ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ತಾಲೂಕಿನ 4 ಗ್ರಾಪಂಗಳು ಆಯ್ಕೆ!

ಕೊರಟಗೆರೆ:       ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ತಾಲೂಕಿನ ನಾಲ್ಕು ಗ್ರಾಪಂಗಳು ಆಯ್ಕೆಯಾಗಿದ್ದು, ಗ್ರಾಪಂಯ ಪ್ರತಿಯೊಂದು ಮನೆಯಿಂದ ಒಣ ಕಸ ಮತ್ತು ಹಸಿಕಸ ಸಂಗ್ರಹಸಿ ಅದನ್ನ ಬಹುಗ್ರಾಮ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಿರ್ವಹಣೆ ಮಾಡಲಾಗುವುದು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಕಾಶ್ ಎಂದು ತಿಳಿಸಿದರು.       ತಾಲೂಕಿನ ಹೊಳವನಹಳ್ಳಿ ಗ್ರಾಪಂಯಲ್ಲಿ ನೂತವಾಗಿ ನಿರ್ಮಾಣವಾಗುತ್ತಿರುವ ಕಸವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಮಾತನಾಡಿದರು.       ಸ್ವಚ್ಛ ಭಾರತ ಮಿಷನ್ ಪರಿಕಲ್ಪನೆಯಿಂದ ಗ್ರಾಮ ಗಳಲ್ಲಿ ಸಂಗ್ರಹವಾಗುವ ಒಣ ಮತ್ತು ಹಸಿ ತ್ಯಾಜ್ಯವನ್ನ ಒಂದೆಡೆ ಸಂಗ್ರಹಿಸಿ ವಿಲೇವಾರಿ ಮಾಡುವುದು ಮತ್ತು ಸಂಸ್ಕರಿಸಿ ಬೇರೆಡೆ ಸಾಗಿಸುವ ಉದ್ದೇಶದಿಂದ ಹೊಳವನಹಳ್ಳಿ ಗ್ರಾಪಂಯ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಘನತ್ಯಾಜ್ಯ ಸಂಗ್ರಹ ನಿರ್ವಹಣೆ ಘಟಕವೊಂದನ್ನ ಸ್ಥಾಪಿಸಲಾಗುತ್ತಿದೆ.        ರಾಜ್ಯದಲ್ಲಿ ಕಸಮುಕ್ತ ಮಾಡುವ ಸಲುವಾಗಿ ಗ್ರಾಪಂಗಳಲ್ಲಿ ಕಸವಿಲೇವಾರಿ ಘಟಕವನ್ನ ಜಾರಿಗೆ ತಂದಿದ್ದು,…

ಮುಂದೆ ಓದಿ...

ಹುಳಿಯಾರಿನಲ್ಲಿ ವಿದ್ಯುತ್ ಕಂಪನಿಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ಹುಳಿಯಾರು:      ಕೇಂದ್ರ ಸರ್ಕಾರ ವಿದ್ಯುತ್ ವಲಯ ವನ್ನು ಖಾಸಗಿಕರಣ ಮಾಡುತ್ತಿ ರುವುದನ್ನು ವಿರೋಧಿಸಿ ಹುಳಿಯಾರು ಪಟ್ಟಣದ ಬೆಸ್ಕಾಂ ನೌಕರರು ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.      ಅಸರ್ಕಾರ ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀ ಕರಣಗೊಳಿಸುವ ಪ್ರಕ್ರಿಯೆ ಪ್ರಾರಂಭಿಸಿದ್ದು ಇದರಿಂದ ಸಾಕಷ್ಟು ಸಮಸ್ಯೆಯಾಗಲಿದೆ ಎಂದು ದೂರಲಾಯಿತು.       ಖಾಸಗಿಕರಣದಿಂದ ರೈತರು ಮತ್ತು ಬಡವರ ಮೇಲೆ ದುಷ್ಪರಿಣಾಮ ಬೀರಲಿದೆ. ಅಲ್ಲದೇ ಖಾಸಗೀಕರಣದ ನೀತಿ ಕಾರ್ಮಿಕರಿಗೆ ಮರಣ ಶಾಸನವಾಗಲಿದೆ. ವಿದ್ಯುತ್ ಇಲಾಖೆ ಲಾಭದಲ್ಲಿ ನಡೆಯುತ್ತಿದ್ದರೂ ಸಹ ಇಲಾಖೆಯನ್ನು ಖಾಸಗೀಕರಣ ಮಾಡುತ್ತಿರುವ ಕ್ರಮ ಸರಿಯಲ್ಲ. ಸರ್ಕಾರ ಕೂಡಲೇ ಈ ಕ್ರಮದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಲಾಯಿತು.      ಸೆಕ್ಷನ್ ಆಫೀಸರ್ ಉಮೇಶ್ ನಾಯಕ್, ಮೂರ್ತಪ್ಪ ಸೇರಿದಂತೆ 50 ಕ್ಕೂ ಹೆಚ್ಚು ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆ ನಂತರ ಕಪ್ಪುಪಟ್ಟಿ ಧರಿಸಿ ಕೆಲಸ…

