ಸ್ಮಾರ್ಟ್ ಸಿಟಿ ಕಾಮಗಾರಿ ಕಳಪೆ : ದೂರು

ತುಮಕೂರು:       ಸ್ಮಾರ್ಟ್ ಸಿಟಿ ಕಾಮಗಾರಿಗಳು ಚಾಲನೆಗೆ ಬಂದು ವರ್ಷಗಳೇ ಕಳೆದಿದ್ದರೂ ಸಹ ನಗರದಲ್ಲಿ ಕೈಗೊಂಡಿರುವ ಅವೈಜ್ಞಾನಿಕ ಕಾಮಗಾರಿಗಳು ತುಂಬಾ ವಿಳಂಬವಾಗಿ ಸಾಗುತ್ತಿರುವುದು ನಗರದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದ್ದು, ಗುತ್ತಿಗೆ ಪಡೆದಿರುವವರು ಇಡೀ ನಗರವನ್ನೇ ಧೂಳುಮಯವಾಗಿಸಿದ್ದಾರೆಂದು ಆರೋಪಿಸಿ ಜಯ ಕರ್ನಾಟಕ ತುಮಕೂರು ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.       ನಗರದಲ್ಲಿ ಸಂಚರಿಸುವವರಿಗೆ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ವ್ಯವಹಾರ ಮಾಡುತ್ತಿರುವವರು ತೀವ್ರ ಸ್ವರೂಪದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇಂದಿನ ಆಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಉಪಯೋಗಿಸಿ ಅತಿ ಶೀಘ್ರವಾಗಿ ಮುಗಿಸಬಹುದಾದ ಕಾಮಗಾರಿಗಳನ್ನು ಸಹ ಗುತ್ತಿಗೆ ಪಡೆದಿರುವವರು ವರ್ಷಾನುಗಟ್ಟಲೆ ವಿಳಂಬ ಮಾಡುತ್ತಾ ಮುಂದುವರೆಸಿಕೊಂಡು ಬಂದಿರುವುದು ಈ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವ ಸಂಶಯವನ್ನು ಮೂಡಿಸುತ್ತದೆ.       ಆದ್ದರಿಂದ ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಅತಿ ಶೀಘ್ರವಾಗಿ ಕಾಮಗಾರಿ ಮುಗಿಸುವ ಗುತ್ತಿಗೆದಾರರಿಗೆ ಟೆಂಡರ್ ನೀಡುವುದರ…

ಮುಂದೆ ಓದಿ...

ಮನ ಸೆಳೆದ ಗಾಂಧೀಜಿ ವಿಶೇಷ ಛಾಯಾಚಿತ್ರ ಪ್ರದರ್ಶನ

ತುಮಕೂರು :       ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ವತಿಯಿಂದ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ ತಿಪಟೂರಿನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿಂದು ಗಾಂಧೀಜಿಯವರ ಜೀವನಚರಿತ್ರೆ ಕುರಿತ ಛಾಯಾಚಿತ್ರ ಪ್ರದರ್ಶನಕ್ಕೆ ತಿಪಟೂರು ತಾಲ್ಲೂಕು ಪಂಚಾಯತಿ ಸದಸ್ಯ ಜಿ.ಎಸ್. ಶಿವಸ್ವಾಮಿ ಅವರು ಚಾಲನೆ ನೀಡಿದರು.       ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕದಲ್ಲಿ ಗಾಂಧೀಜಿಯವರ ಅಪರೂಪದ ಛಾಯಾಚಿತ್ರಗಳನ್ನು ಬಸ್ ನಿಲ್ದಾಣದಲ್ಲಿ ಪ್ರದರ್ಶನಗೊಂಡಿವೆ. ಗಾಂಧೀಜಿಯವರ ಜೀವನ ಮೌಲ್ಯಗಳು ಹಾಗೂ ಅವರ ಹೋರಾಟಗಳ ಅಪರೂಪದ ಛಾಯಾಚಿತ್ರ ವೀಕ್ಷಿಸುವ ಮೂಲಕ ಗಾಂಧೀಜಿಯವರ ಸ್ಮರಣೆ ಮಾಡಿಕೊಳ್ಳಬಹುದು ಎಂದರು.       ಗಾಂಧೀಜಿ ಅವರ ಜೀವನ ಸಾಧನೆಗಳ ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಎಲ್ಲರಿಗೂ ಇದೊಂದು ಸದಾವಕಾಶವಾಗಿದೆ. ಸತ್ಯ ಅಹಿಂಸೆಯ ಮೂಲಕ ಸ್ವಾತಂತ್ರ್ಯ ಹೋರಾಟ ಹಾಗೂ ಅಪಾರ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ತೋರಿಸಿದ ಮಹಾತ್ಮ ಗಾಂಧೀಜಿ…

