ನಾಮಪತ್ರ ಹಿಂಪಡೆದ ಮುದ್ದಹನುಮೇಗೌಡರ ವಿರುದ್ಧ ಆಕ್ರೋಶ

ತುಮಕೂರು:       ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರ ಸ್ಪರ್ಧೆಯಿಂದ ರಾಷ್ಟ್ರ ರಾಜಕಾರಣದ ಕೆಂಗಣ್ಣಿಗೆ ಗುರಿಯಾಗಿತ್ತು. ತಮ್ಮ ಇಳಿ ವಯಸ್ಸಿನಲ್ಲಿ ಮೊಮ್ಮಕ್ಕಳಿಬ್ಬರನ್ನು ಕಣಕ್ಕಿಳಿಸಿ, ತನ್ನ ಸ್ಪರ್ಧೆ ಬಯಸಿ ತುಮಕೂರಿಗೆ ಅಡಿಯಿಟ್ಟ ದೇವೇಗೌಡರು ತನ್ನ ಕೊನೆಯ ಚುನಾವಣೆ ಎಂದಿದ್ದರಾದರೂ ಹಾಲಿ ಸಂಸದ ಮುದ್ದಹನುಮೇಗೌಡರ ಬೆಂಬಲಿಗರ ಆಕ್ರೋಷ ದೇವೇಗೌಡರ ನಿದ್ದೆ ಕೆಡಿಸಿತ್ತು. ದೇವೇಗೌಡರು ಜಾತ್ಯಾತೀತ ಜನತಾದಳದ ಪರಮೋಚ್ಚ ನಾಯಕರಾಗಿದ್ದರೂ ತುಮಕೂರು ಜಿಲ್ಲೆಯ ರಾಜಕಾರಣದ ವ್ಯಾಪ್ತಿಗೆ ಗೌಡರ ಪಾದಾರ್ಪಣೆಯನ್ನ ವ್ಯಾಪಕವಾಗಿ ವಿರೋಧಿಸಿದ್ದ ಇಲ್ಲಿನ ಒಕ್ಕಲಿಗ ಸಮುದಾಯವು ಸೇರಿದಂತೆ ಇತರರು ಯಾರೂ ಒಪ್ಪಿಕೊಂಡಿರಲಿಲ್ಲ. ಹಾಗಾಗಿ ಟಿಕೆಟ್ ವಂಚಿತ ಹಾಲಿ ಸಂಸದ ಮುದ್ದಹನುಮೇಗೌಡರ ಪರವಾಗಿ ದೇವೇಗೌಡರ ವಿರೋಧಿ ಬಣ ತೊಡೆತಟ್ಟಿ ನಿಂತಿತ್ತು. ಮುದ್ದಹನುಮೇಗೌಡರಿಗೆ ಬೆಂಬಲವಾಗಿ ನಿಂತಿತ್ತು. ಮುದ್ದಹನುಮೇಗೌqರ ಬಂಡಾಯ ಸ್ಪರ್ಧೆ ಗೌಡರ ಕುಟುಂಬವಲ್ಲದೇ ಇಡೀ ಜೆಡಿಎಸ್ ಪಕ್ಷದ ನಾಯಕರ ನಿದ್ದೆಗೆಡಿಸಿತ್ತು. ಒಕ್ಕಲಿಗರ ಮತಗಳು ಇಬ್ಭಾಗವಾಗಿ ದೇವೇಗೌಡರ ವಿರೋಧಿ ಮತಗಳು ಮುದ್ದಹನುಮೇಗೌಡರ ಕಡೆ ವಾಲುತ್ತವೆ ಎಂ¨ ಭೀತಿಯಿಂದ…

ಮುಂದೆ ಓದಿ...

