ಗೃಹ ರಕ್ಷಕದಳ ಸಿಬ್ಬಂದಿ ಮತ್ತು ಸ್ವಚ್ಛತಗಾರರಿಗೆ ಆಹಾರ ಧಾನ್ಯ ಕಿಟ್ ವಿತರಣೆ

ತುಮಕೂರು:       ನಗರದ ಡಿವೈಎಸ್‍ಪಿ ಕಚೇರಿ ಬಳಿ ಗೃಹ ರಕ್ಷಕದಳ ಸಿಬ್ಬಂದಿಗಳಿಗೆ ಮತ್ತು ಪೊಲೀಸ್ ಠಾಣಾ ಸ್ವಚ್ಛತಗಾರರಿಗೆ ಆಹಾರ ಧಾನ್ಯ ಕಿಟ್ ಮತ್ತು ತರಕಾರಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ ವಿತರಿಸಿದರು.       ನಂತರ ಮಾತನಾಡಿದ ಅವರು, ಕೋವಿಡ್-19ರ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದರು.       ವೈದ್ಯರು ಮತ್ತು ಪೊಲೀಸರಿಗೂ ಕೂಡ ತಪಾಸಣೆ ಮಾಡಬೇಕೆಂದು ಜಿಲ್ಲಾಡಳಿತ ವತಿಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ಚೆಕ್‍ಪೋಸ್ಟ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಮನೆಗೆ ಹೋಗುವಾಗ ಸ್ವಚ್ಛತೆ ಕಾಪಾಡಿಕೊಳ್ಳಬೇಕು.        ಅಲ್ಲದೇ ಮನೆಯವರಿಗೂ ಸಹ ಇದರ ಬಗ್ಗೆ ಅರಿವು ಮೂಡಿಸಬೇಕು. ವಯಸ್ಸಾದ ಹೋಂ ಗಾರ್ಡ್ ಸಿಬ್ಬಂದಿಗಳಿಗೆ ತಿಂಗಳಿಗೆ 2 ಬಾರಿ ತಪಾಸಣೆ ಮಾಡಲಾಗುವುದು. ಯಾವುದೇ…

ಮುಂದೆ ಓದಿ...

ತುಮಕೂರು : 5ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ!!

ತುಮಕೂರು:      ದಿನೇ ದೆನೇ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಕರಣ ಹೆಚ್ಚುತ್ತಿರುವ  ಹಿನ್ನೆಲೆಯಲ್ಲಿ  ಜನರ ಆತಂಕ ಹೆಚ್ಚುತ್ತಿದೆ.      ಜಿಲ್ಲೆಯ ಕೆಹೆಚ್‍ಬಿ ಕಾಲೋನಿಯ ಪಿ-535 ಮೃತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಪಿ-553 ವ್ಯಕ್ತಿಗೂ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಅವರು ತಿಳಿಸಿದ್ದಾರೆ.        ಮೃತ ಪಿ-535 ವ್ಯಕ್ತಿಯು ಪ್ರಾಥಮಿಕ ಸಂಪರ್ಕದಲ್ಲಿದ್ದ ಅವರ ಕುಟುಂಬ ಸದಸ್ಯರ 4 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ 3 ಮಾದರಿಗಳು ನೆಗೆಟಿವ್ ಬಂದಿದ್ದು, ಮೃತ ವ್ಯಕ್ತಿಯ ಪತ್ನಿಗೆ ಪಾಸಿಟಿವ್ ಬಂದಿದ್ದು, ಅವರನ್ನು ಐಸೋಲೇಶನ್ ಮಾಡಲಾಗಿದೆ.        ಉಳಿದಂತೆ ಮೃತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಈಗಾಗಲೇ ಐಸೋಲೇಶನ್ ಮಾಡಲಾಗಿದ್ದು, ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದು, ಅವರನ್ನು ಸಹ ಪರೀಕ್ಷೆಗೊಳಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.       ಜಿಲ್ಲೆಯಲ್ಲಿ…

ಮುಂದೆ ಓದಿ...

