ತುರುವೇಕೆರೆ : ಸತತ ಮಳೆ ; ರಸ್ತೆ ಸಂಪೂರ್ಣ ಹಾಳು!!


ತುರುವೇಕೆರೆ :        ತಾಲೂಕಿನ ತೊರೆಮಾವಿನಹಳ್ಳಿ ಗೇಟ್‍ನಿಂದ ಬೂವನಹಳ್ಳಿ-ಆನೆಕೆರೆ ಮಾರ್ಗವಾಗಿ ಮಲ್ಲಾಘಟ್ಟ ಕೆರೆ, ನಲ್ಲಿಕೆರೆ ಮಾರ್ಗವಾಗಿ ತಿಪಟೂರಿಗೆ ತಲುಪುವ ಸಂಪರ್ಕ ರಸ್ತೆ, ತೊರೆಮಾವಿನಹಳ್ಳಿ ಗೇಟ್‍ನ ಬಸವನತೋಟದ ಸಮೀಪ ಅಕಾಲಿಕ ಮತ್ತು ಸತತ ಮಳೆಯಿಂದ ಸಂಪೂರ್ಣ ಹಾಳಾಗಿದೆ.      ಜನ ಜಾನುವಾರುಗಳು, ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ.ಸಂಬಂಧಪಟ್ಟವರು ಈ ಕೂಡಲೇ ಗಮನಹರಿಸಿ, ರಸ್ತೆ ದುರಸ್ತಿ ಮಾಡಿಕೊಡುವಂತೆ ಸುತ್ತಮುತ್ತಲ ಗ್ರಾಮಸ್ಥರು ಒತ್ತಾಯಿಸಿದ್ದಾರೆ.


ಮುಂದೆ ಓದಿ...

ತುಮಕೂರು : ಪರಿಷತ್ ಚುನಾವಣೆ : ನಾಳೆ ಬಹಿರಂಗ ಪ್ರಚಾರ ಅಂತ್ಯ!


 ತುಮಕೂರು :        ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಡಿಸೆಂಬರ್ 10ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ರಾಜಕೀಯ ಪಕ್ಷ/ಅಭ್ಯರ್ಥಿಗಳು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಅನುಸರಿಸುವುದರೊಂದಿಗೆ ಮತದಾನ ಮುಕ್ತಾಯಗೊಳ್ಳುವ 72 ಗಂಟೆಗಳ ಮುಂಚಿತವಾಗಿ ಸಾರ್ವಜನಿಕ ಸಭೆ, ಬೈಕ್ ರ್ಯಾಲಿ, ಬೀದಿ ನಾಟಕ ಸೇರಿದಂತೆ ಮತ್ತಿತರ ಬಹಿರಂಗ ಪ್ರಚಾರಗಳನ್ನು ನಿಲ್ಲಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದ್ದಾರೆ.        ಈ ಸೂಚನೆಯನ್ವಯ ಬಹಿರಂಗ ಚುನಾವಣಾ ಪ್ರಚಾರವನ್ನು ಡಿಸೆಂಬರ್ 7ರ ಸಂಜೆ 4 ಗಂಟೆಯೊಳಗೆ ನಿಲ್ಲಿಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ.


ಮುಂದೆ ಓದಿ...