ದೇವೇಗೌಡರ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ – ಸಿ.ಬಿ.ಸುರೇಶ್‍ಬಾಬು

ಚಿಕ್ಕನಾಯಕನಹಳ್ಳಿ :       ಶಾಸಕರಾಗಿರುವ ಮಾಧುಸ್ವಾಮಿರವರು ಮೂರು ತಿಂಗಳಲ್ಲಿ ತಾಲ್ಲೂಕಿಗೆ ನೀರು ಹರಿಸುತ್ತೇನೆ ಎಂದು ಹೇಳಿದ್ದರು ಒಂದು ವರ್ಷವಾಯಿತು ತಾಲ್ಲೂಕಿನಲ್ಲಿ ಇದುವರೆವಿಗೂ ಯಾವುದೇ ಅಭಿವೃದ್ದಿ ಮಾಡಿಲ್ಲ, ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ತಂದಂತಹ ಯೋಜನೆಗಳಿಗೆ ಗುದ್ದಲಿ ಪೂಜೆ ನೆರವೇರಿಸುತ್ತಿರುವುದೇ ಅವರ ಅಭಿವೃದ್ದಿಯಾಗಿದೆ ಎಂದು ಮಾಜಿ ಶಾಸಕ ಸಿ.ಬಿ.ಸುರೇಶ್‍ಬಾಬು ಆರೋಪಿಸಿದರು.\      ಪಟ್ಟಣದ ತಮ್ಮ ಗೃಹ ಕಛೇರಿಯಲ್ಲಿ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಪೂರ್ವಭಾವಿ ಸಭೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಅಭಿವೃದ್ದಿಯ ಕೆಲವು ಕಾಮಗಾರಿಗಳು ಶಂಕುಸ್ಥಾಪನೆ ಮಾಡಿದ್ದರೂ ಪುನಃ ಶಂಕಸ್ಥಾಪನೆ ಮಾಡಿ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಶಾಸಕರು ಪ್ರಯತ್ನಿಸುತ್ತಿದ್ದಾರೆ, ನನ್ನ ಅಭಿವೃದ್ದಿ ಕಾರ್ಯಗಳನ್ನು ತಮ್ಮ ಅಭಿವೃದ್ದಿ ಕಾರ್ಯಗಳೆಂದು ಬೆಂಬಲಿಸಲು ಶಾಸಕರು ಹೊರಟಿದ್ದಾರೆ ನಾನು ಒಂದು ವರ್ಷ ಏನು ಮಾತನಾಡಬಾರದು ಎಂದು ಸುಮ್ಮನಿದ್ದೆ ಎಂದ ಅವರು, ತಾಲ್ಲೂಕಿನ ಅಭಿವೃದ್ದಿಗಾಗಿ ಮುಖ್ಯಮಂತ್ರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ನಮ್ಮ ಕ್ಷೇತ್ರದ…

ಮುಂದೆ ಓದಿ...

ಮೈಸೂರು: ಅಪಘಾತದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು!

ಮೈಸೂರು:       ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಬೈಕ್ ನಲ್ಲಿ ಮೂವರು ವಿದ್ಯಾರ್ಥಿಗಳು ತೆರಳುತ್ತಿದ್ದ ವೇಳೆ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.        ನಂಜನಗೂಡಿನ ಮಾಕನಪುರ ಮತ್ತು ಕಸವನಹಳ್ಳಿ ಸಮೀಪ ಈ ಘಟನೆ ನಡೆದಿದೆ.  ಹಗಿನವಾಳು ಗ್ರಾಮದಿಂದ ಪರೀಕ್ಷೆ ಬರೆಯಲು ಕಸುವಿನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.       ನಂಜನಗೂಡು ತಾಲೂಕಿನ ಹಗಿನವಾಳು ಗ್ರಾಮದ ನಿವಾಸಿ ಮಣಿಕಂಠ (16) ಮೃತ ವಿದ್ಯಾರ್ಥಿ. ಪರೀಕ್ಷೆ ಬರೆಯಲು ದ್ವಿಚಕ್ರ ವಾಹನದಲ್ಲಿ ಮೂವರು ಸಹಪಾಠಿಗಳು ತೆರಳುತ್ತಿದ್ದರು. ಈ ವೇಳೆ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿದೆ.       ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಮಣಿಕಂಠ ಸಾವಿಗೀಡಾದರೆ, ದರ್ಶನ್…

ಮುಂದೆ ಓದಿ...

