ಹಾಡಹಗಲೇ ಜೆಡಿಎಸ್‌ ಮುಖಂಡನ ಬರ್ಬರ ಕೊಲೆ

ಮಂಡ್ಯ :       ಮಂಡ್ಯ ಜಿಲ್ಲೆಯ ಮದ್ಧೂರಿನಲ್ಲಿ ಜೆಡಿಎಸ್ ಮುಖಂಡನನ್ನು ಹತ್ಯೆ ಮಾಡಲಾಗಿದೆ. ಮದ್ದೂರು ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಧಾವಿಸಿದ್ದಾರೆ.       ಮಂಡ್ಯ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಪತಿ, ಜೆಡಿಎಸ್ ಮುಖಂಡ ಹೊನ್ನಲಗೆರೆ ಪ್ರಕಾಶ್ (50) ಅವರ ಕತ್ತುಸೀಳಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಸೋಮವಾರ ಸಂಜೆ ಮದ್ದೂರಿನ ಟಿ.ಬಿ.ಸರ್ಕಲ್‌ನಲ್ಲಿ ಈ ಘಟನೆ ನಡೆದಿದೆ.       ಗಂಭೀರವಾಗಿ ಗಾಯಗೊಂಡಿದ್ದ ಹೊನ್ನಲಗೆರೆ ಪ್ರಕಾಶ್ ಅವರನ್ನು ಮದ್ದೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ನೂರಾರು ಜನರು ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ.       ಹೊನ್ನಲಗೆರೆ ಪ್ರಕಾಶ್ ಅವರು ಕಾರಿನಲ್ಲಿ ಕುಳಿತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅವರ ಕತ್ತು ಸೀಳಿ ಪರಾರಿಯಾಗಿದ್ದಾರೆ. ಚಾಕುವಿನಿಂದ ಅವರ ಕತ್ತು ಕೊಯ್ದಿದ್ದು, ತೀವ್ರ ರಕ್ತಸ್ರಾವದಿಂದಾಗಿ ಅವರು…

ಮುಂದೆ ಓದಿ...

ಹಸುವಿನ ರಾಜಕಾರಣ ಅಪಾಯ – ಬರಗೂರು ರಾಮಚಂದ್ರಪ್ಪ

ತುಮಕೂರು:       ಇಂದು ಹಸಿವಿಗಾಗಿ ರಾಜಕಾರಣ ಮಾಡುತ್ತಿಲ್ಲ. ಹಸುವಿಗಾಗಿ ರಾಜಕಾರಣ ನಡೆಯುತ್ತಿದೆ. ಇದು ಅಪಾಯಕಾರಿ ಎಂದು ನಾಡೋಜ ಸಾಹಿತಿ ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.       ತುಮಕೂರು ನಗರದ ಕನ್ನಡ ಭವನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಮತ್ತು ಶಶಾಂಕ ಪ್ರಕಾಶನ ಆಯೋಜಿಸಿದ್ದ ಡಾ. ಓ. ನಾಗರಾಜು ಅವರ ಹಟ್ಟಿ ಅರಳಿ ಹೂವಾಗಿ ಕಾಂದಬರಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಸಮಾಜದಲ್ಲಿ ಯಾವುದೇ ಸಂಘರ್ಷ ನಡೆಯದಿದ್ದರೆ ಅದು ಒಳ್ಳೆಯ ಕಾಲ. ಬ್ರಿಟೀಷರ ಮತ್ತು ರಾಜರ ಕಾಲವೇ ಎಷ್ಟೋ ಉತ್ತಮವಾಗಿತ್ತು ಎಂದು ಹೇಳುವವರೂ ಇದ್ದಾರೆ. ಅಂದು ಕೂಡ ಸಮಸ್ಯೆಗಳು ಇದ್ದವು. ಸಂಘರ್ಷ ನಡೆದರೆ ಅಲ್ಲಿ ಏನೋ ನಡೆಯುತ್ತಿದೆ ಎಂದರ್ಥ. ಹಸಿವಿಗಾಗಿ ರಾಜಕಾರಣ ಮಾಡಿದರೆ ಒಳ್ಳೆಯದು. ಅದು ಆಗದೆ ಹಸುವಿನ ರಾಜಕಾರಣ ನಡೆಯುತ್ತಿದೆ ಎಂದು ತಿಳಿಸಿದರು.       ಚಳವಳಿಗಳು ಸೃಜನಶೀಲತೆಯನ್ನು ನಾಶ ಮಾಡುತ್ತದೆ…

ಮುಂದೆ ಓದಿ...