ತುಮಕೂರು : ಗಡಿ ಪ್ರದೇಶಗಳ ಚೆಕ್‍ಪೋಸ್ಟ್ ಗಳಿಗೆ ಸಿಇಓ ಭೇಟಿ!!

 ತುಮಕೂರು:       ತುಮಕೂರು ಜಿಲ್ಲೆಯ ಕುಣಿಗಲ್, ತುರುವೇಕೆರೆ ತಾಲೂಕಿನ ಗಡಿಗಳಾದ ಜೋಡುಕಟ್ಟೆ, ಕಲ್ಲುನಾಗತೀಹಳ್ಳಿ, ಹಂಚಿಹಳ್ಳಿ, ಅಂಚೇಪಾಳ್ಯ ಪ್ರದೇಶಗಳಿಗೆ ಕೋವಿಡ್-19 ನಿಯಂತ್ರಣ ಕುರಿತು ಗಡಿ ಪ್ರದೇಶದ ಚೆಕ್‍ಪೋಸ್ಟ್‍ಗಳಲ್ಲಿ ಕೈಗೊಳ್ಳಲಾಗುತ್ತಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಏಪ್ರಿಲ್ 28 ರಂದು ರಾತ್ರಿ 9-30 ಗಂಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.       ಕಾರ್ಯನಿರತ ಪೋಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಂದ ತಪಾಸಣಾ ಕಾರ್ಯ ವೈಖರಿಯ ಮಾಹಿತಿ ಪಡೆದು, ಚೆಕ್‍ಪೋಸ್ಟ್‍ಗಳಿಂದ ಹೋಗುವ/ಬರುವ ವಾಹನಗಳ ಸಂಖ್ಯೆ, ದೂರವಾಣಿ ಸಂಖ್ಯೆ ಹಾಗೂ ಉದ್ದೇಶಗಳ ಬಗ್ಗೆ ರಿಜಿಸ್ಟರ್‍ನಲ್ಲಿ ದಾಖಲು ಮಾಡಿ ಸುಬಾಹು ತಂತ್ರಾಂಶದಲ್ಲಿ ಅಳವಡಿಸಲು ಕ್ರಮ ಜರುಗಿಸುವಂತೆ ಸೂಚಿಸಿದರು.         ಚೆಕ್‍ಪೋಸ್ಟ್‍ಗಳಲ್ಲಿ ಕರ್ತವ್ಯನಿರತ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಶುದ್ದ ಕುಡಿಯುವ ನೀರನ್ನು ಒದಗಿಸುವಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಸೂಚಿಸಿದರು.      …

ಮುಂದೆ ಓದಿ...

ಕಲ್ಲುಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ಘಟಕಗಳಲ್ಲಿ ಉಪಖನಿಜಗಳ ಉತ್ಪಾದನೆ ಮತ್ತು ಸಾಗಾಣಿಕೆಗೆ ಅನುಮತಿ

ತುಮಕೂರು :       ಕೋವಿಡ್-19 ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಕಲ್ಲುಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ಘಟಕಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.       ಜಿಲ್ಲೆಯಲ್ಲಿನ ಕಂಟೈನ್ಮೆಂಟ್ ವಲಯದಿಂದ ಹೊರಗಡೆ ಇರುವ ಪ್ರದೇಶಗಳಲ್ಲಿನ ಪರವಾನಗಿ ಹೊಂದಿರುವ ಕಲ್ಲುಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ಘಟಕಗಳಲ್ಲಿ ಉಪಖನಿಜಗಳ ಉತ್ಪಾದನೆ ಮತ್ತು ಸಾಗಾಣಿಕೆ ಕಾರ್ಯವನ್ನು ಸರ್ಕಾರದ ಆದೇಶದಂತೆ ಕೋವಿಡ್-19 ನಿಯಂತ್ರಣ ಮುಂಜಾಗ್ರತ ಕ್ರಮಗಳನ್ನು ಪಾಲಿಸುವ ಷರತ್ತಿಗೊಳಪಟ್ಟು ಪುನಾರಂಭಿಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಅವರು ಆದೇಶಿಸಿದ್ದಾರೆ.

