ತುಮಕೂರು : ಕ್ರಷರ್, ಗ್ರಾನೈಟ್ ಮಾಲೀಕರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ – ಬಿ.ಸುರೇಶ್‍ಗೌಡ

ತುಮಕೂರು:       ಯಾವುದೋ ಅಲೆಯಲ್ಲಿ ಗೆದ್ದವರ ಯೋಗ್ಯತೆ ಏನು ಎಂಬುದು ಮತದಾರರಿಗೆ ಒಂದೇ ವರ್ಷದಲ್ಲಿ ತಿಳಿಯಿತು. ಕ್ಷೇತ್ರದ ಕ್ರಷರ್, ಗ್ರಾನೈಟ್ ಮಾಲೀಕರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ ಎಂದು ಶಾಸಕ ಗೌರಿಶಂಕರ್ ಅವರ ಹೆಸರು ಹೇಳದೆ ಮಾಜಿ ಶಾಸಕ ಬಿ.ಸುರೇಶ್‍ಗೌಡ ಹರಿಹಾಯ್ದರು.       ನಗರದ ಕ್ಯಾತ್ಸಂದ್ರದಲ್ಲಿ ಬಿ.ಸುರೇಶ್‍ಗೌಡ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಶಿವಕುಮಾರಸ್ವಾಮೀಜಿ ಅವರು ಇದ್ದ ಕ್ಷೇತ್ರದಲ್ಲಿ ಶಾಸಕನಾಗಿ ಉತ್ತಮ ಕೆಲಸ ಮಾಡಿರುವ ಹೆಮ್ಮೆ ನನಗಿದೆ, ಮೋದಿ ಅವರು ನೀಡಿರುವ ಸ್ಮಾರ್ಟ್‍ಸಿಟಿ ವ್ಯವಸ್ಥಿತವಾಗಿ ರೂಪುಗೊಳ್ಳಬೇಕೆಂದರೆ ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.       ಪಾಲಿಕೆಯಲ್ಲಿ ಬಹಳಷ್ಟು ಬದಲಾವಣೆ ತಂದ ಟಿ ಭೂಬಾಲನ್ ರವರ ರೀತಿಯ ಅಧಿಕಾರಿಗಳು ನಮ್ಮ ನಗರ ಮತ್ತು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದ ಅವರು, ವಸಂತ ನರಸಾಪುರದಲ್ಲಿ ರೈಲ್ವೆ ಕಾರಿಡಾರ್ ಮಾಡಬೇಕು…

ಮುಂದೆ ಓದಿ...

ಐಟಿ ದಾಳಿಗೂ ಬಿಜೆಪಿಗೂ ಸಂಬಂಧವಿಲ್ಲ – ಸಂಸದ ಜಿ.ಎಸ್.ಬಸವರಾಜು

ಗುಬ್ಬಿ :       ಐಟಿ ದಾಳಿಗೂ ಬಿಜೆಪಿಗೂ ಸಂಬಂಧವಿಲ್ಲ. ವೈಯಕ್ತಿಕ ದ್ವೇಷದ ಮಾತು ಇಲ್ಲಿ ಬರುವಂತಿಲ್ಲ. ಕಾಂಗ್ರೆಸ್ ಮುಖಂಡರನ್ನು ಗುರಿಯಾಗಿಸಿಕೊಂಡಿರುವ ಸಿದ್ದರಾಮಯ್ಯನವರ ಆರೋಪ ಸತ್ಯಕ್ಕೆ ದೂರವಾದದು ಎಂದು ಸಂಸದ ಜಿ.ಎಸ್.ಬಸವರಾಜು ಸ್ಪಷಪಡಿಸಿದರು.       ಪಟ್ಟಣದ ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ದೇವಾಲಯ ಜೀಣೋದ್ದಾರ ಸಮಿತಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಆದಾಯ ತೆರಿಗೆ ಇಲಾಖೆ ಅವರ ಕರ್ತವ್ಯವನ್ನು ಕಾನೂನು ರೀತಿ ನಡೆಸಿದ್ದಾರೆ. ಮೆಡಿಕಲ್ ಸೀಟ್ ಮಾರಾಟ ದಂಧೆ ನಡೆದಿರುವ ದೂರಿನ ಹಿನ್ನಲೆಯಲ್ಲಿ ಈ ದಾಳಿ ನಡೆಯುತ್ತಿದೆ. ಪರಮೇಶ್ವರ್ ಅವರು ನನಗೆ ಒಳ್ಳೆಯ ಸ್ನೇಹಿತ. ಅವರ ವ್ಯವಹಾರದ ಬಗ್ಗೆ ತಿಳಿದಿರಲಿಲ್ಲ ಎಂದರು.       ಸೇವಾ ಕಾರ್ಯ ನಡೆಸಬೇಕಾದ ಶಿಕ್ಷಣರಂಗ ಸಂಪೂರ್ಣ ಕಮರ್ಷಿಯಲ್ ಆಗಿ ಕಲುಷಿತಗೊಂಡಿರುವುದು ವಿಷಾದಕರ ಸಂಗತಿ. ಪರಮೇಶ್ವರ್ ಆಪ್ತ ಸಹಾಯಕನ ಆತ್ಮಹತ್ಯೆ…

ಮುಂದೆ ಓದಿ...

ಕೊರಟಗೆರೆ: ಅಬಕಾರಿ ಇಲಾಖೆಯಿಂದ ಜಪ್ತಿ ಮಾಡಿದ್ದ  66.09ಲೀ ಮದ್ಯ ನಾಶ!!