ಮುಂದೆ ಓದಿ...

ಡಿ.1 ಗೂಳೂರು ಗಣಪತಿ ವಿಸರ್ಜನಾ ಮಹೋತ್ಸವ!

ತುಮಕೂರು:       ಇತಿಹಾಸ ಪ್ರಸಿದ್ದ ಗೂಳೂರು ಶ್ರೀ ಮಹಾಗಣಪತಿ ವಿಸರ್ಜನಾ ಮಹೋತ್ಸವ ನ. 30 ಮತ್ತು ಡಿ. 1 ರಂದು ಅತ್ಯಂತ ವೈಭವಯುತವಾಗಿ ನಡೆಯಲಿದೆ.       ನ. 30 ರಂದು ರಾತ್ರಿ 10 ಗಂಟೆಗೆ ಗೂಳೂರಿನಲ್ಲಿ ಮಾಮೂಲಿನಂತೆ ವಿದ್ಯುದ್ದೀಪಗಳಿಂದ ಅಲಂಕೃತವಾದ ಭವ್ಯ ಹೂವಿನ ಮಂಟಪದಲ್ಲಿ ಶ್ರೀ ಮಹಾಗಣವತಿ ಉತ್ಸವ ಜರುಗಲಿದೆ.       ನ. 30 ರಂದು ಸಂಜೆ 7 ಗಂಟೆಗೆ ಜಾತ್ರೆಗೆ ಬರುವ ಭಕ್ತಾದಿಗಳಿಗಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ರಾತ್ರಿ 8 ಗಂಟೆಗೆ ಶ್ರೀ ಚೌಡೇಶ್ವರಿ, ಗಣೇಶ, ಆಂಜನೇಯ, ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಅಲಂಕಾರ ಹಮ್ಮಿಕೊಳ್ಳಲಾಗಿದೆ.       ಗೂಳೂರು ಗಣಪತಿ ಜಾತ್ರೆಯ ಅಂಗವಾಗಿ ಅನೇಕ ವೈಭವ ಮನರಂಜನೆಗಳ ಜತೆಗೆ ಹಿಂದಿನ ಕರ್ನಾಟಕದ ಗತವೈಭವವನ್ನು ಬಿಂಬಿಸುವ ಐತಿಹಾಸಿಕ ಹಿನ್ನೆಲೆಯನ್ನು ಸಾರುವ ಚಿತ್ರದುರ್ಗದ ಮದಕರಿ ಪಾಳೆಯಗಾರನ ವೇಷಭೂಷಣದ ಕುಣಿತ ಸಹ…

ಮುಂದೆ ಓದಿ...

 ಕೊರಟಗೆರೆ : ಎಸಿಬಿ ಬಲೆಗೆ ಕಂಪ್ಯೂಟರ್ ಆಪರೇಟರ್ ಹರೀಶ್!

