ಮಧುಗಿರಿ : ಬಂಕ್ ನಿರ್ಮಾಣ ವಿರೋಧಿಸಿ ಪ್ರತಿಭಟನೆ!

ಮಧುಗಿರಿ :       ಮಧುಗಿರಿಯ ಸಿದ್ದಾಪುರ ಕೆರೆಯ ಬಳಿ ನಿರ್ಮಿಸುತ್ತಿರುವ ಪೆಟ್ರೋಲ್ ಬಂಕ್ ನಿರ್ಮಾಣವನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಹಲವು ಕನ್ನಡಪರ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದವು.         ಮಧುಗಿರಿ ಪಟ್ಟಣಕ್ಕೆ ಕುಡಿಯುವ ನೀರೋದಗಿಸುವ ಸಿದ್ದಾಪುರ ಕೆರೆಯ ಬಳಿಯಲ್ಲಿ ಖಾಸಗಿ ಜಮೀನಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಪೆಟ್ರೋಲ್ ಬಂಕ್‍ನಿಂದ ಪೆಟ್ರೋಲಿಯಂ ಉತ್ಪನ್ನಗಳು ಸೋರಿಕೆಯಾಗಲಿದ್ದು, ಇದರಿಂದ ಸಮಸ್ಯೆಗಳು ಹೆಚ್ಚಾಗಲಿವೆ ಎಂದು ಒತ್ತಾಯಿಸಿ ಗ್ರೇಡ್ 2 ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದವು.        ಮನವಿ ನೀಡಿ ಮಾತನಾಡಿದ ಕನ್ನಡ ಜಾಗೃತಿ ವೇದಿಕೆಯ ಅಧ್ಯಕ್ಷ ರಾಘವೇಂದ್ರ, ಈ ಬಂಕ್ ನಿರ್ಮಾಣದಿಂದ ಕೆರೆಯಲ್ಲಿನ ನೀರು ಕಲುಷಿತಗೊಳ್ಳುತ್ತದೆ. ಪಟ್ಟಣದಲ್ಲಿನ 30 ಸಾವಿರ ಜನರಿಗೆ ಇದರಿಂದ ಆರೋಗ್ಯ ಸಮಸ್ಯೆ ಕಾಡುತ್ತದೆ ಎಂದು ತಿಳಿಸಿ, ಕಾಮಗಾರಿಯನ್ನು ನಿಲ್ಲಿಸಿ ಕೆರೆಯನ್ನು ಉಳಿಸುವಂತೆ ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯ ಗಂಗರಾಜು, ಮುಖಂಡ ರವಿಕಾಂತ್ ಕನ್ನಡ…

ಮುಂದೆ ಓದಿ...

ವಿವಿಧ ಕಾಮಗಾರಿಗಳಿಂದ ಅವ್ಯವಸ್ಥೆ – ಪಾಲಿಕೆ ಸದಸ್ಯೆ ಆಕ್ರೋಶ!!

