ಲೋಕಸಭಾ ಚುನಾವಣೆಯಲ್ಲಿ ಕಮಲ್​ ಹಾಸನ್ ಸ್ಪರ್ಧೆ ಖಚಿತ

ಮುಂಬೈ:        ಮುಂಬರುವ 2019ನೇ ಲೋಕಸಭಾ ಚುನಾವಣೆಗೆ ಮಕ್ಕಳ್​ ನಿಧಿ ಮೈಯಮ್​ (ಎಂಎನ್ಎಂ) ಪಕ್ಷ ಖಂಡಿತವಾಗಿಯೂ ಸ್ಪರ್ಧಿಸುತ್ತದೆ ಎಂದು ನಟ, ಪಕ್ಷದ ಸಂಸ್ಥಾಪಕ ಕಮಲ್​ ಹಾಸನ್​ ತಿಳಿಸಿದ್ದಾರೆ.        ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾನ ಮನಸ್ಸಿನ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲೂ ನಮ್ಮ ಎಂಎನ್​ಎಂ ಪಾರ್ಟಿ ಸಿದ್ಧವಾಗಿದೆ. ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಕ್ಕೋಸ್ಕರ ಸಮಿತಿ ರಚನೆ ಮಾಡುತ್ತೇವೆ. ಈ ಬಾರಿಯ ಸಾರ್ವತ್ರಿಕ ಚುನಾವಣೆಯನ್ನು ನಾನು ಎದುರಿಸುತ್ತೇನೆ ಎಂದು ಹೇಳಿದ್ದಾರೆ.        ಮೈತ್ರಿ ಬಗ್ಗೆ ಚುನಾವಣೆ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ತಮಿಳುನಾಡಿನ ರಾಜಕೀಯದ ಮೂಲ ಸ್ವರೂಪವನ್ನೇ ಬದಲಿಸಲು ಹೊರಟ ಪಕ್ಷಗಳೊಂದಿಗೆ ಯಾವ ಕಾರಣಕ್ಕೂ ಹೊಂದಾಣಿಕೆ ಸಾಧ್ಯವಿಲ್ಲ. ರಾಜ್ಯದ ಅಭಿವೃದ್ಧಿ ಘೋಷಣೆಯೊಂದಿಗೆ ಚುನಾವಣಾ ಪ್ರಚಾರ ನಡೆಸುತ್ತೇವೆ ಎಂದಿದ್ದಾರೆ.   

ಮುಂದೆ ಓದಿ...

ಮೈತ್ರಿ ಸರ್ಕಾರ ಸಂಪುಟ ವಿಸ್ತರಣೆ : 8 ಸಚಿವರಿಂದ ಪ್ರಮಾಣವಚನ ಸ್ವೀಕಾರ

ಬೆಂಗಳೂರು:        ಸಮ್ಮಿಶ್ರ ಸರಕಾರದ ಬಹು ನಿರೀಕ್ಷಿತ ಸಂಪುಟ ವಿಸ್ತರಣೆ ಶನಿವಾರ ಸಂಜೆ ನಿಗದಿಯಂತೆ ನಡೆದಿದ್ದು, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ 8 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.       ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಉಪಸ್ಥಿತರಿದ್ದು, ರಾಜ್ಯಪಾಲ ವಜುಭಾಯಿ​ ವಾಲಾ ಅವರು ಸಂಪುಟ ದರ್ಜೆ ಸಚಿವರಾಗಿ ನೇಮಕಗೊಂಡಿರುವ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.       ಮೊದಲಿಗೆ ಎಂ.ಬಿ. ಪಾಟೀಲ್​ ಪ್ರಮಾಣ ವಚನ ಸ್ವೀಕರಿಸಿದರು. ಎರಡನೆಯವರಾಗಿ ಆರ್​.ಬಿ. ತಿಮ್ಮಾಪುರ ; ಮೂರನೆಯವರಾಗಿ ಸತೀಶ್​ ಜಾರಕಿಹೊಳಿ ಅವರು ಬುದ್ಧಬಸವ ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ನಾಲ್ಕನೆಯವರಾಗಿ ಸಿ.ಎಸ್. ಶಿವಳ್ಳಿ, ಐದನೆಯವರಾಗಿ ಪಿ.ಟಿ. ಪರಮೇಶ್ವರ್​ನಾಯ್ಕ್​ಶ್ರೀ ತುಳಜಾಭಾನಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆರನೆಯವರಾಗಿ ಇ. ತುಕಾರಾಂ, ಏಳನೆಯವರಾಗಿ ರಹೀಂ ಖಾನ್​ ಹಾಗೂ ಕೊನೆಯವರಾಗಿ ಎಂಟಿಬಿ ನಾಗರಾಜ್​ ಪ್ರಮಾಣ…

