ಕ್ರೀಡಾಂಗಣ ತುಂಬ ನಿಂತ ನೀರು : ಗಿಡ ನೆಡುವ ಮೂಲಕ ಆಕ್ರೋಶ!!

ತುರುವೇಕೆರೆ:       ಪಟ್ಟಣದ ಕ್ರೀಡಾಂಗಣ ತುಂಬ ನೀರು ನಿಂತು ವಾಯು ವಿಹಾರಿಗಳಿಗೆ ತೊಂದರೆಯಾಗಿದ್ದು ರೊಚ್ಚಿಗೆದ್ದ ಮುಂಜಾನೆ ಗೆಳೆಯರ ಬಳಗದ ಸದಸ್ಯರು ಸೋಮವಾರ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಗಿಡ ನೆಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.       ಪಟ್ಟಣದಲ್ಲಿ ವಾಯುವಿಹಾರಿಗಳಿಗೆ ಇದೊಂದೇ ಸೂಕ್ತ ಸ್ಥಳವಾಗಿದ್ದು ಇಲ್ಲಿ ಪ್ರತಿದಿನ ಮುಂಜಾನೆ ನೂರಾರು ನಾಗರೀಕರು ವಾಯು ವಿಹಾರಕ್ಕೆ ಆಗಮಿಸುತ್ತಾರೆ. ಪಟ್ಟಣದಲ್ಲಿ ಇದೊಂದು ಕ್ರೀಡಾಂಗಣ ಹೊರತುಪಡಿಸಿದರೆ ಯಾವುದೇ ಸ್ಥಳವಿಲ್ಲ. ಆದರೆ ಇತ್ತೀಚೆಗೆ ಮೈದಾನದಲ್ಲಿ 200 ಮೀಟರ್ ಟ್ರಾಕ್ ಫಾರ್ಮೇಶನ್‍ನ ಕಾಮಗಾರಿ ನೆಪದಲ್ಲಿ ಕ್ರೀಡಾಂಗಣವನ್ನು ಹಾಳುಗೆಡವಿದ್ದಾರೆ. ಇದನ್ನು ಮಾಡಿದ ಉದ್ದೇಶವಾದರೂ ಏನು? ಯಾರಿಗೆ ಉಪಯೋಗವಾಗಲಿದೆ ಎಂಬುದೂ ಗೊತ್ತಿಲ್ಲ. ಮಾಡಿದ ಕಾಮಗಾರಿ ಸಮರ್ಪಕವಾಗಿಲ್ಲ. ವ್ಯವಸ್ಥಿತವಾಗಿ ಮಾಡದ್ದರಿಂದ ಕ್ರೀಡಾಂಗಣದಲ್ಲಿ ಮಳೆ ನೀರು ಆಚೆ ಹೋಗಲು ವ್ಯವಸ್ಥೆಯಿಲ್ಲದೆ ಕ್ರೀಡಾಂಗಣ ಒಳಗೆ ನೀರಿನಿಂದ ಆವೃತವಾಗಿದೆ.       ಮುಂಜಾನೆ ಗೆಳೆಯರ ಬಳಗದ ಡಿ.ಜೆ.ರಂಗಸ್ವಾಮಿ ಮಾತನಾಡಿ,…

ಮುಂದೆ ಓದಿ...

ವಾರದೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಗುತ್ತಿಗೆ ಕರಾರು ಒಪ್ಪಂದದ ಅಂತಿಮಕ್ಕೆ ಸೂಚನೆ!