 ಕೊರಟಗೆರೆ:       ತಾಲ್ಲೂಕಿನ ಬೊಮ್ಮಲ ದೇವಿಪುರ ಪಂಚಾಯ್ತಿ ಕಂಪ್ಯೂಟರ್ ಆಪರೇಟರ್ ಹರೀಶ್ 4000 ಲಂಚ ಪಡೆಯುವಾಗ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.       ಬೊಮ್ಮಲ ದೇವಿಪುರದ ವಾಸಿ ದತ್ತಾತ್ರೇಯ ಎನ್ನುವರು ಬಸವ ವಸತಿ ಯೋಜನೆಯಲ್ಲಿ ಗ್ರಾಮ ಪಂಚಾಯತಿ ವತಿಯಿಂದ ನೀಡಿದ ಗ್ಹಣದಿಂದ ಮನೆ ಕಟ್ಟುತ್ತಿದ್ದು ಮನೆಯ ಕಾಮಗಾರಿ ಪೂರ್ಣಗೊಂಡಿದ್ದು ಅಂತಿಮ ಬಿಲ್ಲು ಪಾವತಿಯಾಗ ಬೇಕಿರುವ ಹಿನ್ನೆಲೆಯಲ್ಲಿ ಮನೆಯ ಕಟ್ಟಡ ಪೂರ್ಣಗೊಂಡ ಪೋಟೋ ಮತ್ತು‌ ಮಾಹಿತಿಯನ್ನು ಆನ್ಲೈನ್ ಅಪ್ಲೋಡ್ ಮಾಡಲು 10000 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದು ಮೊದಲ ಕಂತು 5000 ನಗದು ಹಣವನ್ನು ನೀಡಿದ್ದು ಉಳಿಕೆ ಹಣಕ್ಕೆ ಒತ್ತಾಯಿಸಿದ್ದು ನೊಂದ ಅರ್ಜಿದಾರ ದತ್ತಾತ್ರೇಯ ರವರು ತುಮಕೂರು ಭ್ರಷ್ಟಾಚಾರ ನಿಗ್ರ ದಳದ ಉಪಾಧೀಕ್ಷಕರಾದ ಬಿ.ಉಮಾಶಂಕರ್ ರವರನ್ನು ಬೇಟಿಯಾಗಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ದೂರು ನೀಡಿದ್ದು ದೂರನ್ನಾಧರಿಸಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ…

ಮುಂದೆ ಓದಿ...

ಶಾಲೆ ಬಿಟ್ಟು ವಲಸೆ ಹೋಗುವ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರಲು ಆದ್ಯತೆ ನೀಡಿ – ಡಿಸಿ ಸೂಚನೆ

ತುಮಕೂರು :       ಶಾಲೆ ಬಿಟ್ಟು ಜಿಲ್ಲೆಯಿಂದ ವಲಸೆ ಹೋಗುವ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರಲು ಪ್ರಥಮಾದ್ಯತೆ ನೀಡಬೇಕೆಂದು ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.       ತಮ್ಮ ಕಛೇರಿಯಲ್ಲಿಂದು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸಭೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 6 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಒದಗಿಸುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಪರಸ್ಪರ ಸಹಕಾರದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸಬೇಕು ಎಂದು ನಿರ್ದೇಶನ ನೀಡಿದರು.        ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಮಾತನಾಡಿ ಪೋಷಕರು ತಮ್ಮ ಮಕ್ಕಳೊಂದಿಗೆ ವಲಸೆ ಹೋಗದಂತೆ ಗ್ರಾಮ ಸಭೆಗಳನ್ನು ನಡೆಸುವ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯಿಂದ…

ಮುಂದೆ ಓದಿ...

ತುಮಕೂರು : ಸಿದ್ದಗಂಗಾ ಮಠದ ವಿದ್ಯಾರ್ಥಿ ಸಾವು!

