ಹೇಮಾವತಿ ನಾಲಾ ಕಚೇರಿಗೆ ಬೀಗ ಜಡಿದು ದಿಢೀರ್ ಪ್ರತಿಭಟನೆ!!

ತುಮಕೂರು :       ಕುಣಿಗಲ್ ತಾಲ್ಲೂಕಿನಲ್ಲಿ ಹೇಮಾವತಿ ಚಾನಲ್ ಮಾಡುವ ನಿಟ್ಟಿನಲ್ಲಿ ಏಕಾಏಕಿ ರೈತರ ಜಮೀನಿಗೆ ಪ್ರವೇಶ ಮಾಡಿ ಯಾವುದೇ ನೋಟೀಸ್ ನೀಡದೆ , ಪರಿಹಾರ ನೀಡದೇ ಮನಸೋ ಇಚ್ಚೆ ರೈತರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಹೇಮಾವತಿ ಇಲಾಖಾ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದದ ಪಟೇಲ್ ಆರೋಪಿಸಿದರು.       ನಗರದ ಕುಣಿಗಲ್ ರಸ್ತೆಯಲ್ಲಿರುವ ಹೇಮಾವತಿ ಕಚೇರಿಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳ ಬೇಜವಬ್ಧಾರಿ ಹೇಳಿಕೆಗಳಿಗೆ ಆಕ್ರೋಶಗೊಂಡ ರೈತರು ಕಚೇರಿಗೆ ಬೀಗ ಜಡಿದು ದಿಢೀರ್ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಕುಣಿಗಲ್ ಮೂಲಕ ಹುಲಿಯೂರುದುರ್ಗದ ವರೆಗೆ ಕುಡಿಯುವ ನೀರಿನ ಯೋಜನೆಗಾಗಿ ಮಾಡುತ್ತಿರುವ ಚಾನಲ್‍ಗಾಗಿ ರೈತರ ಜಮೀನುಗಳನ್ನು ವಶಪಡಿಸಿಕೊಂಡಿದ್ದು, ಅದಕ್ಕೆ ಪರಿಹಾವೂ ನೀಡಿಲ್ಲ. ಕೇಳಲು ಕಚೇರಿಗೆ ಬಂದರೆ ಸರಿಯಾದ ಉತ್ತರವೂ ಸಿಗುತ್ತಿಲ್ಲ ಎಂದು ಆರೋಪಿಸಿದರು.  …

ಮುಂದೆ ಓದಿ...

ಕಾಲೇಜು ಆವರಣದಲ್ಲಿ ಉರುಳಿದ ಭಾರೀ ಮರ : ತಪ್ಪಿದ ಅನಾಹುತ!!

ತುಮಕೂರು:       ನಗರ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಆವರಣದಲ್ಲಿದ್ದ ಬೃಹತ್ ಗಾತ್ರದ ಬೇವಿನ ಮರವೊಂದು ಉರುಳಿ ಬಿದ್ದು, ಸಿಬ್ಬಂದಿಯೊಬ್ಬರು ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.       ಗುರುವಾರ ಬೆಳಿಗ್ಗೆ 11.43ರ ಸಮಯದಲ್ಲಿ ಬೇವಿನ ಮರವು ಉರುಳಿ ಬಿದ್ದಿದ್ದರಿಂದ ಕಾಲೇಜಿನ ಸಿಬ್ಬಂದಿ ಬಬಿತಾ ಎಂಬುವರ ಭುಜಕ್ಕೆ ಗಾಯವಾಗಿದೆ, ಮರ ಅಪ್ಪಿತಪ್ಪಿ ಕಾಲೇಜಿನ ಗ್ರಂಥಾಲಯದ ಮೇಲಾಗಲಿ ಅಥವಾ ಸಿಬ್ಬಂದಿ ಕೊಠಡಿ ಮೇಲಾಗಲಿ ಉರುಳಿ ಬಿದ್ದಿದ್ದರೆ ಭಾರೀ ಅನಾಹುತ ನಡೆಯುವ ಸಾಧ್ಯತೆ ಇತ್ತು. ಗ್ರಂಥಾಲಯದಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು, ಸಿಬ್ಬಂದಿ ಕೊಠಡಿಯಲ್ಲಿ ಉಪನ್ಯಾಸಕರು ಇದ್ದರು, ಮರದ ಬಳಿ ಕುಳಿತು ಓದುತ್ತಿದ್ದ ವಿದ್ಯಾರ್ಥಿಗಳು ಇಂದು ಆ ಕಡೆ ಹೋಗದೇ ಇದ್ದರಿಂದ ಅನಾಹುತ ತಪ್ಪಿದಂತಾಗಿದೆ.         ಮರ ಉರುಳಿದ್ದರಿಂದ ಕಾಲೇಜಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಎಬಿಎಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.…

