ತುಮಕೂರು: ಗ್ರಾಮ ಪಂಚಾಯಿತಿ ಚುನಾವಣೆ : ಶಾಂತಿಯುತ ಮತ ಎಣಿಕೆ

ತುಮಕೂರು :        ತುಮಕೂರು ಜಿಲ್ಲೆಯ 327 ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಯು ಆಯಾ ತಾಲೂಕು ಕೇಂದ್ರಗಳಲ್ಲಿ ಯಾವುದೇ ಗೊಂದಲವಿಲ್ಲದೇ ಶಾಂತಿಯುತವಾಗಿ ನಡೆಯಿತು.       ತುಮಕೂರು ತಾಲೂಕಿನ 41 ಗ್ರಾಮ ಪಂಚಾಯಿತಿಗಳು, ಗುಬ್ಬಿ-34, ಕುಣಿಗಲ್-36, ತಿಪಟೂರು-25, ತುರುವೇಕೆರೆ-27, ಚಿಕ್ಕನಾಯಕನಹಳ್ಳಿ-27, ಮಧುಗಿರಿ-39, ಶಿರಾ-41, ಕೊರಟಗೆರೆ-24 ಹಾಗೂ ಪಾವಗಡ ತಾಲೂಕಿನ 33 ಗ್ರಾಮ ಪಂಚಾಯಿತಿಗಳಲ್ಲಿ ಸೇರಿದಂತೆ ಒಟ್ಟು ಜಿಲ್ಲೆಯ 327 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಶಾಂತಿಯುತವಾಗಿ ನಡೆಯಿತು. ಜಿಲ್ಲೆಯಲ್ಲಿ ಗ್ರಾಮಪಂಚಾಯಿತಿಗಳ 2661 ಕ್ಷೇತ್ರಗಳ ಮತ ಎಣಿಕೆಯು 167 ಕೊಠಡಿಗಳಲ್ಲಿ 762 ಟೇಬಲ್‍ಗಳಲ್ಲಿ ನಡೆದಿದ್ದು, ಮತ ಎಣಿಕೆಗಾಗಿ 817 ಮಂದಿ ಎಣಿಕೆ ಮೇಲ್ವಿಚಾರಕರು, 1624 ಮಂದಿ ಸಹಾಯಕರನ್ನು ನೇಮಿಸಲಾಗಿತ್ತು.      ತುಮಕೂರು ತಾಲ್ಲೂಕು-ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ತುಮಕೂರು, ಗುಬ್ಬಿ-ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಬ್ಬಿ, ತಿಪಟೂರು-ಪಲ್ಲಗಟ್ಟಿ ಅಡವಪ್ಪ ಕಾಲೇಜು, ತುರುವೇಕೆರೆ-ಸರ್ಕಾರಿ…

ಮುಂದೆ ಓದಿ...

ಸತತವಾಗಿ 5 ಬಾರಿ ಒಂದೇ ಕುಟುಂಬದ ಅಭ್ಯರ್ಥಿಗಳು ಆಯ್ಕೆ

ಮಧುಗಿರಿ :       ತಾಲೂಕಿನ 39 ಗ್ರಾ.ಪಂಗಳ 600 ಸದಸ್ಯ ಸ್ಥಾನಗಳಿಗೆ 1794 ಅಭ್ಯರ್ಥಿಗಳ ಮತ ಎಣಿಕೆ ಕಾರ್ಯ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.        ಬೆಳಗ್ಗೆ 7 ಗಂಟೆಗೆ ಚುನಾವಣಾ ಮತ ಎಣೆಕೆ ಸಿಬ್ಬಂದಿಗಳನ್ನು ಮತ ಎಣಿಕೆ ಕೇಂದ್ರಕ್ಕೆ ಬಿಡಲಾಯಿತು. ನಂತರ ಅಭ್ಯರ್ಥಿಗಳು ಮತ್ತು ಏಜೆಂಟರನ್ನು ಬಿಡಲಾಯಿತು. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿ ಮೊದಲಿಗೆ 78 ಏಕ ಸದಸ್ಯ ಸ್ಥಾನಗಳು, 124 ದ್ವಿ ಸದಸ್ಯ ಕ್ಷೇತ್ರಗಳು, 67 ಮೂರು ಸದಸ್ಯ ಕ್ಷೇತ್ರಗಳು ಮತ್ತು 22 ನಾಲ್ಕು ಸದಸ್ಯ ಕ್ಷೇತ್ರಗಳಂತೆ ಹಂತ ಹಂತವಾಗಿ 25 ಟೇಬಲ್ ಗಳಲ್ಲಿ ಗ್ರಾ.ಪಂಗೆ 2 ಕ್ಷೇತ್ರಗಳಂತೆ ಮತ ಎಣಿಕೆ ಕಾರ್ಯ ಕೈಗೊಳ್ಳಲಾಯಿತು.      ಗೆದ್ದ ಮೊದಲ ಅಭ್ಯರ್ಥಿ:      …

ಮುಂದೆ ಓದಿ...

