ ಮಾದ್ಯಮಗಳ ಹಾವಳಿಯಿಂದ ಮಕ್ಕಳಲ್ಲಿ ಕ್ರೀಡೆಗಳಲ್ಲಿ ಆಶಕ್ತಿ ಕಡಿಮೆಯಾಗುತ್ತಿದೆ.  ಓದಿನಷ್ಟೇ ಕ್ರೀಡೆಯೂ ಮಕ್ಕಳಿಗೆ ಅತಿಮುಖ್ಯವಾಗಿದ್ದು ಶಿಕ್ಷಕರು ಹಾಗು ಪೋಷಕರು ಮಕ್ಕಳಲ್ಲಿ ಕ್ರೀಢೆ ಬಗ್ಗೆ ವಿಶೇಷ ಆಶಕ್ತಿ ಮೂಡುವಂತೆ ಮಾಡಬೇಕಾಗಿದೆ. ಸರ್ಕಾರ ಕ್ರೀಡೆಗೂ ಹೆಚ್ಚು ಸಹಕಾರ ನೀಡುತ್ತಿದ್ದು ಪೋಷಕರು ಇದರ ಸೌಲಭ್ಯ ಮಕ್ಕಳಿಗೆ ದೊರಕುವಂತೆ ಉತ್ತೇಜಿಸಬೇಕು ಎಂದರು.       ಕಸಾಪ ತಾಲ್ಲೂಕು ಅಧ್ಯಕ್ಷ ನಂ.ರಾಜು ಮಾತನಾಡಿ ಕ್ರೀಡೆಯಲ್ಲಿ ಸೋಲೆ ಗೆಲುವಿನ ಮೆಟ್ಟಿಲಾಗಿದ್ದು ಮರಳಿ ಯತ್ನವ ಮಾಡು ಎಂಬಂತೆ ಮಕ್ಕಳು ದೃತಿಗೆಡದೆ…

ಮುಂದೆ ಓದಿ...

ಅಕ್ರಮ ಗಣಿ ಗುತ್ತಿಗೆದಾರರ ಹೆಡೆಮುಡಿಕಟ್ಟಲು ಶಾಸಕ ಡಿ.ಸಿ. ಗೌರಿಶಂಕರ್ ಪಣ

 ತುಮಕೂರು :         ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ ರಾಜಧನ ವಂಚಿಸುತ್ತಿರುವ ಗುತ್ತಿಗೆದಾರರನ್ನು ಹೆಡೆಮುರಿ ಕಟ್ಟಲು ಶಾಸಕ ಡಿ ಸಿ ಗೌರೀಶಂಕರ್ ಮುಂದಾಗಿದ್ದು ಗಣಿ ಪ್ರದೇಶದಲ್ಲಿ ವಾಸ ಮಾಡುವ ಬಡವರ ಸಂಕಷ್ಟ ವನ್ನು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವ ದಂಧೆಕೋರರ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಗಣಿ ಮತ್ತು ಭೂ ವಿಜ್ಙಾನ ಸಚಿವರನ್ನು ಆಗ್ರಹಿಸಿದ್ದಾರೆ.       ಬೆಳಗಾವಿ ವಿಧಾನಸಭಾ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ತುಮಕೂರು ಗ್ರಾಮಾಂತರ ಶಾಸಕ ಡಿಸಿ ಗೌರಿಶಂಕರ್ ಗ್ರಾಮಾಂತರ ಕ್ಷೇತ್ರದಲ್ಲಿ ಇದುವರೆಗೂ ಮಂಜೂರಾದ ಗ್ರಾನೈಟ್ ಕ್ವಾರಿಗಳು ಹಾಗೂ ಜಲ್ಲಿಕ್ರಶರ್ ಗಳ ಸಂಖ್ಯೆ ಎಷ್ಟು? ಅವು ಯಾವುವು? ಗ್ರಾನೈಟ್ ಕ್ವಾರಿಗಳಿಂದ ಸರಕಾರಕ್ಕೆ ಕೋಟ್ಯಂತರ ರೂಪಾಯಿಗಳ ರಾಜಧನ ನಷ್ಟ ಹಾಗೂ…

ಮುಂದೆ ಓದಿ...