SSLC ಹಾಲ್ ಟಿಕೆಟ್ : ದೋಷವಿದ್ದಲ್ಲಿ ತಿದ್ದುಪಡಿಗೆ ಅವಕಾಶ

ಬೆಂಗಳೂರು:       ಎಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳ ಪ್ರವೇಶ ಪತ್ರ(ಹಾಲ್ ಟಿಕೆಟ್)ಗಳಲ್ಲಿ ಲೋಪದೋಷವಿದ್ದಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಡಿ.31ವರೆಗೂ ಅವಕಾಶ ಕಲ್ಪಿಸಿದೆ. 2019ನೇ ಸಾಲಿನ ಎಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ತಾತ್ಕಾಲಿಕ ಪ್ರವೇಶ ಪತ್ರಗಳ ಡೌನ್‌ಲೋಡ್ ಹಾಗೂ ತಿದ್ದುಪಡಿ ಮಾಡಿಕೊಳ್ಳಬಹುದು ಎಂದು ಮಂಡಳಿಯ ನಿರ್ದೇಶಕಿ ವಿ.ಸುಮಂಗಲಾ ಸೂಚನೆ ನೀಡಿದ್ದಾರೆ.       ಎಸ್ ಎಸ್ ಎಲ್ ಸಿ ಪರೀಕ್ಷೆ ಇನ್ನು ಎರಡು ತಿಂಗಳಷ್ಟೇ ಬಾಕಿ ಉಳಿದಿದ್ದು, ಡಿಸೆಂಬರ್ 31ರೊಳಗೆ ಲೋಪದೋಷಗಳನ್ನು ಗುರುತಿಸಿ ಸರಿ ಪಡಿಸುವಂತೆ ಶಾಲಾ ಆಡಳಿತ ಮಂಡಳಿಗಳಿಗೆ ಎಸ್ ಎಸ್ ಎಲ್ ಸಿ ಬೋರ್ಡ್ ಸೂಚಿಸಿದೆ.       ಶಾಲಾ ಆಡಳಿತ ಮಂಡಳಿಗೆ ಬೋರ್ಡ್  ವೆಬ್ ಸೈಟ್ ನ ಪಾಸ್ ವರ್ಡ್ ನೀಡಲಾಗಿದ್ದು, ಅದರಲ್ಲಿ ಲಾಗಿನ್ ಆಗಿ ತಪ್ಪುಗಳಿದ್ದರೇ ಸರಿ ಪಡಿಸುವ ಅವಕಾಶ ಕಲ್ಪಿಸಲಾಗಿದೆ, ವೆಬ್ ಸೈಟ್…

ಮುಂದೆ ಓದಿ...

ಸಕಲ ಸರ್ಕಾರಿ ಗೌರವಗಳೊಂದಿಗೆ ಸಮಾಜಮುಖಿ ಡಾ: ಸೂಲಗಿತ್ತಿ ನರಸಮ್ಮ ಅವರ ಅಂತ್ಯಕ್ರಿಯೆ

 ತುಮಕೂರು:       ನಿನ್ನೆ ನಿಧನರಾದ “ಪದ್ಮಶ್ರೀ” ಪುರಸ್ಕತೆ ಡಾ: ಸೂಲಗಿತ್ತಿ ನರ ಸಮ್ಮ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ನಗರದ ಗಂಗಸಂದ್ರದಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಸಂಜೆ ನೆರವೇರಿಸಲಾಯಿತು.       ಇದಕ್ಕೂ ಮುನ್ನ ಸಚಿವರಾದ ವೆಂಕಟರಮಣಪ್ಪ, ಯು.ಟಿ.ಖಾದರ್, ಎಸ್.ಆರ್.ಶ್ರೀನಿವಾಸ್, ಆರ್.ಬಿ.ತಿಮ್ಲಾಪುರೆ, ಮಾಜಿ ಸಚಿವರಾದ ಎಚ್. ಆಂಜನೇಯ, ಸೊಗಡು ಶಿವಣ್ಣ, ಸಂಸದರಾದ ಎಸ್.ಪಿ. ಮುದ್ದಹನುಮೇಗೌಡ, ಚಂದ್ರಪ್ಪ, ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ತಿಮ್ಮರಾಯಪ್ಪ, ಶಾಸಕರಾದ ಜ್ಯೋತಿಗಣೇಶ್, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ ರವಿಕುಮಾರ್, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಮಾಜಿ ಸಂಸದ ಜಿ.ಎಸ್.ಬಸವರಾಜು, ಎಲೆರಾಂಪುರ ಮಠದ ಹನುಮಂತನಾಥ ಸ್ವಾಮೀಜಿ ಸೇರಿದಂತೆ ಹಲವಾರು ಗಣ್ಯರು ಹಾಗೂ ಅಭಿಮಾನಿಗಳು ನಗರದ ಗಾಜಿನ ಮನೆಯಲ್ಲಿಡಲಾಗಿದ್ದ ಮೃತ ಸೂಲಗಿತ್ತಿ ನರಸಮ್ಮ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.  …

ಮುಂದೆ ಓದಿ...

