ಶಿರಾ ಉಪಚುನಾವಣೆಯಲ್ಲಿ ಬಿಜೆಪಿಗೆ ಅಹಿಂದ ವಿರೋಧಿ ಅಲೆಯೇ..?

ಶಿರಾ:     ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿ ಏರ್ಪಟ್ಟಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಲ್ಲಿದ್ದ ಕಾರ್ಯಕರ್ತರನ್ನ ಬಿಜೆಪಿ ತನ್ನೆಡೆ ಸೆಳೆಯಲು ರಣತಂತ್ರಗಳನ್ನು ರೂಪಿಸಿ ವಿವಿಧ ಆಮಿಷಗಳ ಮಹಾಪೂರವನ್ನೇ ಹರಿಸುತ್ತಿದೆ.      ಕಾಂಗ್ರೆಸ್ ಪಕ್ಷವೂ ಸಹ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತೀಯರನ್ನ ತನ್ನೆಡೆ ಸೆಳೆದುಕೊಳ್ಳುವಲ್ಲಿ ತಾನೂ ಸಹ ಕಡಿಮೆಯಿಲ್ಲ ಎಂಬುದನ್ನ ನಿರೂಪಿಸಲು ಹೊರಟಿದೆ. ಜ್ಯಾತ್ಯಾತೀಯ ಜನತಾ ದಳದಲ್ಲಿ ಸಮರ್ಥ ದಂಡನಾಯಕನ ಕೊರತೆ ಹೆಚ್ಚಾಗಿ ಕಂಡುಬರುತ್ತಿದ್ದು, ದಿವಂಗತ ಬಿ.ಸತ್ಯನಾರಾಯಣ್‍ರವರ ಪತ್ನಿ ಅಮ್ಮಜಮ್ಮ ಅಧಿಕೃತ ಅಭ್ಯರ್ಥಿಯೆಂದು ಘೋಷಣೆಯಾಗಿದ್ದು, ಕಣ್ಣೀರಿನ ರಾಜಕಾರಣದಲ್ಲಿ ಅನುಕಂಪದ ಅಲೆಯಲ್ಲಿ ತೇಲುವ ಕನಸು ಹೊತ್ತಿದೆ. ರಾಜ್ಯದ ಪ್ರಭಲ ನಾಯಕರ ಸಾಲಿನಲ್ಲಿ ನಿಲ್ಲುವ ಟಿ.ಬಿ.ಜಯಚಂದ್ರ 9 ಬಾರಿ ಸ್ಪರ್ಧಿಸಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿ ತಮ್ಮನ್ನು ತಾವು ಓರೆ…

ಮುಂದೆ ಓದಿ...

ತುರುವೇಕೆರೆ: ಜಮೀನಿನ ವಿವಾದಕ್ಕೆ ಯುವತಿಯ ಹತ್ಯೆ..?

ತುರುವೇಕೆರೆ:      ಆಸ್ತಿ ವಿಚಾರವಾಗಿ ಕಲಹ ನಡೆದು ಯುವತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂಬ ಆರೋಪಗಳು ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿ ಕೇಳಿ ಬಂದಿದೆ.       ತುರುವೇಕೆರೆ ತಾಲೂಕಿನ ಸೋಪನಹಳ್ಳಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸುಮಾರ್ 17 ವರ್ಷದ ಯುವತಿ ದೇವಿಕ ಮೃತ ದುದೈವಿ ಎಂದು ತಿಳಿದುಬಂದಿದೆ.        ಅಜ್ಜಿ ತಾತನಿಗೆ ಸೇರಿದ ಜಮೀನು ಹಂಚಿಕೆಯ ಹಿನ್ನೆಲೆಯಲ್ಲಿ ಹತ್ಯೆಯಾದ ಯುವತಿ ಮತ್ತು ಅವರ ತಂದೆ ಮತ್ತು ದೊಡ್ಡಪ್ಪಂದಿರ ನಡುವೆ ಮಾತಿನ ವಿವಾದ ಏರ್ಪಾಟಾಗಿ ಮಾತು ಮಿತಿಮೀರಿ ಹಲ್ಲೆಯ ಹಂತ ತಲುಪಿದ್ದು, ಯುವತಿಯ ಮನೆಗೆ ನುಗ್ಗಿ ದೊಡ್ಡಪ್ಪಂದಿರಾದ ನಂಜೇಗೌಡ, ಪಂಚಾಕ್ಷರಯ್ಯ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯಾದ ನಂತರ ದೇವಿಕ ತಾಯಿ ವಸಂತ ಮತ್ತು ತಂದೆ ದೇವಯ್ಯ ಹಲ್ಲೆಯ ಕುರಿತು ತುರುವೇಕೆರೆ ಪೊಲೀಸ್ ಠಾಣೆಗೆ ದೂರು ಕೊಡಲು ತೆರಳಿದ್ದು ಠಾಣೆಯಲ್ಲಿದ್ದ…

ಮುಂದೆ ಓದಿ...