ಶಾಲಾ ವಾಹನಗಳ ದೂರು ದಾಖಲಿಸಲು ಸಹಾಯವಾಣಿ ಸ್ಥಾಪಿಸಿ – ಡಿಸಿ

ತುಮಕೂರು :       ಖಾಸಗಿ ಶಾಲಾ ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಕೊಂಡೊಯ್ಯುವುದು, ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ತಿಳಿಸಲು ಅನುಕೂಲವಾಗುವಂತೆ ಡಿಡಿಪಿಐ ಕಚೇರಿಯಲ್ಲಿ ಸಹಾಯವಾಣಿಯನ್ನು ಸ್ಥಾಪಿಸಬೇಕೆಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.       ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿಂದು ಹಮ್ಮಿಕೊಂಡಿದ್ದ ಶಾಲಾ ವಾಹನಗಳಲ್ಲಿ ಮಕ್ಕಳ ಸುರಕ್ಷತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕು ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ ಆದರೂ ಗ್ರಾಮೀಣ ಭಾಗಗಳಲ್ಲಿ ಇದನ್ನು ಕಾಣುತ್ತಿದ್ದೇವೆ ಹಾಗೂ ಒಂದೇ ವಾಹನದಲ್ಲಿ ಹೆಚ್ಚು ಸಂಖ್ಯೆಯ ಮಕ್ಕಳನ್ನು ಕರೆದೊಯ್ಯವಂತಹ ಚಟುವಟಿಕೆಗಳು ಕಂಡು ಬಂದಲ್ಲಿ ಈ ದೂರುಗಳನ್ನು ದಾಖಲಿಸಿಕೊಳ್ಳಲು ಸಹಾಯವಾಣಿಯನ್ನು ಸ್ಥಾಪಿಸಬೇಕು ಎಂದರು.       ಈ ದೂರುಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಶಾಲೆಯ ಹಾಗೂ ವಾಹನಗಳ ವಿರುದ್ದ ಅಗತ್ಯ…

ಮುಂದೆ ಓದಿ...

ಬೆಳ್ಳಾವಿ ಹೋಬಳಿ 6 ಕೆರೆಗಳಿಗೆ ನೀರು ಹರಿಸಲು ಶಾಸಕರ ಒತ್ತಾಯ

ತುಮಕೂರು :       ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಳ್ಳಾವಿ ಹೋಬಳಿಯ ಎಂಟು ಕೆರೆಗಳಿಗೆ ಎತ್ತಿನಹೊಳೆಯ ಮೂ ಲಕ ಗುರುತ್ವಾಕರ್ಷಣೆಯಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ಗೌರಿಶಂಕರ್ ಅವರು, ಜಿಲ್ಲಾಧಿಕಾರಿಗಳು ಹಾಗೂ ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.       ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಹಾಯ್ದು ಹೋಗಿರುವ ಎತ್ತಿನಹೊಳೆ ಪೈಪ್‍ಲೈನ್‍ನಿಂದ ಬೆಳ್ಳಾವಿ ಹೋಬಳಿಯ ಬೆಳ್ಳಾವಿ, ದೊಡ್ಡ ವೀರನಹಳ್ಳಿ, ದೊಡ್ಡೇರಿ, ಪಿ.ಗೊಲ್ಲಹಳ್ಳಿ, ಚೆನ್ನನಹಳ್ಳಿ, ಸೊರೇಕುಂಟೆ ಕೆರೆಗಳಿಗೆ 95.06ಎಫ್‍ಸಿಎಫ್‍ಟಿ(0.9) ಟಿಎಂಸಿ ನೀರನ್ನು ಗುರತ್ವಾಕ ರ್ಷಣೆಯಿಂದಲೇ ಹರಿಸಬಹುದಾಗಿದೆ.       ಸದರಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಿದ್ದು, ಜನ ಜಾನುವಾರುಗಳಿಗೆ ತೊಂದರೆಯಾಗಿರುವುದರಿಂದ 210 ಕಿ.ಮೀಯಿಂದ 213 ಕಿಮೀಯೊಳಗೆ ಬರುವ ಈ 6 ಕೆರೆಗಳಿಗೆ ಸೂಕ್ತ ಜಾಗದಲ್ಲಿ ತೂಬು ನಿರ್ಮಾಣ ಮಾಡುವ ಮೂಲಕ ಹರಿಸಬಹುದಾಗಿದ್ದು, ಈ ಕೆರೆ ಗಳಿಗೆ ಎತ್ತಿನಹೊಳೆಯಿಂದ…

ಮುಂದೆ ಓದಿ...

ಮಹಾನಗರ ಪಾಲಿಕೆ ಆಯುಕ್ತರಾಗಿ ಭೂಬಾಲನ್ ಮರು ನಿಯೋಜನೆ!!

ತುಮಕೂರು :       ನಗರದ ಬುದ್ದಿಜೀವಿಗಳು, ಪ್ರಜ್ಞಾವಂತರು ಹಾಗೂ ನಾಗರಿಕರ ಒತ್ತಾಸೆಯಂತೆ ರಾಜ್ಯ ಸರ್ಕಾರ ಮಹಾನಗರ ಪಾಲಿಕೆಯ ಆಯುಕ್ತರನ್ನಾಗಿ ದಕ್ಷ ಐಎಎಸ್ ಅಧಿಕಾರಿ ಟಿ. ಭೂಬಾಲನ್ ಅವರನ್ನು ಮತ್ತೆ ವರ್ಗಾವಣೆ ಮಾಡಿದ್ದು, ಇಂದು ಬೆಳಿಗ್ಗೆ ಭೂಬಾಲನ್ ಅವರು ಪಾಲಿಕೆಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು.       ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ಪಾಲಿಕೆ ಆಯುಕ್ತರಾಗಿ ಜನವರಿಯಿಂದ ಅವಕಾಶ ದೊರೆತಿದ್ದು, ಮಧ್ಯೆದಲ್ಲಿ ಚುನಾವಣೆ ನಿಮಿತ್ತ ಸರ್ಕಾರ ಗೋಕಾಕ್‍ಗೆ ವರ್ಗಾವಣೆ ಮಾಡಿತ್ತು. ನಾನು ಅಲ್ಲಿಗೆ ಹೋಗಿ ಯಶಸ್ವಿಯಾಗಿ ಚುನಾವಣೆ ನಡೆಸಿದ್ದೇನೆ. ಮತ್ತೆ ಸರ್ಕಾರ ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾಗಿ ನಿಯೋಜಿಸಿದೆ. ಹಾಗಾಗಿ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು.       ಈ ಹಿಂದೆ ಕೈಗೊಂಡಿದ್ದ ಅಭಿವೃದ್ಧಿಗಳನ್ನು ಮುಂದುವರೆಸಲು ನಾನು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ನಾನು ಇಲ್ಲಿಗೆ ಮತ್ತೆ…

ಮುಂದೆ ಓದಿ...