ತುಮಕೂರಿನಲ್ಲಿ ಭೀಕರ ಕೊಲೆ ; ಬೆಚ್ಚಬಿದ್ದ ಜನತೆ!

ತುಮಕೂರು :        ನಗರದಲ್ಲಿ ಮತ್ತೊಂದು ಭೀಕರ ಕೊಲೆಯಾಗಿದೆ.       ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ನಾಗಣ್ಣನ ಪಾಳ್ಯದಲ್ಲಿ ಸಂಜೆ 4.30 ಸುಮಾರಿನಲ್ಲಿ ಮಹಾಂತೇಶ್ ಮತ್ತು ಮಂಜುನಾಥ್ ಎಂಬುವರಿಬ್ಬರ ಮೇಲೆ ಭೀಕರ ಸ್ವರೂಪದಲ್ಲಿ ಹಲ್ಲೆ ಮಾಡಿದ್ದಾರೆ.       ಲಾಂಗು ಮತ್ತು ಮಚ್ಚು ಹಾಗೂ ಇತರೆ ಮಾರಕಾಸ್ತ್ರಗಳನ್ನು ಹಿಡಿದುಬಂದ ರೌಡಿಗಳ ಗುಂಪು ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಾಂತೇಶ್ ಹಾಗೂ ಮಂಜುನಾಥ್ ರವರನ್ನ ಆಸ್ಪತ್ರೆಗೆ ದಾಖಲು ಮಾಡಿದ್ದು, ಆಸ್ಪತ್ರೆಯಲ್ಲಿ ಮಹಾಂತೇಶ್ ಕೊನೆಯುಸಿರೆಳೆದಿದ್ದಾರೆ.       ಮಹಾಂತೇಶ್ ಮತ್ತು ಚಿನ್ನು ಎನ್ನುವವರ ನಡುವೆ ಆಗಾಗ ಗಲಾಟೆ-ಗದ್ದಲಗಳು ನಡೆಯುತ್ತಿತ್ತು.  ಚಿನ್ನು ಎನ್ನುವ ರೌಡಿ ಕುಖ್ಯಾತ ರೌಡಿ ರೋಹಿತ್ ನ ಶಿಷ್ಯನಾಗಿದ್ದು, ಮುಂದಾಗಬಹುದಾದ ಅನಾಹುತವನ್ನು ಗಮನಿಸಿ ಈ ಹಿಂದೆಯೇ ನಗರ ವೃತ್ತ ನಿರೀಕ್ಷಕ ಚಂದ್ರಶೇಖರ್ ರವರು ಮಹಾಂತೇಶ…

ಮುಂದೆ ಓದಿ...

ಮಣ್ಣು ಮಾಫಿಯಾಗೆ ಕೆರೆ ಬಲಿ : ತುಮಕೂರು ನಗರಕ್ಕೆ ಕುಡಿಯುವ ನೀರಿಲ್ಲ!!

ತುಮಕೂರು:       ನಗರಕ್ಕೆ ಕುಡಿಯುವ ನೀರು ಪೂರೈಸುವ ಬುಗುಡನಹಳ್ಳಿ ಪಂಪ್ ಹೌಸ್‍ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಎಕ್ಸ್‍ಪ್ರೆಸ್ ಲೈನ್‍ನ ಕಂಬಗಳು ಮಣ್ಣು ಮಾಫಿಯಾದ ಕರಾಳತೆಯಿಂದ ನೀರಿನಲ್ಲಿ ಮುಳುಗಿದ್ದು ನಗರಕ್ಕೆ ಎರಡು ದಿನಗಳಿಂದ ನೀರು ಪೂರೈಕೆ ಮಾಡಲಾಗುತ್ತಿಲ್ಲ.       ನಗರದ ವಾರ್ಡ್ ನಂ-01ರ ಸಂಜೀವಯ್ಯನ ಕಟ್ಟೆಯಲ್ಲಿ ಅಕ್ರಮವಾಗಿ ಮಣ್ಣು ತುಂಬುತ್ತಿರುವ ಬಗ್ಗೆ ಸಿಪಿಐ 26-10-2018ರಂದು ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ಕಂದಾಯಾಧಿಕಾರಿಗಳು, ಪೊಲೀಸ್ ಸೇರಿದಂತೆ ಆಡಳಿತ ವ್ಯವಸ್ಥೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಇದ್ದರಿಂದ ಇಂದು ಸಂಜೀವಯ್ಯನ ಕೆರೆಯಲ್ಲಿ 40ರಿಂದ 50 ಅಡಿ ಆಳ ತೆಗೆದು ಅಕ್ರಮವಾಗಿ ಮಣ್ಣನ್ನು ಪ್ರತಿಷ್ಠಿತ ವ್ಯಕ್ತಿಗಳ ಲೇಔಟ್ ಹಾಗೂ ರೈಲ್ವೆ ಕಾಮಗಾರಿಗೆ ಬಳಸಿಕೊಳ್ಳಲಾಗಿದೆ.       ಕೆರೆಯಲ್ಲಿ ಮಣ್ಣು ತುಂಬುತ್ತಿರುವುದರಿಂದಾಗಿ ಬುಗುಡನಹಳ್ಳಿ ಪಂಪ್‍ಹೌಸ್‍ಗೆ ಸಂಪರ್ಕ ಕಲ್ಪಿಸುವ ಎಕ್ಸ್‍ಪ್ರೆಸ್ ಲೈನ್‍ನ ವಿದ್ಯುತ್ ಕಂಬಗಳು ನೀರಿನಲ್ಲಿ ಮುಳುಗುಡೆಯಾಗುತ್ತವೆ. ಇದರಿಂದಾಗಿ ಬೆಸ್ಕಾಂ…

ಮುಂದೆ ಓದಿ...