ಯಾವುದೇ ದಬ್ಬಾಳಿಕೆಯಿಲ್ಲದೆ ಸ್ವಯಂ ಪ್ರೇರಿತವಾಗಿ ಕೆಲಸ ಮಾಡುವುದು ಗೃಹರಕ್ಷಕದಳ

ತುಮಕೂರು :        ಪೊಲೀಸ್ ಇಲಾಖೆಗೆ ಸಹಾಯಕವಾಗಿ ಕೆಲಸ ನಿರ್ವಹಿಸುವ ಗೃಹರಕ್ಷಕ ದಳದ ಕಾರ್ಯ ಶ್ಲಾಘನೀಯವಾದುದು ಎಂದು 7ನೇ ಅಧಿಕ ಸತ್ರ ಜಿಲ್ಲಾ ನ್ಯಾಯಾಧೀಶರಾದ ಎಸ್. ಸುಧೀಂದ್ರನಾಥ್ ತಿಳಿಸಿದರು.       ಜಿಲ್ಲಾ ಗೃಹರಕ್ಷಕದಳದ ಕಚೇರಿ ಆವರಣದಲ್ಲಿ ಗುರುವಾರ ಅಖಿಲ ಭಾರತ ಗೃಹರಕ್ಷಕ ದಳದ ದಿನಾಚರಣೆ-2020 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಯಾವುದೇ ದಬ್ಬಾಳಿಕೆ ಇಲ್ಲದೆ ಸ್ವಯಂ ಪ್ರೇರಿತವಾಗಿ ಸಮಾಜ ಸೇವೆ ಮಾಡುವಂತಹ ಗೃಹರಕ್ಷಕದಳ ಸಾಮಾನ್ಯ ನಾಗರೀಕರಿಗೆ ವಿಶೇಷ ಅಭಿಮಾನ, ಗೌರವವಿದೆ ಎಂದರು.       ವಿವಿಧ ಇಲಾಖೆಗಳಿಗೆ ಸಹಾ ಪಂಚಾಬ್, ರಾಜಸ್ತಾನ ರಾಜ್ಯಗಳ ಗಡಿ ಭಾಗದಲ್ಲಿ ಬಾರ್ಡರ್ ಸೆಕ್ಯುರಿಟಿಯಾಗಿ ಕೆಲಸ ನಿರ್ವಹಿಸುವಂತಹ ಯೋಧರಿಗೂ ಸಹ ಸಹಾಯಕರಾಗಿ ಗೃಹರಕ್ಷಕದಳದ ಸಿಬ್ಬಂದಿ ಕೆಲಸ ನಿರ್ವಹಿಸುತ್ತಾರೆ. ಹೋಂಗಾಡ್ರ್ಸ್ ದೇಶದ ಒಳಗಷ್ಟೇ ಅಲ್ಲ, ದೇಶದ ಗಡಿ ಭಾಗದ ರಕ್ಷಣೆಯನ್ನೂ ಹೊತ್ತಿದ್ದಾರೆ. ಇದು ಹೋಂಗಾಡ್ರ್ಸ್ ದಳದ ವಿಶೇಷ…

ಮುಂದೆ ಓದಿ...