ತುಮಕೂರು : ಶಸ್ತ್ರಚಿಕಿತ್ಸೆ ಯಶಸ್ವಿ : ಪುನರ್ ಜನ್ಮ ಪಡೆದ ಮಗು


 ತುಮಕೂರು :        ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ಮಕ್ಕಳ ಮತ್ತು ಕ್ಯಾನ್ಸರ್ ತಜ್ಞರಾದ ಡಾ. ಸ್ಟಾಲಿನ್‍ರಾಮ್‍ಪ್ರಕಾಶ್ ಅವರು ಬಾಂಗ್ಲಾದೇಶದ ಢಾಕಾ ನಗರದಲ್ಲಿ ಅಸ್ಥಿಮಜ್ಜೆ (ಥಲಸ್ಸೆಮಿಯಾ) ಸಮಸ್ಯೆಯಿಂದ ಬಳಲುತ್ತಿದ್ದ ಸುಮಾರು ಏಳು ವರ್ಷದ ಹೆಣ್ಣು ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನಡೆಸುವ ಮೂಲಕ ಆ ದೇಶದಿಂದ ಸೈ ಎನಿಸಿಕೊಂಡು ಭಾರತಕ್ಕೆ ಕೀರ್ತಿ ಮತ್ತು ಹೆಮ್ಮೆ ತಂದಿದ್ದಾರೆ.       ಢಾಕಾದ ಕಂಬೈನ್ ಮಿಲಿಟರಿ ಆಸ್ಪತ್ರೆಯ ವೈದ್ಯರಾದ ಡಾ.ಶಾರ್ಮಿನ್ ಅವರು ಥಲಸ್ಸೆಮಿಯಾ ಹೊಂದಿರುವ ಮಗುವಿಗೆ ತಮ್ಮ ಮೊದಲ ಮಕ್ಕಳ ಅಲೋಜೆನಿಕ್ ಮೂಳೆ ಮಜ್ಜೆಯ ಕಸಿ ಮಾಡುವಾಗ ಈ ಪ್ರಕ್ರಿಯೆಗೆ ಸಹಾಯ ಮಾಡಲು ಡಾ.ಸ್ಟಾಲಿನ್ ರಾಮ್‍ಪ್ರಕಾಶ್ ಅವರ ಬೆಂಬಲ ಮತ್ತು ಸಹಾಯವನ್ನು ಕೋರಿ ಸ್ಟಾಲಿನ್ ಅವರು ಢಾಕಾಗೆ ಆಹ್ವಾನಿಸಿದ್ದರು. ಅವರ ಆಹ್ವಾನದ ಮೇರೆಗೆ ಡಾ.ಸ್ಟಾಲಿನ್ ರಾಮ್‍ಪ್ರಕಾಶ್ ಅವರು ಢಾಕಾಗೆ ಹೋಗಿ ಥಲಸ್ಸೆಮಿಯಾ ಸಮಸ್ಯೆ…


ಮುಂದೆ ಓದಿ...

ತುಮಕೂರು : ಒನ್ ಪ್ಲಸ್ ಮೊಬೈಲ್ ಶೋರೂಂಗೆ ಕನ್ನ!!


ತುಮಕೂರು :        ಮೊಬೈಲ್ ಶೋರೂಂನ ಶೆಟರ್ ಮೀಟಿ ಮೊಬೈಲ್ ಶೋರೂಂಗೆ ನುಗ್ಗಿದ ಕಳ್ಳರು ಬೆಲೆಬಾಳುವ ಮೊಬೈಲ್‍ಗಳನ್ನು ಕದ್ದು ಪರಾರಿಯಾಗಿರುವ ಘಟನೆ ನಗರದಲ್ಲಿ ತಡರಾತ್ರಿ ನಡೆದಿದೆ.       ನಗರದ ಶಿವಕುಮಾರಸ್ವಾಮೀಜಿ ವೃತ್ತದ ಬಳಿಯಿರುವ ಒನ್ ಪ್ಲಸ್ ಮೊಬೈಲ್ ಶೋರೂಂನಲ್ಲಿ ಈ ಘಟನೆ ನಡೆದಿದ್ದು, ಕಳೆದ ರಾತ್ರಿ ಶೋರೂಂನ ಶೆಟರ್ ಮೀಟಿ ಅದರಲ್ಲಿದ್ದ ಸುಮಾರು 40 ಲಕ್ಷ ರೂ.ಗಳ 80ಕ್ಕೂ ಹೆಚ್ಚು ಬೆಲೆಬಾಳುವ ಮೊಬೈಲ್‍ಗಳನ್ನು ಕದ್ದಿದ್ದು, ಶೋ ರೂಂ ನಲ್ಲಿದ್ದ ಸಿಸಿ ಕ್ಯಾಮೆರಾ ಹಾಗೂ ಹೊರಗಿರುವ ಸಿಸಿ ಕ್ಯಾಮೆರಾಗಳಲ್ಲಿ ಪತ್ತೆ ಹಚ್ಚಬಹುದೆಂಬ ಶಂಕೆಯಿಂದ ಸಿಸಿ ಕ್ಯಾಮೆರಾ ಹಾರ್ಡ್ ಡಿಸ್ಕ್‍ನ್ನೂ ಸಹ ಕದ್ದೊಯ್ದಿದ್ದಾರೆ.       ಸೋಮವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.  


ಮುಂದೆ ಓದಿ...