  ಕೆಲೋ ಇಂಡಿಯಾ ಯೋಜನೆಯಡಿ ಹೆಚ್ಚಿನ ಅನುದಾನಕ್ಕೆ ಕೇಂದ್ರಕ್ಕೆ ಮನವಿ: ಡಿಸಿಎಂ

ಕೊರಟಗೆರೆ :       ರಾಜ್ಯದ ಕ್ರೀಡಾಪಟುಗಳಿಗೆ ಹಾಗೂ ಕ್ರೀಡೆಯ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಕೆಲೋ ಇಂಡಿಯಾ ಯೋಜನೆಯಡಿ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಕೇಂದ್ರದ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರಿಗೆ ಮನವಿ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ತಿಳಿಸಿದರು.       ಕೊರಟಗೆರೆ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಜಿಲ್ಲೆ ಹಾಗೂ ರಾಜ್ಯದಲ್ಲಿರುವ ಯುವ ಕ್ರೀಡಾ ಪ್ರತಿಭೆಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿ ಸ್ಪರ್ಧಿಸುವಂತೆ ಮಾಡಲು ರಾಜ್ಯದಲ್ಲಿರುವ ಕ್ರೀಡಾಂಗಣಗಳನ್ನು ಮೇಲ್ದರ್ಜೆಗೇರಿಸಿ, ಮೂಲಭೂತ ಸೌಕರ್ಯ ಕಲ್ಪಿಸಬೇಕಾಗಿದೆ. ಕೆಲೋ ಇಂಡಿಯಾ ಯೋಜನೆಯಡಿ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದರು.       ತುಮಕೂರು…

ಮುಂದೆ ಓದಿ...

ತುಮಕೂರು ನಗರದ ಎಂ.ಜಿ.ಕ್ರೀಡಾಂಗಣ ಮೇಲ್ದರ್ಜೆಗೆ: ಡಿಸಿಎಂ

ತುಮಕೂರು :       ತುಮಕೂರು ನಗರದ ಮಹಾತ್ಮಗಾಂಧಿ ಕ್ರೀಡಾಂಗಣವನ್ನು ಅಂತರಾಷ್ಟ್ರೀಯ ಮಟ್ಟದ ಸೌಲಭ್ಯಗಳುಳ್ಳ ಕ್ರೀಡಾಂಗಣವನ್ನಾಗಿ ನಿರ್ಮಾಣ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ತಿಳಿಸಿದರು.       ತುಮಕೂರು ನಗರದ ಎಂ.ಜಿ.ಕ್ರೀಡಾಂಗಣದಲ್ಲಿಂದು 8.25ಕೋಟಿ ಅಂದಾಜು ಮೊತ್ತದ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಮಟ್ಟದ 8 ಲೈನ್‍ವುಳ್ಳ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವಾಗಲಿದೆ. ಅಲ್ಲದೆ ಚರಂಡಿ ವ್ಯವಸ್ಥೆ, ಕ್ರೀಡಾಂಗಣ, ಸಮತಟ್ಟು ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಕ್ರೀಡಾಂಗಣಕ್ಕೆ ಪ್ರತ್ಯೇಕವಾದ ನೀರಿನ ಸರಬರಾಜು ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದು ಅವರು ತಿಳಿಸಿದರು.       ಆರ್.ಸಿ.ಸಿ.ಗ್ಯಾಲರಿ, ಮಹಿಳಾ ಹಾಸ್ಟೆಲ್, ಪುಟ್‍ಬಾಲ್ ಲಾನ್, ಜಿಮ್, 10 ಲೆನ್ ಈಜು ಕೊಳ, ವಾಕಿಂಗ್ ಟ್ರ್ಯಾಕ್ ಸೇರಿದಂತೆ ಇತರೆ ಕ್ರೀಡಾ ಮೂಲಭೂತ…

ಮುಂದೆ ಓದಿ...

