ಧಾರಕಾರ ಮಳೆ : ಕೋಳಿ ಫಾರಂನ 5 ಸಾವಿರ ಕೋಳಿಗಳು ಸಾವು!!

ಪಾವಗಡ :       ಸೋಮವಾರ ಬೆಳಗಿನ ಜಾವ ಮೂರು ಗಂಟೆಯಿಂದ ಸುರಿದ ಧಾರಕಾರ ಮಳೆಗೆ ಕೋಳಿ ಪಾರಂಗೆ ಮಳೆ ನೀರು ನುಗ್ಗಿ 5000 ಸಾವಿರ ಕೋಳಿಗಳು ಸಾವನ್ನಪ್ಪಿದ ಘಟನೆ ಪಟ್ಟಣದ ಸಮೀಪದಲ್ಲಿ ನಡೆದಿದೆ.        ಪಾವಗಡ ಪಟ್ಟಣದ ಚಿನ್ನನಾಯಕನ ಹಳ್ಳಿ ರಸ್ತೆಯಲ್ಲಿರುವ ಗುರುರಾಜ್ ಕೋಳಿ ಪಾರಂಗೆ ಸೋಮವಾರ ಮುಂಜಾನೆ ವರುಣನ ಆರ್ಭಟದಿಂದ ಮಳೆ ನೀರು ನುಗ್ಗಿ 5000 ಸಾವಿರ ಕೋಳಿಗಳು ಪಾರಂನಲ್ಲಿ ಸಾವನ್ನಪ್ಪಿದ ಘಟನೆ ನಡೆದಿದ್ದು , ಕಳೆದ ಒಂದು ವಾರದಿಂದ ಮಳೆರಾಯನ ಆರ್ಭಟಕ್ಕೆ ಮಳೆ ನೀರು ನುಗ್ಗಿ ಕೋಳಿಗಳ ಸಾವಿನ ಎರಡನೇ ಘಟನೆಯಾಗಿರುತ್ತದೆ.        ಕಳೆದಾ ಒಂದು ತಿಂಗಳಿನಿಂದ ತಾಲೂಕಿನಾದ್ಯಂತ ಉತ್ತಮ ಮಳೆಗಾಗುತ್ತಿದ್ದು ,ಮಳೆಯ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಕೋಳಿಪಾರಂಗೆ ನೀರು ನುಗುತ್ತಿದ್ದು ಮಣ್ಣು ಮಿಶ್ರಿತ ನೀರು ಪಾರಂಗೆ ಬಂದು ಸೇರಿ ಹಾಗೂ ಕೋಳಿಗಳನ್ನು ಬೇರೆಡೆ ಮಳೆಯಲ್ಲಿ…

ಮುಂದೆ ಓದಿ...

ತುಮಕೂರು : ವಿದ್ಯುತ್ ಪ್ರವಹಿಸಿ ಬ್ಯಾನರ್ ತೆರವುಗೊಳಿಸಲು ಹೋದ ಪೌರಕಾರ್ಮಿಕ ಸಾವು!!