ಮುಂದೆ ಓದಿ...

ತುಮಕೂರಿನಲ್ಲಿ ನಿಲ್ಲದ ದಾಸೋಹ‌ ಪರಂಪರೆ

 ತುಮಕೂರು : ತುಮಕೂರು  ಜಿಲ್ಲೆ ದಾಸೋಹಕ್ಕೆ ಹೆಸರಾದ ಊರು. ಕೋವಿಡ್-19ನಂತಹ ಸಂಕಷ್ಟ ಕಾಲದಲ್ಲಿಯೂ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್.ರಾಜೇಂದ್ರ ಮತ್ತು ಗೆಳೆಯರು, ನಿರ್ಗತಿಕರು, ಬಡವರು, ಕೋರೋನ ವಾರಿಯರ್ಸ್‍ಗಳ ಹಸಿವು ನೀಗಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹಿರೇಮಠದ ಡಾ.ಶ್ರೀಶಿವಾನಂದಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.       ನಗರದ ಕುಣಿಗಲ್ ರಸ್ತೆಯ ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ಯುವ ಕಾಂಗ್ರೆಸ್ ಹಾಗೂ ಆರ್.ಆರ್.ಅಭಿಮಾನಿ ಬಳಗದಿಂದ ನಡೆಸುತ್ತಿರುವ ಉಚಿತ ದಾಸೋಹ ಸಿದ್ದಪಡಿಸುವ ಜಾಗಕ್ಕೆ ಭೇಟಿ ನೀಡಿ,ಖುದ್ದು ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಕೋರೋನ ದಿಂದ ಇಡೀ ವಿಶ್ವವೇ ತಲ್ಲಣಗೊಂಡಿದೆ.ನಗರ ಪ್ರದೇಶದಲ್ಲಿರುವ ಬಡವರು, ಕೂಲಿ ಕಾರ್ಮಿಕರು,ವಲಸೆ ಕಾರ್ಮಿಕರು,ಕೋವಿಡ್-19 ತಡೆಯಲು ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್, ಹೋಂ ಗಾರ್ಡ್,ಹೆಲ್ತ್,ಕೆ.ಎಸ್.ಆರ್.ಟಿ.ಸಿ.,ಆಶಾ ಹೀಗೆ ಹಲವು ಇಲಾಖೆಗಳ ನೌಕರರಿಗೆ ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟ ನೀಡಿ, ತುಮಕೂರಿನ ದಾಸೋಹ ಪರಂಪರೆಯನ್ನು ಮುಂದುವರೆಸಿದ್ದಾರೆ ಎಂದರು. ಬಡವರಿಗೆ ನೀಡುವ…

ಮುಂದೆ ಓದಿ...

ತುಮಕೂರಿನಲ್ಲಿ ಕೊರೋನಾ ಮಹಾಮಾರಿಗೆ ಎರಡನೇ ಬಲಿ!!

