ಚಿರತೆಗೆ ದಾಳಿಗೆ ಗರ್ಭ ಧರಿಸಿದ್ದ ದೇಶೀ ತಳಿ ಹಸು ಬಲಿ!!

ತುರುವೇಕೆರೆ :         ತಾಲೂಕಿನ ಮಾಯಸಂದ್ರ ಹೋಬಳಿಯ ದೊಡ್ಡಶೆಟ್ಟೀಕೆರೆಯ ರೈತ ಶಿವಕುಮಾರ್ ಎಂಬುವವರ ದೇಶೀ ತಳಿ ಹಸುವನ್ನು ಚಿರತೆ ತಿಂದು ಹಾಕಿದೆ.       ನಿನ್ನೆ ಸಾಯಂಕಾಲ ಮೇವು ತಿನ್ನುತ್ತಿದ್ದ ಹಸು ಮನೆಗೆ ಬಂದಿರಲಿಲ್ಲ. ಮೇವಿಗಾಗಿ ಬೇರೆಡೆ ಹೋಗಿರಬಹುದು ಎಂದು ಶಿವಕುಮಾರ್ ಭಾವಿಸಿದ್ದರು. ಆದರೆ ಬೆಳಗ್ಗೆ ತೋಟದ ಬಳಿಗೆ ಬಂದು ನೋಡಲಾಗಿ ತಮ್ಮ ದೇಶಿ ಹಸುವನ್ನು ಚಿರತೆ ತಿಂದು ಹಾಕಿದ್ದ ದೃಶ್ಯ ಕಂಡುಬಂತು.       ಈ ಪ್ರದೇಶದಲ್ಲಿ ಬೆಟ್ಟ ಗುಡ್ಡಗಳು ಇದ್ದು ಚಿರತೆಯ ಹಾವಳಿ ಇದೆ. ಹಲವಾರು ಬಾರಿ ಅರಣ್ಯ ಇಲಾಖೆಗೆ ಈ ಕುರಿತು ಒತ್ತಾಯ ಮಾಡಿದ್ದರೂ ಸಹ ಅರಣ್ಯ  ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಎನ್.ಆರ್.ಜಯರಾಮ್ ಆರೋಪಿಸಿದ್ದಾರೆ.       ದೇಶೀ ತಳಿ ನಾಟಿ ಹಸುಗಳನ್ನು ಸಾಕುವುದು ದುರ್ಲಬವಾಗಿರುವ ಈ…

ಮುಂದೆ ಓದಿ...

ತುಮಕೂರು : ಮಳೆಯಿಂದ ಕೆಸರು ಗದ್ದೆಯಂತಾದ ರಸ್ತೆ

ತುಮಕೂರು:       ನಗರದ 24ನೇ ವಾರ್ಡ್‍ನ ಉಪ್ಪಾರಹಳ್ಳಿಯ ಮುನೇಶ್ವರ ದೇವಸ್ಥಾನದ ಬಳಿ ಸರಿಯಾದ ರಸ್ತೆ, ಒಳಚರಂಡಿ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು, ಶಾಲಾ ಮಕ್ಕಳು ಓಡಾಡಲು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.       ಇತ್ತೀಚೆಗೆ ಸುರಿದ ಮಳೆಯಿಂದ ರಸ್ತೆ ಕೆಸರು ಗದ್ದೆಯಂತಾಗಿದ್ದು, ಚರಂಡಿ ನೀರು ರಸ್ತೆಯಲ್ಲಿ ಹರಿಯುವುದರಿಂದ ಶಾಲೆಗೆ ಹೋಗುವ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಓಡಾಡಲು ತುಂಬಾ ಕಷ್ಟವಾಗಿದೆ. ಈ ಸಂಬಂಧ ಪಾಲಿಕೆ ಸದಸ್ಯರು ಇತ್ತ ಗಮನಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ.       ಇಷ್ಟೇ ಅಲ್ಲದೆ ಈ ಜಾಗದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಡೆಂಗ್ಯೂ ರೋಗ ಹರಡುವ ಭೀತಿಯಲ್ಲಿ ಜನರಿದ್ದಾರೆ. ಸ್ಥಳಕ್ಕೆ ಪಾಲಿಕೆ ವಿರೋಧ ಪಕ್ಷದ ನಾಯಕ ರಮೇಶ್ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಎಂಜಿನಿಯರ್‍ಗೆ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.  ಈ ಸಂದರ್ಭದಲ್ಲಿ ಶಂಕರ್, ಬಾಬು ಮತ್ತಿತರರು ಉಪಸ್ಥಿತರಿದ್ದರು.