ತುಮಕೂರು :        ನಗರದ ಕ್ಯಾತ್ಸಂದ್ರದಲ್ಲಿರುವ ಸಿದ್ದಗಂಗಾ ಮಠದಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಳ್ಳಾರಿ ಮೂಲದ ಲಿಂಗೇಶ್ ಎನ್ನುವ ವಿದ್ಯಾರ್ಥಿ ಮಠದ ಸಮೀಪ ಮರದ ಕೊಂಬೆ ಮುರಿದು ಬಿದ್ದು, ಸಾವನ್ನಪ್ಪಿದ್ದಾರೆ.       ಪ್ರತಿದಿನದಂತೆ ಮ್ಯೂಸಿಕ್ ಬ್ಯಾಂಡ್ ಅಭ್ಯಾಸ ಮಾಡಲು ಸಿದ್ದಗಂಗಾ ಮಠದ ಸಮೀಪವಿರುವ ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿ ಆಲದಮರದ ಕೆಳಗೆ ಎಲ್ಲಾ ವಿದ್ಯಾರ್ಥಿಗಳು ಮ್ಯೂಸಿಕ್ ಬ್ಯಾಂಡ್ ಅಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ಬಲವಾದ ಆಲದ ಮರದ ಕೊಂಬೆ ಮುರಿದು ಕೆಳಗೆ ಬಿದ್ದಿದ್ದು, ಮರದ ಕೆಳಗೆ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳ ಪೈಕಿ ಬಳ್ಳಾರಿ ಮೂಲದ ಲಿಂಗೇಶ್ ಎನ್ನುವ ವ್ಯಕ್ತಿಯ ತಲೆಯ ಮೇಲೆ ಕೊಂಬೆ ಬಿದ್ದ ಪರಿಣಾಮ ಆತನನ್ನ ಸಿದ್ದಗಂಗಾ ಆಸ್ಪತ್ರೆಗೆ ತಕ್ಷಣ ರವಾನಿಸಲಾಯಿತು.        ಆಸ್ಪತ್ರೆಯಲ್ಲಿ 8 ನೇ ತರಗತಿ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ವಿದ್ಯಾಭ್ಯಾಸಕ್ಕೆಂದು ಬಂದ ಬಡ…

ಮುಂದೆ ಓದಿ...

 ತುಮಕೂರು : ಸುಲಿಗೆಕೋರರ ಬಂಧನ!!

 ತುಮಕೂರು :        ಟಾಟಾಸುಮೋ ನಿಲ್ಲಿಸಿಕೊಂಡು ಮಾರಕಾಸ್ತ್ರಗಳಿಂದ ಬೆದರಿಸಿ ರಸ್ತೆಯಲ್ಲಿ ಬರುವ ವಾಹನಗಳನ್ನು ತಡೆದು ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ 5 ಜನರ ಗುಂಪೊಂದನ್ನು ಮಾರಕಾಸ್ತ್ರಗಳ ಸಮೇತ ಕ್ಯಾತ್ಸಂದ್ರ ಪೊಲೀಸ್ ಸಿಪಿಐ ನೇತೃತ್ವದಲ್ಲಿ ಬಂಧಿಸಲಾಗಿದೆ.        ಆರೋಪಿಗಳನ್ನು ಬೆಂಗಳೂರಿನ ಶಾಂತಿನಗರದ ಜಫ್ರುದ್ದೀನ್(29), ಸಫೀರುದ್ದೀನ್(28), ಮೊಕದ್ದರ್ ಪಾಷಾ(35), ಮೊಹಮ್ಮದ್ ಸಲೀಂ(28), ಕಲೀಂ ಪಾಷಾ(24) ಎಂದು ಗುರುತಿಸಲಾಗಿದೆ.        ಆರೋಪಿಗಳು ನ.23 ರಂದು ಸುಮಾರು ಮಧ್ಯರಾತ್ರಿ 1 ಗಂಟೆ ವೇಳೆಯಲ್ಲಿ ತಾಲ್ಲೂಕಿನ ಹೆಬ್ಬೂರು ಪೊಲೀಸ್ ಠಾಣಾ ಸರಹದ್ದಿನ ರಸ್ತೆಯಲ್ಲ್ಲಿ ಹೋಗುತ್ತಿದ್ದ ವಾಹನಗಳನ್ನು ನಿಲ್ಲಿಸಿ ಕೈಗಳಲ್ಲಿ ಲಾಂಗ್, ಡ್ರಾಗನ್, ಪಿಸ್ತೂಲು ಮುಂತಾದ ಮಾರಕಾಸ್ತ್ರಗಳಿಂದ ದರೋಡೆ ಮಾಡುತ್ತಿದ್ದರು ಎಂಬ ಮಾಹಿತಿ ತಿಳಿದುಬಂದ ಹಿನ್ನೆಲೆಯಲ್ಲಿ ಕ್ಯಾತ್ಸಂದ್ರ ಸಿಪಿಐ ವೃತ್ತರವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.       ವಿಚಾರಣೆ…

