ಅ.14 ರಿಂದ ಝೆನ್ ಟೀಮ್ ವತಿಯಿಂದ ನೀನಾಸಂ ನಾಟಕೋತ್ಸವ!

ತುಮಕುರು:       ಇಲ್ಲಿನ ಝೆನ್ ಟೀಮ್ ವತಿಯಿಂದ ಇದೇ ತಿಂಗಳ 14 ಮತ್ತು 15 ರಂದು ಎಂ.ಜಿ. ರಸ್ತೆಯ ಬಾಲಭವನದಲ್ಲಿ ಸಂಜೆ 6.30 ಕ್ಕೆ ನೀನಾಸಂ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಝೆನ್ ಟೀಮ್‍ನ ಉಗಮ ಶ್ರೀನಿವಾಸ್ ತಿಳಿಸಿದ್ದಾರೆ.       14 ರ ಸೋಮವಾರ ಸಂಜೆ 6.30 ಕ್ಕೆ ಗಿರೀಶ್ ಕಾರ್ನಾಡ್ ರಚಿಸಿರುವ ರಾಕ್ಷಸ- ತಂಗಡಿ ನಾಟಕ ಪ್ರದರ್ಶನವಿದೆ. ಈ ನಾಟಕವನ್ನು ಬಿ.ಆರ್. ವೆಂಕಟರಮಣ ಐತಾಳ್ ನಿರ್ದೇಶಿಸಿದ್ದಾರೆ. 15 ರ ಮಂಗಳವಾರ ಸಂಜೆ ಕರ್ಣ ಸಾಂಗತ್ಯ ನಾಟಕ ಪ್ರದರ್ಶನವಿದೆ. ಈ ನಾಟಕವನ್ನು ಗಣೇಶ್ ಮಂದರ್ತಿ ನಿರ್ದೇಶಿಸುತ್ತಿದ್ದಾರೆ.       ನಾಟಕ ಪ್ರದರ್ಶನಕ್ಕೂ ಮುನ್ನ ನಡೆಯುವ ಕಾರ್ಯಕ್ರಮದಲ್ಲಿ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ, ಲೇಖಕ ಹಾಗೂ ನಿವೃತ್ತ ಪ್ರಾಧ್ಯಾಪಕ ಮುಕುಂದರಾವ್ ಮತ್ತು ಗೋಮಾರದಹಳ್ಳಿ ಮಂಜುನಾಥ್ ಆಗಮಿಸಲಿದ್ದಾರೆ. 15 ರಂದು…

ಮುಂದೆ ಓದಿ...

ಐಟಿ ದಾಳಿ ಬೆನ್ನಲ್ಲೇ ಪರಮೇಶ್ವರ್ ಆಪ್ತ ಸಹಾಯಕ ಆತ್ಮಹತ್ಯೆಗೆ ಶರಣು!!

ತುಮಕೂರು:       ಕಾಂಗ್ರೆಸ್ ಶಾಸಕ, ಮಾಜಿ ಡಿಸಿಎಂ ಪರಮೇಶ್ವರ್ ಅವರ ನಿವಾಸದ ಮೇಲೆ ಐಟಿ ದಾಳಿ ಆದ ಬೆನ್ನಲ್ಲೆ ಪರಮೇಶ್ವರ್ ಅವರ ಆಪ್ತ ರಮೇಶ್ ಅವರು ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.       ಜ್ಞಾನ ಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾಯಿ ಗ್ರೌಂಡ್ ಬಳಿ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರಮೇಶ್ ಶವ ಪತ್ತೆ ಆಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.        ಹಲವು ವರ್ಷಗಳಿಂದ ರಮೇಶ್ ಅವರು ಪರಮೇಶ್ವರ್ ಗೆ ಆಪ್ತರಾಗಿದ್ದಾರೆ. ಪರಮೇಶ್ವರ್ ಅವರ ಮೇಲೆ ಐಟಿ ದಾಳಿ ಆದಾಗ ರಮೇಶ್ ಅವರನ್ನೂ ಸಹ ಹಲವು ಗಂಟೆಗಳ ಕಾಲ ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.       ಇಂದು ಬೆಳಿಗ್ಗೆ ಹಲವರಿಗೆ ಕರೆ ಮಾಡಿದ್ದ ರಮೇಶ್ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಮೊಬೈಲ್…

ಮುಂದೆ ಓದಿ...