ಗಣಿತ ಕ್ಷೇತ್ರದ ಮಹಾನ್ ಸಾಧಕ ಶ್ರೀನಿವಾಸ ರಾಮಾನುಜನ್ – ಸಿ.ಎ.ಸೋಮೇಶ್ವರ್ ಗುಪ್ತ

ತುಮಕೂರು:        ಗಣಿತ ಎಂದಾಕ್ಷಣ ಕಬ್ಬಿಣದ ಕಡಲೆ. ಅದು ಕಷಷ್ಟ. ಅದು ನಮ್ಮ ತಲೆಗೆ ಹತ್ತುವುದಿಲ್ಲ ಎಂದು ಹೇಳುತ್ತಿದ್ದ ಕಾಲ ಒಂದಿತ್ತು. ಆದರೆ ಈಗ ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಸ್ಮರಿಸಲೇಬೇಕಾದ ಗಣಿತ ಕ್ಷೇತ್ರದ ಮಹಾನ್ ಸಾಧಕರಾದ ಶ್ರೀನಿವಾಸ ರಾಮಾನುಜನ್ ಎಂದು ವಾಸವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿ.ಎ.ಸೋಮೇಶ್ವರಗುಪ್ತ ಹೇಳಿದರು.       ಅವರು ತುಮಕೂರಿನ ಎಸ್‍ಐಟಿ ಮಉಖ್ಯರಸ್ತೆಯಲ್ಲಿರುವ ವಾಸವಿ ಪದವಿಪೂರ್ವ ಕಾಲೇಜಿನಲ್ಲಿ ಗಣಿತಶಾಸ್ತ್ರದ ಮುಖ್ಯಸ್ಥ ಜಿ.ಹನುಮಂತಯ್ಯ ನೇತೃತ್ವದಲ್ಲಿ ನಡೆದ ಶ್ರೀನಿವಾಸ ರಾಮಾನುಜನ್ ಅವರ ಹುಟ್ಟಹಬ್ಬದ ಸವಿನೆನಪಿಗಾಗಿ ಎಸ್‍ಎಸ್‍ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆಸಲಾದ ಗಣಿತ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.       ಗಣಿತದ ಬಗ್ಗೆ ಭಯಬಿಟ್ಟು ಶ್ರದ್ಧೆಯಿಂದ ಪಾಠ ಹೇಳಿ ಸೂತ್ರಗಳನ್ನು ನೆನಪಿನಲ್ಲಿಟ್ಟುಕೊಂಡು ಪ್ರತಿನಿತ್ಯ ಮನಸ್ಸಳ್ಳ ಮನಸ್ಸಿನಿಂದ ಸಾಕಷ್ಟು…

ಮುಂದೆ ಓದಿ...

ಶೇ 10ರ ರಿಯಾಯಿತಿ ನಂದಿನಿ ಸಿಹಿ ಉತ್ಪನ್ನಗಳ ಮಾರಾಟಕ್ಕೆ ಚಾಲನೆ

 ತುಮಕೂರು:       ಹೊಸ ವರ್ಷದ ಅಂಗವಾಗಿ ಹಾಗೂ ನಂದಿನಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ ಹಿನ್ನೆಲೆಯಲ್ಲಿ ತುಮಕೂರು ಹಾಲು ಒಕ್ಕೂಟದ ವತಿಯಿಂದ ಆಯೋಜಿಸಿದ್ದ ನಂದಿನ ಸಿಹಿ ಉತ್ಪನ್ನಗಳ ಶೇ10ರ ರಿಯಾಯಿತಿ ದರದಲ್ಲಿ ನಂದಿನಿ ಸಿಹಿ ಉತ್ಸವ ಮಾರಾಟ ಪ್ರಕ್ರಿಯೆಗೆ ಬುಧವಾರ ತುಮುಲ್ ಅಧ್ಯಕ್ಷ ಸಿ.ವಿ.ಮಹಲಿಂಗಪ್ಪ ಚಾಲನೆ ನೀಡಿದರು.       ನಗರದ ಜಿಲ್ಲಾ ಪಂಚಾಯಿತಿ ಸಮೀಪವಿರುವ ನಂದಿನಿ ಉತ್ಪನ್ನಗಳ ಮಳಿಗೆಯಲ್ಲಿ ಮಾರುಕಟ್ಟೆಗೆ ಶೇ10ರ ರಿಯಾಯಿತಿ ದರದ ಉತ್ಪನ್ನಗಳ ಬಿಡುಗಡೆ ಮಾಡಿ, ಗ್ರಾಹಕರಿಗೆ ನೀಡುವ ಮೂಲಕ ಡಿಸೆಂಬರ್ 21 ರಿಂದ 2019 ರ ಜನವರಿ 09ರವರೆಗೆ ಇರುವ ರಿಯಾಯಿತಿ ಮಾರಾಟ ಆರಂಭಿಸಿದರು.       ಈ ವೇಳೆ ಮಾತನಾಡಿದ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಪ್ಪ,ಇಂದು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಇಡೀ ದೇಶದಲ್ಲಿಯೇ ಗುಣಮಟ್ಟದಲ್ಲಿ ಮತ್ತು ರುಚಿಯಲ್ಲಿ ಹೆಸರುವಾಸಿಯಾಗಿವೆ.ಆದ್ದರಿಂದ ನಂದಿನಿ ಸಿಹಿ…

