ಅಂತೂ ಇಂತೂ ಗ್ರಾಮ ಪಂಚಾಯಿತಿ ಎಲೆಕ್ಷನ್ ಬಂದೇ ಬಿಡ್ತು

ಕೊರಟಗೆರೆ:        ಕೊರೋನಾ ಕಾರಣಕ್ಕೆ ಆಗುತೋ…ಇಲ್ಲವೋ…ಎಂದು ಅನುಮಾನ ಮೂಡಿಸಿದ್ದ ಗ್ರಾಮ ಪಂಚಾಯಿತಿಚುನಾವಣೆ ದಿನಾಂಕ ನಿಗಧಿಯಾಗಿ ಗ್ರಾಮಗಳ ಅಭಿವೃದ್ದಿ ಮಂತ್ರಪಟಿಸುತ್ತಿರುವ ಮತದಾರಉತ್ತಮಅಭ್ಯರ್ಥಿಗಳ ಹುಡುಕಾಟದಲ್ಲಿತೊಡಗಿರುವುದುಕಂಡು ಬಂದಿತು.       ಬಹು ನಿರೀಕ್ಷಿತ ಗ್ರಾಮಪಂಚಾಯಿತಿ ಚುನಾವಣೆಗೆ ಮೂಹೂರ್ತ ನಿಗಧಿಯಾಗಿದ್ದು, 2ಹಂತಗಳಲ್ಲಿ ಚುನಾವಣೆ ನಡೆಸಲು ರಾಜ್ಯಚುನಾವಣೆ ಆಯೋಗ ನಿರ್ಧರಿಸಿದ್ದು, ಮೊದಲ ಹಂತದಲ್ಲಿಯೇ ಕೊರಟಗೆರೆ ತಾಲ್ಲೂಕಿನ 24ಗ್ರಾಮಪಂಚಾಯಿತಿಗಳಲ್ಲಿ ಆಕಾಂಕ್ಷಿ ಅಭ್ಯರ್ಥಿಗಳು ಈಗಾಗಲೇ ಪ್ರಚಾರಕಿಳಿದು ನಮ್ಮ ಎದುರಾಳಿ ಪ್ರತಿಸ್ಫರ್ಧಿಯಾರು ಎಂಬ ಗೊಂದಲದಲ್ಲಿಯೇಚುನಾವಣೆಯ ಕಾವು ಗರಿಗೇದರಿದೆ.       ತಾಲ್ಲೂಕಿನ4ಹೋಬಳಿಗಳಲ್ಲಿ 24 ಗ್ರಾಮಪಂಚಾಯಿತಿಗಳನ್ನ ಒಳಗೊಂಡಿದ್ದು, 175 ಮತಗಟ್ಟೆಗಳನ್ನು ಹೊಂದಿದ್ದು,ಅದರಲ್ಲಿ64,037ಪುರುಷಮತದಾರರು, 63,527ಮಹಿಳಾಮತದಾರರು ಹಾಗೂ ಇತರೆ 17ಮತದಾರರಿದ್ದು, ಹೊಸ ಸೇರ್ಪಡೆ ಪ್ರಕ್ರಿಯೆ ನಡೆಯುತ್ತಿದ್ದುಇನ್ನೂ ಹೆಚ್ಚಿನ ಮತಗಳು ಪಟ್ಟಿಯಲ್ಲಿ ಸೇರಲಿವೆ. ಮತದಾರ ಪಟ್ಟಿಯಲ್ಲಿತಮ್ಮ ಹೆಸರುಗಳನ್ನು ಸೇರಿಸಲುಆಯಾ ಗ್ರಾಮಗಳ ಬಿ.ಎಲ್.ಓ ಗಳನ್ನು ಸಂರ್ಪಕಿಸಬಹುದಾಗಿದೆ.       ರಾಜ್ಯಚುನಾವಣಾಆಯೋಗ ಗ್ರಾಮಪಂಚಾಯಿತಿಗಳಚುನಾವಣೆಯನ್ನು ಡಿ.22 ಮತ್ತು ಡಿ.27ಕ್ಕೆ ದಿನಾಂಕವನ್ನು ನಿಗಧಿಮಾಡಿ…

ಮುಂದೆ ಓದಿ...

ಪರಿಹಾರದ ಹಣ ನೀಡುವಂತೆ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ರೈತರು

ಮಧುಗಿರಿ :        ಮಧುಗಿರಿ ಪಟ್ಟಣದಲ್ಲಿ ಹಾದುಹೋಗಿರುವ ಕೆಶಿಪ್ ಬೈಪಾಸ್ ರಸ್ತೆಗೆ ರೈತರು ತಡೆ ಗೋಡೆ ರೀತಿಯಲ್ಲಿ ಅಡ್ಡಹಾಕಿ ಪರಿಹಾರ ಹಣ ಬಿಡುಗಡೆಗಾಗಿ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ       ಪಟ್ಟಣದ ಸಾಲುಮರದ ತಿಮ್ಮಕ್ಕ ಉದ್ಯಾನವನ ದಿಂದ ಆರಂಭಗೊಳ್ಳುವ ಬೈಪಾಸ್ ರಸ್ತೆಯ ಬಸವನಹಳ್ಳಿ ಸಮೀಪ ಇರುವ ಕೆಎಸ್ ಆರ್ ಟಿಸಿ ಡಿಪೋ ವರೆಗೂ ಇದೆ. ಮಧುಗಿರಿ ಹಿಂದೂಪುರ ರಸ್ತೆಗೆ ಹೊಂದಿಕೊಂಡಿರುವ ಬೈಪಾಸ್ ರಸ್ತೆಯಲ್ಲಿ ಕಳೆದ 4ದಿನಗಳಿಂದ ಕಲ್ಲಿನ ಗುಂಡುಗಳನ್ನು ಹಾಕಿದ್ದಾರೆ. ಇನ್ನೊಂದು ರಸ್ತೆಗೆ ಮಣ್ಣಿನಿಂದ ತುಂಬಿ ಬೈಪಾಸ್ ರಸ್ತೆಯನ್ನು ಬಂದ್ ಮಾಡಲಾಗಿದೆ.       ಹಿಂದೂಪುರ ರಸ್ತೆ ಮತ್ತು ಬಸವನಹಳ್ಳಿ ರಸ್ತೆ ನಾಲ್ವರು ರೈತರಿಗೆ ಮತ್ತು ಗೌರಿಬಿದನೂರು ಹಿಂದೂಪುರ ರಸ್ತೆಯಲ್ಲಿ ನ ನಾಲ್ವರು ರೈತರಿಗೆ ಸರಕಾರದಿಂದ ಇಲ್ಲಿಯವರೆಗೂ ಸೂಕ್ತ ಪರಿಹಾರ ಹಣ ನೀಡಿಲ್ಲ. ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಈ 8ರೈತರಿಗೆ ಕೆಶಿಪ್…