ಕೋವಿಡ್-19 ಮಾರ್ಗಸೂಚಿಯನ್ವಯ ವಿದ್ಯಾಗಮ ಪುನರಾರಂಭ

ತುಮಕೂರು :          ಕೋವಿಡ್-19ರ ಮಾರ್ಗಸೂಚಿಯನ್ವಯ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಜನವರಿ 1 ರಿಂದ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ 6 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮವನ್ನು ಪುನರಾರಂಭಿಸಲಾಗುವುದು 10ನೇ ತರಗತಿ ವಿದ್ಯಾರ್ಥಿಗಳಿಗೆ ನಿಯಮಿತ ತರಗತಿಗಳನ್ನು ನಡೆಸಲಾಗುವುದು ಎಂದು ಮಧುಗಿರಿ ಡಿಡಿಪಿಐ ರೇವಣ್ಣ ಸಿದ್ಧಪ್ಪ ಅವರು ತಿಳಿಸಿದ್ದಾರೆ.       ಶಾಲಾ ಪ್ರಾರಂಭದ ದಿನ ತಳಿರು-ತೋರಣಗಳಿಂದ ಶಾಲೆಗಳನ್ನು ಸಿಂಗಾರ ಮಾಡುವುದರ ಜೊತೆಗೆ ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಪೋಷಕರನ್ನು ಶಾಲೆಗೆ ಕರೆಸಿ ವಿದ್ಯಾಗಮ ಕಾರ್ಯಕ್ರಮವನ್ನು “ಶಾಲೆಗೆ ಬನ್ನಿ ಮಕ್ಕಳೇ ಮಹಾಮಾರಿ ಕೊರೋನಾ ಓಡಿಸೋಣ ಮಕ್ಕಳನ್ನು ಓದಿಸೋಣ” ಎಂಬ ಘೋಷ ವಾಕ್ಯದೊಂದಿಗೆ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಗುವುದು. 10ನೇ ತರಗತಿಯ ವಿದ್ಯಾರ್ಥಿಗಳಿಗೆ ನಿಯಮಿತ ತರಗತಿಗಳನ್ನು ನಡೆಸುವಂತೆ ಎಲ್ಲಾ ಮುಖ್ಯ ಶಿಕ್ಷಕರು ಎಸ್.ಒ.ಪಿ ಅನುಸಾರ ಮತ್ತು ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿಯ…

ಮುಂದೆ ಓದಿ...

9 ವರ್ಷಗಳಿಂದ ಸಂಘ-ಸಮಾಜದ ಅಭಿವೃದ್ಧಿಗೆ ದುಡಿಯುತ್ತಿದ್ದೇನೆ : ಟಿ.ಆರ್.ಸುರೇಶ್

ತುಮಕೂರು:       ಜಿಲ್ಲಾ ಕುರುಬರ ಸಂಘದ 9ನೇ ವಾರ್ಷಿಕೋತ್ಸವ ಹಾಗೂ ಸರ್ವ ಸದಸ್ಯರ ಸಭೆ ಕುಣಿಗಲ್ ರಸ್ತೆಯ ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ಸಂಘದ ಅಧ್ಯಕ್ಷ ಟಿ.ಆರ್.ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.       ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಘದ ಅಧ್ಯಕ್ಷರಾದ ಟಿ.ಆರ್.ಸುರೇಶ್, ಕಳೆದ 9 ವರ್ಷಗಳಿಂದ ಸಂಘ- ಸಮಾಜದ ಅಭಿವೃದ್ಧಿಗೆ ದುಡಿಯುತ್ತಾ ಬಂದಿದೆ. ಕುರುಬ ಸಮುದಾಯಕ್ಕೆ ಸರಕಾರದಿಂದ ಹಾಗೂ ಇನ್ನಿತರ ಕಡೆಗಳಿಂದ ಅನ್ಯಾಯಗಳು,ತೊಂದರೆಗಳಾದಾಗ ಸಮಾಜದ ಜೊತೆ ನಿಂತು ಹೋರಾಟ ನಡೆಸುವ ಮೂಲಕ ನ್ಯಾಯ ದೊರಕಿಸಿಕೊಡಲು ಶ್ರಮಿಸಿದೆ. ಇತ್ತೀಚಿನ ಪೀರಣ್ಣವಾಡಿಯ ಸಂಗೋಳಿ ರಾಯಣ್ಣ ಪ್ರತಿಮೆ ದ್ವಂಸ ವಿಚಾರದಲ್ಲಿ ನ್ಯಾಯ ಸಿಗುವವರೆಗೂ ಉಗ್ರ ಹೋರಾಟ ನಡೆಸುವ ಮೂಲಕ ಸಮಾಜದ ಹಿರಿಯರಿಗೆ ಬೆಂಬಲವಾಗಿ ನಿಂತಿದೆ. ಅಲ್ಲದೆ ಕುರುಬ ಸಮಾಜದ ಶೈಕ್ಷಣಿಕ, ಸಾಮಾಜಿಕ, ಅರ್ಥಿಕ, ರಾಜಕೀಯ ಅಭಿವೃದ್ದಿಗೆ ಜಿಲ್ಲಾ ಕುರುಬರ ಸಂಘದ ನಿರಂತರವಾಗಿ ಪ್ರಯತ್ನಿಸುತ್ತಾ ಬಂದಿದೆ ಎಂದರು.…

ಮುಂದೆ ಓದಿ...

