ಶಿರಾ ಉಪಚುನಾವಣೆಗೆ ಜಯಚಂದ್ರ ಹೆಸರು ಶಿಫಾರಸು : ಸುರ್ಜೇವಾಲಾ ತರಾಟೆ

ಬೆಂಗಳೂರು:       ಶಿರಾ ಕ್ಷೇತ್ರದ ಉಪಚುನಾವಣೆ ಬಗ್ಗೆ ಕೆಪಿಸಿಸಿ ನಿರ್ಧಾರವನ್ನು ರಾಜ್ಯ ಉಸ್ತುವಾರಿ ಕಾಂಗ್ರೆಸ್‍ನ ನಾಯಕ ರಣದೀಪ್ ಸುರ್ಜೆವಾಲ ಟೀಕಿಸಿದ್ದಲ್ಲದೇ, ರಾಜ್ಯ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ.       ಜಯಚಂದ್ರ 9 ಬಾರಿ ಚುನಾವಣೆಗೆ ನಿಂತಿದ್ದಾರೆ. ಮತ್ತೆ ಅವರ ಹೆಸರನ್ನೇ ಶಿಫಾರಸ್ಸು ಮಾಡಿದ್ದೀ ರಲ್ಲ. ನಿಮಗೆ ಸಾಮಾನ್ಯಜ್ಞಾನ ವಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ರಣದೀಪ್ ಸುರ್ಜೆವಾಲ ಶಿರಾ ಕ್ಷೇತ್ರದ ಕಾರ್ಯಕರ್ತರನ್ನು ಕಾಂಗ್ರೆಸ್‍ಗೆ ಸೇರಿಸಿಕೊಳ್ಳುವ ಕಾರ್ಯಕ್ರಮದ ಸಂದರ್ಭದಲ್ಲಿ ಹೈಕಮಾಂಡ್‍ನ ಸುರ್ಜೆವಾಲಾ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಫೋನ್ ಮಾಡಿದ್ದು, ಜಯಚಂದ್ರ ಅವರಿಗೆ ಟಿಕೆಟ್ ನೀಡಬಾರದಿತ್ತು. ರಾಜೇಶಗೌಡ ಅವರಿಗೆ ಟಿಕೆಟ್ ಕೊಡಬೇಕಿತ್ತು ಎಂದಿದ್ದಾರೆ. 1978ರಿಂದಲೂ 9 ಬಾರಿ ಜಯಚಂದ್ರ ಅವರೇ ಚುನಾವಣೆಗೆ ನಿಂತಿದ್ದಾರೆ. ನಿಮಗೆ ಕಾಮನ್ ಸೆನ್ಸ್ ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.       ರಾಜೇಶ್‍ಗೌಡ ಅವರು ಕಳೆದ ಬಾರಿ ಜೆಡಿಎಸ್ ಪರ…

ಮುಂದೆ ಓದಿ...

19 ಗಾಂಜಾ ಗಿಡಗಳನ್ನು ಬೆಳೆದಿದ್ದ ವ್ಯಕ್ತಿ ಪೊಲೀಸರ ವಶ

ಮಧುಗಿರಿ:      ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಎಂ.ಪ್ರವೀಣ್ ನೇತೃತ್ವದ ತಂಡ ಮಿಂಚಿನ ದಾಳಿ ನಡೆಸಿ ಸುಮಾರು 19 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದ ಘಟನೆ ಇತ್ತೀಚೆಗೆ ನಡೆದಿದೆ.       ತಾಲೂಕಿನ ಐ.ಡಿ.ಹಳ್ಳಿ ಹೋಬಳಿಯ ಬಡಿಗೇನಹಳ್ಳಿ ಗ್ರಾಮದ ಜಮೀನಿನಲ್ಲಿ ಪಾಪಣ್ಣ ಎಂಬುವವರು 19 ಗಾಂಜಾ ಗಿಡಗಳನ್ನು ಬೆಳೆದಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂದಿಸಿದ್ದಾರೆ. ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸಿಪಿಐ ಸರ್ಧಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.

ಮುಂದೆ ಓದಿ...