ಮುಂದೆ ಓದಿ...

ಅತ್ಯಾಚಾರ ಅಪರಾಧಿಗೆ 7 ವರ್ಷ ಕಠಿಣ ಶಿಕ್ಷೆ!!!

ತುಮಕೂರು :      ಕುರಿ ಕಾಯಲು ಹೋಗಿದ್ದ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿದ್ದ ಅಪರಾಧಿಗೆ ಇಲ್ಲಿನ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 7 ವರ್ಷಗಳ ಕಠಿಣ ಶಿಕ್ಷೆ ಹಾಗೂ 5 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.       18.4.2005 ರಂದು ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ವ್ಯಾಪ್ತಿಯ ಹಂಚಿಪುರ ಗ್ರಾಮದ ಬಳಿ ಬಾಲಕಿ ಕುರಿ ಕಾಯುತ್ತಿದ್ದಾಗ ಗೋವಿಂದ ಎಂಬಾತ ಬಲತ್ಕಾರವಾಗಿ ಅತ್ಯಾಚಾರ ವೆಸಗಿದ್ದ. ಈ ಸಂಬಂಧ ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ಅಂದಿನ ಸಿಪಿಐ ಎ.ಆರ್.ಬಲರಾಮೇಗೌಡ ದೂರು ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.       ಪ್ರಕರಣದ ವಿಚಾರಣೆಯು ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಗೋವಿಂದನಿಗೆ ಮೇಲ್ಕಂಡಂತೆ ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ದೇಶಪಾಂಡೆ ಅವರು ತೀರ್ಪು ಪ್ರಕಟಿಸಿದ್ದಾರೆ. ನೊಂದ ಬಾಲಕಿಗೆ ಕಾನೂನು ರೀತಿ…

ಮುಂದೆ ಓದಿ...

ತುರುವೇಕೆರೆಗೆ ಆಗಮಿಸಿದ ಸಿಎಂ ಯಡಿಯೂರಪ್ಪಗೆ ಭರ್ಜರಿ ಸ್ವಾಗತ!!