ಮುಂದೆ ಓದಿ...

 ತುಮಕೂರು : ಪೊಲೀಸರ ವಶದಲ್ಲಿದ್ದ ಕಳ್ಳನ ಪರಾರಿಯ ಹಿಂದೆ ಅನುಮಾನ..?

 ತುಮಕೂರು :        ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೈಗೆ ಸಿಕ್ಕ ಹೊರ ರಾಜ್ಯದ ಕುಖ್ಯಾತ ಕಳ್ಳ ಪೊಲೀಸರಿಂದ ಪರಾರಿಯಾಗಿರುವ ಸುದ್ಧಿ ಹೊರಬಿದ್ದಿದೆ. ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪೊಲೀಸ್ ಪೇದೆ ಶಾಂತರಾಜು ಎನ್ನುವವರು ಕಳೆದ 2 ದಿನಗಳ ಹಿಂದೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಶಮ್ಮು ಎನ್ನುವ ಕುಖ್ಯಾತ ಕಳ್ಳನನ್ನು ಆಭರಣಗಳ ಸಮೇತ ಹಿಡಿದಿದ್ದರು.        ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಜಾಮಿಯಾ ಮಸೀದಿಯ ಬಳಿ ಕುಖ್ಯಾತ ಕಳ್ಳ ಶಮ್ಮು ಚಲನ-ವಲನದ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮಾಹಿತಿದಾರರ ಮಾಹಿತಿಯನ್ನಾಧರಿಸಿ ಶಮ್ಮು ಎನ್ನುವ ಕುಖ್ಯಾತ ಕಳ್ಳನನ್ನು ಆಭರಣಗಳ ಸಮೇತವಾಗಿ ಸಾರ್ವಜನಿಕ ಸ್ಥಳದಲ್ಲಿ ಹಿಡಿದುಕೊಳ್ಳಲಾಯಿತು. ಆತನ ಬಳಿಯಿದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆದ ಪೊಲೀಸ್ ಪೇದೆ ಕಳ್ಳನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡು ಕರೆದುಕೊಂಡು ಹೋದರು. ಆದರೆ,…

ಮುಂದೆ ಓದಿ...

ಗುಬ್ಬಿ : ಶಾಸಕ ಎಸ್.ಆರ್.ಶ್ರೀನಿವಾಸ್ ರಿಂದ ಗುಬ್ಬಿಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ!!

