ಜಿಲ್ಲೆ ಪೌರಾಣಿಕ ನಾಟಕಗಳ ತವರೂರು: ಶಿವಾನಂದಶ್ರೀ

 ತುಮಕೂರು:       ಪೌರಾಣಿಕ ನಾಟಕಗಳ ತವರೂರಾಗಿರುವ ತುಮಕೂರು ಜಿಲ್ಲೆಯಲ್ಲಿ ಕಲಾವಿದರಿಗೆ ಜನರು ಗೌರವ ನೀಡುತ್ತಾರೆ, ಸುದೀರ್ಘವಾಗಿ ನಾಟಕಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿರುವ ಕಲಾವಿದರನ್ನು ಗುರುತಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.       ನಗರದ ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಹನುಮಜಯಂತಿ ಅಂಗವಾಗಿ ಕೋಟೇ ಆಂಜನೇಯಸ್ವಾಮಿ ಸೇವಾ ಸಮಿತಿ, ಕೆಂಪೇಗೌಡ ಕಲಾಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಸಂಪೂರ್ಣ ರಾಮಾಯಣ ನಾಟಕದಲ್ಲಿ ಹಿರಿಯ ಕಲಾವಿದ ್ಲ ಕೆ.ಎಚ್.ನಾಗರಾಜ್ À ಪತ್ನಿ ಹೇಮಾವತಿ, ಅವರಿಗೆ ಬೆಳ್ಳಿ ಕಿರೀಟ ಪ್ರದಾನ ಮಾಡಿ ಅವರು ಮಾತನಾಡಿದರು.       ಕಲಾವಿದರಿಗೆ ಬೆಳ್ಳಿ ಕಿರೀಟ ಪ್ರದಾನ ಮಾಡುವುದೆಂದರೆ, ಗೌರವ ಡಾಕ್ಟರೇಟ್ ಪಡೆದಂತೆ, ಗೌರವ ಡಾಕ್ಟರೇಟ್ ಪಡೆಯಲು ಲಾಬಿ ನಡೆಸಬೇಕು ಆದರೆ, ನಾಟಕಗಳಲ್ಲಿ ಅವರು ಪೋಷಿಸಿರುವ ಪಾತ್ರಗಳು ಹಾಗೂ ಅವರ ಸುಧೀರ್ಘ ಸೇವೆಯನ್ನು ಗುರುತಿಸಿ,…

ಮುಂದೆ ಓದಿ...

ಗದ್ದುಗೆಯಿಂದ ಮೋದಿ ಸರ್ಕಾರವನ್ನು ಉರುಳಿಸಿ : ಮಾಜಿ ಸಚಿವ ಟಿ.ಬಿ.ಜಯಚಂದ್ರ

ಚಿಕ್ಕನಾಯಕನಹಳ್ಳಿ :       ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ, ಕಾಂಗ್ರೆಸ್ ಕಾರ್ಯಕರ್ತರು ಇದರ ಉಪಯೋಗ ಪಡೆದು ಪ್ರಧಾನಿ ಗದ್ದುಗೆಯಿಂದ ಮೋದಿ ಸರ್ಕಾರವನ್ನು ಉರುಳಿಸಿ ರಾಹುಲ್‍ಗಾಂಧಿಯವರನ್ನು ಪ್ರಧಾನಮಂತ್ರಿ ಮಾಡಲು ಇದು ಸಕಾಲ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.       ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆ ಮತ್ತು ಶಕ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ಗೆ ಭವಿಷ್ಯವಿಲ್ಲ ಎಂಬ ಸನ್ನಿವೇಶವನ್ನು ನಿರ್ಮಿಸಿದ್ದ ಮೋದಿ ಹೇಳಿಕೆ ಕೊಡುತ್ತಿದ್ದರು ಆದರೆ ಈಗ ಉತ್ತರ ಭಾರತದ 3 ರಾಜ್ಯಗಳಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿ ಅಧಿಕಾರದ ಗದ್ದುಗೆ ಹಿಡಿದಿದೆ, ಇಂತಹ ಸಂದರ್ಭದಲ್ಲಿ ಕಾರ್ಯಕರ್ತರು ಹಗಲು ಇರುಳು ದುಡಿದು ರಾಹುಲ್ ಗಾಂಧೀಯವರನ್ನು ಪ್ರಧಾನಮಂತ್ರಿ ಮಾಡಲು ಎಲ್ಲರೂ ಶ್ರಮಿಸುವಂತೆ ಕರೆ ನೀಡಿದರು.       ದೇಶದಲ್ಲಿ ಆಗುತ್ತಿರುವ ಪರಿವರ್ತನೆಯನ್ನು ತಿಳಿದು ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಶಕ್ತಿ ಕಾರ್ಯಕ್ರಮದ…

ಮುಂದೆ ಓದಿ...