ತುರುವೇಕೆರೆ :       ತಾಲೂಕಿನ ತಹಶೀಲ್ದಾರ್ ಕಚೇರಿಯ ವೃತ್ತದ ಬಳಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನರವರನ್ನು, ಶಾಸಕ ಮಸಾಲೆಜಯರಾಮ್ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಹೂಮಾಲೆ ಹಾಕಿ ಸನ್ಮಾನಿಸಿದರು.       ತಿಪಟೂರಿನ ಹೊನ್ನವಳ್ಳಿ ಗ್ರಾಮದ ಉಡಿಸಲಮ್ಮ ದೇವಾಲಯದ ಪೂಜೆ ಮುಗಿಸಿ ಕುಣಿಗಲ್ ತಾಲೂಕಿನ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳುತ್ತಿದ್ದ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ನೋಡಲು ಶಾಸಕ ಮಸಾಲೆಜಯರಾಮ್ ಆದಿಯಾಗಿ ನೂರಾರು ಕಾರ್ಯಕರ್ತರು ಪಟ್ಟಣದ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ 11ಗಂಟೆಯಿಂದಲೇ ಜಮಾಯಿಸಿದ್ದರು, ನಮ್ಮ ನೆಚ್ಚಿನ ನಾಯಕನ ಬರುವಿಕೆಯನ್ನರಿತ ಬಿ.ಎಸ್.ವೈ ಅಭಿಮಾನಿ ಪಡೆ ಮಧ್ಯಾಹ್ನದ ವೇಳೆಗೆ ನೂರಾರು ಸಂಖ್ಯೆಯಲ್ಲಿ ತಾಲೂಕಿನ ತಹಶೀಲ್ದಾರ್ ಕಚೇರಿ ಆವರಣಕ್ಕೆ ಜಮಾಯಿಸಿದರು.       ಒಂದು ಗಂಟೆ ಮುಂಚಿತವಾಗಿಯೇ ಬ್ಯಾಂಡ್ ಸೆಟ್ ವಾದ್ಯದ ಮೂಲಕ ಆಗಮನದ ನಿರೀಕ್ಷೆಗೆ ಮೆರುಗು ತಂದ ಬಿಜೆಪಿ ಕಾರ್ಯಕರ್ತರು ಪಠಾಕಿ ಸಿಡಿಸಿ ಬಿಜೆಪಿ…

ಮುಂದೆ ಓದಿ...

ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವ ಉಪನ್ಯಾಸಕರ ಅವಶ್ಯಕತೆಯಿದೆ-ಸಚಿವ

ತುಮಕೂರು:       ಶಾಲಾ ಶಿಕ್ಷಣದಿಂದ ಬಂದ ವಿದ್ಯಾರ್ಥಿಗಳಿಗೆ ಉತ್ತಮವಾದ ಮಾರ್ಗದರ್ಶನವನ್ನು ಮಾಡುವ ಮೂಲಕ ಉತ್ತಮ ಭವಿಷ್ಯ ಕಲ್ಪಿಸಿಕೊಡುವ ಅವಕಾಶ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಹಾಗೂ ಪ್ರಾಚಾರ್ಯರ ಮೇಲಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.       ನಗರದ ಕನ್ನಡ ಭವನದಲ್ಲಿ ನಡೆದ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿರುವ ಶಕ್ತಿ ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡುವ ಉಪನ್ಯಾಸಕರೇ ನಿಜವಾದ ಗುರುಗಳು, ವಿದ್ಯಾರ್ಥಿಗಳಲ್ಲಿ ಜಾನದ ಹಸಿವು ಹೆಚ್ಚಿಸುವ ಕೆಲಸ ಮಾಡುವ, ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವ ಉಪನ್ಯಾಸಕರ ಅವಶ್ಯಕತೆ ಇದೆ ಎಂದರು. ಬೋಧನೆ ಮಾಡುವವರೆಲ್ಲ ಗುರುಗಳಲ್ಲ, ವಿದ್ಯಾರ್ಥಿಗಳನ್ನು ತಿದ್ದಿತೀಡಿ, ಪ್ರೋತ್ಸಾಹಿಸುವವರನ್ನು ಮಾತ್ರ ಗುರುಗಳು ಎನ್ನುತ್ತಾರೆ, ವಿದ್ಯಾರ್ಥಿಗಳ ಭವಿಷ್ಯದ ಜವಾಬ್ದಾರಿ ಉಪನ್ಯಾಸಕರ ಮೇಲಿದೆ ಎಂದ ಅವರು, ಪದವಿ…

ಮುಂದೆ ಓದಿ...

ಪಾವಗಡ : ಶಾಲಾ ಸಂಪಿಗೆ ಬಿದ್ದು ವಿದ್ಯಾರ್ಥಿ ಸಾವು!!