ಗುಬ್ಬಿ :       ತಾಲ್ಲೂಕಿನ ಪ್ರಮುಖ ಕೆರೆಗಳಾದ ಕಡಬ ಮತ್ತು ಗುಬ್ಬಿ ಅಮಾನಿಕೆರೆಗೆ ನಿರಂತರವಾಗಿ ಒಂದು ತಿಂಗಳು ಕಾಲ ಹೇಮಾವತಿ ನೀರು ಹರಿಸಿಕೊಳ್ಳಲು ಜಲ ನಿಗಮ ಮತ್ತು ಜಿಲ್ಲಾಡಳಿತದೊಂದಿಗೆ ಚರ್ಚಿಸಿದ್ದೇನೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.       ತಾಲ್ಲೂಕಿನ ಗಡಿಭಾಗದ ಸಿಂಗಿಪುರ ಎಸ್ಕೇಪ್ ಗೇಟ್ ತೆರೆದು ಎಂ.ಎಚ್.ಪಟ್ಟಣ ಮತ್ತು ಗುಬ್ಬಿಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜನವರಿ ಮಾಹೆಯವರೆಗೆ ಹೇಮೆ ಹರಿಯಲಿದೆ. ನಮ್ಮ ತಾಲ್ಲೂಕಿನ ಉಳಿದ ಕೆರೆಗಳಿಗೆ ಬೇಕಿರುವ 1.50 ಟಿಎಂಸಿ ನೀರನ್ನು ಹರಿಸಿಕೊಳ್ಳಲು ಚಿಂತಿಸಲಾಗಿದೆ. ಡಿಸೆಂಬರ್ ಅಂತ್ಯಕ್ಕೆ ಕಡಬ ಮತ್ತು ಗುಬ್ಬಿಕೆರೆ ಭಾಗಶಃ ತುಂಬಿಸುವ ಕೆಲಸ ಮಾಡಲಾಗುವುದು ಎಂದರು.        ನೀರಿನ ರಾಜಕಾರಣ ನಾನು ಎಂದೂ ನಡೆಸಿಲ್ಲ. ಕಳೆದ 20 ವರ್ಷದಿಂದ ಹೇಮಾವತಿ ನೀರು ಹರಿಸಿಕೊಳ್ಳಲು ಹೋರಾಟವನ್ನು ನಡೆಸಿದ್ದೇನೆ.…

ಮುಂದೆ ಓದಿ...

ಬುಗುಡನಹಳ್ಳಿ ಕೆರೆ : ಹೂಳೆತ್ತುವ ಕಾಮಗಾರಿಯನ್ನು ಸ್ಥಗಿತಗೊಳಿಸಲು ಸಂಸದರ ಸೂಚನೆ

ತುಮಕೂರು :       ತಾಲೂಕಿನ ಬುಗುಡನಹಳ್ಳಿ ಕೆರೆಯಲ್ಲಿ ಕೈಗೊಂಡಿರುವ ಹೂಳೆತ್ತುವ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕೆಂದು ಸಂಸದ ಜಿ.ಎಸ್. ಬಸವರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.       ಬುಗುಡನಹಳ್ಳಿ ಕೆರೆ ಪ್ರದೇಶಕ್ಕಿಂದು ಭೇಟಿ ನೀಡಿ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿ ಪರಿಶೀಲಿಸಿದ ನಂತರ ಮಾತನಾಡಿದ ಅವರು ಬುಗುಡನಹಳ್ಳಿ ಕೆರೆಯ ನೀರು ಸಂಗ್ರಹ ಸಾಮಥ್ರ್ಯವು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಹಳೆಯ ದಾಖಲೆಗಳ ಪ್ರಕಾರ 240 ಎಂಸಿಎಫ್‍ಟಿ ಹಾಗೂ ಈಗಿನ ಸರ್ವೇ ಪ್ರಕಾರ 300 ಎಂಸಿಎಫ್‍ಟಿ, ಪಾಲಿಕೆ ದಾಖಲೆ ಪ್ರಕಾರ 308 ಎಂಸಿಎಫ್‍ಟಿ, ಹೇಮಾವತಿ ನಾಲಾ ಇಲಖೆ ಪ್ರಕಾರ 363 ಎಂಸಿಎಫ್‍ಟಿ ಇರುತ್ತದೆ. ಕೆರೆ ಸಾಮಥ್ರ್ಯದ ಅಂಕಿ-ಅಂಶಗಳಿಗೆ ಸಂಬಂಧಿಸಿದಂತೆ ಮೂರು ಇಲಾಖೆಗಳು ಒದಗಿಸಿರುವ ಮಾಹಿತಿಯಲ್ಲಿ ವ್ಯತ್ಯಾಸವಿರುವುದು ಕಂಡು ಬಂದಿದೆ. ಹೇಮಾವತಿ ನಾಲೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪಾಲಿಕೆಗಳ ನಡುವೆ ಸಮನ್ವಯತೆ…

ಮುಂದೆ ಓದಿ...