ತುಮಕೂರು :        ತುಮಕೂರು ನಗರದಲ್ಲಿ ಮುಖ್ಯರಸ್ತೆಗಳು ಸೇರಿದಂತೆ ವಿವಿಧ ವಾರ್ಡ್‍ಗಳಲ್ಲಿ, ಬಡಾವಣೆಗಳಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.       ತುಮಕೂರು ನಗರವು ಸ್ಮಾರ್ಟ್ ಸಿಟಿಯಾಗುತ್ತಿದ್ದು, ವಿವಿಧ ಕಾಮಗಾರಿಗಳು ಬಿರುಸಿನಿಂದ ನಡೆಯುತ್ತಿವೆ. ಇದರ ಜೊತೆಯಲ್ಲಿ ಬೆಸ್ಕಾಂ ಇಲಾಖೆಯವರು, 24 ಗಂಟೆಗಳ ಕುಡಿಯುವ ನೀರಿನ ಸರಬರಾಜು, ಉಜ್ವಲ ಯೋಜನೆಯಡಿಯಲ್ಲಿ ಮನೆಮನೆಗೆ ಗ್ಯಾಸ್ ಸಂಪರ್ಕ ಕಲ್ಪಿಸಲು ವಿವಿಧ ಭಾಗಗಳಲ್ಲಿ ಹಳ್ಳಗಳನ್ನು ತೆಗೆದು ಹಾಗೆ ಬಿಡಲಾಗುತ್ತಿದೆ. ಅಲ್ಲದೆ ಒಂದು ಕಡೆ ಹಳ್ಳ ಮುಚ್ಚಿದರೆ ಇನ್ನೊಂದು ಕಡೆ ಹಳ್ಳ ತೆಗೆಯುತ್ತಾರೆ. ಯಾರು ಯಾವ ಕಾಮಗಾರಿ ಮಾಡುತ್ತಿದ್ದಾರೆ ಎಂಬುದು ತಿಳಿಯದಾಗಿದೆ ಎಂದು 15ನೇ ವಾರ್ಡ್ ಪಾಲಿಕೆ ಸದಸ್ಯೆ ಗಿರಿಜಾಧನಿಯಾಕುಮಾರ್ ಆರೋಪಿಸಿದ್ದಾರೆ.       ಸ್ಮಾರ್ಟ್ ಸಿಟಿ ಕಾಮಗಾರಿಗಳು ಎಲ್ಲೆಲ್ಲಿ ನಡೆಯುತ್ತಿದೆಯೋ..? ಯಾವ ಹಂತದಲ್ಲಿದೆ. ಎಂಬುದು ಏನು…

ಮುಂದೆ ಓದಿ...

ಸೊಗಡು ಶಿವಣ್ಣ ಹೇಳಿಕೆಗೆ ರಫೀಕ್ ಅಹಮದ್ ತೀವ್ರವಾಗಿ ಖಂಡಿನೆ!!

ತುಮಕೂರು:       ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಮಾಜಿ ಮಂತ್ರಿ ಹಾಗೂ ಬಿಜೆಪಿ ಮುಖಂಡರಾದ ಸೊಗಡು ಶಿವಣ್ಣ ಅವರು ನೀಡಿರುವ ಹಣದ ಭಯೋತ್ಪಾಧಕ ಹೇಳಿಕೆಯನ್ನು ಮಾಜಿ ಶಾಸಕರಾದ ಡಾ.ಎಸ್.ರಫೀಕ್ ಅಹಮದ್ ತೀವ್ರವಾಗಿ ಖಂಡಿಸಿದ್ದಾರೆ.       ರಾಜ್ಯದಲ್ಲಿ ಐದು ವರ್ಷಗಳ ಕಾಲ ಜನಪರ ಆಡಳಿತ ನೀಡಿ, ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಮನಸ್ವಿನಿ ಹೀಗೆ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿರುವ ಸಿದ್ದರಾಮಯ್ಯನವರು, ಬಿಜೆಪಿ ಪಕ್ಷದವರು ಮಹಾರಾಷ್ಟ್ರ ಚುನಾವಣೆಗೆ ಗೆಲ್ಲಲ್ಲು ಟ್ರಂಪ್ ಕಾರ್ಡಾಗಿ ಬಳಕೆ ಮಾಡುತ್ತಿರುವ ಭಾರತ ರತ್ನ ಪ್ರಶಸ್ತಿಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ. ವೀರ ಸಾರ್ವಕರ್‍ಗೆ ನೀಡುವ ಮೊದಲು ನಡೆದಾಡುವ ದೇವರು ಎಂದೇ ಹೆಸರಾಗಿದ್ದ ಸಿದ್ದಗಂಗಾ ಶ್ರೀಗಳಿಗೆ ನೀಡುವಂತೆ ಹೇಳಿಕೆ ನೀಡಿದ್ದಾರೆ. ಇದನ್ನು ತುಮಕೂರು ಜಿಲ್ಲೆಯ ಜನರಾದ ನಾವುಗಳು ಸ್ವಾಗತಿಸಬೇಕಾಗಿದೆ.        ಅದರೆ ಸಿದ್ದಗಂಗಾ…

ಮುಂದೆ ಓದಿ...