ಮುಂದೆ ಓದಿ...

 ಹುಳಿಯಾರು : ತಾಲೂಕಿನ ಇಬ್ಬರಿಗೆ ರಾಜ್ಯ ಶಿಕ್ಷಕಿ ಪ್ರಶಸ್ತಿ

 ಹುಳಿಯಾರು :        ಚಿಕ್ಕನಾಯಕನಹಳ್ಳಿ ತಾಲೂಕಿನ ಇಬ್ಬರು ಶಿಕ್ಷಕಿಯರಿಗೆ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ವತಿಯಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಲಾಯಿತು.       ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹುಳಿಯಾರು ಹೋಬಳಿಯ ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಚ್.ಡಿ.ತೇಜಾವತಿ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಹಾಗೂ ಹಂದನಕೆರೆ ಹೋಬಳಿಯ ಮಲ್ಲಿಗೆರೆ ಕ್ಲಷ್ಟರ್ ವ್ಯಾಪ್ತಿಯ ಬಂದ್ರೇಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಲಾವತಿ ಅವರಿಗೆ ‘ಗುರುಭೂಷಣ’ ರಾಜ್ಯ ಪ್ರಶಸ್ತಿ ನೀಡಲಾಯಿತು.       ಶಿಕ್ಷಕಿ ತೇಜಾವತಿ ಅವರು ಕತೆ, ಚುಟುಕು, ಗಜಲ್, ಕವಿತೆ, ಅಂಕಣಗಳನ್ನು ಕರ್ಮವೀರ, ಜನಮಿಡಿತ, ನಂದಿವಿಜಯ, ಕವಿವಾಣಿ, ಪಂಜು, ಶಾಲ್ನುಡಿ ಪತ್ರಿಕೆಗಳಲ್ಲಿ ಬರೆಯುತ್ತಿದ್ದಾರೆ. ‘ಕಾಲಚಕ್ರ’ ಮತ್ತು ‘ಮಿನುಗುವ ತಾರೆ’ ಎಂಬ ಎರಡು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಇದರ ಜತೆ ಕೊರೊನಾ ಸಮಯದಲ್ಲಿ…

ಮುಂದೆ ಓದಿ...

ಚಿದಾನಂದ ಎಂ.ಗೌಡರ ಗೆಲುವು ಜಿಲ್ಲೆಗೆ ಹೊಸ ಹುರುಪನ್ನು ನೀಡಿದೆ : ಜ್ಯೋತಿಗಣೇಶ್

ತುಮಕೂರು :       ಜಿಲ್ಲೆಗೆ ಈ ಬಾರಿಯ ವಿಧಾನ ಪರಿಷತ್ ಗೆಲುವು ಜಿಲ್ಲೆಯಲ್ಲಿ ಎಲ್ಲರಲ್ಲೂ ಹೊಸ ಹುರುಪನ್ನು ತಂದಿದೆ ಎಂದು ಶಾಸಕ ಜ್ಯೋತಿಗಣೇಶ್ ವಿಧಾನ ಪರಿಷತ್ ನೂತನ ಸದಸ್ಯರನ್ನು ಅಭಿನಂದಿಸಿ ತಿಳಿಸಿದರು.       ಪದವಿ ಪೂರ್ವ ಶಿಕ್ಷಣ ಇಲಾಖೆ ,ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ವತಿಯಿಂದ ಇಂದು ತುಮಕೂರು ನಗರದ ಜಿಲ್ಲಾ ಕನ್ನಡ ಭವನ ಸಭಾಭವನದಲ್ಲಿ ನೂತನ ವಿಧಾನಪರಿಷತ್ ಸದಸ್ಯರಾದ ಚಿದಾನಂದ ಎಂ.ಗೌಡ ರವರಿಗೆ ಅಭಿನಂದನ ಕಾರ್ಯಕ್ರಮ ಹಮ್ಮಿಕೂಳ್ಳಲಾಗಿತ್ತು.       ಇನ್ನು ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯರು ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರಿಗೆ ಸನ್ಮಾನ ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣಾ ಕಾರ್ಯಕ್ರಮ ನಡೆಯಿತು. ಇನ್ನೂ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ತುಮಕೂರು ನಗರ ಶಾಸಕರಾದ ಜ್ಯೋತಿ ಗಣೇಶ್‍ರವರು ತುಮಕೂರು ಜಿಲ್ಲೆಗೆ ಈ ಬಾರಿಯ…

ಮುಂದೆ ಓದಿ...