ಕೋವಿಡ್ ಮಾರ್ಗಸೂಚಿ ಅನುಸರಿಸಿ ತರಗತಿ ಆರಂಭಿಸಿ: ಡಿಸಿ

ತುಮಕೂರು :        ಕೋವಿಡ್-19 ಮಾರ್ಗಸೂಚಿಯನ್ವಯ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು 6 ರಿಂದ 9ನೇ ತರಗತಿಗಳಿಗೆ ವಿದ್ಯಾಗಮ ಹಾಗೂ 10ನೇ ಮತ್ತು 12ನೇ ತರಗತಿಗಳನ್ನು ಜನವರಿ 1ರಿಂದ ಪ್ರಾರಂಭ ಮಾಡಬೇಕೆಂದು ಡಿಡಿಪಿಐ ಹಾಗೂ ಬಿಇಓಗಳಿಗೆ ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ಅವರು ಸೂಚಿಸಿದರು.        ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಶಾಲಾ ತರಗತಿಗಳ ಪ್ರಾರಂಭಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಮಿತಿಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಶಾಲೆ ಪ್ರಾರಂಭಕ್ಕೆ ಮುನ್ನ ಪೋಷಕರ ಸಭೆ ನಡೆಸುವ ಮೂಲಕ ಕೋವಿಡ್-19ರ ಹಿನ್ನಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವ ಬಗ್ಗೆ ಮತ್ತು ಸ್ಯಾನಿಟೈಸ್ ಮಾಡುವ ಬಗ್ಗೆ ಮತ್ತು ಆಗಿಂದಾಗ್ಗೆ ಲಿಕ್ಟಿಡ್ ಸೋಪಿನಲ್ಲಿ ಕೈತೊಳೆಯುವ ಬಗ್ಗೆ ಸೂಕ್ತ ಮಾರ್ಗದರ್ಶನವನ್ನು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತಿಳಿಸಬೇಕು ಎಂದರು.…

ಮುಂದೆ ಓದಿ...

ಹೆಚ್ಚಿದ ಅಪರಾಧ ಕೃತ್ಯದಿಂದ ಗುಬ್ಬಿ ನಾಗರೀಕರಲ್ಲಿ ಆತಂಕ

ಗುಬ್ಬಿ:        ಹೆಚ್ಚಿದ ಅಪರಾಧ ಕೃತ್ಯದಿಂದ ಗುಬ್ಬಿ ನಾಗರೀಕರಲ್ಲಿ ಆತಂಕ ಮನೆ ಮಾಡಿದೆ. ಸರಗಳ್ಳರ ಹಾವಳಿ ಜತೆಗೆ ಈಚೆಗೆ ಪುಂಡರ ಹಾವಳಿ ಹೆಚ್ಚಾಗಿ ಪಟ್ಟಣದ ಹಾಡುಹಗಲೇ ಗುಂಪು ಕಟ್ಟಿಕೊಂಡು ಯುವಕನೊರ್ವನ ಮೇಲೆ ಹಲ್ಲೆ ಜತೆಗೆ ಜಾತ್ರೆಗೆ ಸಂಬಂಧಿಸಿದ ಹಣ ದರೋಡೆ ಯತ್ನ ನಡೆದಿರುವುದು ಭಯವನ್ನುಂಟು ಮಾಡಿದೆ.       ಕಳೆದೊಂದು ವಾರದಲ್ಲಿ ಅಪರಾಧ ಕೃತ್ಯಗಳು ಸಾಲು ಸಾಲಾಗಿ ನಡೆದಿವೆ. ಸರಗಳ್ಳರು ಮತ್ತೊಮ್ಮೆ ತಮ್ಮ ಕೈಚಳಕ ತೋರಿದ್ದಾರೆ. ಈಚೆಗೆ ಸೈಲೆಂಟ್ ಆಗಿದ್ದ ಪಟ್ಟಣದಲ್ಲಿ ಸರಗಳ್ಳರು ಸೋಮವಾರದಂದೇ ಗುರಿಯಾಗಿಸಿಕೊಂಡು ಆಗಮಿಸುತ್ತಿರುವುದು ವಿಪರ್ಯಾಸವಾಗಿದೆ. ಸಂತೇ ದಿನದ ಸಂಜೆ ವೇಳೆ ಹೊಸಬಡಾವಣೆಗಳನ್ನೇ ಆಯ್ಕೆ ಮಾಡಿಕೊಂಡು ಪಟ್ಟಣದ ಕೊನೆಯ ರಸ್ತೆಗಳಲ್ಲಿ ಒಂಟಿ ಮಹಿಳೆಯರ ಬರುವಿಕೆಗೆ ಕಾದು ಸರಗಳಿಗೆ ಕೈ ಹಾಕುತ್ತಿದ್ದಾರೆ. ವಿನಾಯಕ ಬಡಾವಣೆ ಮತ್ತು ಮಾರುತಿನಗರ ಶುಭೋದಯ ಶಾಲೆಯ ಸಮೀಪದಲ್ಲಿ ಎರಡು ಪ್ರಕರಣ ಒಂದೇ ದಿನ ನಡೆದಿದೆ.    …