ಮುಂದೆ ಓದಿ...

ಸಿಂಥಟಿಕ್ ಟ್ರಾಕ್ ನಿರ್ಮಾಣದ ಮೂಲಕ ಕ್ರೀಡಾನಗರಕ್ಕೆ ಮುನ್ನುಡಿ

 ತುಮಕೂರು:       ತುಮಕೂರು ನಗರವನ್ನು ಕ್ರೀಡಾ ನಗರಿಯನ್ನಾಗಿ ರೂಪಿಸಬೇಕೆನ್ನುವ ನಾಗರಿಕರ ಒತ್ತಾಸೆಗೆ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸುಮಾರು 8 ಕೋಟಿ ವೆಚ್ಚದಲ್ಲಿ ಸಿಂಥಟಿಕ್ ಟ್ರಾಕ್ ನಿರ್ಮಾಣಕ್ಕೆ ಮುಂದಾಗಿರುವುದು ಪುಷ್ಠಿ ನೀಡಿದಂತಿದೆ ಎಂದು ಜಿಲ್ಲಾ ವಕ್ಪ್ ಬೋರ್ಡನ ಮಾಜಿ ಆಡಳಿತಾಧಿಕಾರಿ ನವೀದ್ ಬೇಗ್ ತಿಳಿಸಿದ್ದಾರೆ.       ನಗರದ ಹೊಯ್ಸಳ ಹೊಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು,ಜಿಲ್ಲಾ ಉಸ್ತುವಾರಿ ಸಚಿವರು,ಕ್ರೀಡಾ ಹಾಗೂ ಯುವಸಬಲೀಕರಣ ಸಚಿವರೂ ಆದ ಡಾ.ಜಿ.ಪರಮೇಶ್ವರ್ ಅವರು, ಮಹಾತ್ಮಗಾಂಧಿ ಕ್ರೀಡಾಂಗಣ ದಲ್ಲಿ ಅಂದಾಜು 8 ಕೋಟಿ ರೂ ವೆಚ್ಚದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಸಿಂಥಟಿಕ್ ಅಥ್ಲೇಟಿಕ್ ಟ್ರಾಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನರವೇರಿಸಿರುವುದು ಜಿಲ್ಲೆಯ ಎಲ್ಲಾ ನಾಗರಿಕರು, ಕ್ರೀಡಾಪ್ರೇಮಿಗಳು ಸಂತಸ ಪಡುವ ವಿಚಾರವಾಗಿದೆ.ಇದಕ್ಕಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರುಗಳಿಗೆ ಜಿಲ್ಲೆಯ ನಾಗರಿಕರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.…

ಮುಂದೆ ಓದಿ...

ಮಕ್ಕಳಿಗೆ ವಿವಿಧ ಕಲಾ ಪ್ರಕಾರಗಳ ಪರಿಚಯ ಅಗತ್ಯ

 ತುಮಕೂರು:       ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿಯೇ ವಿವಿಧ ಕಲಾ ಪ್ರಕಾರಗಳನ್ನು ಪರಿಚಯಿಸುವುದರಿಂದ ಭವಿಷ್ಯದಲ್ಲಿ ಉತ್ತಮ ಕಲಾ ಪ್ರತಿಭೆಗಳಾಗಿ ಹೊರಹೊಮ್ಮಲಿದ್ದಾರೆ ಎಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಡಾ. ಲಕ್ಷ್ಮಣ್‍ದಾಸ್ ಅಭಿಪ್ರಾಯಪಟ್ಟರು.       ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶಿರಾ ತಾಲ್ಲೂಕು ಭೂವನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಸಹಯೋಗದಲ್ಲಿ ವಸತಿ ಶಾಲೆಯಲ್ಲಿಂದು ಆಯೋಜಿಸಲಾಗಿದ್ದ “ಚಿಗುರು” ಸಾಂಸ್ಕøತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚಿಗುರು ಕಾರ್ಯಕ್ರಮವು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.       ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿ ಕಲಾಭಿರುಚಿಯನ್ನು ಬೆಳೆಸಲು ಸರ್ಕಾರವು ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮಕ್ಕಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.    …

ಮುಂದೆ ಓದಿ...