ಚಿಕ್ಕನಾಯಕನಹಳ್ಳಿ : ಮದನಿಂಗನ ಕಣಿವೆಯ ಪಕ್ಷಿನೋಟ

         ಪ್ರಕೃತಿಯ ಮಡಿಲಿನ ರಮಣೀಯ ಸ್ಥಳವೊಂದು, ಬಯಲು ಪ್ರದೇಶದ ಕುರುಚಲು ಕಾಡುಗಳ ಸಮೂಹವೊಂದು, ಪ್ರಕೃತಿ ಪ್ರಿಯರಿಗೆ, ಚಾರಣಿಗರಿಗೆ, ಮನದ ನವೋಲ್ಲಾಸಕ್ಕೆ ಹೇಳಿ ಮಾಡಿಸಿದಂತಿದೆ. ಜನಪ್ರತಿನಿಧಿಗಳು ಈ ಕ್ಷೇತ್ರದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿದರೂ ಸಾಕು ಇದು ಪ್ರವಾಸಿಗರ ಪ್ರೇಕ್ಷಣೀಯ ಸ್ಥಳವಾಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಹೌದು, ನಾನು ಈಗ ಹೇಳ ಹೊರಟಿರುವುದು ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ಪಟ್ಟಣದಿಂದ 6.ಕಿ.ಮೀ. ದೂರ ಪೂರ್ವ ದಿಕ್ಕಿಗೆ ಸಂಚರಿಸಿದರೆ ಸಾಕು, ಅಲ್ಲೇ ಅನಾವರಣಗೊಳ್ಳುವುದು ಮದಲಿಂಗನ ಗುಡ್ಡ, ಕಡೇ ಕಲ್ಲು ಗುಡ್ಡ, ಸಿಡ್ಲೇ ಗುಡ್ಡ, ಹಬ್ಬಿಗೆ ಗುಡ್ಡ, ದೇವದಾರೆ ಗುಡ್ಡ, ಹೀಗೆ ಗುಡ್ಡಗಳ ಸಮೂಹದೊಂದಿಗೆ ಹಲಸಿನ ದೊಣೆ, ಅಕ್ಕನಾರ ಹಳ್ಳ ಹೀಗೆ ಮುಂತಾದ ಅತ್ಯದ್ಬುತವಾದ ಪ್ರೇಕ್ಷಣೀಯ ಸ್ಥಳಗಳು, ಪ್ರಕೃತಿಯ ಸೊಬಗಿನ ಅನಾವರಣ, ಅರೆ ಮಲೆನಾಡು ಎಂದು ಸಾಕ್ಷಾತ್ಕರಿಸುವ ಹಸಿರ ಹೊದಿಕೆಗಳಿಂದ ಕಂಗೊಳಿಸುವ ಬೆಟ್ಟ ಗುಡ್ಡಗಳ ಸಾಲು,…

ಮುಂದೆ ಓದಿ...

  ರಾಜ್ಯದಲ್ಲಿರುವ ಎಲ್ಲಾ ಕೆರೆಗಳಿಗೆ ನೀರು ಹರಿಸಲು ಸಿಎಂ ಆದೇಶ – ಸಂಸದ ಜಿ.ಎಸ್‍.ಬಸವರಾಜು

ತುಮಕೂರು :       ರಾಜ್ಯದಲ್ಲಿರುವ ಎಲ್ಲಾ ಕೆರೆಗಳಿಗೆ ನದಿ ನೀರು ಅಲೋಕೇಷನ್ ಮಾಡಲು ಅಧ್ಯಯನ ವರದಿ ನೀಡಲು ಸಿಎಂ ಯಡಿಯೂರಪ್ಪನವರು ಆದೇಶ ನೀಡಿದ್ದಾರೆ. ಸಾಮಾಜಿಕ ನ್ಯಾಯದಡಿ ಊರಿಗೊಂದು ಕೆರೆ.. ಆ ಕೆರೆಗೆ ನದಿ ನೀರು ಎಂಬ ಹಲವಾರು ವರ್ಷಗಳ ಬೇಡಿಕೆಗೆ ಚಾಲನೆ ದೊರೆತಿದೆ ಎಂದು  ತಿಳಿಸಿದರು.      ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಎಲ್ಲಾ ವಿಧವಾದ ಜಲಸಂಗ್ರಹಾಗಾರಗಳನ್ನು ಸಂಪೂರ್ಣ ವರದಿಯೊಂದಿಗೆ ಜಲಗ್ರಾಮ ಕ್ಯಾಲೆಂಡರ್ ಸಿದ್ಧಪಡಿಸಲು ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ. ಜಿಲ್ಲೆಯಲ್ಲಿ ಹೇಮಾವತಿ, ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಮತ್ತು ತುಂಗಭದ್ರಾ ಯೋಜನೆಯಡಿ ಯಾವ ಕೆರೆಗಳಿಗೆ ನದಿ ನೀರು ಅಲೋಕೇಷನ್ ಆಗಿದೆ ಮತ್ತು ಯಾವ ಗ್ರಾಮದ ಕೆರೆಗಳಿಗೆ ಅಲೋಕೇಷನ್ ಮಾಡಲು ಎಷ್ಟು ನದಿ ನೀರು ಬೇಕು ಎಂಬ ಮಾಹಿತಿಯನ್ನು ಸಂಗ್ರಹಿಸಿ ಈ ಭಾಗದ ಕೆರೆಗಳಿಗೆ ನೀರು ಬರುವ ಸಾಧ್ಯತೆಯಿರುವ ಎತ್ತಿನಹೊಳೆ 2ನೆ ಹಂತ,…