ಕೊರಟಗೆರೆ:       ಅಬಕಾರಿ ನಿಯಮಗಳಿಗೆ ವಿರುದ್ಧವಾಗಿ ಸ್ವಾಧೀನತೆ, ಸಾಗಾಣಿಕೆ, ಮಾರಾಟ ಇತ್ಯಾದಿಗಳಲ್ಲಿ ಜಪ್ತಿ ಮಾಡಿ ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ಮದ್ಯದ ಸಿಟ್ರಾ ಪಾಕೇಟ್‍ಗಳನ್ನು ಅಬಕಾರಿ ಆವರಣದಲ್ಲಿ ಸೋಮವಾರ ನಾಶಪಡಿಸಲಾಯಿತು.       ಕೊರಟಗೆರೆ ಅಬಕಾರಿ ವಲಯ ಕಚೇರಿ ಆವರಣದಲ್ಲಿ ಮಧುಗಿರಿ ಅಬಕಾರಿ ಉಪಅಧೀಕ್ಷಕ ಸುಭಾಶ್‍ಚಂದ್ರ ನೇತೃತ್ವದೊಂದಿಗೆ ತುಮಕೂರು ಕೆಎಸ್‍ಬಿಸಿಎಲ್ ವ್ಯವಸ್ಥಾಪಕ ಹೆಚ್.ಎಂ.ಗೌಡ, ಕೊರಟಗೆರೆ ಅಬಕಾರಿ ನಿರೀಕ್ಷಕ ರಾಮಮೂರ್ತಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಮಕ್ಷಮದಲ್ಲಿ ಸುಮಾರು 50ಸಾವಿರ ಮೌಲ್ಯದ 66.09 ಲೀಟರ್ ಮದ್ಯವನ್ನು ನಾಶಪಡಿಸಿದ್ದಾರೆ.       2019-20ನೇ ಸಾಲಿನ ಲೋಕಸಭಾ ಚುನಾವಣೆ ವೇಳೆಯಲ್ಲಿ ಅಕ್ರಮವಾಗಿ ಮದ್ಯ ಶೇಖರಣೆ ಮತ್ತು ಸಾಕಾಣಿಕೆ ಮಾಡುತ್ತಿದ್ದ ದಾಳಿ ನಡೆಸಿ ವಶಪಡಿಸಿಕೊಳ್ಳಲಾದ ಮಧ್ಯವನ್ನು ಸೋಮವಾರ ಮಧ್ಯಾಹ್ನ ಕಚೇರಿ ಆವರಣದಲ್ಲಿ ನಾಶಪಡಿಸಲಾಗಿದೆ. ಕಚೇರಿ ಆವರಣದಲ್ಲಿ ಗುಂಡಿ ತೋಡಿ ಅದರಲ್ಲಿ ಮಧ್ಯದ ಸಿಟ್ರಾ ಪಾಕೇಟ್ ಹರಿದು ಮದ್ಯವನ್ನು ಸುರಿದು…

ಮುಂದೆ ಓದಿ...

ತುಮಕೂರು : ರೋಗಿಗಳ ತ್ವರಿತ ಸೇವೆಗಾಗಿ ಡಿಜಿಟಲ್ ನರ್ವ್ ಸೆಂಟರ್!!

       ರೋಗಿಗಳ ತ್ವರಿತ ಸೇವೆಗಾಗಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆಯು ಡಿಜಿಟಲ್ ನರ್ವ್ ಸೆಂಟರ್ ಅನ್ನು ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಲು ಸಜ್ಜಾಗಿದೆ.       ಜನರು, ತಂತ್ರಜ್ಞಾನ ಹಾಗೂ ಪ್ರಕ್ರಿಯೆಗಳ ಸಂಯೋಜನೆ ಆಧಾರದಡಿ ಪರಸ್ಪರ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸಲಿರುವ ಈ ಡಿಜಿಟಲ್ ನರ್ವ್ ಸೆಂಟರ್ ಯೋಜನೆಯನ್ನು 2.27 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಕೆಲವೇ ದಿನಗಳಲ್ಲಿ ಚಾಲನೆಗೊಳ್ಳಲಿದೆ.       ಗಂಭೀರ ಪರಿಸ್ಥಿತಿಯಲ್ಲಿರುವ ನಗರ ವ್ಯಾಪ್ತಿಯೊಳಗಿನ ರೋಗಿಗಳಿಗೆ ತ್ವರಿತವಾಗಿ ಆರೋಗ್ಯ ಸೇವೆ ಒದಗಿಸುವ ಯೋಜನೆ ಇದಾಗಿದೆ. ರೋಗಿಗಳು ಡಿಜಿಟಲ್ ನರ್ವ್ ಸೆಂಟರ್ ಟೋಲ್ ಫ್ರೀ ಸಂಖ್ಯೆ 1800-425-4325ಕ್ಕೆ ಕರೆ ಮಾಡಿ ತಮ್ಮ ರೋಗದ ಬಗ್ಗೆ ಮಾಹಿತಿ ನೀಡಿದಲ್ಲಿ ಸೆಂಟರ್‍ನಲ್ಲಿರುವ ಆರೋಗ್ಯ ಸೇವಾ ಕಾರ್ಯಕರ್ತರು ತ್ವರಿತವಾಗಿ ವೈದ್ಯಕೀಯ ಸಲಹೆ ನೀಡುವುದರೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಆರೋಗ್ಯ ಸೇವಾ ಕೇಂದ್ರಗಳಾದ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಸಾರ್ವಜನಿಕ…

ಮುಂದೆ ಓದಿ...