ತುಮಕೂರು : ಬಡ್ಡಿಗೆ ರೈತರ ಜಮೀನು ಬರೆಸಿಕೊಂಡು ಶೋಷಣೆ!!!!

ತುಮಕೂರು:       ರೈತರಿಗೆ ಶೇ.10ರಷ್ಟು ಬಡ್ಡಿಗೆ ಸಾಲವನ್ನು ನೀಡಿ, ಸಾಲ ಮರುಪಾವತಿಸಲು ಆಗದೇ ಇದ್ದಾಗ ರೈತರ ಭೂಮಿಯನ್ನು ತನ್ನ ಹೆಸರಿಗೆ ಬರೆಸಿಕೊಂಡಿರುವ ಮೀಟರ್ ಬಡ್ಡಿ ದಂಧೆಕೋರರಿಂದ ರೈತರಿಗೆ ರಕ್ಷಣೆ ನೀಡಬೇಕು ಹಾಗೂ ರೈತರಿಗೆ ಆಗುತ್ತಿರುವ ಶೋಷಣೆಯನ್ನು ತಪ್ಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಕೃಷಿ ರೈತ ಬಂಧು ವೇದಿಕೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.      ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ಮೇಳೆಕಲ್ಲಹಳ್ಳಿ, ಶಿರಾ ತಾಲ್ಲೂಕು ಹುಂಜನಾಳು ಗ್ರಾಮದ ಜೈಶೀಲ ಎಂಬಾಕೆ ರೈತರಿಗೆ ಸಾಲವನ್ನು ನೀಡಿ, ಬಡ್ಡಿ, ಚಕ್ರ ಬಡ್ಡಿ, ಸುಸ್ತಿ ಬಡ್ಡಿ ಎಂದು ಕಿರುಕುಳ ನೀಡಿ, ರೈತರ ಭೂಮಿಯನ್ನು ತನ್ನ ಹೆಸರಿಗೆ ಬರೆಸಿಕೊಂಡಿರುವುದಲ್ಲದೆ, ಸಾಲ ತೀರುವವರೆಗೆ ರೈತರನ್ನು ತನ್ನ ಮನೆಯಲ್ಲಿ ಜೀತಕ್ಕೆ ಇಟ್ಟುಕೊಂಡು ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.  …

ಮುಂದೆ ಓದಿ...

ತಿಪಟೂರು : ಎಸಿಬಿ ಬಲೆಗೆ ಗ್ರಾಮಲೆಕ್ಕಿಗ ರವಿಶಂಕರ್!!

       ತಿಪಟೂರು ತಾಲ್ಲೂಕು ಮಡೆನೂರು ಗ್ರಾಮಲೆಕ್ಕಿಗ ರವಿಶಂಕರ್ ರವರು 5 ಸಾವಿರ ಲಂಚ ಪಡೆಯುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ ಉಪಾಧೀಕ್ಷಕರಾದ ಉಮಾಶಂಕರ್ ರವರು ದಾಳಿ ಮಾಡಿ ಬಂಧಿಸಿದ್ದಾರೆ.         ಮಡೆನೂರು ಗ್ರಾಮಲೆಕ್ಕಿಗರ ವ್ಯಾಪ್ತಿಯಲ್ಲಿ ಬರುವ ಕಂದಾಯದ ಜಮೀನನ್ನು ದೂರುದಾರರಾದ ಉಮೇಶ್ ರವರ ಅಕ್ಕ ಶುದ್ಧ ಕ್ರಯಕ್ಕೆ ಖರೀದಿ ಮಾಡಿದ್ದು, ಖರೀದಿದಾರರ ಹೆಸರಿಗೆ ಸ್ವತ್ತನ್ನು ಖಾತೆ ಬದಲಾವಣೆ ಮಾಡಲು 30 ಸಾವಿರ ಲಂಚದ ಹಣಕ್ಕೆ ಒತ್ತಾಯಿಸಿದ್ದು, ದೂರುದಾರರಾದ ಉಮೇಶ್ ರವರು ಮೊದಲ ಕಂತಾಗಿ 5 ಸಾವಿರ ರೂ.ಗಳನ್ನು ಫೋನ್ ಪೇ ಮುಖಾಂತರ ಗ್ರಾಮಲೆಕ್ಕಿಗ ರವಿಶಂಕರ್ ರವರ ಖಾತೆಗೆ ವರ್ಗಾವಣೆ ಮಾಡಿದ್ದು ಉಳಿಕೆ 25 ಸಾವಿರ ರೂ.ಗಳ ಬಾಬ್ತು 2 ನೇ ಕಂತಾಗಿ ಪಾವತಿಸುವ ವೇಳೆ ತುಮಕೂರು ಭ್ರಷ್ಟಾಚಾರ ನಿಗ್ರಹದಳದ ಉಪಾದೀಕ್ಷಕ ಬಿ.ಉಮಾಶಂಕರ್ ರವರು ನೆರಳು ಸಾಕ್ಷಿಗಳ ಸಮ್ಮುಖದಲ್ಲಿ ಹಣದ ಸಮೇತ ಬಂಧಿಸುವಲ್ಲಿ…

ಮುಂದೆ ಓದಿ...