ಸಮಷ್ಟಿ ಶಿಕ್ಷಣಕ್ಕೆ ಸಾಮಾಜಿಕ ಜಾಲತಾಣಗಳು ಹೊಸ ಭರವಸೆಯಂತೆ ಒದಗಿ ಬಂದಿವೆ

ತುರುವೇಕೆರೆ :       ‘ಧರ್ಮ ಮತ್ತು ರಾಜಕಾರಣಗಳು ಪರಸ್ಪರ ಕೈಜೋಡಿಸಿ ಉಂಟು ಮಾಡುತ್ತಿರುವ ಸಮಕಾಲೀನ ಭಾರತದ ತಲ್ಲಣ ಮತ್ತು ಸಂಘರ್ಷಮಯ ಸನ್ನಿವೇಶ ಕವಿ, ಕಲಾವಿದ ಮತ್ತು ಚಿಂತಕನಿಗೆ ತೀವ್ರ ಸ್ವರೂಪದ ಬೆದರಿಕೆ ಹಾಗು ಆತಂಕ ಸೃಷ್ಟಿಸಿದೆ. ಕವಿಯಾದವನು ಇದನ್ನು ಸವಾಲಾಗಿ ಸ್ವೀಕರಿಸಿ ಮಹತ್ವಕಾಂಕ್ಷೆಯಿಂದ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕಿದೆ’ ಎಂದು ಸಾಹಿತಿ ಕೆ.ಪಿ.ನಟರಾಟ್ ಯುವ ಕವಿಗಳಿಗೆ ಕಿವಿ ಮಾತು ಹೇಳಿದರು.       ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದದಲ್ಲಿ ಜರುಗಿದ ನಾಲ್ಕನೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ತಾಳಕೆರೆಸುಬ್ರಹ್ಮಣ್ಯಂ ವೇದಿಕೆಯಲ್ಲಿ ಎರಡನಢ ದಿನ ನಡೆದ ನನ್ನ ಕವಿತೆ ನನ್ನದು ಎಂಬ ಕವಿ ಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.       ಫೇಸ್ ಬುಕ್‍ನಂತಹ ಡಿಜಿಟಲ್ ಸ್ವರೂಪದ ಸಾಮಾಜಿಕ ಜಾಲ ತಾಣಗಳ ಮಾದ್ಯಮಗಳು ಬರೆಯುವ, ಚಿಂತಿಸುವ ಅನುಸಂಧಾನ ಮಾಡುವ ಜ್ಞಾನ ವಿನಿಮಯದ…

ಮುಂದೆ ಓದಿ...

ಬುದ್ಧನ ಕಾರುಣ್ಯ, ಬಸವಣ್ಣನ ಸಮಾನತೆ ತತ್ವವನ್ನು ಪಾಲಿಸಿದ ಶ್ರೀಗಳು ವಿಶ್ವರತ್ನಕ್ಕೆ ಸಮಾನ

 ತುಮಕೂರು :       ಬುದ್ಧನ ಕಾರಣ್ಯ, ಬಸವಣ್ಣನ ಸಮಾನತೆ ತತ್ವವನ್ನು ಚಾಚೂ ತಪ್ಪದೇ ಪಾಲಿಸಿದ ಲಿಂಗೈಕ್ಯ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ವಿಶ್ವರತ್ನಕ್ಕೆ ಸಮಾನ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಣ್ಣಿಸಿದರು.       ಸಿದ್ಧಗಂಗಾ ಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿಂದು ಏರ್ಪಡಿಸಿದ್ದ ಲಿಂಗೈಕ್ಯ ಡಾ|| ಶ್ರೀ ಶ್ರೀ ಶಿವಕುಮಾರಸ್ವಾಮಿಗಳ ಪುಣ್ಯಸ್ಮರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ನೆರವನ್ನು ಕೋರದ ಶ್ರೀಗಳು:       ನಾಡಿನ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರೀಗಳ ಸೇವೆ ಅನನ್ಯ. ಲಕ್ಷಾಂತರ ದೀನ-ದಲಿತರು, ಕಡು ಬಡ ಮಕ್ಕಳಿಗೆ ಶಿಕ್ಷಣ, ಅನ್ನ ಹಾಗೂ ವಸತಿ ದಾಸೋಹ ನೀಡುವ ಮೂಲಕ ತ್ರಿವಿಧ ದಾಸೋಹಿಗಳಾಗಿದ್ದ ಅವರು ಸಿದ್ದಗಂಗಾ ಕ್ಷೇತ್ರದ ಅಭಿವೃದ್ಧಿಗಾಗಿ ಎಂದೂ ಸರ್ಕಾರದ ನೆರವನ್ನು ಕೋರಿಲ್ಲ. ಪೂಜ್ಯರು ಯಾವುದೇ ರೀತಿಯ ಪ್ರಚಾರಕ್ಕೊಳಗಾಗದೆ 1930 ರಿಂದ ತಮ್ಮ ಅಂತಿಮ ದಿನಗಳವರೆಗೂ…