ಮುಂದೆ ಓದಿ...

ಬಿಇಡಿ ವಿದ್ಯಾರ್ಥಿಗಳ ಪರೀಕ್ಷೆ ರದ್ದುಗೊಳಿಸಿ ಮುಂಬಡ್ತಿಗೆ ಪ್ರತಿಭಟನೆ!!

ತುಮಕೂರು:       ಪರೀಕ್ಷೆಗಳನ್ನು ರದ್ದುಪಡಿಸಿ ಮುಂಬಡ್ತಿ ನೀಡುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ) ನೇತೃತ್ವದಲ್ಲಿ ಬಿಇಡಿ ವಿದ್ಯಾರ್ಥಿಗಳು ತುಮಕೂರು ವಿಶ್ವವಿದ್ಯಾನಿಲಯದ ಎದುರು ಪ್ರತಿಭಟನೆ ನಡೆಸಿದರು.      ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‍ಎಫ್‍ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಮಾತನಾಡಿ ಯುಜಿಸಿ ಹಾಗೂ ಕೇಂದ್ರ-ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ ಕೋವಿಡ್ ಸಂದರ್ಭದಲ್ಲಿ ದೇಶವ್ಯಾಪಿ ಎಲ್ಲಾ ವಿವಿಗಳಲ್ಲೂ ಸಹ ತರಗತಿಗಳು ನಡೆದಿಲ್ಲ. ಆದ್ದರಿಂದ ಪರೀಕ್ಷೆಗಳನ್ನು ರದ್ದುಪಡಿಸಬೇಕೆಂದು ಒತ್ತಾಯ ಮಾಡಲಾಗಿತ್ತು.      ಇದನ್ನು ಮನಗಂಡ ಯುಜಿಸಿ ಹಾಗೂ ಸರ್ಕಾರ ಎಲ್ಲಾ ವಿದ್ಯಾರ್ಥಿಗಳಿಗೂ ಮುಂಬಡ್ತಿ ನೀಡುವಂತೆ ಸೂಚಿಸಿತ್ತು. ಆದರೆ ತುಮಕೂರು ವಿವಿಯು ವಿದ್ಯಾರ್ಥಿಗಳಿಗೆ ಮುಂಬಡ್ತಿ ನೀಡದೆ ನಿರ್ಲಕ್ಷ ಮಾಡಿತ್ತು. ಹಾಗಾಗಿ ಇಲ್ಲಿಯೂ ಸಹ ಯುಜಿಸಿ ನಿಯಮಗಳನ್ನು ಪಾಲಿಸಿ ಬಿಇಡಿ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ರದ್ದು ಮಾಡಿ, ಮುಂದಿನ ಸೆಮಿಸ್ಟರ್‍ಗೆ ಬಡ್ತಿ ನೀಡಬೇಕೆಂದು ಒತ್ತಾಯಿಸಿದರು.  …

ಮುಂದೆ ಓದಿ...