  ತುಮಕೂರು :      ತಿಲಕ್ ಪಾರ್ಕ್ ಪೋಲಿಸ್ ಠಾಣೆಯ ಹಿಂಬಾಗದಲ್ಲಿರುವ ಕೆ ಹೆಚ್ ಬಿ ಕಾಲೋನಿಯ ನಿವಾಸಿ ವೃದ್ದ  ಕೊರೋನಾ ಸೋಂಕಿಗೆ ಬಲಿಯಾಗಿರುವ ಘಟನೆ ನಡೆದಿದೆ.       ವೃದ್ದ(74) ಮೃತಪಟ್ಟ ಗಂಟೆಯ ನಂತರ ವರದಿ ಬಂದಿದ್ದು ವೃದ್ದನ ಮನೆಯ ಸುತ್ತ ಮುತ್ತ ಕಂಟೋನ್ಮೆಂಟ್ ಏರಿಯಾ ಎಂದು ಜಿಲ್ಲಾಧಿಕಾರಿಗಳಾದ ರಾಕೇಶ್ ಕುಮಾರ್ ಅವರು ಘೋಷಣೆ ಮಾಡಿದ್ದಾರೆ. ಸೋಂಕಿತನ ವಿವರ :      ತುಮಕೂರು ನಗರದ ಕೆ.ಹೆಚ್. ಬಿ ಕಾಲೋನಿಯ ನಿವಾಸಿಯೂಬ್ಬನಿಗೆ ನೆಗಡಿ, ಜ್ವರ, ಕೆಮ್ಮು, ಕಾಣಿಸಿಕೊಂಡಿದೆ, ಅಗ ಕೂಡಲೇ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಳೆದ 24 ರಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರ ಜೊತೆಗೆ ಅತನ ಹೆಂಡತಿ, ಮಕ್ಕಳನ್ನು ದಾಖಲಿಸಿಕೊಂಡಿದ್ದರು.  ಹೆಚ್ಚಿದ ಆತಂಕ:       ತುಮಕೂರಿನ ಪಿ.ಹೆಚ್. ಕಾಲೋನಿಯಲ್ಲಿ ಇತ್ತಿಚೆಗಷ್ಟೇ ಗುಜರಾತ್ ಮೂಲದ ವ್ಯಕ್ತಿಗೆ ಕೊರೋನಾ…

ಮುಂದೆ ಓದಿ...

ಗ್ರಾಹಕರಿಗೆ ದುಬಾರಿ ಬೆಲೆಯಲ್ಲಿ ದಿನಸಿ ವಸ್ತುಗಳ ಮಾರಾಟ ; ದೂರು!

ಪಾವಗಡ :       ಗ್ರಾಹಕರಿಗೆ ದುಬಾರಿ ಬೆಲೆಯಲ್ಲಿ ದಿನಸಿ ವಸ್ತುಗಳ ಮಾರಾಟ ಮಾಡಲು ಮುಂದಾಗಿದ್ದ ಅಂಗಡಿ ಮಾಲಿಕನಿಗೆ ಸ್ಥಳೀಯರಿಂದ ಅಂಗಡಿ ಬಾಗಿಲು ಹಾಕಿ ತಹಶಿಲ್ದಾರ್ ಗೆ ದೂರ ಸಲ್ಲಿಸಿದ ಘಟನೆ ತಾಲೂಕಿನಲ್ಲಿ ಸಂಭವಿಸಿದೆ.        ಈ ಘಟನೆ ಪಾವಗಡ ತಾಲೂಕಿನ ಕಡಮಲಕುಂಟೆ ಗ್ರಾಮ ದಲ್ಲಿ  ನಡೆದಿದೆ ಲಾಕ್ ಡೌನ್ ಆದ ಪರಿಣಾಮ ದಿಂದ ಎಲ್ಲಾ ಚಿಲ್ಲರೆ ಅಂಗಡಿ ಮಾಲೀಕರು ಅಗತ್ಯ ವಸ್ತುಗಳ  MRP ದರಕ್ಕಿಂತ ಹೆಚ್ಚುವರಿ ಹಣ ಅಂದರೆ ಅದರ ದುಪ್ಪಟ್ಟು ಬೆಲೆ ಪಡೆದು ಸಾರ್ವಜನಿಕರ ಹಣವನ್ನು ಹಗಲು ದರೋಡೆಯಂತೆ ಲೂಟಿ ಮಾಡುತ್ತಿದ್ದಾರೆ.       ಕೆಲಸವಿಲ್ಲದೆ,ಆದಾಯವಿಲ್ಲದೆ, ಜನರು ಅಪಾರ ಕಷ್ಟದಲ್ಲಿ ಸಿಲುಕಿರುವ ಇಂತಹ ಸಂದರ್ಭದಲ್ಲಿ ಧರದ ಬಿಸಿಯು ಮುಟ್ಟಿ ಕಂಗಾಲಾಗಿದ್ದಾರೆ ಇದರಿಂದ ಜೀವನ ಹೇಗೆ ಮಾಡುವುದು ಎಂದು ಪರಿತಪಿಸುತ್ತಿದ್ದಾರೆ ಎಂದು ಕಡಮಲಕುಂಟೆ ಗೆಳೆಯರ ಬಳಗ ಅಂಗಡಿ ಮಾಲಿಕರನ್ನು ಪ್ರಶ್ನಿಸಿದಾಗ…