ಮುಂದೆ ಓದಿ...

ಸಿದ್ದಗಂಗಾ ಶ್ರೀಗಳಲ್ಲದೆ ಭಕ್ತ ವೃಂದ ಬಡವಾಗಿದೆ-ಜೋತಿಗಣೇಶ್

ತುಮಕೂರು:       ಕಾಯಕ, ದಾಸೋಹ ಎನ್ನುವ ಬಸವಣ್ಣನವರ ತತ್ವವನ್ನು ಅಕ್ಷರಷಃ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಧುನಿಕ ಬಸವಣ್ಣನಂತೆ ಬದುಕಿದ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರನ್ನು ಕಳೆದುಕೊಂಡಿರುವ ಭಕ್ತವೃಂದ ಬಡವಾಗಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.       ನಗರದ ಎಸ್.ಐ.ಟಿ. ಬಡಾವಣೆಯ ಶ್ರೀಸಿದ್ದೇಶ್ವರ್ ಕನ್ವೆಷನ್ ಹಾಲ್‍ನಲ್ಲಿ 26ನೇ ವಾರ್ಡಿನ ನಾಗರಿಕರು ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶ್ರೀಶಿವಕುಮಾರಸ್ವಾಮೀಜಿಗಳಿಗೆ ಆಯೋಜಿಸಿದ್ದ ನುಡಿನಮನ ಹಾಗೂ ಗುರುವಂದನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,1941ರಲ್ಲಿ ಮಠದ ಪೀಠಾಧ್ಯಕ್ಷರಾಗಿ ನೇಮಕಗೊಂಡ ದಿನದಿಂದಲೂ ಮಠದಲ್ಲಿ ಕಲಿಯುತ್ತಿ ರುವ ಮಕ್ಕಳು,ಮಠಕ್ಕೆ ಬರುವ ಭಕ್ತರ ಯೋಗಕ್ಷೇಮಕ್ಕಾಗಿಯೇ ತನ್ನ ಇಡೀ ಜೀವನವನ್ನು ಮುಡಿಪಾಗಿಟ್ಟ ಡಾ.ಶ್ರೀಶಿವಕು ಮಾರಸ್ವಾಮೀಜಿ ಅವರು,ತಮ್ಮ ತ್ರಿವಿಧ ದಾಸೋಹ ಎಂಬ ತತ್ವದ ಮೂಲಕ ಬಡವರು, ಶ್ರೀಮಂತರ ನಡುವಿನ ಅಂತರ ಕಡಿಮೆ ಮಾಡಲು ನಿರಂತರ ಶ್ರಮಿಸಿದವರು ಎಂದರು.        ಲಿಂಗೈಕ್ಯ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರ…

ಮುಂದೆ ಓದಿ...