ಹುಬ್ಬಳ್ಳಿ : ಕಟ್ಟಡ ಕುಸಿತ

ಹುಬ್ಬಳ್ಳಿ:       ನಿರ್ಮಾಣ ಹಂತದ ಕಟ್ಟಡದ ಗೋಡೆ ಮನೆಯ ಮೇಲೆ‌ ಬಿದ್ದು ಮನೆಯೊಂದು ಜಖಂಗೊಂಡ ಘಟನೆ ಹುಬ್ಬಳ್ಳಿ ನಗರದ ಕೇಶ್ವಾಪುರದಲ್ಲಿ‌ ನಡೆದಿದೆ.       ಮಹ್ಮದ್ ಅಲಿ ಮಕಾಂದಾರ ಎನ್ನುವವರಿಗೆ ಸೇರಿದ ಮನೆಯೇ ಜಖಂಗೊಂಡಿದೆ. ಪಕ್ಕದ ಮನೆಯ ನಿರ್ಮಾಣ ಹಂತದ ಗೋಡೆ ಮಹ್ಮದ್ ಅಲಿಯವರ ಮನೆ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರು ಇರದಿದಕ್ಕೆ ಭಾರಿ ಅನಾಹುತ ತಪ್ಪಿದೆ.       ಆದ್ರೆ ಮನೆಯಲ್ಲಿ ಮೇಲ್ಛಾವಣಿ ಸೇರಿದಂತೆ ಮನೆಯಲ್ಲಿನ ವಸ್ತುಗಳಿಗೆ ಹಾನಿಯಾಗಿವೆ. ಬಿಲ್ಡರ್ ರಾಜು ಹಿರೇಮಠ ಅವರ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ಹಾನಿಗೊಳದಗಾದ ಮಹ್ಮದ್ ಅಲಿ ಆರೋಪಿಸಿದ್ದಾರೆ. ಸ್ಥಳಕ್ಕೆ ಕೇಶ್ವಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.       ಧಾರವಾಡ ಕಟ್ಟಡ ದುರಂತ ಪ್ರಕರಣ ಮಾಸುವ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ನಿರ್ಮಾಣ‌ ಹಂತದ ಕಟ್ಟಡ ಕುಸಿದಿದೆ. Share

ಮುಂದೆ ಓದಿ...

ರಂಗ ಕಲೆ ನಶಿಸುವ ಹಾದಿಯತ್ತ ಮುಖ ಮಾಡಿದೆ – ಪ್ರೊ.ಕೆ.ಎನ್.ಗಂಗಾನಾಯಕ್

ತುಮಕೂರು:       ರಂಗ ಕಲೆ ನಶಿಸುವ ಹಾದಿಯತ್ತ ಮುಖ ಮಾಡಿದ್ದು, ಪ್ರತಿಯೊಬ್ಬರು ರಂಗ ಕಲೆಯನ್ನು ಉಳಿಸಿ, ಬೆಳಸಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ.ಕೆ.ಎನ್.ಗಂಗಾನಾಯಕ್ ಹೇಳಿದರು       ನಗರದ ಸಾಹಿತ್ಯ ಪರಿಷತ್ ಭವನದಲ್ಲಿ ನಾಟಕಮನೆ ತುಮಕೂರು ವತಿಯಿಂದ ಹೇಮಾದ್ರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಗುರುಶ್ರೀ ಕಾಲೇಜ್ ಆಫ್ ಕಾಮರ್ಸ್ ಅಂಡ್ ಸೋಷಿಯಲ್ ವರ್ಕ್, ರಾಜ್ಯ ಯುವ ಬರಹಗಾರರ ಒಕ್ಕೂಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆಯನ್ನು ನಗಾರಿ ಭಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವಜನತೆ ಸಿನಿಮಾ ಗೀಳಿನಲ್ಲಿ ಸಿಲುಕಿ ಒದ್ದಾಡುತ್ತಿದ್ದು, ಇದರಿಂದ ಹೊರಬಂದು ಪಠ್ಯೇತರ ಚಟುವಟಿಕೆಗಳಾದ ನಾಟಕ, ರಂಗಕಲೆ, ಮತ್ತಿತರೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು. ಕಲೆಗೆ ಮೂಲ ಗ್ರೀಕ್ ದೇಶ, ಸಾಹಿತ್ಯ,…

ಮುಂದೆ ಓದಿ...

ಬಿಜೆಪಿ ಅಭ್ಯರ್ಥಿ ಜಿಎಸ್‍ಬಿ ನಾಮಪತ್ರ ಸಲ್ಲಿಕೆ!