ಮುಂದೆ ಓದಿ...

ಮಧುಗಿರಿ : ಗ್ರಾಮಸ್ಥರಿಂದ ಅನಾಥ ವೃದ್ಧೆಯ ರಕ್ಷಣೆ!!

ಮಧುಗಿರಿ :       ಮಕ್ಕಳ ಕಿರುಕುಳ ತಾಳಲಾರದೆ ವೃದ್ಧೆಯೊಬ್ಬಳು ಮನೆ ಬಿಟ್ಟು ಬಂದು ರಸ್ತೆಯಲ್ಲಿ ಕುಸಿದು ಬಿದ್ದಾಗ ತಕ್ಷಣ ಗ್ರಾಮಸ್ಥರು ರಕ್ಷಿಸಿದ ಮಾನವೀಯ ಘಟನೆ ನಡೆದಿದೆ.       ತಾಲೂಕಿನ ಐಡಿಹಳ್ಳಿ ಗ್ರಾಮದ ಚರ್ಚ್ ಮುಂಭಾಗ ಅನಾಥ ವೃದ್ಧೆಯೊಬ್ಬಳು ತಿರುಗಾಡುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಗ್ರಾಮ ಸಮ್ಮಿಲನ ಗ್ರಾಮಭಿವೃದ್ಧಿಯ ಕಾರ್ಯದರ್ಶಿ ರಾಮಂಜೀನಯ್ಯ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ, ತಕ್ಷಣ ಭೇಟಿ ಅವರು ವೃದ್ಧೆಗೆ ಉಪಹಾರ ನೀಡಿ ಗ್ರಾಮದ ಚರ್ಚ್‍ವೊಂದರಲ್ಲಿ ಇರುವಂತೆ ತಿಳಿಸಿ ಶ್ರೀ ಶಾರದಾಂಬ ವೃದ್ಧಾಶ್ರಮಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.       ವಿಷಯ ತಿಳಿದ ತಕ್ಷಣ ಶಾರದಾಂಬ ವೃದ್ಧಾಶ್ರಮದ ಅಧ್ಯಕ್ಷೆ ಯಶೋಧ ಭೇಟಿ ನೀಡಿ ವೃದ್ಧೆಯನ್ನು ಉಪಹಾರ ನೀಡಿ ಸಂತೈಯಿಸಿ ವಿಚಾರಿಸಿದಾಗ ಸುಂಕದಕಟ್ಟೆ ಪಕ್ಕದ ಹೇರೋಹಳ್ಳಿ, ಬ್ಯಾಡರಹಳ್ಳಿ ಎಂದು ಕಣ್ಣಿರು ಹಾಕಿದ ವೃದ್ದೆಯು ಸೊಸೆ ಮತ್ತು ಮಗ ಹೊಡೆದು ಮನೆಯಿಂದ ಆಚೆ…

ಮುಂದೆ ಓದಿ...

ತುರುವೇಕೆರೆ : ವಿಜೃಂಭಣೆಯಿಂದ ವಿಜಯದಶಮಿಯ ಶಮೀಪೂಜೆ ಆಚರಣೆ!!