ಮುಂದೆ ಓದಿ...

ಆಂಧ್ರದಿಂದ ಯಾರೊಬ್ಬರೂ ನುಸುಳದಂತೆ ಗಡಿಗಳಲ್ಲಿ ಚೆಕ್ ಪೋಸ್ಟ್!!

ಪಾವಗಡ:       ಪಾವಗಡ ತಾಲ್ಲೂಕಿನಲ್ಲಿ ಯಾವುದೇ ಕರೋನಾ ಪಾಸಿಟಿವ್ ಕೇಸ್ ಇಲ್ಲದಿದ್ದರೂ ಸಹ ಪಕ್ಕದ ಆಂಧ್ರದಲ್ಲಿ ಹೆಚ್ಚಿನ ಕೇಸ್ ಗಳು ಕಂಡು ಬಂದಿರುವುದರಿಂದ ಆಂಧ್ರದಿಂದ ಯಾರೊಬ್ಬರೂ ನುಸುಳದಂತೆ ಗಡಿಗಳಲ್ಲಿ ಚೆಕ್ ಪೋಸ್ಟ್ ಹಾಕಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ತುಮಕೂರು ಜಿಲ್ಲಾಧಿಕಾರಿ ಡಾ|| ರಾಕೇಶ್ ಕುಮಾರ್ ತಿಳಿಸಿದರು.       ಸೋಮವಾರ ಗಡಿಗ್ರಾಮವಾದ ಮುರರಾಯನಹಳ್ಳಿಯಲ್ಲಿ ಎಚ್.ಪಿ. ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದ ಸ್ಥಳಕ್ಕೆ ಬೇಟಿ ನೀಡಿ ಗ್ರಾಮಸ್ಥರೊಂದಿಗೆ ಘಟನೆಯ ವಿವರವನ್ನು ಪಡೆದುಕೊಂಡು, ನಂತರ ಹಿಂದೂಪುರ ಮಾರ್ಗದ ಗಡಿಗ್ರಾಮವಾದ ವಿರುಪಸಮುದ್ರ, ಅಕ್ಕಮ್ಮನಹಳ್ಳಿ, ಗುಮ್ಮಗಟ್ಟ, ಕೊಡಮಡಗು, ದೊಮ್ಮತಮರಿ, ಹಾಗೂ ಕಲ್ಯಾಣದುರ್ಗ ಮಾರ್ಗದ ನಾಗಲಾಪುರ ಗ್ರಾಮಗ ಗಡಿ ಚೆಕ್ ಪೋಸ್ಟ್ ಗೆ ಬೇಟಿ ನೀಡಿ ನಂತರ ವೆಂಕಟಾಪುರ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರೊಂದಗೆ ಕೋವಿಡ್ 19 ವಿರುದ್ದ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸೂಚಿಸಿ, ನಂತರ ಪಟ್ಟಣದ ಪೋಲೀಸ್ ಠಾಣೆಯಲ್ಲಿ ನೂತನವಾಗಿ ನಿರ್ಮಿಸಿರುವ…

ಮುಂದೆ ಓದಿ...

ತುಮಕೂರು : ಕ್ಯಾತ್ಸಂದ್ರ ಪಿಎಸೈ ರಾಮ್ ಪ್ರಸಾದ್‌ ರಿಂದ ‘ಬಡವರ ಬಾಗಿಲು’ ಆರಂಭ!!