ತುಮಕೂರು:       ರಾಜ್ಯದಲ್ಲಿ ಏ. 18 ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಹಾಗೂ ಮಾಜಿ ಸಂಸದ ಜಿ.ಎಸ್. ಬಸವರಾಜು ಇಂದು ಮಧ್ಯಾಹ್ನ ತಮ್ಮ ಉಮೇದುವಾರಿಕೆಯನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಅವರಿಗೆ ಸಲ್ಲಿಸಿದರು.       ನಗರದ ಕಾಲ್ಟ್ಯಾಕ್ಸ್‍ನಲ್ಲಿರುವ ಶ್ರೀ ಸಿದ್ದಿವಿನಾಯಕ ದೇವಾಲಯಕ್ಕೆ ಮಾಜಿ ಸಚಿವರಾದ ವಿ. ಸೋಮಣ್ಣ, ಮಾಜಿ ಶಾಸಕ ಬಿ.ಸುರೇಶ್‍ಗೌಡ, ಸೊಗಡು ಶಿವಣ್ಣ, ಶಾಸಕರಾದ ಜೆ.ಸಿ. ಮಾಧುಸ್ವಾಮಿ, ಜಿ.ಬಿ. ಜ್ಯೋತಿಗಣೇಶ್, ಬಿ.ಸಿ. ನಾಗೇಶ್ ಸೇರಿದಂತೆ ಕಾರ್ಯಕರ್ತರೊಂದಿಗೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಸಿದ್ದಿವಿನಾಯಕನಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.       ನಂತರ ಸಿದ್ದಿವಿನಾಯಕ ದೇವಾಲಯದಲ್ಲಿ ವಿವಿಧ ಜಾನಪದ ಕಲಾ ತಂಡಗಳ ಆಕರ್ಷಕ ಪ್ರದರ್ಶನದೊಂದಿಗೆ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಪಕ್ಷದ ಕಾರ್ಯಕರ್ತರು…

ಮುಂದೆ ಓದಿ...

ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ ಬಿಜೆಪಿ ತೊರೆದು ಜೆಡಿಎಸ್ ಗೆ ಸೇರ್ಪಡೆ!

ತುರುವೇಕೆರೆ :       ತಾಲೂಕಿನ ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮನೆಗೆ ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜ್ ರವರೊಂದಿಗೆ ತೆರಳಿದ ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ ತಮ್ಮ ಮಾತೃ ಪಕ್ಷ ಜೆಡಿಎಸ್ ಗೆ ಸೇರ್ಪಡೆಗೊಂಡರು.        ತಮ್ಮ ರಾಜಕೀಯ ಗುರುಗಳಾಗಿರುವ ದೇವೇಗೌಡರೇ ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದರಿಂದ ಅವರ ಗೆಲುವಿಗೆ ಶ್ರಮಿಸುವುದು ತಮ್ಮ ಕರ್ತವ್ಯವಾಗಿದೆ. ಜಿಲ್ಲೆಯ ಸರ್ವತೋಮುಖ ಅಭಿವೃಧ್ಧಿಗೆ ದೇವೇಗೌಡರು ಶ್ರಮಿಸುವರು. ಅವರ ಗೆಲುವು ನೂರಕ್ಕೆ ನೂರರಷ್ಟು ಖಚಿತ ಎಂದು ಹೇಳಿದ ನಂಜೇಗೌಡರು ತಾಲೂಕಿನಲ್ಲಿ ದೇವೇಗೌಡರಿಗೆ ನಿರೀಕ್ಷೆಗೂ ಮೀರಿದ ಮತಗಳು ಲಭಿಸುವುವು. ಅವರು ಸ್ಪರ್ಧಿಸುತ್ತಿರುವುದು ಜೆಡಿಎಸ್ ಕಾರ್ಯಕರ್ತರಿಗೆ ರೋಮಾಂಚನವನ್ನು ಉಂಟು ಮಾಡಿದೆ. ಮುಂಬರುವ ದಿನಗಳಲ್ಲಿ ಬೆಮಲ್ ಕಾಂತರಾಜ್ ಹಾಗೂ ಇನ್ನಿತರ ಮುಖಂಡರ ನೇತೃತ್ವದಲ್ಲಿ ಜೆಡಿಎಸ್ ನ್ನು ಭದ್ರಗೊಳಿಸಲಾಗುವುದು ಎಂದು ಹೆಚ್.ಬಿ.ನಂಜೇಗೌಡ ಹೇಳಿದರು.    …

ಮುಂದೆ ಓದಿ...

