ಚಿಕ್ಕನಾಯಕನಹಳ್ಳಿ : ಬೇವಿನಮರದಿಂದ ಹಾಲಿನಧಾರೆ!!

ಚಿಕ್ಕನಾಯಕನಹಳ್ಳಿ :       ಬೇವಿನಮರದಿಂದ ಹಾಲಿನಧಾರೆ ಹರಿದು ಬರುತ್ತಿದ್ದು, ಈ ಪ್ರಕೃತಿ ವಿಸ್ಮಯ ವೀಕ್ಷಣೆಗೆ ಜನರು ಮುಗಿಬಿದ್ದಿದ್ದಾರೆ.      ತಾಲ್ಲೂಕಿನ ಕಂದಿಕೆರೆ ಹೋಬಳಿ ರಾಮನಹಳ್ಳಿ ಪಂಚಾಯಿತಿಯ ಹನುಮಂತನಹಳ್ಳಿಯ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಸೇರಿದ ಹೊಲದಲ್ಲಿರುವ ಬೇವಿನಮರವೊಂದರಲ್ಲಿ ಕಳೆದ ಹದಿನೈದು ದಿನದಿಂದ ಹಾಲಿನ ಧಾರೆಹರಿದು ಬರುತ್ತಿದೆ. ಮರದ ಕಾಂಡದಿಂದ ಬಿಳಿ ಬಣ್ಣದ ದ್ರವ ಹರಿಯುತ್ತಿರುವುದನ್ನು ಕಂಡ ಸ್ಥಳೀಯರು ಇದೊಂದು ದೈವ ಪವಾಡವೆಂದು ನಂಬಿ ಮರಕ್ಕೆ ಅರಿಶಿನ, ಕುಂಕುಮದಿಂದ ಪೂಜೆ ಸಲ್ಲಿಸಿ ದೈವತ್ವಹೊಂದಿದ ಮರವೆಂದು ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಈ ವಿಸ್ಮಯವನ್ನು ನೂಡಲು ಪ್ರತಿದಿನ ನೂರಾರು ಮಂದಿ ಧಾವಿಸುತ್ತಿದ್ದಾರೆ. ಈ ಮರವು ದೇವಾಲಯದ ಜಮೀನಿಗೆ ಸೇರಿದ್ದರಿಂದ ಈ ಘಟನೆ ಹೆಚ್ಚಿನ ಮಹತ್ವ ಪಡೆದಿದೆ. ಇದೇ ಜಾಗದಲ್ಲಿ ಶ್ರೀಅಯ್ಯಪ್ಪ ದೇಗುಲ ನಿರ್ಮಾಣಕ್ಕೆ ಊರಿನ ಭಕ್ತರು ಮುಂದಾಗಿದ್ದು ಈಗ ನಿರ್ಮಾಣ ಹಂತದಲ್ಲಿರುವಾಗಲೇ ಈ ವಿಸ್ಮಯ ಗೋಚರಿಸಿರುವುದು ಕಾಕತಾಳೀಯವೆನಿಸಿದೆ.      …

ಮುಂದೆ ಓದಿ...

ಅಮಲಾಪುರದಲ್ಲಿ MSME ಟೆಕ್ನಾಲಜಿ ಸೆಂಟರ್ ಸ್ಥಾಪನೆಗೆ 100 ಕೋಟಿ.ರೂ ಮಂಜೂರು

ತುಮಕೂರು :       ತುಮಕೂರು ತಾಲೂಕು ಅಮಲಾಪುರ(ವಿಜ್ಞಾನ ಗುಡ್ಡ)ದಲ್ಲಿ ಎಂಎಸ್‍ಎಂಇ ಟೆಕ್ನಾಲಜಿ ಸೆಂಟರ್ ಅನ್ನು ಸ್ಥಾಪಿಸಲು ಕೇಂದ್ರ ಸರ್ಕಾರದಿಂದ 100 ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್ ಅವರು ತಿಳಿಸಿದರು.       ಕೌಶಲ್ಯ ತರಬೇತಿಗಳ ರೂಪುರೇಷೆ ಸಿದ್ಧಪಡಿಸುವ ಕುರಿತು ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದಿಂದ ಜಿಲ್ಲೆಯಲ್ಲಿ ಎಂಎಸ್‍ಎಂಇ ಟೆಕ್ನಾಲಜಿ ಸೆಂಟರ್ ಸ್ಥಾಪಿಸಲು 100 ಕೋಟಿ ರೂ.ಗಳು ಮಂಜೂರಾಗಿದ್ದು, ರಾಜ್ಯ ಸರ್ಕಾರವು ಅಮಲಾಪುರ(ವಿಜ್ಞಾನ ಗುಡ್ಡ)ದಲ್ಲಿ ಈಗಾಗಲೇ 15 ಎಕರೆ ಪ್ರದೇಶವನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದ್ದು, ಈ ಸೆಂಟರ್‍ನಲ್ಲಿ ಪ್ರತಿ ವರ್ಷ ಸುಮಾರು 5000 ಅಭ್ಯರ್ಥಿಗಳಿಗೆ ಕೈಗಾರಿಕಾಧಾರಿತ ತರಬೇತಿಯನ್ನು ನೀಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.       ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ನಿರುದ್ಯೋಗಿ…

ಮುಂದೆ ಓದಿ...

ಆಟೋ ಚಾಲಕರು ಸಹಕಾರ ಸಂಘ ಸ್ಥಾಪಿಸಿ-ಡಾ||ಶಾಲಿನಿ ರಜನೀಶ್

ತುಮಕೂರು:       ನಗರದಲ್ಲಿ ಪರಿಸರ ಸಂರಕ್ಷಣೆಯ ಜೊತೆಗೆ ಆಟೋ ಚಾಲಕರ ಜೀವನಮಟ್ಟ ಸುಧಾರಿಸಲು ಆಟೋ ಚಾಲಕರ ಸಹಕಾರ ಸಂಘ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಅಧಿಕಾರಿಗಳಿಗೆ ಹಾಗೂ ಆಟೋ ಚಾಲಕರಿಗೆ ತಿಳಿಸಿದರು.       ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿಂದು ನಡೆದ ಆಟೋರೀಕ್ಷಾ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಅವರ ಆಧುನೀಕರಣ ಹಾಗೂ ಸಬಲೀಕರಣ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಸಹಕಾರ ಸಂಘ ಸ್ಥಾಪಿಸಿ ನಗರದಲ್ಲಿರುವ ಆರ್ಥಿಕವಾಗಿ ಹಿಂದುಳಿದಿರುವ ಆಟೋ ಚಾಲಕರನ್ನು ಈ ಸಂಘದಲ್ಲಿ ಮೊದಲ ಆದ್ಯತೆ ನೀಡಿ ಸದಸ್ಯತ್ವ ನೀಡಿದಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂದರು.       ನಗರದಲ್ಲಿ ಚಾಲ್ತಿಯಲ್ಲಿರುವ ಆಟೋ ಚಾಲಕರ ಪರವಾನಗಿಯ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ…

ಮುಂದೆ ಓದಿ...