ಮನುಷ್ಯರು ಸಂಸ್ಕಾರದಿಂದ ಬದುಕಬೇಕು – ಹೆಚ್.ಸುಬ್ಬರಾಯ

       ಈ ಕಂಪ್ಯೂಟರ್ ಯುಗದಲ್ಲಿ ಮನುಷ್ಯನ ಮನಸ್ಸು ಅತಿವೇಗವಾಗಿ ಚಲಿಸುತ್ತದೆ. ಇದಕ್ಕೆ ವಿವೇಕಾನಂದರ ಬದುಕೇ ಒಂದು ದೊಡ್ಡ ನಿದರ್ಶನ. ಆದುದರಿಂದ ಮನುಷ್ಯರು ಮೊದಲು ಸಂಸ್ಕಾರವಂತರಾಗಬೇಕು ಎಂದು ನಿವೃತ್ತ ಪ್ರಾಂಶುಪಾಲ ಮತ್ತು ಸರ್ವೋದಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಹೆಚ್.ಸುಬ್ಬರಾಯ ಹೇಳಿದರು.       ಅವರು ದೇವರಾಯನ ದುರ್ಗದಲ್ಲಿರುವ ಯೋಗ ನರಸಿಂಹನ ಸನ್ನಿಧಿಯಲ್ಲಿ ಸುಬ್ಬರಾಯರಿಗೆ 90 ವರ್ಷ, ಕಮಲಮ್ಮನವರಿಗೆ 80 ವರ್ಷದ ಸವಿನೆನಪಿಗಾಗಿ ಇವರ ಪುತ್ರ, ಹೆಣ್ಣುಮಕ್ಕಳು, ಸೊಸೆ ಅಳಿಯಂದಿರು ಮತ್ತು ಮೊಮ್ಮಕ್ಕಳು ಸೇರಿ ಹುಟ್ಟುಹಬ್ಬ ಸಮಾರಂಭದಲ್ಲಿ ವಿಶೇಷ ಉಡುಗೊರೆಯೊಂದಿಗೆ ಸನ್ಮಾನ ಸ್ವೀಕರಿಸಿ ಮಾತನಾಡಿದರು.       ಮನುಷ್ಯರು ಸಂಸ್ಕಾರವಂತರಾಗಿರುತ್ತಾರೋ ಅವರಲ್ಲಿ ಸಂಸ್ಕøತಿ ಎಂಬುದು ಮನೆ ಮಾಡಿಕೊಂಡಿರುತ್ತದೆ. ಇತ್ತೀಚೆಗೆ ಪಾಶ್ಚಾತ್ಯ ಸಂಸ್ಕøತಿಯ ವ್ಯಾಮೋಹದಿಂದ ನಮ್ಮ ದೇಶದ ಸಂಸ್ಕøತಿ ಸಂಸ್ಕಾರಗಳು ನಾಶವಾಗುತ್ತಿವೆ. ಆದುದರಿಂದ ಎಲ್ಲ ಯುವಕರು ನಮ್ಮ ದೇಶದ ಸಂಸ್ಕøತಿ ಮತ್ತು ಸಂಸ್ಕಾರಗಳನ್ನು ಉಳಿಸಿ ಬೆಳಸಬೇಕಾದ…

ಮುಂದೆ ಓದಿ...