ಪಾವಗಡ :         ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷದಿಂದ ವಿದ್ಯಾರ್ಥಿಯೊಬ್ಬ ಶಾಲಾವರಣದಲ್ಲಿನ ತೆರೆದ ಸಂಪಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.         ತಾಲೂಕಿನ ಲಿಂಗದ ಹಳ್ಳಿ ಗ್ರಾಮದ ಎಂಪ್ರೈಸ್ ಖಾಸಗಿ ಶಾಲೆಯ ಯುಕೆಜಿ ವಿದ್ಯಾರ್ಥಿಯಾದ ಉಲ್ಲಾಸ್ ಶುಕ್ರವಾರ ಬೆಳ್ಳಿಗ್ಗೆ ಶಾಲಾವರಣದಲ್ಲಿ ಇರುವ ಸುಮಾರು 10 ಅಡಿ ಹಾಳದ ಸಂಪಿಗೆ ಬಿದ್ದು ಸಾವನ್ನಪ್ಪಿರುತ್ತಾನೆ.         ಘಟನಾ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಗಂಗಯ್ಯ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ವಿದ್ಯಾರ್ಥಿಯ ತಪಾಸಣೆ ವರದಿ ಬಂದ ಕೂಡಲೇ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದರು.  

ಮುಂದೆ ಓದಿ...

ರೋಹಿಣಿ ಸಿಂಧೂರಿರನ್ನು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಯದರ್ಶಿಯಾಗಿ ಮುಂದುವರಿಸಲು ಆಗ್ರಹ!

ತುಮಕೂರು :       ದೇಶದ ಕೃಷಿ ಕ್ಷೇತ್ರ ಬಿಕ್ಕಟ್ಟಿಗೆ ಸಿಲುಕಿದ ನಂತರ ಕಟ್ಟಡ ನಿರ್ಮಾಣ ವಲಯಕ್ಕೆ ಪ್ರತಿ ನಿತ್ಯ ಅಸಂಖ್ಯಾತ ಅಸಂಘಟಿತ ಕಾರ್ಮಿಕರು ಬದುಕು ಕಟ್ಟಿಕೊಳ್ಳಲು ವಲಸೆ ಬರುತ್ತಿದ್ದಾರೆ. ಇತ್ತ ನಿರ್ಮಾಣ ವಲಯದಲ್ಲಿ ಸುಮಾರು 10 ಕೋಟಿಗೆ ಹೆಚ್ಚಿನ ಜನರು ದುಡಿಯುತ್ತಿದ್ದಾರೆ.       80ರ ದಶಕದಿಂದ ನಿರ್ಮಾಣ ವಲಯ ವಿಸ್ತರಣೆಯಾಗುತ್ತ ಬಂದ ಸಂದರ್ಭದಲ್ಲಿ ತೀವ್ರ ಸಂಕಷ್ಟಕ್ಕೆ ಮತ್ತು ಸಾವು ನೋವಿಗೆ ತುತ್ತಾದ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರ ಸಾಮಾಜಿಕ ಭದ್ರತೆಗೆ ದೇಶಾದ್ಯಂತ ಚಳವಳಿ ಬೆಳೆದು ಬಂದಿತ್ತು. ಕಾರ್ಮಿಕರ ಅಭಿವೃದ್ಧಿಗೆ ಕಲ್ಯಾಣ ಮಂಡಳಿಗಳು ಹಾಗೂ ಸೆಸ್ ಕಾಯ್ದೆ ಕೇಂದ್ರದಲ್ಲಿ 1996ರಲ್ಲಿ ರಾಜ್ಯದಲ್ಲಿ 2006ರಲ್ಲಿ ಜಾರಿಗೆ ಬಂದಿತು.      ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೌಲಭ್ಯಗಳು ಜಾರಿಗೆ ಪ್ರಾರಂಭದಲ್ಲಿದ್ದ ಅಧಿಕಾರಿಗಳು ಸೀಮಿತ ಅಧಿಕಾರದಿಂದ ಸೌಲಭ್ಯಗಳು ಕುಂಟುತ್ತಾ ಸಾಗಿ ಹಾಗೂ ಕಲ್ಯಾಣ ಮಂಡಳಿಗೆ ಪ್ರಭಾರ…

ಮುಂದೆ ಓದಿ...

