ಬಡಾವಣೆವಾರು ನಾಗರಿಕ ಸಮಿತಿಗಳನ್ನು ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಬಳಸಿಕೊಳ್ಳಲು ನಿರ್ಣಯ

ತುಮಕೂರು :       ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ನಗರದಲ್ಲಿರುವ ಎಲ್ಲಾ ಬಡಾವಣೆಗಳ ಗಡಿ ಗುರುತಿಸಿ ಬಡಾವಣೆವಾರು ನಾಗರಿಕ ಹಿತರಕ್ಷಣಾ ಸಮಿತಿಗಳನ್ನು ಬಳಸಿಕೊಳ್ಳಲು ನಿರ್ಣಯವನ್ನು ಕೈಗೊಳ್ಳಲಾಯಿತು.        ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ಕಚೇರಿಯಲ್ಲಿಂದು ಸಂಸದ ಜಿ.ಎಸ್. ಬಸವರಾಜು ಅವರ ಅಧ್ಯಕ್ಷತೆಯಲ್ಲಿ ಜರುಗಿದ ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು. ನಂತರ ಮಾತನಾಡಿದ ಸಂಸದರು ನಗರದ ಬಡಾವಣೆವಾರು ನಾಗರಿಕ ಸಮಿತಿಗಳನ್ನು ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಬಳಸಿಕೊಳ್ಳುವುದರಿಂದ ನಗರದ ಪ್ರತಿಯೊಂದು ಮುಖ್ಯರಸ್ತೆ, ಅಡ್ಡರಸ್ತೆ, ಲಿಂಕ್ ರಸ್ತೆಯ ಪ್ರತಿಯೊಂದು ಯೋಜನೆಗಳನ್ನು ಸಂಗ್ರಹಿಸಲು ಮತ್ತು ಕಾಮಗಾರಿಗಳನ್ನು ವೀಕ್ಷಣೆ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.       ಸ್ಮಾರ್ಟ್ ಸಿಟಿ ಯೋಜನೆ ಹಾಗೂ ಪಾಲಿಕೆಯಡಿ ಕೈಗೊಳ್ಳುವ ಪ್ರತಿ ಕಾಮಗಾರಿಯ ಸಂಪೂರ್ಣ ಮಾಹಿತಿಯನ್ನು ಜಿ.ಐ.ಎಸ್ ಮ್ಯಾಪಿಂಗ್‍ಗೆ ಅಳವಡಿಸಬೇಕು.…

ಮುಂದೆ ಓದಿ...

ದೇವರಾಯನದುರ್ಗದ ಕುಂಭಾಭಿಷೇಕ : ಟ್ರಾಫಿಕ್ ಸಮಸ್ಯೆಯಾಗದಂತೆ ಡಿಸಿ ಸೂಚನೆ!!

ತುಮಕೂರು:       ದೇವರಾಯನದುರ್ಗ ಗ್ರಾಮದಲ್ಲಿ ಫೆಬ್ರವರಿ ಮಾಹೆಯ 13, 14 ಮತ್ತು 15ರಂದು ನಡೆಯುವ ಶ್ರೀ ಯೋಗಲಕ್ಷ್ಮೀನರಸಿಂಹಸ್ವಾಮಿ ಕುಂಭಾಭಿಷೇಕ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನಾನುಕೂಲವಾಗದಂತೆ ಮುಂಜಾಗ್ರತಾ ಕ್ರಮವಾಗಿ ಟ್ರಾಫಿಕ್ ಸಮಸ್ಯೆಯಾಗದಂತೆ ಎಚ್ಚರವಹಿಸಬೇಕೆಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.      ದೇವರಾಯನದುರ್ಗ ಗ್ರಾಮದ ಯಾತ್ರಿ ನಿವಾಸದಲ್ಲಿಂದು 12 ವರ್ಷಗಳಿಗೊಮ್ಮೆ ನಡೆಯುವ ಶ್ರೀ ಯೋಗಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ “ಕುಂಭಾಭಿಷೇಕ” ಮಹೋತ್ಸವದ ಹಿನ್ನೆಲೆಯಲ್ಲಿ ಜರುಗಿದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕುಂಭಾಭಿಷೇಕಕ್ಕೂ ಮುನ್ನ ರಥ ಬೀದಿ ಹಾಗೂ ಇತರೆ ರಸ್ತೆಗಳನ್ನು ದುರಸ್ತಿಪಡಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.       ಈ ಹಿಂದೆ ಕುಂಭಾಭಿಷೇಕ ಕಾರ್ಯಗಳನ್ನು ನಿರ್ವಹಿಸುತ್ತಿದ್ದ ರೀತಿಯಲ್ಲಿಯೇ ಈ ಬಾರಿಯೂ ನೆರವೇರಿಸಬೇಕು. ಅದರಲ್ಲಿ ಯಾವುದೇ ಬದಲಾವಣೆಗಳು ಬೇಡ. ಶ್ರೀ ಯೋಗಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಕುಂಭಾಭಿಷೇಕ ಕಾರ್ಯಕ್ರಮವನ್ನು ನೆರವೇರಿಸಲು ದಾನಿಗಳಿಂದ ನಿರ್ವಹಿಸುವ ಕಾಮಗಾರಿಗಳಿಗೆ…

ಮುಂದೆ ಓದಿ...