  ಗ್ರಾಮಲೆಕ್ಕಿಗನ ಮೇಲೆ ಲಾರಿ ಹತ್ತಿಸಿ ಕೊಲೆ:ನ್ಯಾಯಕ್ಕೆ ಒತ್ತಾಯಿಸಿ ನೌಕರರ ಪ್ರತಿಭಟನೆ

 ತುಮಕೂರು:       ಅಕ್ರಮ ಮರಳು ಸಾಗಾಣಿಕೆಯನ್ನು ತಡೆಯಲು ಯತ್ನಿಸಿದ ರಾಯಚೂರು ಜಿಲ್ಲೆ ಮಾನ್ವಿ ತಾಲೂಕು ಚಿಕಲಪರ್ವಿ ವೃತ್ತದ ಗ್ರಾಮ ಲೆಕ್ನಿಗರ ಮೇಲೆ ಮರಳಿನ ಲಾರಿ ಹತ್ತಿಸಿ ಕೊಲೆ ಮಾಡಿರುವುದನ್ನು ಖಂಡಿಸಿ,ಇಂದು, ಕಂದಾಯ ಇಲಾಖೆ ನೌಕರರ ಸಂಘ ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.       ಕರ್ವವ್ಯದಲ್ಲಿದ್ದ ಚಿಕಲಪರ್ವಿ ಗ್ರಾಮಲೆಕ್ಕಿಗ ಸಾಹೇಬ್ ಪಾಟೀಲ್ ಎಂಬುವವರು ಮರಳು ತುಂಬಿದ್ದ ಲಾರಿ, ರಾಯಲ್ಟಿ ನೀಡಿದೆಯೇ ಎಂದು ಚೆಕ್ ಮಾಡಲು ಮರಳಿನ ಲಾರಿಯನ್ನು ಅಡ್ಡಗಟ್ಟಿದಾಗ, ಲಾರಿಯ ಚಾಲಕ ಅವರ ಮೇಲೆ ವಾಹನ ಹತ್ತಿಸಿದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.ಮೃತರ ಕುಟುಂಬಕ್ಕೆ ಹೆಚ್ಚಿನ ಅರ್ಥಿಕ ನೆರವು ನೀಡುವುದರ ಜೊತೆಗೆ, ಇಂತಹ ಕೆಲಸಗಳಿಗೆ ನಿಯೋಜಿತರಾಗುವ ಕಂದಾಯ ಇಲಾಖೆಯ ನೌಕರರಿಗೆ ರಕ್ಷಣೆ ಒದಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.       ಪ್ರಕರಣವನ್ನು ಸಿಓಡಿ ತನಿಖೆಗೆ ಒಳಪಡಿಸಿ,ಇದರ ಹಿಂದಿರುವ…

ಮುಂದೆ ಓದಿ...

ಪುಸ್ತಕಗಳು ಜೀವನದ ಸಂಗಾತಿ

ತುಮಕೂರು:       ಪುಸ್ತಕಗಳು ಜೀವನದ ಸಂಗಾತಿ,ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವದರಿಂದ ಜಾÐನರ್ಜಾನೆ ಲಭಿಸುತ್ತದೆ ಹಾಗೂ ವಿದ್ಯಾರ್ಥಿಗಳು ಹೆಚ್ಚು- ಹೆಚ್ಚು ಪುಸ್ತಕಗಳನ್ನು ಓದಬೇಕು ,ವೃತಿಯ ಜೊತೆಗೆ ಪ್ರವೃತ್ತಿಯನ್ನು ಬೆಳೆಸಿಕೊಂಡಿರುವ ಪ್ರೊ.ಕೆ.ಎಲ್.ರಾಮಲಿಂಗುರವರು ಪ್ರಶಿಕ್ಷಣಾರ್ಥಿಗಳಿಗೆ ಹೊರತಂದಿರುವ ಕಲಿಕೆ ಬೋಧನೆ ಮತ್ತು ಮೌಲ್ಯಾಂಕನ ಎಂಬ ಪುಸ್ತಕ ಹೆಚ್ಚು ಉಪಯುಕ್ತ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ.ಎಸ್.ಜಗಧೀಶ್ ತಿಳಿಸಿದರು.       ಇಂದು ನಗರದ ಶ್ರೀಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ(ಇಂದು) ಕಲಿಕೆ-ಬೋಧನೆ ಮತ್ತು ಮೌಲ್ಯಾಂಕನ ಎಂಬ ಪುಸ್ತಕ ಬಿಡುಗಡೆಮಾಡಿ ಮಾತನಾಡಿದರು.       ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾದ ಡಾ.ವೈ.ಎಂ.ರೆಡ್ಡಿ ಮಾತನಾಡಿ ಈ ಪುಸ್ತಕದಲ್ಲಿ ಶಿಕ್ಷಣಕ್ಕೆ ಸಂಭದಿಸಿದಂತೆ ಎಲ್ಲವಿಚಾರಗಳನ್ನು ಒಳಗೊಂಡಿದೆ, ಉತ್ತಮ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಸಂಸ್ಥೆಗೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಪ್ರಾಂಶುಪಾಲರಾದ ಡಾ.ಗುರುಬಸಪ್ಪ ನವರು ಪುಸ್ತಕದ ಪರಿಚಯ ಮಾಡುತ್ತ ಬಿಇಡ್‍ನ ದ್ವೀತಿಯ ಸೆಮಿಸ್ಟ್‍ರ್ ವಿದ್ಯಾರ್ಥಿಗಳಿಗೆ ಉತ್ತಮ…

ಮುಂದೆ ಓದಿ...