ಮುಂದೆ ಓದಿ...

ಹುಳಿಯಾರಿನಲ್ಲಿ ಇನ್ನೂ ಆರಂಭವಾಗದ ರಾಗಿ ಖರೀದಿ ನೋಂದಣಿ

ಹುಳಿಯಾರು:       ಸರ್ಕಾರದ ಬೆಂಬಲ ಬೆಲೆ ಯೋಜನೆಯಲ್ಲಿ ರಾಗಿ ಖರೀದಿಸಲು ಹುಳಿಯಾರು ಮಾರುಕಟ್ಟೆಯಲ್ಲಿ ಕಛೇರಿ ತೆರೆಯಲಾಗಿದೆ. ಆದರೆ ಕಛೇರಿ ತೆಗೆದು ವಾರವಾದರೂ ಇನ್ನೂ ನೋಂದಣಿ ಪ್ರಕ್ರಿಯೆ ಮಾತ್ರ ಆರಂಭವಾಗಿಲ್ಲ. ಪರಿಣಾಮ ನಿತ್ಯ ನೂರಾರು ರೈತರು ಎಪಿಎಂಸಿಗೆ ಅಲೆಯುವಂತ್ತಾಗಿದೆ.       ಈ ವರ್ಷ ಉತ್ತಮ ಮಳೆ ಬಂದ ಪರಿಣಾಮ ತಾಲೂಕಿನಲ್ಲಿ ರಾಗಿ ಬಂಪರ್ ಬೆಳೆ ಬಂದಿದೆ. ಅಲ್ಲದೆ ಕೋವಿಡ್‍ನಿಂದಾಗಿ ಹಳ್ಳಿಗೆ ಮರಳಿದ ಯುವ ರೈತರು ಉತ್ಸುಕರಾಗಿ ರಾಗಿ ಬೆಳೆದಿದ್ದಾರೆ. ಕಳೆದ 2 ವರ್ಷಗಳಿಂದ ರಾಗಿ ಖರೀದಿ ಕೇಂದ್ರ ತೆರೆದಿದ್ದರಿಂದ ಈ ವರ್ಷವೂ ತೆರೆಯುವ ನಿರೀಕ್ಷೆಯೊಂದಿಗೆ ಮಾರುಕಟ್ಟೆಗೆ ರಾಗಿ ಬಿಡದೆ ಸಂಗ್ರಹಿಸಿಟ್ಟಿದ್ದಾರೆ. ಹೆಸರು ನೊಂದಾಯಿಸಲು ಅಗತ್ಯವಾದ ಬೆಳೆ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ಪ್ರತಿ ಕೈಯಲ್ಲಿಟ್ಟುಕೊಂಡು ಕಾಯುತ್ತಿದ್ದರು.       ರೈತರ ನಿರೀಕ್ಷೆಯಂತೆ ಮಾರುಕಟ್ಟೆಯಲ್ಲಿ ರಾಗಿ ಬೆಲೆ ಕುಸಿದಿರುವುದರಿಂದ ಸರ್ಕಾರ ಮಧ್ಯ…

ಮುಂದೆ ಓದಿ...

