ಕನ್ನಡ ನಾಮಫಲಕ ಅಳವಡಿಕೆಗೆ ಒತ್ತಾಯಿಸಿ ಕರವೇ ಪ್ರತಿಭಟನೆ

ತುಮಕೂರು :      ಜಿಲ್ಲೆಯ ಅಂಗಡಿ ಮುಂಗಟ್ಟು ಗಳಿಗೆ ಹಾಗೂ ಜಾಹೀರಾತು ಫಲಕಗಳಲ್ಲಿ ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.      ಕರವೇ ಜಿಲ್ಲಾಧ್ಯಕ್ಷ ಕೆ.ಎನ್.ಮಂಜುನಾಥಗೌಡ ಅವರ ನೇತೃತ್ವದಲ್ಲಿ ನೂರಾರು ಕರವೇ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಕನ್ನಡ ನಾಮಪತ್ರಗಳನ್ನು ಅಳವಡಿಸುವಂತೆ ಆಗ್ರಹಿಸಿದರು.       ಭಾರತ ಬಹುಭಾಷೆಗಳ ನಾಡು, ಭಾಷಾ ವಾರು ಪ್ರಾಂತ್ಯಗಳ ವಿಂಗಡನೆಯ ನಂತರ ಕರ್ನಾಟಕ ಆಸ್ಥಿತ್ವಕ್ಕೆ ಬಂದಿದ್ದು, ಇದಕ್ಕಾಗಿ ಗೋಕಾಕ್ ಚಳುವಳಿಯಂತಹ ಹಲವಾರು ಹೋರಾಟಗಳೇ ನಡೆದಿವೆ. ಆದರೂ ಸಹ ಇಂದಿಗೂ ಕರ್ನಾಟಕದ ರಾಜ್ಯಧಾನಿ ಸೇರಿದಂತೆ, ಜಿಲ್ಲಾ ಕೇಂದ್ರಗಳಲ್ಲಿ ಅಂಗಡಿ ಮುಂಗಟ್ಟುಗಳಿಗೆ ಕನ್ನಡ ನಾಮಫಲಕ ಹಾಕುವುದರಲ್ಲಿ ಹಿಂದೆಟು ಹಾಕಲಾಗುತ್ತಿದೆ. ನಾಡಿನ ಇತರ ಭಾಷೆಗಳಿಗಿಂತ ಕನ್ನಡ ಭಾಷೆಯ ನಾಮಫಲಕ ದೊಡ್ಡದಾಗಿರ ಬೇಕೆಂಬ ನಿಯಮವನ್ನು…

ಮುಂದೆ ಓದಿ...