ತಾಲೂಕಿಗೆ ಒಂದು ರೂಪಾಯಿ ಅನುದಾನ ಬಂದರೂ ಅದು ನನ್ನ ಪರಿಶ್ರಮ : ಶಾಸಕ ಮಸಾಲೆ ಜಯರಾಮ್

ತುರುವೇಕೆರೆ:       ನಾನು ಈ ತಾಲೂಕಿನ ಶಾಸಕ ಇಲ್ಲಿಗೆ ಒಂದು ರೂಪಾಯಿ ಅಭಿವೃದ್ದಿ ಕಾಮಗಾರಿಗೆಂದು ಮುಂಜೂರಾದರೂ ಅದು ನನ್ನ ಪರಿಶ್ರಮ ಎಂದು ಶಾಸಕ ಮಸಾಲೆ ಜಯರಾಮ್ ರವರು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ತಿರುಗೇಟು ನೀಡಿದ್ದಾರೆ.       ತಾಲೂಕಿನ ಅಭಿವೃಧ್ದಿ ಗಮನದಲ್ಲಿರಿಸಿಕೊಂಡು ಕೇಂದ್ರ ಸಚಿವರಾದ ನಿತಿನ್ ಗಢ್ಕರಿಯವರಿಗೆ 500ಕೋಟಿ ರೂಪಾಯಿಗಳ ಅನುದಾನವನ್ನು ಮುಂಜೂರು ಮಾಡುವಂತೆ ಮನವಿ ಪತ್ರ ಸಲ್ಲಿಸಲಾಗಿದ್ದು, ಇದು ಹಂತ ಹಂತವಾಗಿ ಬಿಡುಗಡೆಯಾಗುತ್ತಲಿದೆ ಹಾಗೂ ಬೆಳಗಾವಿಯಲ್ಲಿ ನಡೆದ ಸದನದಲ್ಲಿಯೂ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಅಭಿವೃದ್ದಿ ಕಾಮಗಾರಿಗಳಿಗೆ ಬೇಕಾಗಿರುವ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಸಲ್ಲಿಸಲಾಗಿದ್ದು, ನನ್ನ ತಾಲೂಕಿನ ಅಭಿವೃದ್ದಿ ಬಗ್ಗೆ ನನಗೆ ಅರಿವಿದೆ ನಾನು ಈ ತಾಲೂಕಿನ ಶಾಸಕ. ಇಲ್ಲಿಗೆ ಒಂದು ರೂಪಾಯಿ ಅಭಿವೃದ್ದಿ ಕಾಮಗಾರಿಗೆಂದು ಮುಂಜೂರಾದರೂ ಅದು ನನ್ನ ಫರಿಶ್ರಮದಿಂದ ಮಾತ್ರ ಎಂದು ಶಾಸಕ ಮಸಾಲೆ ಜಯರಾಮ್ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ತಿರುಗೇಟು ನೀಡಿದರು.    …

ಮುಂದೆ ಓದಿ...