ಗ್ರಾಮ ಪಂಚಾಯಿತಿ ಚುನಾವಣೆ : ಇಂದು ಮತ ಎಣಿಕೆ

 ತುಮಕೂರು :       ತುಮಕೂರು ಜಿಲ್ಲೆಯ ಗ್ರಾಮ ಪಂಚಾಯಿತಿಯ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಯು ಇಂದು ಸಂಬಂಧಿಸಿದ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಜಿಲ್ಲಾಡಳಿತ ಮತ ಎಣಿಕೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.         ತುಮಕೂರು ತಾಲೂಕಿನ 41 ಗ್ರಾಮ ಪಂಚಾಯಿತಿಗಳು, ಗುಬ್ಬಿ-34, ಕುಣಿಗಲ್-36, ತಿಪಟೂರು-25, ತುರುವೇಕೆರೆ-27, ಚಿಕ್ಕನಾಯಕನಹಳ್ಳಿ-27, ಮಧುಗಿರಿ-39, ಶಿರಾ-41, ಕೊರಟಗೆರೆ-24 ಹಾಗೂ ಪಾವಗಡ ತಾಲೂಕಿನ 33 ಗ್ರಾಮ ಪಂಚಾಯಿತಿಗಳು ಸೇರಿದಂತೆ ಒಟ್ಟು ಜಿಲ್ಲೆಯ 327 ಗ್ರಾಮ ಪಂಚಾಯಿತಿಗಳ ಮತ ಎಣಿಕೆಯು ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ.         ಜಿಲ್ಲೆಯಲ್ಲಿ ಗ್ರಾಮಪಂಚಾಯಿತಿಗಳ 2661 ಕ್ಷೇತ್ರಗಳ ಮತ ಎಣಿಕೆಯು 167 ಕೊಠಡಿಗಳಲ್ಲಿ 762 ಟೇಬಲ್‍ಗಳಲ್ಲಿ ನಡೆಯಲಿದೆ. ಮತ ಎಣಿಕೆಗಾಗಿ 817 ಮಂದಿ ಎಣಿಕೆ ಮೇಲ್ವಿಚಾರಕರು, 1624 ಮಂದಿ ಸಹಾಯಕರನ್ನು ನೇಮಿಸಲಾಗಿದೆ.        ಮತ ಎಣಿಕೆಯು ಆಯಾ…

ಮುಂದೆ ಓದಿ...

ಮರಾಠ ಪ್ರಾಧಿಕಾರ ಕೈ ಬಿಡಲು ಆಗ್ರಹಿಸಿ ಜ.9 ರಂದು ರೈಲು ಬಂದ್ ಚಳವಳಿ

ತುಮಕೂರು :        ರಾಜ್ಯದಲ್ಲಿ ಮರಾಠ ಪ್ರಾಧಿಕಾರ ರಚನೆ ಮಾಡಿರುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿ ಕನ್ನಡ ಒಕ್ಕೂಟದ ವತಿಯಿಂದ ಜ. 9 ರಂದು ರಾಜ್ಯಾದ್ಯಂತ ರೈಲು ಬಂದ್ ಚಳವಳಿ ಹಮ್ಮಿಕೊಂಡಿರುವುದಾಗಿ ವಾಟಾಳ್ ನಾಗರಾಜ್ ತಿಳಿಸಿದರು.       ರಾಜ್ಯದಲ್ಲಿ ಮರಾಠ ಪ್ರಾಧಿಕಾರವನ್ನು ರಚನೆ ಮಾಡಿರುವ ಸರ್ಕಾರ ಹಿಂದಕ್ಕೆ ಪಡೆಯುವ ಸೂಚನೆಯನ್ನು ತೋರಿಸುತ್ತಿಲ್ಲ. ಹೀಗಾಗಿ ರಾಜ್ಯದ ಎಲ್ಲ ಕಡೆ ಚಳವಳಿ ನಡೆಸಲಾಗುತ್ತಿದೆ ಎಂದರು.      ನಗರದ ರೈಲ್ವೆ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ. 9 ರಂದು ರಾಜ್ಯದ 500 ಸ್ಥಳಗಳಲ್ಲಿ ರೈಲು ಸಂಚಾರ ಬಂದ್ ಮಾಡಿ ರೈಲ್ವೆ ಹಳಿಗಳ ಮೇಲೆ ಕುಳಿತು ಸತ್ಯಾಗ್ರಹ ನಡೆಸುವುದಾಗಿ ಹೇಳಿದರು.       ಜ. 9 ರಂದು ರೈಲುಗಳನ್ನು ಓಡಿಸುವಾಗ ಎಚ್ಚರದಿಂದ ಓಡಿಸಬೇಕು. ಈಗ ನಿಗದಿಪಡಿಸಿರುವ 500 ಸ್ಥಳಗಳು ಮುಂದೆ 1 ಸಾವಿರ ಸ್ಥಳಗಳಾಗಬಹುದು.…

ಮುಂದೆ ಓದಿ...