ಶಿವಕುಮಾರಶ್ರೀಗೆ ಭಾರತ ರತ್ನ ನೀಡಲಿ: ಮುರುಳೀಧರ ಹಾಲಪ್ಪ

 ತುಮಕೂರು:       ರಾಜ್ಯ ಸರಕಾರ ಕಳೆದ 4 ವರ್ಷಗಳಿಂದ ಶಿವಕುಮಾರಶ್ರೀಗಳಿಗೆ ಭಾರತ ರತ್ನ ಪ್ರದಾನ ಮಾಡುವಂತೆ ಶಿಫಾರಸ್ಸು ಮಾಡುತ್ತಿದ್ದರು, ಕೇಂದ್ರ ಸರಕಾರ ಸಿದ್ಧಗಂಗಾಶ್ರೀಗಳ ಹೆಸರನ್ನು ನಿರಾಕರಿಸುವ ಮೂಲಕ ಅಪಾರ ಭಕ್ತ ಸಮೂಹಕ್ಕೆ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ವಕ್ತಾರ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.       ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕರ್ನಾಟಕದ ಹೆಸರಿನಲ್ಲಿ ಕೊಡಲಾಗಿರುವ ಪದ್ಮಶ್ರೀಯಲ್ಲಿ ಸಾಲುಮರದ ತಿಮ್ಮಕ್ಕ ಒಬ್ಬರೇ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದಾರೆ, ಉಳಿದವರು ಯಾರು ಕರ್ನಾಟಕದಲ್ಲಿ ಸೇವೆಯನ್ನು ಸಲ್ಲಿಸದೇ ಇದ್ದರೂ ಅವರಿಗೆ ಕರ್ನಾಟಕದ ಹೆಸರಿನಲ್ಲಿ ಪ್ರಶಸ್ತಿ ಘೋಷಣೆ ಮಾಡುವ ಮೂಲಕ, ಕನ್ನಡಿಗರನ್ನು ಪ್ರಶಸ್ತಿ ಆಯ್ಕೆಯಲ್ಲಿ ಕಡೆಗಣಿಸಲಾಗಿದೆ ಎಂದರು.       ಕರ್ನಾಟಕ ಮೂಲದವರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ತಮಿಳುನಾಡು ರಾಜ್ಯದಿಂದ ಆಯ್ಕೆಯಾದವರ ಪಟ್ಟಿಯಲ್ಲಿಯೂ ಇವರ ಹೆಸರು ಉಲ್ಲೇಖಿಸಲಾಗಿದೆ, ಅವರ ಸಾಧನೆಗೆ ಪ್ರಶಸ್ತಿ ನೀಡಿರುವುದರಲ್ಲಿ ನಮಗೆ ಯಾವುದೇ ಆಕ್ಷೇಪವಿಲ್ಲ, ಆದರೆ ಕರ್ನಾಟಕದಲ್ಲಿ…

ಮುಂದೆ ಓದಿ...

ಕುಷ್ಠರೋಗ ಶಾಪವಲ್ಲ – ನ್ಯಾಯಾಧೀಶ ಗಣೇಶ್

ತುಮಕೂರು:       ಕುಷ್ಠರೋಗವು ದೇವರ ಶಾಪ ಅಥವಾ ಪಾಪದ ಫಲಗಳಿಂದ ಬರುವುದಿಲ್ಲ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ಗಣೇಶ ತಿಳಿಸಿದರು.       ಸ್ಪರ್ಶ ಕುಷ್ಠರೋಗ ಅರಿವು ಆಂದೋಲನದ ಅಂಗವಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿಂದು ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗಾಂಧೀಜಿಯವರು ಹುತಾತ್ಮರಾದ ದಿನವಾದ ಇಂದು ಅವರ ಸ್ಮರಣೆಯಲ್ಲಿ ರಾಷ್ಟ್ರಾದ್ಯಂತ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನವನ್ನು ಹಮ್ಮಿಕೊಳ್ಳಾಗುತ್ತಿದೆ. ಗಾಂಧೀಜಿಯವರ “ಕುಷ್ಠ ಮುಕ್ತ ದೇಶ”ದ ಕನಸನ್ನು ನಾವೆಲ್ಲಾ ನನಸಾಗಿಸೋಣ ಎಂದು ಹೇಳಿದರಲ್ಲದೆ ಕುಷ್ಠರೋಗವನ್ನು ಸುಲಭವಾಗಿ ಪತ್ತೆ ಹಚ್ಚಿ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ಕುಷ್ಠರೋಗಿಗಳನ್ನು ಕಂಡರೆ ತಾರತಮ್ಯ ತೋರದೆ ದೌರ್ಜನ್ಯಕ್ಕೊಳಗಾದ ಕುಷ್ಠರೋಗಿಗಳನ್ನು ಮುಖ್ಯವಾಹಿನಿಗೆ ತಂದು ಸಾಮಾನ್ಯರೊಂದಿಗೆ ಬದುಕಲು ಅವಕಾಶ ಕಲ್ಪಿಸಬೇಕೆಂದು ಅವರು ಮನವಿ ಮಾಡಿದರು.       ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಚಂದ್ರಿಕಾ…

ಮುಂದೆ ಓದಿ...