ವಿಶ್ವವಿದ್ಯಾಲಯದಲ್ಲಿ ಎಸ್‍ಎಫ್‍ಐ ನೂತನ ಸಮಿತಿ ರಚನೆ

ತುಮಕೂರು:      ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆಯು ದೇಶವ್ಯಾಪಿ ವಿದ್ಯಾರ್ಥಿಗಳ ಸಮಸ್ಯೆಗಳ ನಿವಾರಣೆ ಮತ್ತು ಮೂಲಭೂತ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತ ಬಂದಿದೆ.      ನವ ಉದಾರಿಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಪರಿಣಾಮ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಪೋರೇಟ್ ಕಂಪನಿಗಳು ಹಣಹೂಡಿ ವಿದ್ಯಾರ್ಥಿಗಳಿಂದ ವಸೂಲಿಗೆ ಇಳಿದಿವೆ. ಇಂತಹ ಸಂದರ್ಭದಲ್ಲಿ ಬಡವಿದ್ಯಾರ್ಥಿಗಳು ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಎಂಬುದು ಕನಸಿನ ಮಾತಾಗಿದೆ.       ಕಲಾ ಮತ್ತು ವಿಜ್ಞಾನ ಹೊರತುಪಡಿಸಿ ವೃತ್ತಿಪರ ಕೋರ್ಸ್‍ಗಳಿಗೆ ಪ್ರವೇಶ ಪಡೆಯಲು ಬಡ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ನಮ್ಮನ್ನು ಆಳುವ ಸರ್ಕಾರಗಳು ಸಹ ಶ್ರೀಮಂತರ ಪರವಾದ ನೀತಿಗಳನ್ನು ಜಾರಿಗೊಳಿಸಿ ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ದೂರವಿಡುವ ಕೆಲಸ ಮಾಡುತ್ತಿವೆ. ರಾಜಕಾರಣಿಗಳಿಗೆ ಸೇರಿದ ಶಿಕ್ಷಣ ಸಂಸ್ಥೆಗಳೇ ಹೆಚ್ಚಾಗಿದ್ದು ದುಬಾರಿ ಶುಲ್ಕ ವಿಧಿಸುವ ಮೂಲಕ ಬಡ ವಿದ್ಯಾರ್ಥಿಗಳನ್ನು ಸುಲಿಗೆ ಮಾಡುತ್ತಿವೆ.       ಇದನ್ನು…

ಮುಂದೆ ಓದಿ...

ಬಿಜೆಪಿಯ ಯುವ ಮೋರ್ಚಾ ನೂತನ ಜಿಲ್ಲಾಧ್ಯಕ್ಷರಾಗಿ ರವೀಶ್ ಆಯ್ಕೆ!

ತುಮಕೂರು:      ತುಮಕೂರು ಜಿಲ್ಲೆಯ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ನೂತನ ಜಿಲ್ಲಾಧ್ಯಕ್ಷರಾಗಿ ರವೀಶ್ ಅರಕೆರೆರವರನ್ನು ಆಯ್ಕೆ ಮಾಡಿ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರಾದ ಬಿ.ಸುರೇಶ್‍ಗೌಡರು ಆದೇಶ ಹೊರಡಿಸಿರುತ್ತಾರೆ.       ನೂತನ ಯುವ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ರವೀಶ್ ಅರಕೆರೆರವರು ಉತ್ತಮ ಸಂಘಟನಾ ಸಾಮಥ್ರ್ಯವನ್ನು ಹೊಂದಿದ್ದು, ಸಂಘಟನೆಯ ವಿಚಾರದಲ್ಲಿ ಪ್ರಭಾವಿ ರಾಜಕಾರಣಿಗಳ ಅನುಭವವನ್ನು ಮೀರಿಸುವಂತಹ ಸಂಘಟನಾ ಚಾತುರ್ಯವನ್ನು ಹೊಂದಿದ್ದಾರೆ. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವಿವಿಧ ಜವಾಬ್ದಾರಿಗಳನ್ನ ಯಾವುದೇ ರೀತಿಯ ಲೋಪಗಳಿಲ್ಲದೆ ಸಮರ್ಥವಾಗಿ ನಿಭಾಯಿಸುವ ಮುಖೇನ ಚುನಾವಣೆಯ ಜವಾಬ್ದಾರಿಗಳಲ್ಲಿ ತಮ್ಮ ಚಾಣಾಕ್ಷತನವನ್ನು ಪ್ರದರ್ಶಿಸಿದ್ದರು. ಯಾವುದೇ ರೀತಿಯ ಅಧಿಕಾರ ಮತ್ತು ಲಲಾಸೆಗೆ ಒಳಗಾಗದೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆಸಲ್ಲಿಸಿದ್ದ ಇವರ ಚಾಣಾಕ್ಷನದ ಸಂಘಟನಾ ಸಾಮಥ್ರ್ಯವನ್ನು ಅರಿತ ಸುರೇಶ್‍ಗೌಡರು ಪ್ರಸ್ತುತ ಜಿಲ್ಲಾ ಯುವಮೋರ್ಚಾಗೆ ಇವರ ಅಗತ್ಯತೆ ಇದೆ ಎನ್ನುವುದನ್ನು ಮನಗಂಡು ಆಯ್ಕೆ ಮಾಡಿದ್ದಾರೆ ಎನ್ನುವುದು ಬಿಜೆಪಿ…

ಮುಂದೆ ಓದಿ...