ನಾನು ತುಮಕೂರಿಗೆ ಮಾತ್ರ ಸೀಮಿತವಲ್ಲ – ಹೆಚ್.ಡಿ. ದೇವೇಗೌಡ

ತುಮಕೂರು:       ಕಾಂಗ್ರೆಸ್ ಪಕ್ಷದಲ್ಲಿ ಹಾಲಿ ಸಂಸದರಿಗೆಲ್ಲರಿಗೂ ಸೀಟು ನೀಡಿ ಮುದ್ದಹನುಮೇಗೌಡರೊಬ್ಬರಿಗೆ ಟಿಕೆಟ್ ಕೈ ತಪ್ಪಿರುವುದು ನನಗೂ ನೋವು ತಂದಿದೆ. ಆದರೆ ದೋಸ್ತಿ ಪಕ್ಷಗಳ ಕ್ಷೇತ್ರ ಹಂಚಿಕೆಯಲ್ಲಿ ತುಮಕೂರು ಜೆಡಿಎಸ್ ಪಕ್ಷಕ್ಕೆ ದೊರೆತಿರುವುದರಿಂದ ಉಭಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರ ಒತ್ತಾಯದ ಮೇರೆಗೆ ಈ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದರು.       ನಗರದಲ್ಲಿ ನಿನ್ನೆ ಸಂಜೆ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕೇವಲ ತುಮಕೂರು ಕ್ಷೇತ್ರಕ್ಕೆ ಮಾತ್ರ ಸೀಮಿತವಲ್ಲ. ರಾಜ್ಯದ 28 ಕ್ಷೇತ್ರಗಳಿಗೂ ಹೋಗಿ ಪ್ರಚಾರ ಮಾಡಬೇಕಾಗಿದೆ. 28 ಕ್ಷೇತ್ರಗಳಲ್ಲೂ ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.       ರಾಜ್ಯದ 28 ಕ್ಷೇತ್ರಗಳಲ್ಲೂ ಮೈತ್ರಿಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ಅವರು ಹೇಳಿದರು. ನಾನು 29…

ಮುಂದೆ ಓದಿ...

ಸ್ವಕ್ಷೇತ್ರದಲ್ಲೇ ಡಿಸಿಎಂ ಪರಮೇಶ್ವರ್ ಒಬ್ಬಂಟಿ!

ತುಮಕೂರು :       ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ದೇವೇಗೌಡರಿಗೆ ನೀಡಿದ ಹಿನ್ನೆಯಲ್ಲಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ.       ಹೌದು, ಇತ್ತೀಚೆಗೆ ಪರಮೇಶ್ವರ್ ಬಲಗೈ ಬಂಟ ಬಲರಾಮಯ್ಯ ಮನೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರು ಪಕ್ಷದ ವ್ಯಕ್ತಿಗೆ ಟಿಕೆಟ್ ನೀಡಬೇಕೆಂದು ರೊಚ್ಚಿಗೆದ್ದಿದ್ದರು, ಹಾಗೂ ಮುದ್ದಹನುಮೇಗೌಡರಿಗೆ ಯಾವುದೇ ಕಾರಣಕ್ಕೂ ವಾಪಾಸ್ ತೆಗೆಯಬಾರದೆಂಬ ಬೇಡಿಕೆಯನ್ನೂ ಸಹ ಕಾರ್ಯಕರ್ತರು ಇಟ್ಟಿದ್ದರು. ಇದಾದ ಬಳಿಕ ಮುದ್ದಹನುಮೇಗೌಡರಿಗೆ ಬಿಫಾರಂ ನೀಡದ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸಾವಿರಾರು ಬೆಂಬಲಿಗರೊಂದಿಗೆ ಆಗಮಿಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು.       ಮೈತ್ರಿ ಅಭ್ಯರ್ಥಿಯಾದ ದೇವೇಗೌಡರ ಉಮೇದುವಾರಿಕೆ ಸಲ್ಲಿಸಲು ಕಾಂಗ್ರೆಸ್ ಕಾರ್ಯಕರ್ತರ ಕೊರತೆ ಎದ್ದು ಕಾಣುತ್ತಿತ್ತು. ಅದೇ ಮುದ್ದಹನುಮೇಗೌಡರ ಮೆರವಣಿಗೆಯಲ್ಲಿ ಕೊರಟಗೆರೆ ಕ್ಷೇತ್ರದ ಸಾವಿರಾರು ಮುಖಂಡರು ಆಗಮಿಸುವ ಮೂಲಕ ಪರಮೇಶ್ವರ್ ರವರಿಗೆ ನಾವು ಪಕ್ಷ ಬಿಟ್ಟು ಬೇರೆಯವರಿಗೆ ಮತ ನೀಡುವುದಿಲ್ಲಾ ಎಂಬ ಸಂದೇಶ ನೀಡಿದಂತಾಗಿದೆ.…