ಕೊರಟಗೆರೆ : ಚಿರತೆ ಫೋಟೊ ತೆಗೆಯಲು ನೂಗುನುಗ್ಗಲು!!

       ಆಹಾರಕ್ಕಾಗಿ ಕಾಡಿನಿಂದ ನಾಡಿಗೆ ಬಂದು ರೈತರಿಗೆ ತೊಂದರೆ ಕೋಡುತ್ತೀದ್ದ ಚಿರತೆಗಳು ರೈತರ ಜಮೀನಿನ ಹತ್ತಿರ ಪ್ರತ್ಯೇಕ ಎರಡು ಕಡೆಯಲ್ಲಿ ಇಡಲಾಗಿದ್ದ ಅರಣ್ಯ ಇಲಾಖೆಯ ಬೋನಿಗೆ ಬಿದ್ದು ಚಿರಾಟ ನಡೆಸಿರುವ ಘಟನೆ ಮಂಗಳವಾರ ಮತ್ತು ಬುಧವಾರ ಎರಡು ದಿನ ನಡೆದಿದೆ.       ತಾಲೂಕಿನ ಕಸಬಾ ಹೋಬಳಿ ಹುಲೀಕುಂಟೆ ಗ್ರಾಪಂ ವ್ಯಾಪ್ತಿಯ ಗೌರಗಾನಹಳ್ಳಿ ಗ್ರಾಮದ ರೈತನ ತೋಟದಲ್ಲಿ ಇಡಲಾಗಿದ್ದ ಅರಣ್ಯ ಇಲಾಖೆಯ ಬೋನಿಗೆ ಸೋಮವಾರ ತಡರಾತ್ರಿ ಬಿದ್ದಿದೆ. ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿ ವರ್ಗ ಮಂಗಳವಾರ ಮುಂಜಾನೆ ಮತ್ತೊಂದು ಅರಣ್ಯಕ್ಕೆ ರವಾನಿಸಿದ್ದಾರೆ.       ಹುಲೀಕುಂಟೆ ಗ್ರಾಪಂ ವ್ಯಾಪ್ತಿಯ ಓಬಳದೇವರಹಳ್ಳಿ ತಾಂಡದ ಬೇಟ್ಟದ ಕೆಳಗೆ ಅರಣ್ಯ ಇಲಾಖೆ ಇಟ್ಟಿದ್ದ ಮತ್ತೊಂದು ಬೋನಿಗೆ ಮಂಗಳವಾರ ರಾತ್ರಿ ಮತ್ತೊಂದು ಚಿರತೆ ಬಿದ್ದಿದೆ. ಅದನ್ನು ಸಹ ಅರಣ್ಯ ಇಲಾಖೆ ಬುಧವಾರ ಮುಂಜಾನೆ ಚಿರತೆಯನ್ನು…

ಮುಂದೆ ಓದಿ...