ಮುಂದೆ ಓದಿ...

ನವೆಂಬರ್ 18 ರವರೆಗೆ ಮತದಾರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ

ತುಮಕೂರು :       ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಇವಿಪಿ)ಯು ನವೆಂಬರ್ 18ರವರೆಗೆ ನಡೆಯಲಿದ್ದು, ಮತದಾರರ ಪಟ್ಟಿಯಲ್ಲಿರುವ ತಪ್ಪುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ|| ರಾಕೇಶ್ ಕುಮಾರ್ ಅವರು ತಿಳಿಸಿದರು.       ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗವು 2020ರ ಜನವರಿ 1ನ್ನು ಅರ್ಹತಾ ದಿನಾಂಕವೆಂದು ಪರಿಗಣಿಸಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯು ಕಳೆದ ಸೆಪ್ಟೆಂಬರ್ 1ರಿಂದ ಆರಂಭಗೊಂಡಿದ್ದು, ನವೆಂಬರ್ 18ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಬಿಎಲ್‍ಒಗಳು ಮನೆಮನೆಗೂ ತೆರಳಿ ಮತದಾರರ ಪಟ್ಟಿಯನ್ನು ಪರಿಶೀಲಿಸಲಿದ್ದಾರೆ. ಅಲ್ಲದೇ ಮತದಾರರೇ ಎನ್‍ವಿಎಸ್‍ಪಿ ಪೋರ್ಟಲ್ ಹಾಗೂ ವೋಟರ್ ಹೆಲ್ಪ್‍ಲೈನ್ ಆ್ಯಪ್ ಮೂಲಕ ಖುದ್ದು ಪರಿಶೀಲಿಸಬಹುದು ಎಂದರು.       ಇವಿಪಿ ಕಾರ್ಯಕ್ರಮದಡಿ ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿಕೊಂಡಿರುವ ಮತದಾರರು, ಮತದಾರರ…

ಮುಂದೆ ಓದಿ...

ಕಿತ್ತೂರು ರಾಣಿ ಚನ್ನಮ್ಮ ಯುವ ಪೀಳಿಗೆ ಮಹಿಳೆಯರಿಗೆ ಆದರ್ಶ

ತುಮಕೂರು:       ಕಿತ್ತೂರು ರಾಣಿ ಚನ್ನಮ್ಮ ಬ್ರಿಟೀಷರ ವಿರುದ್ಧ ಹೋರಾಡುವುದರ ಜೊತೆಗೆ ಸಾಮಾಜಿಕ ಚಿಂತನೆಯಲ್ಲೂ ಸಹ ಹಲವಾರು ಮಾರ್ಗದರ್ಶನಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಮೂಲಕ ಯುವ ಪೀಳಿಗೆಯ ಮಹಿಳೆಯರಿಗೆ ಆದರ್ಶವಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಹೇಳಿದರು.       ಜಿಲ್ಲಾಧಿಕಾರಿ ಸಭಾಂಗಣದಲ್ಲಿಂದು ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಕಿತ್ತೂರು ರಾಣಿ ಚನ್ನಮ್ಮ ಧೈರ್ಯ ಮತ್ತು ಸ್ಥೈರ್ಯಕ್ಕೆ ಹೆಸರುವಾಸಿಯಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಮಹಿಳೆಯರ ಸಾಧನೆಗಳು ಇಂದಿನ ಸಮಾಜದಲ್ಲಿ ಮುಂದೆ ಬರಲು ಮಹಿಳೆಯರಿಗೆ ಪ್ರೇರಣೆಯಾಗಿವೆ ಎಂದರು.       ಕಿತ್ತೂರು ರಾಣಿ ಚನ್ನಮ್ಮ ಅವರಂತಹ ಹೋರಾಟಗಾರರ ಆದರ್ಶಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಅವರಲ್ಲಿ ದೇಶಾಭಿಮಾನ ತುಂಬಬೇಕು. ಇಂದಿನ ಯುವಜನಾಂಗಕ್ಕೆ ಹಿಂದಿನ ಇತಿಹಾಸ ತಿಳಿಯುವ…

ಮುಂದೆ ಓದಿ...