ಆಹ್ವಾನ ಪತ್ರಿಕೆಗಳಲ್ಲಿ ನಿಯಮದ ಶಿಷ್ಟಾಚಾರ ಉಲ್ಲಂಘನೆ!!

ಕೊರಟಗೆರೆ :       ತುಮಕೂರು ಕೆ.ಎಂ.ಎಫ್ ನಿಂದ ಉದ್ಘಾಟನೆಗೊಂಡ ಘಟಕಗಳನ್ನು ಮತ್ತೆ ಉದ್ಘಾಟಿಸಿ, ಆಹ್ವಾನ ಪತ್ರಿಕೆಗಳಲ್ಲಿ ಸರ್ಕಾರದ ನಿಯಮದ ಶಿಷ್ಟಾಚಾರ ಉಲ್ಲಂಘಿಸಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.       ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಕುರಂಕೋಟೆ ಮತ್ತು ಬೆಂಡೋಣೆ ಗ್ರಾವiಗಳಲ್ಲಿ ನೂತನ ಬಿ.ಎಂ.ಸಿ ಕಟ್ಟಡಗಳನ್ನು ಉದ್ಘಾಟನಾ ಸಮಾರಂಭವನ್ನು ನ.6 ರಂದು ಕಾರ್ಯಕ್ರಮ ನಡೆಸುವ ಮುಖಾಂತರ ಉದ್ಘಾಟಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಹಾಲು ಉತ್ಪಾದಕರ ಸಂಘದ ಅದ್ಯಕ್ಷರನ್ನೊಳಗೊಂಡು ಕೆಲ ನಿರ್ದೇಶಕರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಆದರೆ ತಾಲ್ಲೂಕಿನಲ್ಲಿ ಈ ಹಿಂದೆಯೇ ಸೆ.6. 2018 ರಂದು 6 ಗ್ರಾಮಗಳಲ್ಲಿ ಬಿ.ಎಂ.ಸಿ ಘಟಕಗಳ ಉದ್ಘಾಟನೆಯನ್ನು ತಾಲ್ಲೂಕಿನ ಕ್ಯಾಮೇನಹಳ್ಳಿ ಗ್ರಾಮದಲ್ಲಿ ಸಮೂಹಿಕವಾಗಿ ಉದ್ಘಾಟನಾ ಸಮಾರಂಭ ನಡೆದಿತ್ತು. ಹಾಲು ಉತ್ಪಾದಕರ ಸಂಘಗಳಲ್ಲಿ ಆರ್ಥಿಕ ಸ್ಥಿತಿ ಉಳಿಸುವ ನಿಟ್ಟಿನಲ್ಲಿ ಆರೂ ಕಡೆ ಸಮಾರಂಭ ಮಾಡದೆ ವಿದ್ಯುಕ್ತವಾಗಿ…

ಮುಂದೆ ಓದಿ...

ಕೈ ಚಾಚಿ ಬೆಲೆ ಕಳೆದುಕೊಂಡಿತೇ ಖಾಕಿ..!

ತುಮಕೂರು :       ನಗರದ ಹೃದಯ ಭಾಗದ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ನಿರ್ಭಯವಾಗಿ ರೌಡಿ ಗ್ಯಾಂಗ್ ಲಾಂಗು ಮಚ್ಚು ಹಿಡಿದು ರಾಜಾರೋಷವಾಗಿ ಮತ್ತೊಂದು ರೌಡಿ ಗ್ಯಾಂಗ್ ನ ಇಬ್ಬರನ್ನೂ ಕೊಚ್ಚಿ ಕೊಲೆ ಮಾಡುವ ಹಂತ ತಲುಪಿದೆ ಎಂದರೆ ಸ್ಥಳೀಯ ಖಾಕಿಯಲ್ಲಿ ಖಧರ್ ಇಲ್ಲವೆನ್ನುವುದು ಸ್ಪಷ್ಟವಾಗುತ್ತಿದೆ.       ವಿಶೇಷವೆಂದರೆ ಕುಕೃತ್ಯ ನಡೆದದ್ದು ಬೇರೆಲ್ಲೂ ಅಲ್ಲ ಲೇಡಿ ಸಿಗಂ ಆಗಲು ಹೋಗಿ ಲೇವಡಿ ಸಿಂಗಂ ಆಗಿ ಸಾರ್ವಜನಿಕವಾಗಿ ನಗೆ ಪಾಟಲಿಗೀಡಾದ ಪಾರ್ವತಮ್ಮ ಎಂಬ ತಿಲಕ್ ಪಾರ್ಕ್ ವೃತ್ತನಿರೀಕ್ಷಕರ ವ್ಯಾಪ್ತಿಯ ತಿಲಕ್ ಪಾರ್ಕ  ಪೊಲೀಸ್ ಠಾಣಾ ಸರಹದ್ದಿನ ರೈಲ್ವೆ ಸ್ಟೇಷನ್ ರಸ್ತೆಯ ಮಹಾವೀರ ಕಲ್ಯಾಣ ಮಂಟಪದ ಎದುರು. ನವೆಂಬರ್ 2 ರ ರಾತ್ರಿ 11-30 ರ ಸುಮಾರಿನಲ್ಲಿ ಹತ್ಯೆಯಾದ ಕುಖ್ಯಾತ ರೌಡಿ ಹಟ್ಟಿ ಮಂಜನ ಬಲಗೈ ಭಂಟ ರೌಡಿಶೀಟರ್‍ಗಳಾದ ದಿವಾಕರ್ ಮತ್ತು ಸಾಲೆ ಮಂಜನ ಮೇಲೆ…

ಮುಂದೆ ಓದಿ...