ವೀಕ್ ಕ್ಯಾಂಡಿಡೇಟ್ ಹಾಕಿದ್ದೇ ಗುಬ್ಬಿಯಲ್ಲಿ ಶ್ರೀನಿವಾಸ್ ಗೆಲುವಿಗೆ ಕಾರಣ-ಸಂಸದ

ಗುಬ್ಬಿ :       ವೀಕ್ ಕ್ಯಾಂಡಿಡೇಟ್ ಹಾಕಿದ್ದೆ ಗುಬ್ಬಿಯಲ್ಲಿ ಶ್ರೀನಿವಾಸ್ ಸತತವಾಗಿ ಗೆಲುವು ಸಾಧಿಸಲು ಕಾರಣವಾಯಿತು ಎಂದು ಸಂಸದ ಹಾಗೂ ದಿಶಾ ಉಪಸಮಿತಿ ಅಧ್ಯಕ್ಷ ಜಿ.ಎಸ್.ಬಸವರಾಜು ಅಚ್ಚರಿಯ ಮಾತುಗಳನ್ನಾಡಿದರು.       ತಾಲ್ಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ದಿಶಾ ಉಪಸಮಿತಿ ಪ್ರಗತಿ ಪರಿಶೀಲನೆ ಸಭೆ ಹಾಗೂ ಸಂಸದ ಆದರ್ಶ ಗ್ರಾಮ ಯೋಜನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಈಚೆಗೆ ಗುಬ್ಬಿ ಶಾಸಕರು ನೀಡಿರುವ ಟೀಕಾ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಕಿಡಿಕಾರುತ್ತಲೇ ಗುಬ್ಬಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ದಿ ಆಗಿಲ್ಲ. ಅಸಮರ್ಥರನ್ನು ಆಯ್ಕೆ ಮಾಡುತ್ತೀರಿ. ಶ್ರೀನಿವಾಸ್ ಶಾಸಕನಾಗುವಂತಿಲ್ಲ. ಆತನ ವಿರುದ್ದ ವೀಕ್ ಕ್ಯಾಂಡಿಡೇಟ್ ಹಾಕಿ ತಪ್ಪಾಯ್ತು ಎಂದು ಬೆಟ್ಟಸ್ವಾಮಿ ಅವರನ್ನು ಅಸಮರ್ಥ ಎಂದು ಪರೋಕ್ಷವಾಗಿ ಹೇಳಿ ಸಭಿಕರಲ್ಲಿ ಅಚ್ಚರಿ ತಂದರು.       ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ನನ್ನ ಮೇಲೆ ಟೀಕೆ ಮಾಡಿರುವ…

ಮುಂದೆ ಓದಿ...

ಆರ್ಥಿಕತೆ ಕುಸಿತದಿಂದ ದುಡಿಯುವ ವರ್ಗ ತತ್ತರ : ತಪನ್ ಸೇನ್ ಆತಂಕ

ತುಮಕೂರು :       ದೇಶದಲ್ಲಿ ಆರ್ಥಿಕ ಕುಸಿತದಿಂದ ಉದ್ದಿಮೆಗಳು, ಕೈಗಾರಿಕೆಗಳು ಬಾಗಿಲು ಮುಚ್ಚಿದ್ದು ದುಡಿಯುವ ವರ್ಗ ತತ್ತರಿಸಿ ಹೋಗಿದೆ. ಸ್ಕೀಂ ನೌಕರರು, ಸಂಘಟಿತ ಮತ್ತು ಅಸಂಘಟಿತ ನೌಕರರು ಇನ್ನಿಲ್ಲದ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಮಾಜಿ ರಾಜ್ಯಸಭಾ ಸದಸ್ಯರು ಆದ ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಆತಂಕ ವ್ಯಕ್ತಪಡಿಸಿದರು.       ತುಮಕೂರಿನ ಗಾಜಿನಮನೆಯಲ್ಲಿ ಅಕ್ಟೋಬರ್ 8ರಂದು ಸಮಗ್ರ, ಸಮೃದ್ಧ ಮತ್ತು ಸೌಹಾರ್ದಕ್ಕಾಗಿ ನಡೆಯುತ್ತಿರುವ ಸಿಐಟಿಯು 14ನೇ ರಾಜ್ಯ ಮಟ್ಟದ ಸಮ್ಮೇಳನದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ದೇಶವನ್ನು ಮಾರಾಟ ಮಾಡಲು ಹೊರಟಿದೆ. ಬಂಡವಾಳಶಾಹಿಗಳು ಕಿರುಪಾಲುದಾರರಾಗುತ್ತಿದ್ದಾರೆ. ಕೈಗಾರಿಕೆಗಳು ಮುಚ್ಚುತ್ತಿದ್ದು ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ ಎಂದು ಹೇಳಿದರು.       ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾg ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲು ಹೊರಟಿದೆ. ಕಾನೂನುಗಳನ್ನು ಸಂಹಿತೆಗಳನ್ನಾಗಿ…

ಮುಂದೆ ಓದಿ...

ತುಮಕೂರು: ತಾತ್ಕಾಲಿಕ ಬಸ್‍ನಿಲ್ದಾಣ ಸ್ಥಳಾಂತರಕ್ಕೆ ಅಡ್ಡಿ!!!

ತುಮಕೂರು:       ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳ್ಳದ ಕಾರಣ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ತಾತ್ಕಾಲಿಕ ಸ್ಥಳಾಂತರಕ್ಕೆ ಅಡ್ಡಿಯಾಗಿದೆ. ಸ್ಥಳಾಂತರಕ್ಕೆ ಪೂರಕವಾದ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ|| ರಾಕೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.        ತಮ್ಮ ಕಚೇರಿಯಲ್ಲಿಂದು ಕೆಎಸ್ಸಾರ್ಟಿಸಿ, ಸ್ಮಾರ್ಟ್ ಸಿಟಿ, ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವನ್ನಾಗಿ ನಿರ್ಮಿಸುವ ಕಾಮಗಾರಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜೆಸಿ ರಸ್ತೆಯಲ್ಲಿರುವ ಕೆಎಸ್ಸಾರ್ಟಿಸಿ ಘಟಕ-1ರ ಸ್ಥಳಕ್ಕೆ ಹಾಲಿಯಿರುವ ಕೆಎಸ್ಸಾರ್ಟಿಸಿ ಬಸ್‍ನಿಲ್ದಾಣವನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಸ್ಮಾರ್ಟ್‍ಸಿಟಿ ವತಿಯಿಂದ ಕೈಗೊಂಡಿರುವ ಕಾಮಗಾರಿಗಳನ್ನು ನವೆಂಬರ್ 18ರೊಳಗಾಗಿ ಪೂರ್ಣಗೊಳಿಸುವಂತೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.       ನಗರದ ಜೆ.ಸಿ ರಸ್ತೆ, ಪ್ರಶಾಂತ್…

ಮುಂದೆ ಓದಿ...