ಮುಂದೆ ಓದಿ...

ಕೇಂದ್ರದಲ್ಲಿ ಬಿಎಸ್ಪಿ ಅಧಿಕಾರಕ್ಕೆ ಬಂದರೆ ಮಾತ್ರ ಸಂವಿಧಾನ ಸಂಪೂರ್ಣ ಜಾರಿ

 ತುಮಕೂರು:      ಸಮಾನತೆ,ಸ್ವಾತಂತ್ರ, ಭಾತೃತ್ವ ಹಾಗೂ ಮಾನವೀಯ ಹಿನ್ನೆಲೆಯಲ್ಲಿ ರಚಿತವಾಗಿರುವ ಭಾರತದ ಸಂವಿಧಾನ ಸಂಪೂರ್ಣವಾಗಿ ಜಾರಿಗೆ ಬರಬೇಕೆಂದರೆ,ಕೇಂದ್ರದಲ್ಲಿ ಮಯಾವತಿ ಅವರ ನೇತೃತ್ವದ ಬಿಎಸ್‍ಪಿ ಪಕ್ಷ ಅಧಿಕಾರಕ್ಕೆ ಬಂದಾಗ ಮಾತ್ರ ಸಾಧ್ಯ ಎಂದು ಬಿಎಸ್ಪಿ ರಾಜ್ಯ ಉಸ್ತುವಾರಿ ಹಾಗೂ ಉತ್ತರಪ್ರದೇಶದ ವಿಧಾನಪರಿಷತ್ ಮಾಜಿ ಸದಸ್ಯ ಥೋಮರ್ ಅಭಿಪ್ರಾಯಪಟ್ಟಿದ್ದಾರೆ.       ನಗರದ ಕನ್ನಡ ಭವನದಲ್ಲಿ ಬಿಎಸ್‍ಪಿ ಪಕ್ಷದ ವತಿಯಿಂದ ಆಯೋಜಿಸಿದ್ದ ತುಮಕೂರು ಲೋಕಸಭಾ ಕ್ಷೇತ್ರದ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಈ ದೇಶದ ಎಲ್ಲಾ ಬಡವರಿಗೆ, ಕೂಲಿಕಾರರಿಗೆ, ರೈತರಿಗೆ, ಶ್ರಮಜೀವಿಗಳಿಗೆ ಮೂರು ಹೊತ್ತಿನ ಊಟ,ಇರಲು ಮನೆ, ಹಾಕಲು ಬಟ್ಟೆಗಳು ಸಿಗಬೇಕು.ಆದರೆ ಇದುವರೆಗೂ ಅಧಿಕಾರ ನಡೆಸಿದ ರಾಜಕೀಯ ಪಕ್ಷಗಳಿಂದ ಇದು ಸಾಧ್ಯವಾಗಿಲ್ಲ.ಸಂವಿಧಾನದಲ್ಲಿ ಈ ಎಲ್ಲಾ ಅಂಶಗಳು ಅಡಕವಾಗಿದ್ದರೂ, ಅವುಗಳು ಜಾರಿಯಾಗಿಲ್ಲ. ಶ್ರೀಮಂತರ ಪರವಾದ ನೀತಿಗಳು ಮಾತ್ರ ಜಾರಿಯಾಗುತ್ತಿಲ್ಲ.ಇವುಗಳ ವಿರುದ್ದ ಸೆಟೆದ್ದು ನಿಲ್ಲುವ ಧೈರ್ಯ ಇರುವುದು ಬಿಎಸ್ಪಿ…

ಮುಂದೆ ಓದಿ...