ಅಕ್ರಮವಾಗಿ ಕಟ್ಟಡ ನಿರ್ಮಾಣ : ತೆರವುಗೊಳಿಸುವಂತೆ ಡಿಸಿಗೆ ಗ್ರಾಮಸ್ಥರ ಮನವಿ

ಗುಬ್ಬಿ:       ರೈತರು ಬಳಸುತ್ತಿದ್ದ ಸರ್ಕಾರಿ ರಸ್ತೆಯನ್ನೇ ಸೇರಿಸಿಕೊಂಡು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ದೂರು ನೀಡಿದರೆ ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಮಾರಶೆಟ್ಟಿಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಜಾಣಮೌನ ತೋರುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಿ ರಸ್ತೆ ತೆರವುಗೊಳಿಸಬೇಕು ಎಂದು ತಾಲ್ಲೂಕಿನ ಕಡಬ ಹೋಬಳಿ ಅತ್ತಿಕಟ್ಟೆ ಗ್ರಾಮಸ್ಥರು ಬುಧವಾರ ಮನವಿ ಮಾಡಿದ್ದಾರೆ.        ಹಲವಾರು ವರ್ಷಗಳಿಂದ ಓಡಾಡಲಾಗುತ್ತಿದ್ದ ರಸ್ತೆ ನಿತ್ಯ ಬಳಕೆ ಮಾಡಲಾಗುತ್ತಿತ್ತು. ಜತೆಗೆ ಕೃಷಿಕರು ತಮ್ಮ ಹೊಲ, ತೋಟಗಳಿಗೆ ಈ ರಸ್ತೆ ಬಳಸಿಕೊಳ್ಳುತ್ತಿದ್ದರು. ಇಲ್ಲಿನ ನಿವೇಶನವೊಂದರ ಮಾಲೀಕತ್ವಕ್ಕೆ ನ್ಯಾಯಾಲಯದ ಮೆಟ್ಟಿಲೇರಿದೆ. ಕಳೆದೆರಡು ವರ್ಷದಿಂದ ನಿವೇಶನಕ್ಕೆ ನಡೆದ ವ್ಯಾಜ್ಯ ದಿನಕಳೆದಂತೆ ಓಡಾಡುವ ರಸ್ತೆ ಅತಿಕ್ರಮಣಕ್ಕೆ ತಿರುಗಿದೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ಲಿಖಿತ ದೂರು ನೀಡಲಾಗಿತ್ತು. ಸ್ಥಳ ಪರಿಶೀಲನೆ ನಡೆಸಿದ ಅಭಿವೃದ್ದಿ ಅಧಿಕಾರಿ ಗುರುಮೂರ್ತಿ ಸರ್ಕಾರಿ ರಸ್ತೆ ಒತ್ತುವರಿ…

ಮುಂದೆ ಓದಿ...

ಟೂಡಾ ಆಸ್ತಿಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಿ

ತುಮಕೂರು:       ಹೊಸ ಲೇಔಟ್‍ಗಳ ನಿರ್ಮಾಣದ ಜೊತೆಗೆ, ನಗರಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಆಸ್ತಿಗಳನ್ನು ಸಂರಕ್ಷಿಸುವ ಗುರುತರ ಜವಾಬ್ದಾರಿ ಟೂಡಾ ಸದಸ್ಯರ ಮೇಲಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.         ನಗರದ ವಿಘ್ನೇಶ್ವರ ಕಂರ್ಪಟ್‍ನಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ನೂತನವಾಗಿ ಟೂಡಾ ಸದಸ್ಯರಾಗಿ ನೇಮಕವಾದವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸದಸ್ಯರಿಗೆ ಅಭಿನಂದಿಸಿ ಮಾತನಾಡುತಿದ್ದ ಅವರು, ಟೂಡಾ ಆಸ್ತಿಗಳಾದ ಉದ್ಯಾನವನಗಳು, ಸಿ.ಎ.ಸೈಟಗಳನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸವನ್ನು ಬಹಳ ಜವಾಬ್ದಾರಿಯಿಂದ ಸದಸ್ಯರು ಮಾಡಬೇಕಾಗಿದೆ ಎಂದರು.      ನಗರದ ಹಲವಾರು ಉದ್ಯಾನವನಗಳನ್ನು ಕೆಲವರು ವಿಂಗಡಿಸಿ ಮಾರಾಟ ಮಾಡಿದ್ದಾರೆ. ನಗರಪಾಲಿಕೆ ವತಿಯಿಂದ ಪಾರ್ಕುಗಳ ಅಭಿವೃದ್ಧಿಗೆ ಮುಂದಾದಾಗ ನಿವೇಶನ ಕೊಂಡುಕೊಂಡವರು ಪರದಾಡುತ್ತಿದ್ದಾರೆ. ಹಾಗಾಗಿ ಮೊದಲು ನಗರದಲ್ಲಿ ಎಷ್ಟು ಪಾರ್ಕುಗಳಿವೆ? ಯಾವ ಸ್ಥಿತಿಯಲ್ಲಿವೆ? ಎಂಬ ಅಂಕಿ ಅಂಶವನ್ನು ದಾಖಲೆಗಳ…

ಮುಂದೆ ಓದಿ...