ಜಿಲ್ಲೆಯಲ್ಲಿ ಹೆಚ್ಚಿದ ಪರಿತ್ಯಕ್ತ ಮಕ್ಕಳ ಪ್ರಕರಣ : ನೋವಿನ ಸಂಗತಿ – ಸಿ.ಇ.ಓ. ಅನೀಸ್ ಕಣ್ಮಣಿ ಜಾಯ್.

ತುಮಕೂರು:       ಜಿಲ್ಲೆಯಲ್ಲಿ ಕಳೆದ 3-4 ತಿಂಗಳುಗಳಿಂದ ಪರಿತ್ಯಕ್ತ ಮಕ್ಕಳ ಪ್ರಕರಣಗಳು ಹೆಚ್ಚಾಗುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ವಿಷಾದ ವ್ಯಕ್ತಪಡಿಸಿದರು.       ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಆಶಾ/ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಎ.ಎನ್.ಎಂ.ಗಳಿಗಾಗಿ ನಗರದ ಬಾಲಭವನದಲ್ಲಿಂದು ಆಯೋಜಿಸಿದ್ದ “ಪರಿತ್ಯಕ್ತ ಮಕ್ಕಳು ಮತ್ತು ರಕ್ಷಣೆ, ಕೌಟುಂಬಿಕ ದೌರ್ಜನ್ಯ ತಡೆ, ಬಾಲ್ಯ ವಿವಾಹ ನಿಷೇಧ, ವರದಕ್ಷಿಣೆ ನಿಷೇಧ, ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಣೆ ಮತ್ತು ಮಾರಾಟ ನಿಷೇಧ” ಕಾಯ್ದೆ ಕುರಿತು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.       ಜಿಲ್ಲೆಯಲ್ಲಿ ಕಳೆದ 6 ತಿಂಗಳ ಅವಧಿಯಲ್ಲಿ ಒಂದು ದಿನದ ಹಸುಗೂಸಿನಿಂದ ಹಿಡಿದು 4 ತಿಂಗಳಿನ ಎಳೆ…

ಮುಂದೆ ಓದಿ...

ಸರ್ಕಾರದ ಸೌಲಭ್ಯಗಳನ್ನು ವಿಕಲಚೇತನರು ಸದ್ಭಳಕೆ ಮಾಡಿಕೊಳ್ಳಬೇಕು – ಜಿ.ಪಂ.ಅಧ್ಯಕ್ಷೆ

 ತುಮಕೂರು:       ಸರ್ಕಾರದಿಂದ ದೊರೆಯುವ ಅನೇಕ ಸೌಲಭ್ಯಗಳನ್ನು ವಿಕಲ ಚೇತನರು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ ರವಿಕುಮಾರ್ ಅವರು ವಿಕಲ ಚೇತನರಿಗೆ ಕರೆ ನೀಡಿದರು.       ಜಿಲ್ಲಾ ಪಂಚಾಯತ್ ಆವರಣದಲ್ಲಿಂದು ಜರುಗಿದ ಜಿಲ್ಲಾ ಪಂಚಾಯತ್ ಶೇ.3ರ ಅನುದಾನದಲ್ಲಿ ತುಮಕೂರು ತಾಲ್ಲೂಕು ವಿಕಲಚೇತನರಿಗೆ ವಿಕಲಚೇತನ ಸ್ನೇಹಿ ದ್ವಿಚಕ್ರ ವಾಹನಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.       ವಿಕಲ ಚೇತನರ ಕಲ್ಯಾಣಕ್ಕಾಗಿ ಸರ್ಕಾರವು ಅನೇಕ ಸೌಲಭ್ಯಗಳನ್ನು ಅನುಷ್ಟಾನಗೊಳಿಸುತ್ತಿದ್ದು, ಈ ಸೌಲಭ್ಯಗಳನ್ನು ವಿಕಲ ಚೇತನರು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಿ ಸಮಾಜದಲ್ಲಿ ಮುಂದೆ ಬರಬೇಕು. ಇಂದು ತುಮಕೂರು ತಾಲ್ಲೂಕಿನ 25  ಮಂದಿ ವಿಕಲಚೇತನರಿಗೆ ದ್ವಿಚಕ್ರ ವಾಹನವನ್ನು ವಿತರಿಸಲಾಗಿದ್ದು, ಜಾಗರೂಕತೆಯಿಂದ ವಾಹನ ಚಲಾಯಿಸುವಂತೆ ಅವರು ಕರೆ ನೀಡಿದರು.       ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ…

ಮುಂದೆ ಓದಿ...