ಕನ್ನಡ ಬಳಸಿ-ಉಳಿಸುವ ಮನಸ್ಸಿನ ಸಂಘಟನೆಗಳ ಅವಶ್ಯಕತೆಯಿದೆ

ತುರುವೇಕೆರೆ:       ಕನ್ನಡ ಬೆಳಸಬೇಕು ಉಳಿಸಬೇಕು ಎನ್ನುವ ಸಂಘಟನೆಗಳಿಗಿಂತ ಬಳಸಿ ಉಳಿಸುವ ಮನಸ್ಸಿನ ಸಂಘಟನೆಗಳ ಅವಶ್ಯಕತೆ ಪ್ರಸ್ಥುತ ದಿನಮಾನಗಳಲ್ಲಿ ಅತಿ ಅವಶ್ಯಕವಾಗಿದೆ ಎಂದು ಸಮ್ಮೇಳನಾಧ್ಯಕ್ಷ ಪವಾಡ ಬಯಲು ತಜ್ನ ಹುಲಿಕಲ್ ನಟರಾಜ್ ಅಭಿಪ್ರಾಯಪಟ್ಟರು.       ಪಟ್ಟಣದ ಹಿರಣ್ಣಯ ಬಯಲು ರಂಗಮಂದಿರದ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಸಿ ಮಾತನಾಡಿ ಕನ್ನಡವನ್ನು ಬೆಳೆಸಬೇಡಿ ಬಳಸಿ, ಹಸಿರೇ ಹುಸಿರು ಪೃಕೃತಿಯನ್ನು ಕಾಪಾಡುವ ಹೊಣೆ ನಮ್ಮದು. ಸಾಹಿತ್ಯಾಸಕ್ತರಲ್ಲಿ ಮನಸ್ಸು ಬದಲಾಗುತ್ತಿದೆ ಸಾಹಿತ್ಯ ಸಮ್ಮೇಳನಗಳಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿರುವುದು ಒಂದೆಡೆಯಾದರೆ ಸಮ್ಮೇಳನಗಳು ಜಾರ್ತೆಯಾಗಿ ಮಾರ್ಪಾಡಾಗುತ್ತಿರುವುದು ಮೊತ್ತೊಂದೆಡೆಯಾಗಿದೆ, ಸಮ್ಮೇಳನಗಳು ಕನ್ನಡಿಗರ ಮನಸ್ಸನ್ನು ಬೆಸೆಯುವ ನಾಡಹಬ್ಬವಾಗಬೇಕು ಎಂದರು.       ಕೆಲ ಸಮೂಹ ಮಾಧ್ಯಮಗಳು ಜನಪರವಾಗದೆ ಕೇವಲ ಟಿ.ಆರ್.ಪಿ. ಪರವಾಗಿದ್ದು, ಸಮಾಜದಲ್ಲಿ ಒಡಕು ಮೂಡಿಸುವಂತಹ ಹಾಗೂ ಕೌಟುಂಬಿಕ…

ಮುಂದೆ ಓದಿ...