ಸರ್ಕಾರ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ಕೊಡದೆ ಬದುಕು ದುಸ್ಥರವಾಗಿದೆ

ಗುಬ್ಬಿ :       ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡದ ಸರ್ಕಾರ ರೈತರ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ಕೊಡದೆ ಬದುಕು ದುಸ್ಥರ ಮಾಡಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ದೂರಿದರು. ಪಟ್ಟಣದ ಕೃಷಿ ಇಲಾಖೆಯಲ್ಲಿ ಆಯೋಜಿಸಲಾಗಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕುಡಿವ ನೀರು ಹಾಗೂ ಮದ್ಯದ ಬಾಟಲ್‍ಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವ ಸರ್ಕಾರ ರೈತರ ಬದುಕಿಗೆ ಆಧಾರವಾದ ಹಾಲು, ಹಣ್ಣು ತರಕಾರಿಗಳಿಗೆ ಬೆಲೆ ನಿಗದಿ ಮಾಡಲಾಗುತ್ತಿಲ್ಲ ಎಂದರು.       ದೇಶದಲ್ಲಿ ಶೇ.65 ರಷ್ಟು ಉದ್ಯೋಗ ಸೃಷ್ಟಿಸಿರುವ ಕೃಷಿ ಜಮೀನುಗಳನ್ನು ಅಭಿವೃದ್ದಿ ಹೆಸರಿನಲ್ಲಿ ಭೂ ಸ್ವಾಧೀನ ಕಾಯಿದೆ ಜಾರಿ ಮಾಡುತ್ತಾ ಸರ್ಕಾರ ಸಿರಿವಂತರ ಕೈವಶವಾಗಿದೆ. ಆಹಾರ ಕೊರತೆ ಎದುರಿಸಬೇಕಾದ ದುಸ್ಥಿತಿ ಅರಿತು ಕೂಡ ಭೂಮಿ ವರ್ಗಾಯಿಸುವ ಪ್ರಕ್ರಿಯೆ ನಿರಂತರ ನಡೆಸುತ್ತಿದ್ದಾರೆ ಎಂದ ಅವರು ಖಾತೆದಾರನಾಗಿರದ…

ಮುಂದೆ ಓದಿ...

ಕಟ್ಟಡ ಕಾರ್ಮಿಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲು ಒತ್ತಾಯ

ತುಮಕೂರು:        ಕಟ್ಟಡ ಕಾರ್ಮಿಕರು ಸುರಕ್ಷತೆ ಇಲ್ಲದೆ ಅನಾರೋಗ್ಯದಿಂದ ನರಳುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ಕಲ್ಯಾಣ ಮಂಡಳಿಯಿಂದ ದೊರೆಯುವ ಸೌಲಭ್ಯಗಳು ಸಹ ಸರಿಯಾದ ವೇಳೆಗೆ ದೊರೆಯದೆ ಸಾಲದ ಸುಳಿಗೂ ಸಹ ಸಿಲುಕುತ್ತಿದ್ದಾರೆ. ಆದ್ದರಿಂದ ಸರ್ಕಾರ ಕಟ್ಟಡ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಿಐಟಿಯು ಜಿಲ್ಲಾಧ್ಯಕ್ಷ ಬಿ.ಉಮೇಶ್ ಒತ್ತಾಯಿಸಿದ್ದಾರೆ.       ತುಮಕೂರು ತಾಲೂಕು ಹೊಬ್ಬೂರು ಹೋಬಳಿಯ ಸಿರಿವರ ಗ್ರಾಮದಲ್ಲಿ ಪಂಚಾಯಿತಿ ಮಟ್ಟಡ ಕಟ್ಟಡ ಕಾರ್ಮಿಕರ ಸಮಾವೇಶ ದಲ್ಲಿ ಮಾತನಾಡಿದರು. 1996ರಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಜಾರಿಗೊಂಡ ಕಟ್ಟಡ ಕಾರ್ಮಿಕರ ಸೌಲಭ್ಯಗಳು ಕಲ್ಯಾಣ ಮಂಡಳಿಯ ಅಡಿಯಲ್ಲಿ ಸಿಗುವಂತೆ ಕಾನೂನು ರೂಪಿಸಲಾಗಿ 2006ರಲ್ಲಿ ರಾಜ್ಯದಲ್ಲೂ ಜಾರಿಗೆ ಬಂದಿದೆ. ಕಾರ್ಮಿಕರನ್ನು ತಲುಪುವಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ. ಇದಕ್ಕೆ ಸಿಬ್ಬಂದಿ ಕೊರತೆ, ಇಚ್ಛಾಶಕ್ತಿ ಕೊರತೆ, ಕಲ್ಯಾಣ ಮಂಡಳಿ,…

ಮುಂದೆ ಓದಿ...