ತುಮಕೂರು :       ಜನರಲ್ ಕಾರಿಯಪ್ಪ ರಸ್ತೆ ಕಾಮಗಾರಿಗೆ ಕಾರ್ಯಾದೇಶ ನೀಡಿ ಈಗಾಗಲೇ 10 ತಿಂಗಳು ಕಳೆದಿದ್ದರೂ ಸಹ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು, ಯಾವುದೇ ಪ್ರಗತಿ ಹೊಂದಿರುವುದಿಲ್ಲ. ಇನ್ನೊಂದು ವಾರದೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಗುತ್ತಿಗೆದಾರರೊಂದಿಗೆ ಮಾಡಿಕೊಂಡಿರುವ ಕರಾರು ಒಪ್ಪಂದವನ್ನು ಅಂತಿಮಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್ ಅವರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಅಜಯ್ ಅವರಿಗೆ ಸೂಚನೆ ನೀಡಿದರು.       ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಪೂರ್ಣಗೊಳ್ಳದಿರುವ ಬಗ್ಗೆ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಗುತ್ತಿಗೆದಾರರು, ಸ್ಮಾರ್ಟ್‍ಸಿಟಿ ಅಧಿಕಾರಿಗಳು ಹಾಗೂ ಪಿ.ಎಂ.ಸಿ ಅಭಿಯಂತರರೊಂದಿಗೆ ಚರ್ಚಿಸಿದ ಅವರು ಗುತ್ತಿಗೆದಾರರು ಹಾಗೂ ಇತರೆ ಇಲಾಖೆಯವರ ಸಮನ್ವಯತೆ ಇಲ್ಲದಿರುವುದರಿಂದ ಕಾಮಗಾರಿ ಪ್ರಗತಿಯಲ್ಲಿ ಹಿನ್ನಡೆಯಾಗುತ್ತಿರುವ ಬಗ್ಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಂದ…

ಮುಂದೆ ಓದಿ...

ಜಿಲ್ಲೆಯ ಜಲಮೂಲಗಳನ್ನು ಜಿಯೋ ಟ್ಯಾಗಿಂಗ್‍ಗೆ ಒಳಪಡಿಸಲು ಸಂಸದರ ನಿರ್ದೇಶನ!!

ತುಮಕೂರು :       ಜಿಲ್ಲೆಯಲ್ಲಿರುವ ನದಿ, ಕೆರೆ, ಕಟ್ಟೆ, ಕೊಳವೆಬಾವಿ, ತೆರೆದ ಬಾವಿ. ಹಳ್ಳ, ಕಾಲುವೆ ಸೇರಿದಂತೆ ಎಲ್ಲ ಜಲಮೂಲಗಳನ್ನು ಜಿಯೋ ಟ್ಯಾಗಿಂಗ್‍ಗೆ ಒಳಪಡಿಸಬೇಕೆಂದು ಸಂಸದ ಜಿ.ಎಸ್. ಬಸವರಾಜು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.        ಕೇಂದ್ರ ಸರ್ಕಾರದಿಂದ ಅನುಷ್ಠಾನಗೊಳ್ಳುವ ವಿವಿಧ ಕಾರ್ಯಕ್ರಮಗಳ ಉಸ್ತುವಾರಿ, ಮೇಲ್ವಿಚಾರಣೆ ಹಾಗೂ ಸಮರ್ಪಕ ಅನುಷ್ಠಾನವನ್ನು ಪರಿಶೀಲಿಸಲು ಜಿಲ್ಲಾ ಪಂಚಾಯತಿಯಲ್ಲಿಂದು ಜರುಗಿದ ದಿಶಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ನಂಜುಂಡಪ್ಪ ವರದಿ ಪ್ರಕಾರ ಜಿಲ್ಲೆಯ 2574 ಗ್ರಾಮಗಳಲ್ಲಿ ಒಟ್ಟು 2022 ಕೆರೆ-ಕಟ್ಟೆಗಳಿದ್ದು, ಎಲ್ಲ ಮಾಹಿತಿಯನ್ನು ಜಿಯೋ ಟ್ಯಾಗಿಂಗ್‍ಗೊಳಿಸಬೇಕೆಂದರಲ್ಲದೆ ವಿಷಯ ಪರಿಣಿತರ ಅಧ್ಯಯನದನ್ವಯ 4435 ಜಲಸಂಗ್ರಹಗಾರಗಳಿರುವ ಹಿನ್ನೆಲೆಯಲ್ಲಿ ಎತ್ತಿನಹೊಳೆ, ಭದ್ರಾ ಮೇಲ್ದಂಡೆ, ಹೇಮಾವತಿ ಯೋಜನೆಯಿಂದ ತುಂಬುವ ಕೆರೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಕೆರೆಗಳಿಗೆ “ಊರಿಗೊಂದು ಕೆರೆ-ಕೆರೆಗೆ ನದಿ ನೀರು” ಯೋಜನೆಯಡಿ ನದಿ ನೀರು ತುಂಬಿಸಲು ಅಗತ್ಯವಿರುವ ನೀರಿನ ಮೂಲಗಳ ಬಗ್ಗೆ…

ಮುಂದೆ ಓದಿ...