ತುಮಕೂರು: ಜೆಡಿಎಸ್ ಗೆ ಪಾಲಿಕೆ ಮೇಯರ್, ಕಾಂಗ್ರೆಸ್ ಗೆ ಉಪಮೇಯರ್ ಸ್ಥಾನ

 ತುಮಕೂರು:       ಮಹಾ ನಗರಪಾಲಿಕೆಯ ಮೇಯರ್, ಉಪ ಮೇಯರ್ ಹಾಗೂ 4 ವಿವಿಧ ಸ್ಥಾಯಿ ಸಮಿತಿಗಳಿಗೆ ಬುಧವಾರ ಪಾಲಿಕೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ನೂತನ ಮೇಯರ್ ಆಗಿ 21ನೇ ವಾರ್ಡ್‍ನ ಲಲಿತಾ ರವೀಶ್ ಹಾಗೂ ಉಪ ಮೇಯರ್ ಆಗಿ 19ನೇ ವಾರ್ಡ್‍ನ ರೂಪಶ್ರೀ ಅವರು ಆಯ್ಕೆಯಾದರು. ಬೆಂಗಳೂರು ಪ್ರಾದೇಶಿಕ ಆಯುಕ್ತರು ಹಾಗೂ ಪಾಲಿಕೆ ಚುನಾವಣಾಧಿಕಾರಿ ಶಿವಯೋಗಿ ಸಿ.ಕಳಸದ ಅವರು ಬೆಳಿಗ್ಗೆ 11.30 ರಿಂದ ನಡೆಸಿದ ಚುನಾವಣೆ ಪ್ರಕ್ರಿಯೆಯಲ್ಲಿ ಹಾಜರಿದ್ದ 34 ವಾರ್ಡ್‍ಗಳ ಪಾಲಿಕೆ ಸದಸ್ಯರ ಹಾಜರಾತಿ ಪಡೆದು, ಅಭ್ಯರ್ಥಿಗಳ ನಾಮಪತ್ರ ಸ್ವೀಕರಿಸಿ ಪರಿಶೀಲಿಸಲಾಯಿತು. ನಂತರ ಅಭ್ಯರ್ಥಿಗಳಿಗೆ ನಾಮಪತ್ರಗಳನ್ನು ಹಿಂಪಡೆಯಲು ಕಾಲಾವಕಾಶ ನೀಡಲಾಗಿತ್ತು. ಅಭ್ಯರ್ಥಿಗಳ ನಾಮನಿರ್ದೇಶನ ಪತ್ರ ಕ್ರಮಬದ್ಧಗೊಂಡ ನಂತರ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು ಘೋಷಿಸಲಾಯಿತು. ಇದಕ್ಕೂ ಮುನ್ನ ಕಳೆದ ಆಗಸ್ಟ್ 31ರಂದು ನಡೆದ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದ ನೂತನ…

ಮುಂದೆ ಓದಿ...

ಹೇಮಾವತಿ ನಾಲೆ ಆಧುನೀಕರಣದಿಂದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ : ಸಂಸದ ಎಸ್.ಪಿ.ಎಂ.

ತುಮಕೂರು :         ಜಿಲ್ಲೆಯ ಹೇಮಾವತಿ ಶಾಖಾ ನಾಲೆಯ ಆಧುನೀಕರಣಗೊಳಿಸಿದರೆ ಮಾತ್ರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಸಂಸದ ಎಸ್.ಪಿ. ಮುದ್ದಹನುಮೇಗೌಡ ತಿಳಿಸಿದರು.       ನಗರದ ಪ್ರವಾಸಿ ಮಂದಿರದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಹೇಮಾವತಿ ಯೋಜನೆಯಡಿ ಜಿಲ್ಲೆಗೆ 24.8 ಟಿಎಂಸಿ ನೀರಿನ ಹಂಚಿಕೆಯಾಗಿದ್ದರೂ, ಈವರೆಗೂ ಪೂರ್ಣ ಪ್ರಮಾಣದ ನೀರನ್ನು ಹರಿಸಿಕೊಳ್ಳಲು ಸಾಧ್ಯವಾಗಿಲ್ಲ. ನಾಲೆಯಲ್ಲಿ ಹೂಳು ಹೆಚ್ಚಾಗಿ ತುಂಬಿಕೊಂಡಿದೆಯಲ್ಲದೆ ಮರಗಿಡಗಳು ಬೆಳೆದು ನೀರು ಸರಾಗವಾಗಿ ಹರಿಯಲು ಅಡಚಣೆಯಾಗುತ್ತಿದೆ. ನಾಲೆಯ ಹೂಳನ್ನು ತೆಗೆದು ಆಧುನೀಕರಣಗೊಳಿಸುವುದರಿಂದ ಜಿಲ್ಲೆಯಲ್ಲಿ ನೀರಿನ ಸಮಸ್ಯೆಯನ್ನು ನೀಗಿಸಬಹುದೆಂದರು. ಎಕ್ಸ್‍ಪ್ರೆಸ್ ನಾಲೆ ಪ್ರಸ್ತಾವನೆ ಕೈಬಿಡಲು ಮನವಿ:-       ನಾಲೆಯಿಂದ ಜಿಲ್ಲೆಯ ಕುಣಿಗಲ್ ದೊಡ್ಡಕೆರೆಗೆ ನೀರು ಹರಿಸಿಕೊಳ್ಳಲು ನಾಲೆಯ 7ನೇ ಕಿ.ಮೀ.ನಿಂದ 165 ಕಿ.ಮೀ.ವರೆಗಿನ ಎಕ್ಸ್‍ಪ್ರೆಸ್ ನಾಲೆಯನ್ನು ನಿರ್ಮಿಸುವ ಪ್ರಸ್ತಾವನೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು,…

ಮುಂದೆ ಓದಿ...