      ತುಮಕೂರು :       ಕ್ಯಾತ್ಸಂದ್ರ ಪೋಲಿಸ್ ಠಾಣಾ ವ್ಯಾಪ್ತಿಯ ಕ್ಯಾತ್ಸಂದ್ರ ಸರ್ಕಾರಿ ಉರ್ದು ಪಾಠ ಶಾಲೆಯ ಆವರಣದಲ್ಲಿ ಬಡವರ ಬಾಗಿಲು ಕಾರ್ಯಕ್ರಮ ಕ್ಕೆ ಇಂದು ಆರಂಭ.       ತುಮಕೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಮೊದಲಿಗೆ ಆರಂಭವಾದ ಬಡವರ ಬಾಗಿಲು ಎನ್ನುವ ವಿನೂತನ ಕಾರ್ಯಕ್ರಮ ನಗರ ಉಪಾಧೀಕ್ಷಕರ ವ್ಯಾಪ್ತಿಯ ಕ್ಯಾತ್ಸಂದ್ರ ಪೋಲಿಸ್ ಠಾಣಾ ಸರಹದ್ದಿನಲ್ಲಿ ಆರಂಭವಾಗಿದೆ ಮಾನ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣರವರು ಬುಧವಾರ ಮಧ್ಯಾಹ್ನ 12.30ಕ್ಕೆ ಚಾಲನೆ ಮಾಡಿದರು.        ಕ್ಯಾತ್ಸಂದ್ರ ಠಾಣೆಯ ಪಿಎಸೈ ರಾಮ ಪ್ರಸಾದ್ ಸ್ಥಳಿಯರ ಸಹಕಾರ ಮತ್ತು ಪಿಎಸೈ ರವರು ಸ್ವತ ಹಣ ಹಾಕಿ ಬಡವರು ಮತ್ತು ನಿರ್ಗತಿಕರ ಸಹಾಯಕ್ಕಾಗಿ ಬಡವರ ಬಾಗಿಲು ಎನ್ನುವ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ.       ಉಳ್ಳವರು ಸಹಾಯ ಮಾಡಲು ಇಚ್ಚಿಸುವವರು…

ಮುಂದೆ ಓದಿ...

ತುಮಕೂರು : 49 ತಾಲ್ಲೂಕುಗಳಿಗೆ ತಲಾ 1 ಕೋಟಿ ಅನುದಾನ!!

ತುಮಕೂರು:       ಸರ್ಕಾರ ಕುಡಿಯುವ ನೀರಿಗಾಗಿ ಸಾಕಷ್ಟು ಹಣವನ್ನು ವಿನಿಯೋಗಿಸುತ್ತಿದ್ದು, ಬರಪೀಡಿತ ತಾಲ್ಲೂಕಿಗೆ ಒಂದು ಕೋಟಿ ಹಾಗೂ ಇತರೆ ತಾಲ್ಲೂಕಿಗೆ 50 ಲಕ್ಷ ರೂ. ಗಳಿಗೆ ಮಂಜೂರಾತಿ ನೀಡಿದ್ದು, ಈ ಹಣದ ಸಂಪೂರ್ಣ ಬಳಕೆಗೆ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆದು ತುರ್ತಾಗಿ ಕಾರ್ಯಗತಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.       ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ವಿವಿಧ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಡಿಯುವ ನೀರಿನ ಸಮಸ್ಯೆ ಕುರಿತು ಕ್ಷೇತ್ರದ ಶಾಸಕರಿಂದ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ತೀವ್ರ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಜನ ಜಾನುವಾರುಗಳಿಗೆ ತೊಂದರೆಯಾಗದಂತೆ ಟ್ಯಾಂಕರ್ ಮೂಲಕ ಆದ್ಯತೆ ಮೇರೆಗೆ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು.…

ಮುಂದೆ ಓದಿ...