ಮುಂದೆ ಓದಿ...

ದೇವೆಗೌಡರ ವಿರುದ್ಧ ಗೊಲ್ಲರ ಮುನಿಸು-ಕುರುಬರ ಕನಸು!

ತುಮಕೂರು:      ತುಮಕೂರು ಲೋಕಸಭಾ ಕ್ಷೇತ್ರ ರಾಷ್ಟ್ರ ರಾಜಕಾರಣದಲ್ಲಿ ಗಮನಸೆಳೆಯುತ್ತಿದೆ. ಕಾರಣ ಜೆಡಿಎಸ್ ನ ವರಿಷ್ಠ ಹೆಚ್.ಡಿ.ದೇವೆಗೌಡರು ತುಮಕೂರಿನಿಂದ ಆಯ್ಕೆ ಬಯಸಿ ಸ್ಪರ್ಧೆ ಗಿಳಿದಿರುವುದು ಒಕ್ಕಲಿಗರ ಪರಮೋಚ್ಛ ನಾಯಕನೆಂದು ಬಿಂಬಿತವಾಗಿರುವ ದೇವೆಗೌಡರು ತನ್ನ ಕುಟುಂಬ ರಾಜಕಾರಣದಿಂದಲೇ ಹೆಸರುವಾಸಿಯಾದವರು.       ತನ್ನ ಮೊಮ್ಮಕ್ಕಳಿಗಾಗಿ ಕ್ಷೇತ್ರ ಬಿಟ್ಟು ತುಮಕೂರಿನಲ್ಲಿ ಸ್ಪರ್ಧೆಗಿಳಿದಿರುವ ದೊಡ್ಡ ಗೌಡರು ಸ್ಥಳೀಯ ಜೆಡಿಎಸ್ ನಾಯಕರ ಹಾಗೂ ಮುಖಂಡರ ಆಂತರಿಕ ಕ್ರೋದಾಗ್ನಿಗೆ ತುತ್ತಾಗಿಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಾರಣ ಗೌಡರು ಇಲ್ಲಿ ಆಯ್ಕೆಯಾಗಿಬಿಟ್ಟರೆ ಹಾಸನದ ರಾಜಕಾರಣದ ರೀತಿಯಲ್ಲಿ ಹಿಡಿತ ಸಾಧಿಸುತ್ತಾರೆ, ಸ್ಥಳೀಯ ನಾಯಕರಿಗೆ ಕವಡೆಕಾಸಿನ ಕಿಮ್ಮತ್ತಿರುವುದಿಲ್ಲ ಎನ್ನುವುದು ಕೆಲವರ ಅಭಿಪ್ರಾಯ ದೇವೆಗೌಡರ ಸ್ಪರ್ಧೆಯಿಂದ ಬೇಸತ್ತಿರುವ ಕಾಂಗ್ರೆಸ್ ಮುಖಂಡರು ತಮ್ಮ ಪಕ್ಷದ ಉಳಿವಿಗಾಗಿ ಹಾಗೂ ತಮ್ಮ ಮುಂದಿನ ರಾಜಕೀಯ ಅಸ್ತಿತ್ವಕ್ಕಾಗಿ ಚಿಂತಸುವ ಅನಿವಾರ್ಯತೆ ಎದುರಾಗಿದೆ.       ರಾಜ್ಯ ಕಾಂಗ್ರೆಸ್ ನಾಯಕರ ಮೈತ್ರಿ…

ಮುಂದೆ ಓದಿ...