ಪುಣ್ಯ ಸ್ಮರಣಾ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಸೂಕ್ತ ರಕ್ಷಣಾ ವ್ಯವಸ್ಥೆ

ತುಮಕೂರು:       ಜನವರಿ 31ರಂದು ನಡೆಯಲಿರುವ ಲಿಂಗೈಕೆ ಡಾ|| ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ 11 ದಿನಗಳ ಪುಣ್ಯ ಸ್ಮರಣಾ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಕೇಂದ್ರ ವಲಯ ಐ.ಜಿ.ಪಿ ದಯಾನಂದ್ ತಿಳಿಸಿದರು.       ಶ್ರೀಗಳ ಪುಣ್ಯ ಸ್ಮರಣಾ ಕಾರ್ಯಕ್ರಮದ ಅಂಗವಾಗಿ ಸಿದ್ಧಗಂಗಾ ಮಠಕ್ಕೆ ಆಗಮಿಸಿದ ಅವರು ಗೋಸಲ ಸಿದ್ಧೇಶ್ವರ ವೇದಿಕೆ ಮುಂಭಾಗ ಸಜ್ಜುಗೊಳ್ಳುತ್ತಿರುಯವ ವೇದಿಕೆ ಮತ್ತು ಇನ್ನಿತರೆ ಭಕ್ತರು ಆಗಮಿಸುವ ಸ್ಥಳವನ್ನು ಪರಿಶೀಲಿಸಿದರು.       ಪುಣ್ಯ ಸ್ಮರಣಾ ಕಾರ್ಯಕ್ರಮಕ್ಕೆ ಈಗಾಗಲೇ ಮಠದಿಂದ ಎಲ್ಲಾ ಸಿದ್ದತೆಗಳು ನಡೆಯುತ್ತಿದ್ದು ಭಕ್ತಾಧಿಗಳು ಶ್ರೀಗಳ ಗದ್ದುಗೆಯ ದರ್ಶನ ಪಡೆಯುವುದರ ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಅನುವಾಗುವಂತೆ ದಾಸೋಹದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.       ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಭಕ್ತರಿಗೆ ಗದ್ದುಗೆ ದರ್ಶನ, ಸೂಕ್ತ ಪಾರ್ಕಿಂಗ್…

ಮುಂದೆ ಓದಿ...

ಪ್ರತಿ ಕುಟುಂಬಕ್ಕೆ ಒಂದು ಹಸು:ಯೋಜನೆ ರೂಪಿಸಲು ಸರಕಾರದ ಮೇಲೆ ಒತ್ತಡ

 ತುಮಕೂರು:       ಸತತ ಬರದಿಂದ ಬೆಸತ್ತಿರುವ ಜಿಲ್ಲೆಯ ಜನರಿಗೆ ಅದರಲ್ಲಿಯೂ ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೆ ಒಂದು ಹಸು ನೀಡುವ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿಗಳು ಹಾಗೂ ಸರಕಾರದೊಂದಿಗೆ ಮಾತುಕತೆ ನಡೆಸಲಿದ್ದೇನೆ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದ್ದಾರೆ.       ತಾಲೂಕಿನ ಬೆಳ್ಳಾವಿ ಹೋಬಳಿ ನಾಗಾರ್ಜುನಹಳ್ಳಿಯಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆವತಿಯಿಂದ ಹಮ್ಮಿಕೊಂಡಿದ್ದ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ವಿರುದ್ದ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರಿಗೆ ನಿರಂತರ ಬರದಿಂದ ಬದುಕು ಕಷ್ಟವಾಗಿದೆ. ಬೇರೆ ಬೇರೆ ಯೋಜನೆಗಳಿಗೆ ಸಾವಿರಾರು ಕೋಟಿ ರೂಗಳನ್ನು ಸರಕಾರ ಖರ್ಚು ಮಾಡುತ್ತಿದೆ. ಈ ಹಣದಲ್ಲಿ ಪ್ರತಿ ಕುಟುಂಬಕ್ಕೆ ಒಂದು ಹಸು ವಿತರಿಸುವ ಮೂಲಕ ಅವರು ಸಹ ಬರವನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ನೀಡಲಿ ಎಂಬ ಉದ್ದೇಶದಿಂದ ಬಜೆಟ್ ಮಂಡನೆಗು ಮುನ್ನ ಮುಖ್ಯಮಂತ್ರಿ…

ಮುಂದೆ ಓದಿ...