32 ಯುವತಿಯರ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಖದೀಮನ ಬಂಧನ!

ಬೆಂಗಳೂರು:

     ವಿದೇಶದಲ್ಲಿ ವಿದ್ಯಾಭ್ಯಾಸ ಕಲ್ಪಿಸುವ ನೆಪ ಹೇಳಿ ಯುವತಿಯರನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಿಸುತಿದ್ದ ಖದೀಮನೊಬ್ಬನನ್ನು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

      ಟೊಮಿ ಟಾಮ್ (36) ಎಂಬ ಆರೋಪಿ ಪೋಲೀಸರ ಬಲೆಗೆ ಬಿದ್ದಿದ್ದು ಈ ವೇಳೆ ಅವನ ಸಂಪರ್ಕದಲ್ಲಿದ್ದ 32 ಯುವತಿಯರನ್ನು ರಕ್ಷಿಸಲಾಗಿದೆ. ಟೊಮಿ ತಾನು ಯುವತಿಯರಿಗೆ ವಿದೇಶದಲ್ಲಿ ವಿದ್ಯಾಭ್ಯಾಸ ಕಲ್ಪಿಸುವುದಾಗಿ ನಂಬಿಸಿದ್ದಾನೆ. 32 ಯುವತಿಯರೂ ಕೇರಳ ಮೂಲದವರಾಗಿದ್ದು ಇವರೆಲ್ಲಾ ಬೆಂಗಳೂರಿನಲ್ಲಿ ನರ್ಸಿಂಗ್ ವಿದ್ಯಾಭ್ಯಾಸ ಪಡೆದಿದ್ದರು ಎನ್ನಲಾಗಿದೆ. ಟೊಮಿ ಅವರಿಗೆ ಜರ್ಮನಿಯಲ್ಲಿ ಅಲ್ಪಾವಧಿ ಕೋರ್ಸ್ ಗೆ ಸೇರಿಸುವ ಆಮಿಷವೊಡ್ಡಿ ವಿದೇಶಕ್ಕೆ ಕರೆದೊಯ್ಯುತ್ತಿದ್ದ.

      ಆದರೆ ವಿಮಾನ ಸಿಬ್ಬಂದಿಗೆ ಯುವತಿಯರನ್ನು ಕಂಡು ಸಂದೇಹ ಮೂಡಿದ್ದು ತಕ್ಷಣ ಇಮಿಗ್ರೇಷನ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆಗ ಸತ್ಯ ಬಯಲಾಗಿದೆ. ತಕ್ಷಣ ವಿಮಾನ ನಿಲ್ದಾಣದ ಅಧಿಕಾರಿಗಳು ಪೋಲೀಸರಿಗೆ ಮಾಹಿತಿ ನೀಡಿದ್ದು ಮಾನವ ಕಳ್ಳಸಾಗಣೆ ಜಾಲದ ನಂಟು ಹೊಂದಿದ್ದ ಆರೋಪಿ ಟೊಮಿಯನ್ನು ಬಂಧಿಸಲಾಗಿದೆ.

(Visited 23 times, 1 visits today)

Related posts