ತುಮಕೂರು :       ಹೆಲ್ತ್ ಇನ್ಸ್‍ಪೆಕ್ಟರ್ ಮತ್ತು ಪರಿಸರ ಇಂಜಿನಿಯರ್ ಸೂಚನೆ ಮೇರೆಗೆ ಬ್ಯಾನರ್ ಮತ್ತು ಬಂಟಿಂಗ್ ತೆರವುಗೊಳಿಸಲು ಹೋದ ಪೌರ ಕಾರ್ಮಿಕ ನರಸಿಂಹಯ್ಯ (34) ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ ತುಮಕೂರು ನಗರದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.       ಹದಿನೈದನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಟೌನ್‍ಹಾಲ್ ಸರ್ಕಲ್‍ನಲ್ಲಿ ಅಕ್ಟೋಬರ್ 10ರಂದು ಬೆಳಗ್ಗೆ 7 ಗಂಟೆ ಸಮಯದಲ್ಲಿ ಅಧಿಕಾರಿಗಳ ಸೂಚನೆ ಮೇರೆಗೆ ಕಬ್ಬಿಣದ ಸಲಾಕೆ ತೆಗೆದುಕೊಂಡು ಬ್ಯಾನರ್ ತೆರವುಗೊಳಿಸಲು ಹೋದಾಗ ಈ ದುರಂತ ನಡೆದಿದೆ. ಮೃತನ ಸಾವಿಗೆ ಸುರಕ್ಷತಾ ಸಲಕರಣೆಗಳನ್ನು ನೀಡದೇ ಇರುವುದೇ ಕಾರಣ ಎಂದು ಪೌರಕಾರ್ಮಿಕರ ಸಂಘ ಸಿಐಟಿಯು ಆರೋಪಿಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.       ಶಾಂತಿನಗರದ ವಾಸಿ ನರಸಿಂಹಯ್ಯ ಮೃತಪಟ್ಟಿರುವ ದುರ್ದೈವಿ. ಪೌರಕಾರ್ಮಿಕ ನರಸಿಂಹಯ್ಯ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆಯೇ ಎಲ್ಲಾ ಪೌರಕಾರ್ಮಿಕರು ಕೆಲಸ…

ಮುಂದೆ ಓದಿ...

ತುಮಕೂರು : ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಗೆ ಐಟಿ ಶಾಕ್!!

ತುಮಕೂರು:        ಶಾಸಕ ಡಾ.ಜಿ.ಪರಮೇಶ್ವರ್ ಒಡೆತನದ ಎಸ್‍ಎಸ್‍ಐಟಿ ಎಂಜಿನಿಯರಿಂಗ್ ಕಾಲೇಜು ಮೇಲೆ ಐಟಿ ಅಧಿಕಾರಿಗಳು ಗುರುವಾರ ಮುಂಜಾನೆ ದಾಳಿ ನಡೆಸಿ, ದಾಖಲೆ ಪರಿಶೀಲನೆ ನಡೆಸಿದ್ದಾರೆ. ಒಟ್ಟು ಹನ್ನೆರೆಡು ಅಧಿಕಾರಿಗಳಿದ್ದ ತಂಡ ದಾಳಿ ನಡೆಸಿದೆ.       ಕಾಂಗ್ರೆಸ್‍ನ ಪ್ರಭಾವಿ ಮುಖಂಡರಾಗಿರುವ ಡಾ.ಜಿ.ಪರಮೇಶ್ವರ್ ಒಡೆತನದ ತುಮಕೂರಿನ ಕುಣಿಗಲ್ ರಸ್ತೆಯ ಮರಳೂರು ದಿಣ್ಣೆಯಲ್ಲಿರುವ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು, ನೆಲಮಂಗಲದಲ್ಲಿರುವ ವೈದ್ಯಕೀ ಯ ಕಾಲೇಜು, ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸ, ಕಚೇರಿ ಹಾಗೂ ಸಹೋದರ ಒಡೆತನದ ಸಂಸ್ಥೆಗಳ ಮೇಲೂ ದಾಳಿ ನಡೆಸಲಾಗಿದೆ.        ದಾಳಿ ಸಂದರ್ಭದಲ್ಲಿ ಕಾಲೇಜಿನಲ್ಲಿದ್ದ ಎಲ್ಲ ಸಿಬ್ಬಂದಿಯನ್ನು ಐಟಿ ಅಧಿಕಾರಿಗಳು ಹೊರಗೆ ಕಳುಹಿಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಈ ಶಿಕ್ಷಣ ಸಂಸ್ಥೆಯಲ್ಲಿ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಶುಲ್ಕವನ್ನು ಪಡೆಯಲಾಗುತ್ತಿತ್ತು ಎಂಬ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ ಎಂದು ತಿಳಿದುಬಂದಿದೆ.  …

ಮುಂದೆ ಓದಿ...