ತುರುವೇಕೆರೆ:       ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿದೆಡೆ ಆಯುಧಪೂಜಾ ಹಾಗೂ ವಿಜಯ ದಶಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಕಸಬಾದ ದುಂಡಾ ಗ್ರಾಮದಲ್ಲಿ ನವರಾತ್ರಿ ಅಂಗವಾಗಿ ವಿಜಯದಶಮಿಯ ಶಮೀಪೂಜಾ ಮಹೋತ್ಸವ ಮಂಗಳವಾರ ಬಹಳ ವಿಜೃಂಭಣೆಯಿಂದ ನೆರವೇರಿತು.       ಶ್ರೀ ಆಂಜನೇಯ ಸ್ವಾಮಿ, ಗ್ರಾಮದೇವತೆ ಕೆಂಪಮ್ಮ ಹಾಗು ಶ್ರೀ ಬೊಮ್ಮಲಿಂಗೆಶ್ವರ ಸ್ವಾಮಿ ದೇವರುಗಳನ್ನು ಸೋಮನ ಕುಣಿತ, ನಗಾರಿವಾದ್ಯದೊಂದಿಗೆ ಮೆರವಣಿಗೆ ಹೊರಟು ಊರಾಚೆ ಇರುವ ಬನ್ನಿ ಮಂಟಪಕ್ಕೆ ತರಲಾಯಿತು. ಬನ್ನಿ ಮಂಟಪದಲ್ಲಿ ಎಲ್ಲಾ ದೇವರುಗಳನ್ನು ಕುಳ್ಳಿರಿಸಿ ವಿಶೇಷ ಪೂಜೆ ನಡೆಸಲಾಯಿತು..        ಬನ್ನಿ ಮಂಟಪದ ಎದುರಿಗೆ ನೆಟ್ಟಿದ್ದ ಬಾಳೆಕಂಬಕ್ಕೆ ಬನ್ನಿಪತ್ರೆ ಸಿಕ್ಕಿಸಿ ಶಮೀಪೂಜೆ ನಡೆಸಿದ ತರುವಾಯ ಊರಿನ ಪಟೇಲ ವಂಶಸ್ಥರು ಸಾಂಪ್ರದಾಯದಂತೆ ಕತ್ತಿಯಿಂದ ಬಾಳೆಕಂಬವನ್ನು ಕತ್ತರಿಸಿದರು. ಇದು ಗ್ರಾಮಕ್ಕೆ ಸಹಬಾಳ್ವೆಯ ಸಂಕೇತವಾಗಿದ್ದು ಬಾಳೆಕಂಬ ಕತ್ತರಿಸಿದ ಸಂಧರ್ಬದಲ್ಲಿ ಬಾಳೆ ಕಂಬಕ್ಕೆ ಸಿಕ್ಕಿಸಿ ಪೂಜಿಸಿದ್ದ…

ಮುಂದೆ ಓದಿ...

ತುಮಕೂರು ದಸರಾ ಆಚರಣೆ ಮಹೋತ್ಸವಕ್ಕೆ ಚಾಲನೆ!!

ತುಮಕೂರು:       ದೃಢ ಮನಸ್ಸು ಇದ್ದವರು ಮಾತ್ರ ಬದುಕಿನಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.       ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ದಸರಾ ಸಮಿತಿ ವತಿಯಿಂದ ನಡೆದ ತುಮಕೂರು ದಸರಾ ಆಚರಣೆ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವರ್ಷದ 365 ದಿನದಲ್ಲಿ 9 ದಿನ ಬಿಡುವು ಮಾಡಿಕೊಂಡು ನವರಾತ್ರಿ ಹಬ್ಬದ ಆಚರಣೆಯಲ್ಲಿ ಎಲ್ಲರೂ ತೊಡಗಬೇಕು. ಈ 9 ದಿವಸ ಎಲ್ಲವನ್ನು ಮರೆತು ಇಡೀ ನಾಡು ಹಬ್ಬ ಆಚರಿಸಿ ಹರ್ಷವಾಗಲಿ ಬದುಕಲಿ ಎಂಬುದು ನವರಾತ್ರಿ ಆಚರಣೆಯ ಸಂಕೇತ ಮತ್ತು ಶ್ರೇಷ್ಠತೆ ಎಂದು ಅವರು ಹೇಳಿದರು.       ದೃಢ ಮನಸ್ಸು ಹೊಂದಲು ಯೋಗ, ಧ್ಯಾನಗಳಿಂದ ಮಾತ್ರ ಸಾಧ್ಯ. ಹಾಗಾಗಿ…

ಮುಂದೆ ಓದಿ...