2020ಕ್ಕೆ ಪ್ರವಾಸೋದ್ಯಮ ನೀತಿ ಜಾರಿ – ಸಿ.ಟಿ. ರವಿ

ತುಮಕೂರು:         ರಾಜ್ಯದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬರುವ ವರ್ಷ 2020ರಲ್ಲಿ ಪ್ರವಾಸೋದ್ಯಮ ನೀತಿಯನ್ನು ಜಾರಿಗೊಳಿಸಲಾಗುವುದೆಂದು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ತಿಳಿಸಿದರು.        ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದ ಪ್ರಮುಖ ಪ್ರವಾಸಿ ತಾಣಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ಯೋಜನೆಯನ್ನು ತಯಾರಿಸಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲು ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಅಲ್ಪಾವಧಿ ಹಾಗೂ ದೀರ್ಘಾವಧಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು. ಕೆಲವು ಪ್ರವಾಸಿ ಕ್ಷೇತ್ರಗಳನ್ನು ಖಾಸಗಿ ಸಹಭಾಗಿತ್ವದಲ್ಲಿ, ಕೆಲವು ಕ್ಷೇತ್ರಗಳನ್ನು ಸ್ವಯಂ ಸೇವಾ ಸಂಘಗಳ ಸಹಕಾರದಲ್ಲಿ ಹಾಗೂ ಕೆಲವು ಪ್ರವಾಸಿ ತಾಣಗಳನ್ನು ಸರ್ಕಾರಿ ಅನುದಾನ ಬಳಸಿ ಅಭಿವೃದ್ಧಿಪಡಿಸಲಾಗುವುದಲ್ಲದೆ ಜಿಲ್ಲೆಯಲ್ಲಿ ಗುರುತಿಸಿರುವ…

ಮುಂದೆ ಓದಿ...

ಓದಿನ ಕಡೆ ಗಮನಕೊಡು : ದೊಡ್ಡವನಾದ ಮೇಲೆ ಸ್ಟೈಲ್ ಮಾಡು – ವಿದ್ಯಾರ್ಥಿಗೆ ಶಿಕ್ಷಣ ಸಚಿವರ ಸಲಹೆ

ತುಮಕೂರು:       ಸರ್ಕಾರಿ ಹಿರಿಯ ಪ್ರಾಥಮಿಕ ಆರ್ಯಬಾಲಿಕಾ ಪಾಠಶಾಲೆಗೆ ದಿಢೀರ್ ಭೇಟಿ ನೀಡಿದ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಶಾಲೆಯಲ್ಲಿರುವ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.       ಗುಬ್ಬಿಯಲ್ಲಿ ನಿಗದಿಯಾಗಿದ್ದ ಕಾರ್ಯವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಚಿವರು, ಎಂ.ಜಿ.ರಸ್ತೆಯಲ್ಲಿರುವ ಆರ್ಯಬಾಲಿಕಾ ಪಾಠಶಾಲೆಗೆ ಭೇಟಿ ನೀಡಿ, ಮೊದಲಿಗೆ ಅಡುಗೆ ಮನೆಯನ್ನು ವೀಕ್ಷಿಸಿ, ಅಡುಗೆ ಸಿಬ್ಬಂದಿಯಿಂದ ಮಾಹಿತಿ ಪಡೆದ ನಂತರ ಶಾಲಾ ಕೊಠಡಿಗಳಿಗೆ ತೆರಳಿದ ತಕ್ಷಣ ಮಕ್ಕಳು ನಲಿ-ಕಲಿ ಎಂಬ ಹಾಡನ್ನು ಸಚಿವರ ಮುಂದೆ ಹಾಡಿದರು. ನಂತರ ಶಿಕ್ಷಕಿಯಿಂದ ಮಾಹಿತಿ ಪಡೆದರು.       ಮತ್ತೊಂದು ಕೊಠಡಿಗೆ ತೆರಳಿ ವಿದ್ಯಾರ್ಥಿಗೆ ಮಗ್ಗಿ ಹೇಳಲು ಹೇಳಿದರು, ನಂತರ ಕೆಲ ಮಗ್ಗಿಯನ್ನು ಮಧ್ಯೆ ಮಧ್ಯೆ ಕೇಳಿದ ಸಚಿವರು, ಮಧ್ಯಾಹ್ನದ ಊಟ ನೀಡುತ್ತಾರೆ, ಗುಣಮಟ್ಟದಿಂದ ಕೂಡಿರುತ್ತದೆಯೇ? ಶಿಕ್ಷಕರು ಚೆನ್ನಾಗಿ ಪಾಠ ಮಾಡುತ್ತಾರೆಯೇ ಎಂದೆಲ್ಲ ಕೇಳಿ ತಿಳಿದುಕೊಂಡ ಅವರು, ಸಹ…

ಮುಂದೆ ಓದಿ...